ಒಂದು ವರ್ಷದ ಹಿಂದೆ ತನ್ನ ಮಗ ಹಿಂದು ಯುವತಿಯನ್ನು ಪ್ರೀತಿಸುತ್ತಿರುವ ವಿಷಯವನ್ನ ತಿಳಿದ ತಾಯಿ ನಜೀಮಾ ಶೇಖ್ ತನ್ನ ಮಗನಾದ ಅರ್ಬಾಜ್ ಮುಲ್ಲಾ(24)ನನ್ನು ಪ್ರಾಣಪಾಯದಿಂದ ಪಾರು ಮಾಡಲು ಮತ್ತು ಪೇಮಿಗಳನ್ನು ದೂರ ಮಾಡಲು ಆಕೆ ಅನೇಕ ಮನೆಗಳನ್ನು ಸ್ಥಳಾಂತರಿಸಿದ್ದರು. ಒಂದಲ್ಲ ಒಂದು ತರಹದ ಪ್ರಯತ್ನ ಮಾಡಿದರು ಅವರು ಅಷ್ಟು ಸುಲಭವಾಗಿ ಬೇರ್ಪಡಿಸಲು ಸಾಧ್ಯವಾಗಲಿಲ್ಲ ಕಡೆಗೆ ನನ್ನ ಮಗನ ಪ್ರಾಣನ್ನು ಕಳೆದು ಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 28ನೇ ತಾರೀಖಿನಂದು ಶಿರಚ್ಛೇದಿತ ಅರ್ಬಾಜ್ ಮೃತದೇಹವು ಬೆಳಗಾವಿಯಿಂದ ಸುಮಾರು 30ಕಿ.ಮೀ ದೂರದಲ್ಲಿರುವ ದೇಸೂರು-ಖಾನಾಪುರ ನಡುವಿನ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿದೆ.
ಪ್ರಮುಖ ಬಲಪಂಥೀಯ ಸಂಘಟನೆ ಶ್ರೀರಾಮ ಸೇನೆ ಸದಸ್ಯರು ಮತ್ತು ಯುವತಿ ಕುಟುಂಬಸ್ಥರು ಅರ್ಬಾಜನನ್ನು ಅಪಹರಿಸಿ ಕೊಂದಿದ್ದಾರೆ ಮತ್ತು ಅವನ ಶಿರಚ್ಛೇದವನ್ನ ಮಾಡಿ ಅಂತಿಮವಾಗಿ ಅವನ ಮೃತ ದೇಹವನ್ನು ರೈಲ್ವೆ ಹಳಿಯ ಮೇಲೆ ಎಸೆಯಲಾಗಿದೆ ಎಂದು ಆರೋಪಿಸಿದ್ದಾರೆ. ಮೊದಮೊದಲು ಇದನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ, ಪೊಲೀಸರ ಪ್ರಕಾರ ಸ್ಥಳದಲ್ಲಿ ಮೃತದೇಹದ ಸಮೀಪ ದೊರೆತ್ತಿರುವ ಸಾಕ್ಷ್ಯಧಾರಗಳ ಪ್ರಕಾರ ಇದು ಪೂರ್ವನಿಯೋಜಿತ ಕೊಲೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣವನ್ನ ದಾಖಲಿಸಿ ಮೃತದೇಹವನ್ನ ಪೋಸ್ಟ್ ಮಾರ್ಟಮ್ಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಅರ್ಬಾಜ್ ತಾಯಿ ನಜೀಮಾ ತನ್ನ ಮಗನ ಸಾವಿಗೆ ಕಾರಣರಾದ ಶ್ರೀರಾಮ ಸೇನೆಯ ಪುಂಡಲೀಕ ಮಹರಾಜ್, ಬಿರ್ಜೆ ಮತ್ತು ಯುವತಿಯ ತಂದೆ ಕುಂಭರ್ ವಿರುದ್ದ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಇನ್ನು ಯಾರನ್ನು ಸಹ ಬಂಧಿಸಿಲ್ಲ ಎಫ್ಐಆರ್ನಲ್ಲಿ ಯುವತಿ ತಂದೆ ಕುಂಭರ್ ಮತ್ತು ಬಿರ್ಜೆ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಅರ್ಬಾಜ್ ತಾಯಿ ನಜೀಮಾ ಪೋಲಿಸರ ವಿರುದ್ದ ಆರೋಪಿಸಿದ್ದಾರೆ. ಮೂಲಗಳು ಹೇಳುವ ಪ್ರಕಾರ ಯುವತಿಯ ಕುಟುಂಬ ಸದಸ್ಯರು ಮತ್ತು ಶ್ರೀರಾಮಸೇನೆಯ ಸದಸ್ಯರು ಸೇರಿದಂತೆ ಒಟ್ಟು 33 ಜನರನ್ನು ವಿಚಾರಣೆ ಸಲುವಾಗಿ ಬಂಧಿಸಲಾಗಿದೆ. ಆದರೆ, ಅಧಿಕೃತವಾಗಿ ಯಾರನ್ನು ಬಂಧಿಸಿಲ್ಲವೆಂದು ತಿಳಿದು ಬಂದಿದೆ. ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿದರೆ ತನಿಖೆ ನಡೆಯುತ್ತಿರುವುದರಿಂದ ಏನನ್ನು ಖಚಿತ ಪಡಿಸಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಅರ್ಬಾಜ್ ಕುಟುಂಬ ಸದಸ್ಯರು ಆರೋಪಿಸುವ ಪ್ರಕಾರ ಇದು ಪೂರ್ವನಿಯೋಜಿತ ಕೊಲೆ ಎಂದು ದೂರಿನಲ್ಲಿ ತಿಳಿಸಿದರು ಪೊಲೀಸರು ಐಪಿಸಿ ಸೆಕ್ಷನ್ 120(ಬಿ) ಅಡಿ ಪ್ರಕರಣವನ್ನು ದಾಖಲಿಸಿದೆ. ಐಪಿಸಿ ಸೆಕ್ಷನ್ 302 ಮತ್ತು 34ರ ಅಡಿಯಲ್ಲಿ ಕೊಲೆ, ಸಾಕ್ಷ್ಯ ನಾಶ ಮತ್ತು ಸಾಮಾನ್ಯ ಉದ್ದೇಶಕ್ಕಾಗಿ ಮಾತ್ರ ಎಂದು ದೂರಿನಲ್ಲಿ ಉಲ್ಲೇಖಿಸಿಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ʻನಾವು ನಿರಂತರವಾಗಿ ಭಯದಲ್ಲೇ ಬದುಕುತ್ತಿದ್ದೇವೆʼ
ಕಳೆದ ವರ್ಷ ಕೊನೆಯವರೆಗು ಅರ್ಬಾಜ್ ತನ್ನ ತಾಯಿಯೊಂದಿಗೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ವಾಸವಿದ್ದು ಆತ ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯವಹಾರವನ್ನು ಮಾಡುತ್ತಿದ್ದ ಎಂದು ಆತನ ತಾಯಿ ಹೇಳಿದ್ದಾರೆ ಮತ್ತು ಅವನ ತಾಯಿ ನಜೀಮಾ ಸ್ಥಳೀಯ ಉರ್ದು ಶಾಲೆಯಲ್ಲಿ ಶಿಕ್ಷಕರಾಗಿದ್ದು ಟೈಲರ್ ವೃತ್ತಿ ಮಾಡುತ್ತಿದ್ದ ತಮ್ಮ ಪತಿ ಕೆಲವು ವರ್ಷದ ಹಿಂದೆ ನಿಧನ ಹೊಂದಿದರೆಂದು ತಿಳಿಸಿದ್ದಾರೆ.
ನನ್ನ ಮಗ ಮತ್ತು ಯುವತಿ ಪರಸ್ಪರವಾಗಿ ದೀರ್ಘಕಾಲದಿಂದ ಒಬ್ಬರನ್ನೊಬ್ಬರು ತಿಳಿದಿದ್ದರು. ಯುವತಿ ಕೂಡ ನಮ್ಮ ಮನೆ ಪಕ್ಕದಲ್ಲೇ ವಾಸಿಸುತ್ತಿದ್ದರು ಕಾರಣ ಪರಿಚಿತರಾಗಿ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ. ಹಿಂದೂ ಪ್ರಾಬಲ್ಯವಿರುವ ಪ್ರದೇಶದಲ್ಲಿ ವಾಸಿಸುವ ಮುಸ್ಲಿಂ ಆಗಿ ನನಗೆ ಇದು ಸರಿಯಾಗಿ ಕಂಡು ಬರಲಿಲ್ಲ ಆದ ಕಾರಣ, ನಾನು ಮತ್ತು ಅರ್ಬಾಜ್ ಅಲ್ಲಿಂದ ಮನೆ ಖಾಲಿ ಮಾಡಿಕೊಂಡು ಬೇರೆಡೆಗೆ ಬಂದೆವು ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ನನ್ನ ಮಗ ಅರ್ಬಾಜ್ ಈ ಬಗ್ಗೆ ಮುನಿಸಿಕೊಂಡಿದ್ದ, ನಂತರ ನನ್ನ ಜೊತೆ ಬರಲು ಒಪ್ಪಿದ ಎಂದು ಅವನ ತಾಯಿ ಹೇಳಿದ್ದಾರೆ. ಅಂತಿಮವಾಗಿ ನಾವು ಬೆಳಗಾವಿಗೆ ಹೋಗುವ ಮೊದಲು ತಾಯಿ ಮತ್ತು ಮಗ ಮೂರು ಕಡೆ ಮನೆಯನ್ನ ಬದಲಾಯಿಸಿದರು ಕೂಡ ಮೃತ ಅರ್ಬಾಜ್ ಮತ್ತು ಆ ಯುವತಿ ಒಂದಲ್ಲ ಒಂದು ರೀತಿಯಲ್ಲಿ ಸಂಪರ್ಕಿಸುತ್ತಿದ್ದರು ಎಂದು ಆತನ ತಾಯಿ ಹೇಳಿದ್ದಾರೆ.
ಅರ್ಬಾಜ್ ತಾಯಿ ನಜೀಮಾಳ ಪ್ರಕಾರ ಆಕೆ ಅತ್ಯಂತ ಭಯದಿಂದ ಜೀವನವನ್ನು ಸಾಗಿಸುತ್ತಿರುವ ಬಗ್ಗೆ ತಿಳಿಸಿದ್ದಾರೆ. ಅಂತಿಮವಾಗಿ ಯುವತಿ ಕುಟುಂಬಕ್ಕೆ ಈ ವಿಚಾರವನ್ನು ತಿಳಿಸಿ ಅವರ ಮಧ್ಯಸ್ತಿಕೆಯಲ್ಲಿ ಪೇಮಿಗಳನ್ನು ಬೇರೆ ಮಾಡಲು ಯೋಚಿಸಿದರು. ಆದರೆ, ಇದಾದ ನಂತರ ನನ್ನಗೆ ತೀವ್ರವಾದ ಬೆದರಿಕೆಗಳು ಬರ ತೊಡಗಿದ್ದವು ಎಂದು ಅವರು ಹೇಳುತ್ತಾರೆ.
ಯುವತಿಯ ಕುಟುಂಬಸ್ತರು ಸ್ಥಳಿಯ ಶ್ರೀರಾಮಸೇನೆಯ ಸದಸ್ಯರನ್ನು ಸಂರ್ಪಕಿಸಿ ನನ್ನ ಮಗನ ಬಗ್ಗೆ ಅವರಿಗೆ ದೂರನ್ನು ನೀಡುತ್ತಾರೆ. ಇದಾದ ನಂತರ, ಸೆಪ್ಟೆಂಬರ್ 26ರಂದು ಮೃತ ಅರ್ಬಾಜ್ಗೆ ಸ್ಥಳೀಯ ಶ್ರೀರಾಮಸೇನೆ ಮುಖಂಡ ಪುಂಡಲಿಕ್ ಮಹಾರಾಜ್ನಿಂದ ಕರೆ ಬರುತ್ತದೆ ಮತ್ತು ಆತ ಅರ್ಬಾಜ್ನನ್ನು ಖಾನಾಪುರ ಚೈಕಿಗೆ ಬರುವಂತೆ ಹೇಳುತ್ತಾನೆ ನಾನು ಸಹ ನನ್ನ ಮಗನ ಜೊತೆ ಅಲ್ಲಿಗೆ ಹೋದೆನು ಅಲ್ಲಿ ಪುಂಡಲಿಕ್ ಮತ್ತು ಬಿರ್ಜೆ ಎಂಬ ಇನ್ನೊಬ್ಬ ವ್ಯಕ್ತಿ ಮಾತ್ರ ಅಲ್ಲಿದ್ದರು. ಇಬ್ಬರು ನನ್ನ ಮಗನ ಫೋನ್ನನ್ನು ಬಲವಂತವಾಗಿ ಕಸಿದುಕೊಂದು ನನ್ನ ಮಗ ಯುವತಿ ಜೊತೆಯಲ್ಲಿ ತೆಗೆಸಿಕೊಂಡಿದ ಫೋಟೋಗಳನ್ನು ಡಿಲೀಟ್ ಮಾಡಿದರು ಅವನ ಸಿಮ್ ಕಾರ್ಡ್ ಅನ್ನು ನಾಶ ಮಾಡಿದರು. ಇನ್ನೊಮ್ಮೆ ಯುವತಿಯನ್ನು ಭೇಟಿ ಮಾಡಲು ಯತ್ನಿಸಿದರೆ ಆಸಿಡ್ ಹಾಕುವುದಾಗಿ ಬೆದರಿಸಿದರು ಈ ಬಗ್ಗೆಯು ಎಪ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೃತ ಅರ್ಬಾಜ್ ತಾಯಿ ತಿಳಿಸಿದ್ದಾರೆ.
ನಜೀಮಾ ನಂತರ ತನ್ನ ಸೊಸೆಯನ್ನು ಭೇಟಿ ಮಾಡಲು ಗೋವಾಕ್ಕೆ ತೆರಳಿದರು. ಸೆಪ್ಟೆಂಬರ್ 28ರ ಬೆಳ್ಳಗೆ ತನ್ನ ತಾಯಿಗೆ ಕರೆ ಮಾಡಿದ ಅರ್ಬಾಜ್ ತನಗೆ ತುಂಬಾ ಹೆದರಿಕೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಯಾರೋ ಆತನಿಗೆ ಅನಾಮಧೇಯ ವ್ಯಕ್ತಿಗಳಿಂದ ಹಲವು ಬಾರಿ ಬೆದರಿಕೆ ಕರೆ ಬಂದಿದೆ ಆದಷ್ಟು ಬೇಗ ಅಲ್ಲಿಂದ ಹೊರಟು ಬರಲು ನನ್ನಗೆ ಹೇಳಿದ. ನಾನು ರೈಲಿನಲ್ಲಿ ಬೆಳಗಾವಿಗೆ ಬರುವುದು ಸಂಜೆ ಸುಮಾರು 7:30 ಆಗಿತ್ತು ಅಷ್ಟರಲ್ಲಾಗಲೇ ಅರ್ಬಾಜ್ ಮೃತದೇಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು ಎಂದು ಅವನ ತಾಯಿ ಹೇಳಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅರ್ಬಾಜ್ನ ಸೋದರ ಸಂಬಂಧಿ ಸಮೀರ್ ಅರ್ಬಾಜ್ ತೀವ್ರ ಒತ್ತಡದಲ್ಲಿದ್ದ ಕರೆ ಮಾಡಿದವರು ಆತನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸೆಪ್ಟೆಂಬರ್ 26ರಂದು ನಜೀಮಾ ಮತ್ತು ಅರ್ಬಾಜ್ ಮಹಾರಜ್ನನ್ನು ಬೇಟಿ ಮಾಡಿದಾಗ ಅರ್ಬಾಜ್ 7,000 ಸಾವಿರ ರೂಪಾಯಿಗಳನ್ನ ʻಸೆಟಲ್ಮೆಂಟ್ ಅಮೌಂಟ್ʼ ಎಂದು ಪಡಿದಿದ್ದ. ಅರ್ಬಾಜ್ ಕೊಲೆಯಾದ ದಿನ ಇದೇ ರೀತಿಯ ಬೇಡಿಕೆಗಳನ್ನು ಇಟ್ಟಿದರು ತನ್ನ ಎರಡು ದುಬಾರಿ ಬೆಲೆಯ ಐಫೋನ್ಗಳನ್ನು ಕಿತ್ತುಕೊಳ್ಳುವ ಭಯದಿಂದ ಅವನು ಮನೆಯಿಂದ ಹೊರಡುವ ಸಮಯದಲ್ಲಿ ಅವನ ಅಜ್ಜಿಯ ಬಳಿ ತನ್ನ ದುಬಾರಿ ಬೆಲೆಯ ಪೋನ್ಗಳನ್ನು ಕೊಟ್ಟು ಕಡಿಮೆ ಬೆಲೆಯ ಪೋನ್ನನ್ನು ತನ್ನ ಜೊತೆ ತೆಗೆದುಕೊಂಡು ಹೋಗಿದ್ದ. ಇದೀಗ, ನಮಗೆ ಈ ಪೋನ್ಗಳೆ ನಿರ್ಣಾಯಕ ಸಾಕ್ಷ್ಯಾಧಾರಗಳಾಗಿವೆ ಎಂದು ಸಮೀರ್ ಹೇಳಿದ್ದಾನೆ.
ತನ್ನ ಮಗ ಅರ್ಬಾಜ್ ಸಾವಿನಿಂದಾಗಿ ತಾನು ಏಕಾಂಗಿಯಾಗಿರುವುದಾಗಿ ಹೇಳುತ್ತಾರೆ. ಆದರೆ, ಲಂಡನಿನ್ನಲ್ಲಿ ವಾಸಿಸುತ್ತಿರುವ ತನ್ನ ಮಗಳು ತುಂಬು ಗರ್ಭಿಣಿಯಾಗಿದ್ದು ತನ್ನ ತಾಯಿಯನ್ನು ಸಂತೈಸಲು ತಾನು ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಮತ್ತು ತನ್ನ ಪಾಲಿಗೆ ಇದ್ದಂತಹ ಏಕೈಕ ಬೆಂಬಲವನ್ನು ಕಿತ್ತುಕೊಂಡಿದ್ದಾರೆ. ಆದರೆ, ನಾನು ಇಷ್ಟಕ್ಕೆ ಸುಮನಾಗುವುದಿಲ್ಲ ಅವರುಗಳು ನನ್ನ ಮಗನನ್ನು ಕೊಲ್ಲುವ ಮೂಲಕ ತಮ್ಮ ರಕ್ತ ದಾಹವನ್ನ ತೀರಿಸಿಕೊಂಡಿದ್ದಾರೆ. ಆದರೆ, ನನ್ನ ಮಗನ ಸಾವಿಗೆ ನ್ಯಾಯ ಸಿಗುವವರೆಗು ನಾನು ಅವರ ವಿರುದ್ದ ಹೋರಾಡುತ್ತೇನೆ ಅವರೆಲ್ಲರನ್ನು ಗಲ್ಲಿಗೇರಿಸುವುದನ್ನು ನಾನು ನೋಡಲು ಬಯಸುತ್ತೇನೆ ಎಂದು ಮೃತ ಅರ್ಬಾಜ್ ತಾಯಿ ನಜೀಮ್ ಹೇಳಿದ್ದಾರೆ.






