ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿಗೆ ಭಾರತ ಸೇರಿಕೊಳ್ಳುತ್ತಿದೆ. ಭಾರತೀಯ ಸೇನಾ ಪ್ರಾಬಲ್ಯವನ್ನು ಹೆಚ್ಚಿಸಬಲ್ಲ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇನಾ ಬತ್ತಳಿಕೆ ಸೇರಿಕೊಂಡಿವೆ. ಈ ಪೈಕಿ ಒಂದು ಕ್ಷಿಪಣಿ ಚೀನಾದ ನಿದ್ದೆಗೆಡಿಸಿದೆ.
ಭಾರತ ಇಂದು ವಿಶ್ವದ ಬಲಿಷ್ಠ ಸೇನಾ ಸಾಮರ್ಥ್ಯ ಹೊಂದಿರೋ ದೇಶಗಳ ಸಾಲಿಗೆ ಸೇರಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತನ್ನ ಬತ್ತಳಿಕೆಯಲ್ಲಿ ಭದ್ರವಾಗಿಸಿಕೊಂಡಿದೆ. ಅದಕ್ಕೆ ಮತ್ತೊಂದು ಬಲಾಡ್ಯ ಅಸ್ತ್ರವಾಗಿ ಅಗ್ನಿ-5 ಸೇರ್ಪಡೆಯಾಗಿದೆ. ಆದರೆ ಇದು ಚೀನಾ ದೇಶದ ನಿದ್ದೆಗೆಡೆಸಿದೆ. ಭಾರತದ ಈ ಯಶಸ್ವಿಯನ್ನು ಅರಗಸಿಕೊಳ್ಳಲಾಗದೆ ವಿಶ್ವಸಂಸ್ಥೆ ಮುಂದೆ ದೂರು ಹೇಳಲು ಮುಂದಾಗಿದೆ.
ಹೌದು, ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಅತ್ಯಾಧುನಿಕ ಅಗ್ನಿ-5 ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು 2012, 2013, 2015 ಮತ್ತು 2016ರಲ್ಲಿ ಉಡಾವಣಾ ಕೇಂದ್ರದಿಂದ ಹಾಗೂ ಸಂಚಾರಿ ವಾಹನದಿಂದ ಯಶಸ್ವಿಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೆ ಕೊನೆಯ ಹಂತದ ಪ್ರಯೋಗಾರ್ಥ ಉಡಾವಣೆ ಯಶಸ್ವಿಯೂ ಆಗಿದ್ದು, ಇನ್ನೇನು ಭಾರತೀಯ ಸೇನೆಯ ಬತ್ತಳಿಕೆ ಸೇರಲಿದೆ. ಈ ಮೂಲಕ ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ದೇಶದ ಸಾಮರ್ಥ್ಯ ಮತ್ತೊಂದು ಹಂತ ಮೇಲೇರಿದೆ ಎಂಬುದು ಕೇಂದ್ರದ ವಾದ.

ಈ ಯಶಸ್ಸಿನೊಂದಿಗೆ ಭಾರತವು, 5000 ಕಿಮೀ ಸ್ಟ್ರೈಕ್ ರೇಂಜ್ ಹೊಂದಿರುವ ಕ್ಷಿಪಣಿಯು ಹಲವಾರು ಚೀನೀ ನಗರಗಳನ್ನು ತಲುಪಬಹುದು ಮತ್ತು ಭಾರತದ ಮಿಲಿಟರಿ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದೇ ಕಾರಣಕ್ಕೆ ಚೀನಾ ಈಗ ಕಂಗಾಲಾಗಿದೆ. ಇದೇ ಮೊದಲ ಬಾರಿಗೆ ಭಾರತದ ಕ್ಷಿಪಣಿಯೊಂದನ್ನ ಗಂಭೀರವಾಗಿ ಪರಿಗಣಿಸಿರುವ ಚೀನಾ ವಿಶ್ವಸಂಸ್ಥೆ ಮುಂದೆ ದೂರು ಹೇಳಲು ಸಜ್ಜಾಗಿದೆ.
ಅಗ್ನಿ 5 ಕ್ಷಿಪಣಿಯು 15 ಟನ್ ಅಣ್ವಸ್ತ್ರ ಸಿಡಿತಲೆ ಹೊತ್ಯೊಯ್ಯಬಲ್ಲ ಸಾಮರ್ಥ್ಯವನ್ನ ಹೊಂದಿದೆ. ಸಾಲದ್ದಕ್ಕೆ ಕ್ಷಣಾರ್ಧದಲ್ಲಿ 5000 ಕಿ.ಮೀ ದೂರದ ಗುರಿ ತಲುಪಬಲ್ಲ ಸುಧಾರಿತ ಕ್ಷಿಪಣಿ. ಇದುವರೆಗಿನ ಉಡಾವಣೆಗಳಲ್ಲಿಯೇ ಗರಿಷ್ಠ ದೂರ ತಲುಪಿರುವ ಕ್ಷಿಪಣಿ ಇದಾಗಿದೆ. 5000-5500 ಕಿ.ಮೀ ದೂರ ಕ್ರಮಿಸಬಲ್ಲ ಮಿಸೈಲ್ ಹೊಂದಿದ ಹೆಗ್ಗಳಿಕೆ ಭಾರತದ್ದಾಗಿದೆ. ಭಾರತವೂ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಲಿದೆ ಅನ್ನೋ ಭಯ ಈಗ ಚೀನಾಗೆ ಶುರುವಾಗಿದೆ. ಇದುವರೆಗೂ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ & ಫ್ರಾನ್ಸ್ ಮಾತ್ರವೇ ಈ ರೇಂಜ್‌ನ ಮಿಸೈಲ್ ಹೊಂದಿದ್ದವು.
ಭಾರತದ ಈ ಯಶಸ್ವಿ ಕ್ಷಿಪಣಿ ಪರೀಕ್ಷೆಗಳನ್ನ ಚೀನಾಗೆ ಸಹಿಸಿಕೊಳ್ಳದಂತಾಗಿದೆ. ಭಾರತದ ಅಗ್ನಿ-5ನಿಂದ ಎಲ್ಲಿ ತನ್ನ ಬುಡಕ್ಕೆ ಬೆಂಕಿ ಬೀಳುತ್ತೋ ಅನ್ನೋ ಆತಂಕ ಚೀನಾಗೆ ಎದುರಾಗಿದೆ. ಈ ಹಿನ್ನೆಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ ಚೀನಾ ಈ ವಿಚಾರವನ್ನ ಮತ್ತೊಮ್ಮೆ ಉಲ್ಲೇಖಿಸಿದೆ. ಚೀನಾದ ಚಾಡಿ ಮಾತಿಗೆ ವಿಶ್ವಸಂಸ್ಥೆ ಕಿವಿಗೊಡುತ್ತಾ ಎಂಬುದನ್ನು ಕಾದುನೋಡಬೇಕಿದೆ.








