• Home
  • About Us
  • ಕರ್ನಾಟಕ
Thursday, December 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ಕೋವಿಡ್ ಲಸಿಕೆ ಪಡೆದುಕೊಂಡವರ ರೋಗ ನಿರೋಧಕ ಶಕ್ತಿ ಗಮನಾರ್ಹ ಏರಿಕೆ: ಅಧ್ಯಯನ

ಫಾತಿಮಾ by ಫಾತಿಮಾ
September 19, 2021
in Uncategorized
0
ಕೋವಿಡ್ ಲಸಿಕೆ ಪಡೆದುಕೊಂಡವರ ರೋಗ ನಿರೋಧಕ ಶಕ್ತಿ ಗಮನಾರ್ಹ ಏರಿಕೆ: ಅಧ್ಯಯನ
Share on WhatsAppShare on FacebookShare on Telegram

ಲಸಿಕೆಯನ್ನು ಪಡೆಯದವರಿಗೆ ಹೋಲಿಸಿದರೆ ಕೋವಿಡ್ -19 ಲಸಿಕೆಯ ಒಂದು‌ ಡೋಸ್ ಅಥವಾ ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡವರು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದಾರೆ ಎಂಬ ಅಂಶವನ್ನು ಮುಂಬೈಯ ಮಹಾನಗರ ಪಾಲಿಕೆ ನಡೆಸಿದ ಇತ್ತೀಚಿನ ಸಿರೊಲಾಜಿಕಲ್ ಸಮೀಕ್ಷೆಯು ಹೊರಗೆಡವಿದೆ.

ADVERTISEMENT

ಈ ಸಮೀಕ್ಷೆಯ ಪ್ರಕಾರ‌ ಲಸಿಕೆಯ ಒಂದು ಅಥವಾ ಎರಡೂ ಡೋಸ್‌ಗಳನ್ನು ಪಡೆದವರಲ್ಲಿ 90.26 ಪ್ರತಿಶತ ಜನರು ರೋಗ ನಿರೋಧಕ ಶಕ್ತಿ  ಹೊಂದಿದ್ದಾರೆ.  ಲಸಿಕೆ ಪಡೆದುಕೊಳ್ಳದವರಲ್ಲಿ ಕೇವಲ 79.86 ಪ್ರತಿಶತದಷ್ಟು ಜನರು ಮಾತ್ರ ರೋಗ ನಿರೋಧಕ ಶಕ್ತಿ ಹೊಂದಿದ್ದಾರೆ. 

ಲಸಿಕೆ ಹಾಕಿಸಿಕೊಂಡವರಲ್ಲಿ ಸೆರೋಪ್ರೆವೆಲೆನ್ಸ್ (ರಕ್ತದಲ್ಲಿರುವ pathogen ಮಟ್ಟ) ಲಸಿಕೆ ಪಡೆದುಕೊಳ್ಳದವರಿಗಿಂತ ಹೆಚ್ಚಿರುವುದರಿಂದ ಈಗ ನಡೆಯುತ್ತಿರುವ ಕೋವಿಡ್ -19 ಲಸಿಕಾ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸುವುದು ಅತ್ಯಗತ್ಯ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ 16ರವರೆಗೆ ಮುಂಬೈನಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದವರ ಸಂಖ್ಯೆ 75.79 ಲಕ್ಷ ಜನರು ಮತ್ತು 32.53 ಲಕ್ಷದಷ್ಟು ಜನರು ಎರಡೂ ಡೋಸ್ ಪಡೆದಿದ್ದಾರೆ.

ಬಿಎಮ್‌ಸಿಯ ಸಾರ್ವಜನಿಕ ಆರೋಗ್ಯ ವಿಭಾಗವು ‘ಎಇಟಿ ಚಂದ್ರ ಫೌಂಡೇಶನ್’ ಮತ್ತು ‘ಐಡಿಎಫ್‌ಸಿ ಇನ್‌ಸ್ಟಿಟ್ಯೂಟ್‌’ನ ಬೆಂಬಲದೊಂದಿಗೆ ಸಿಯಾನ್ ಆಸ್ಪತ್ರೆಯ ಸಹಯೋಗದೊಂದಿಗೆ ಸೆರೋಲಾಜಿಕಲ್ ಸಮೀಕ್ಷೆಯನ್ನು ನಡೆಸಿತ್ತು.  ಮಾರ್ಚ್ 2020 ರಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಮುಂಬೈಯಲ್ಲಿ ನಡೆಸಿದ ಐದನೇ ಸಮೀಕ್ಷೆ ಇದಾಗಿದೆ. ಈ ಸಮೀಕ್ಷೆಯನ್ನು ಆಗಸ್ಟ್ 12 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಸಲಾಯಿತು.

ಈ ಅಧ್ಯಯನವು 18 ವರ್ಷ ಮೀರಿದ  8,674 ಮಾದರಿಗಳನ್ನು ಪರೀಕ್ಷಿಸಿದೆ ಮತ್ತು‌ ಒಟ್ಟಾರೆಯಾಗಿ ಶೇಕಡಾ 65 ರಷ್ಟು ಜನರು ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. ಕಳೆದ ತಿಂಗಳು ಬಿಎಂಸಿ ಸಂಗ್ರಹಿಸಿದ ವರದಿಯು ಕೋವಿಡ್‌ನ ಲಸಿಕೆ ಹಾಕಿಸಿಕೊಂಡವರಲ್ಲಿ ಕೇವಲ 0.35 ಪ್ರತಿಶತದಷ್ಟು ಜನರು ಮಾತ್ರ ಮತ್ತೆ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ತೋರಿಸಿತ್ತು.

ಮುಂಬೈನ ಒಟ್ಟು ಜನಸಂಖ್ಯೆಯ 86 ಪ್ರತಿಶತದಷ್ಟು ಜನರು ಕೋವಿಡ್ ರೋಗ ನಿರೋಧಕವನ್ನು ಹೊಂದಿದ್ದಾರೆ ಮತ್ತು ಕೊಳೆಗೇರಿ ಜನಸಂಖ್ಯೆಯಲ್ಲಿ ಮತ್ತು ಕೊಳೆಗೇರಿ ಅಲ್ಲದ ಜನಸಂಖ್ಯೆಯಲ್ಲಿನ ನಿರೋಧಕದ ಮಟ್ಟದಲ್ಲಿನ ವ್ಯತ್ಯಾಸವು ಅತ್ಯಲ್ಪವಾಗಿದೆ ಎಂದು ಸೆರೋ ಸಮೀಕ್ಷೆಯು ಕಂಡುಹಿಡಿದಿದೆ.  ಅಧ್ಯಯನವು ಕೊಳೆಗೇರಿಗಳಲ್ಲಿ ಶೇಕಡಾ 87 ರಷ್ಟು ಮತ್ತು ಕೊಳೆಗೇರಿಗಳಲ್ಲದ ಕಡೆ 86.22 ರಷ್ಟು ಸೆರೋಪ್ರೆವೆಲೆನ್ಸ್ ಅನ್ನು ದಾಖಲಿಸಿದೆ.

ಆಗಸ್ಟ್ ‌ನಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಏಳನೇ ಸಮೀಕ್ಷೆ ನಡೆಸಲಾಗಿದ್ದು ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ  ರೋಗನಿರೋಧಕದ ಹರಡುವಿಕೆ ಸರಿಸುಮಾರು 33% ಕ್ಕೆ ಏರಿದೆ ಎಂದು ದೆಹಲಿಯ ಸೆರೋಲಾಜಿಕಲ್ ಅಧ್ಯಯನದ ಆರಂಭಿಕ ಫಲಿತಾಂಶಗಳು ತಿಳಿಸಿವೆ ಎಂದು  ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಐಸಿಎಮ್ಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್) ಜೂನ್‌ನಲ್ಲಿ ನಡೆಸಿದ ಸೆರೊಲಾಜಿಕಲ್ ಸರ್ವೆಯ ಪ್ರಕಾರ ಶೇಕಡಾ 69.8 ಮಂದಿ ಪ್ರತಿರೋಧ ಶಕ್ತಿಯನ್ನು ಹೊಂದಿದ್ದಾರೆ.

ಆದರೆ ಪ್ರತಿರೋಧ ಶಕ್ತಿಯು ವ್ಯಾಕ್ಸಿನ್ ಪಡೆದುಕೊಂಡಿರುವವರಲ್ಲಿ ಮಾತ್ರವಲ್ಲದೆ ಈ ಹಿಂದೆ ವೈರಸ್ ದಾಳಿಗೆ ತುತ್ತಾಗಿರುವವರಲ್ಲೂ ಕಂಡುಬರುತ್ತದೆ. ಹಲವು ಅಧ್ಯಯನಗಳಲ್ಲಿ ಹಿಂದೆ ರೋಗಕ್ಕೆ ತುತ್ತಾಗಿ ವ್ಯಾಕ್ಸಿನ್ ಪಡೆದುಕೊಂಡವರಲ್ಲಿ ರೋಗ ನಿರೋಧಕಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಪತ್ತೆಯಾಗಿದೆ. ಭಾರತದ ಹಲವು ವೈದ್ಯರು ಒಮ್ಮೆ ರೋಗಕ್ಕೆ ತುತ್ತಾದವರಲ್ಲಿ ಶಾಶ್ವತ ಪ್ರತಿರೋಧ ಶಕ್ತಿಯು ರೂಪುಗೊಳ್ಳುತ್ತದೆ ಎಂದು ಪ್ರತಿಪಾದಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Previous Post

ಪಶ್ಚಿಮ ಬಂಗಾಳದಲ್ಲಿ ಮುಂದುವರೆದ ಪಕ್ಷಾಂತರ ಪರ್ವ: ಬಿಜೆಪಿಯ ಮತ್ತೋರ್ವ ನಾಯಕ ದೀದಿ ತೆಕ್ಕೆಗೆ.!

Next Post

ಪಂಜಾಬ್ ಸಿಎಂ ರಾಜೀನಾಮೆ: ಹಳೆಯ ಬಿಕ್ಕಟ್ಟಿನ ಅಂತ್ಯವೋ? ಹೊಸ ಬಿಕ್ಕಟ್ಟಿನ ಆರಂಭವೋ?

Related Posts

*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*
Uncategorized

*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*

by ಪ್ರತಿಧ್ವನಿ
December 2, 2025
0

*Former Congress MLA from Chikkapet assembly constituency in Bengaluru, R.V. Devaraj passed away in Mysore**ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ...

Read moreDetails
ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

November 17, 2025

ಜಪಾನಿನ ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ್..

November 15, 2025
ಟೀಕೆ ಮಾಡುತ್ತಿದ್ದವರು ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ. ಶಿ

ಟೀಕೆ ಮಾಡುತ್ತಿದ್ದವರು ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ. ಶಿ

November 9, 2025
DK Shivakumar: ಜಲ ಯೋಜನೆಗಳ ಬಗ್ಗೆ ಒಂದು ದಿನವೂ ಬಾಯಿ ಬಿಡದ ರಾಜ್ಯದ ಬಿಜೆಪಿ ಸಂಸದರು..

DK Shivakumar: ಜಲ ಯೋಜನೆಗಳ ಬಗ್ಗೆ ಒಂದು ದಿನವೂ ಬಾಯಿ ಬಿಡದ ರಾಜ್ಯದ ಬಿಜೆಪಿ ಸಂಸದರು..

November 6, 2025
Next Post
ಪಂಜಾಬ್ ಸಿಎಂ ರಾಜೀನಾಮೆ: ಹಳೆಯ ಬಿಕ್ಕಟ್ಟಿನ ಅಂತ್ಯವೋ? ಹೊಸ ಬಿಕ್ಕಟ್ಟಿನ ಆರಂಭವೋ?

ಪಂಜಾಬ್ ಸಿಎಂ ರಾಜೀನಾಮೆ: ಹಳೆಯ ಬಿಕ್ಕಟ್ಟಿನ ಅಂತ್ಯವೋ? ಹೊಸ ಬಿಕ್ಕಟ್ಟಿನ ಆರಂಭವೋ?

Please login to join discussion

Recent News

Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
Top Story

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

by ಪ್ರತಿಧ್ವನಿ
December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!
Top Story

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

by ಪ್ರತಿಧ್ವನಿ
December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
Top Story

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

December 3, 2025

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada