• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮುಸ್ಲಿಮರ ಬಗ್ಗೆ ಮಾತನಾಡುವ ಗಂಡಸರುಗಳು ಯಾರ ಶವಕ್ಕಾದರೂ ಹೆಗಲು ಕೊಟ್ಟರಾ? ಡಿಕೆ ಶಿವಕುಮಾರ್‌ ಪ್ರಶ್ನೆ

Any Mind by Any Mind
August 22, 2021
in ಕರ್ನಾಟಕ
0
ಮುಸ್ಲಿಮರ ಬಗ್ಗೆ ಮಾತನಾಡುವ ಗಂಡಸರುಗಳು ಯಾರ ಶವಕ್ಕಾದರೂ ಹೆಗಲು ಕೊಟ್ಟರಾ? ಡಿಕೆ ಶಿವಕುಮಾರ್‌ ಪ್ರಶ್ನೆ
Share on WhatsAppShare on FacebookShare on Telegram

ಕೋವಿಡ್ ವಾರಿಯರ್ಸ್ ಎಂಬ ಪದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಗೌರವದಂತಿದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಇವೆರಡರ ಮಧ್ಯೆ, ನಾವುಬೆನು ಮಾಡುತ್ತೇವೆ ಎಂಬುದು ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ .ಕೆ. ಶಿವಕುಮಾರ್ ಹೇಳಿದ್ದಾರೆ.

ADVERTISEMENT

ಕೋವಿಡ್ ವಾರಿಯರ್ಸ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಷ್ಟಕಾಲದಲ್ಲಿ ಪ್ರಬುದ್ಧತೆಯಿಂದ ಜನರ ಪ್ರಾಣ ಉಳಿಸಲು ಸ್ವಾರ್ಥ ಇಲ್ಲದೆ ಸಮಾಜ ಸೇವೆ ಮಾಡುವವರಿಗೆ ಗೌರವ ನೀಡುತ್ತದೆ. ಸಮಾಜಸೇವೆ, ದೇಶ ಸೇವೆ ಮಾಡುವವರಿಗೆ ಪಕ್ಷ ಮುಖ್ಯ ಅಲ್ಲ. ನಾವೆಲ್ಲರೂ ಮೊದಲು ಭಾರತೀಯರು. ಕೋವಿಡ್ ಬಂದ ತಕ್ಷಣ ವಿವಿಧ ರೀತಿ ಬಣ್ಣ ಕೊಡಲು ಪ್ರಯತ್ನಿಸಿದರು. ಮುಸಲ್ಮಾನ ಮಾವಿನ ವರ್ತಕರಿಗೆ ಬೆಳೆ ನೀಡದಂತೆ ಎತ್ತಿಕಟ್ಟಿದ್ದರು ಎಂದು ಅವರು ಹೇಳಿದ್ದಾರೆ.

ಕೋವಿಡ್ ಸಮಯದಲ್ಲಿ ಸರ್ವಪಕ್ಷ ಸಭೆ ಕರೆದಿರಲಿಲ್ಲ. ನಾವು ಆಗ್ರಹಿಸಿದೆವು. 21 ದಿನಗಳಲ್ಲಿ ಈ ಯುದ್ಧ ಮುಗಿಸುತ್ತೇವೆ ಎಂದರು. ಅವರ ಮಾತಿಗೆ ಬೆಲೆ ಕೊಟ್ಟು ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿದೆವು. ಮೋದಿ ಅವರು ಸ್ವರ್ಗ ತೋರಿಸುತ್ತೇನೆ ಎಂದು ನರಕ ತೋರಿಸಿದರು. ನಾವು ರಾಜಕೀಯ ಮಾತಾಡುತ್ತಿಲ್ಲ. ಇತಿಹಾಸದ ಬಗ್ಗೆ ಮಾತನಾಡುತ್ತಿದ್ದೇವೆ. ಕೆಲವು ಶಾಸಕರು ದ್ವೇಷ ಭಾಷಣ ಮಾಡುತ್ತಿದ್ದಾರೆ ಕ್ರಮ ಕೈಗೊಳ್ಳಿ ಎಂದರೆ ಅವರ ಬೆಂಬಲಕ್ಕೆ ನಿಂತರು. ವೈದ್ಯರು, ವೃತ್ತಿ ಸೇವೆಯವರಿಗೆ ಧರ್ಮದ ವ್ಯತ್ಯಾಸ ಇಲ್ಲ. ಆದರೂ ಬಿಜೆಪಿ ನಾಯಕರು ಪಂಚರ್ ಹಾಕುವವರಿಗೆ ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲ ಎಂದರು. ಎಲ್ಲ ಜಾತಿ, ಧರ್ಮದವರ ಶವಗಳನ್ನು ಎತ್ತಿದ್ದರೆ ಅದು ಈ ಸಮಾಜದವರು. ಇವರ ಬಗ್ಗೆ ಮಾತನಾಡುವ ಗಂಡಸರುಗಳು ಯಾರ ಶವಕ್ಕಾದರೂ ಹೆಗಲು ಕೊಟ್ಟರಾ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

ಈ ರಾಜ್ಯದಿಂದ ಆಯ್ಕೆಯಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯ ಸಂಸ್ಕಾರ ಹೇಗೆ ಮಾಡಿದರು. ಬಳ್ಳಾರಿಯಲ್ಲಿ ಶವಗಳನ್ನು ಹೇಗೆ ಬಿಸಾಕಿದರು. ಇದೇನಾ ನಮ್ಮ ದೇಶದ ಸಂಸ್ಕೃತಿನಾ? ದೇವನೊಬ್ಬ ನಾಮ ಹಲವು. ಯಾವುದೇ ಧರ್ಮವಾದರೂ ಮಾನವೀಯತೆ, ಸೋದರತೆಯಿಂದ ಕಾಣಿ ಎಂದು ಹೇಳುತ್ತಾರೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ಎಲ್ಲ ಧರ್ಮದವರ ಬಗ್ಗೆ ಚಿಂತಿಸಿದ್ದೇವೆ. ಚಾಮರಾಜನಗರ ದುರಂತದಲ್ಲಿ 36 ಜನ ಸತ್ತರು. ನಮ್ಮ ಸಚಿವರು 3 ಜನ ಸತ್ತರೆ, ಕೇಂದ್ರ ಸಚಿವರು ಒಬ್ಬರೂ ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲ ಎಂದರು. ನಾನು ಅಷ್ಟೂ ಜನರ ನೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದೇವೆ. ಜತೆಗೆ ಆ ಕುಟುಂಬಗಳಿಗೆ ತಲಾ 1 ಲಕ್ಷ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಆದರೆ ಪರಿಹಾರ ನೀಡಬೆಕಾಗುತ್ತದೆ ಎಂದು ಕೇವಲ 37 ಸಾವಿರ ಜನ ಸತ್ತಿದ್ದಾರೆ ಎಂದು ತೋರಿಸುತ್ತಿದ್ದಾರೆ. ನಾನು ಡೆತ್ ಆಡಿಟ್ ಮಾಡಿಸಿ ಅವರ ಮಾಹಿತಿ ಪಡೆದು ಅವರಿಗೆ ಪರಿಹಾರ ಕೊಡಿಸಲು ಅರ್ಜಿ ಹಾಕಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಮನೆಯಲ್ಲೇ ಸತ್ತಿದ್ದಾರೆ. ಅನೇಕರು ನೂರಾರು ಕಿ.ಮೀ ದೂರ ನಡೆದಿದ್ದಾರೆ. ಕಾರ್ಮಿಕರಿಂದ ಮೂರುಪಟ್ಟು ಬಸ್ ಟಿಕೆಟ್ ದರ ವಸೂಲಿ ಮಾಡಲು ಮುಂದಾದರು. ನಾನು 1 ಕೋಟಿ ಚೆಕ್ ಕೊಡಲು ಮುಂದಾದಾಗ, ಜನ ಸರ್ಕಾರಕ್ಕೆ ಉಗಿಯಲು ಆರಂಭಿಸಿದಾಗ ಉಚಿತ ಪ್ರಯಾಣ ಆರಂಭಿಸಿದರು. ನಮ್ಮಲ್ಲಿ ಬುದ್ಧಿವಂತರು ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಪ್ರಜ್ಞಾವಂತರಿರಬೇಕು. ನಿಮ್ಮ ಸಮಾಜದಲ್ಲಿ ಎಷ್ಟು ಜನ ಕೋವಿಡ್ ಸಮಯದಲ್ಲಿ ಸತ್ತಿದ್ದಾರೆ ಎಂದು ಮಾಹಿತಿ ಕೊಡಿ ಎಂದು ಅವರು ಆಗ್ರಹಿಸಿದ್ದಾರೆ.

ನೀವು ಈ ಸಮಯದಲ್ಲಿ ಮುಸಲ್ಮಾನರು ಬೇರೆ ಧರ್ಮದವರ ಶವಾಗಳಿಗೂ ಹೆಗಲು ಕೊಟ್ಟು ಅಂತ್ಯಸಂಸ್ಕಾರ ಮಾಡಿ ನಿಮ್ಮ ಧರ್ಮದ ಹೃದಯವೈಶಾಲ್ಯತೆ ಮೆರೆದಿದ್ದೀರಿ. ನಿಮಗೆ ಧನ್ಯವಾದಗಳು ಎಂದು ಹೇಳಿದ ಅವರು, ನಾವು ಕಾಂಗ್ರೆಸ್ ಪಕ್ಷ ಮುಚ್ಚಲಿಲ್ಲ. ಪಕ್ಷದಲ್ಲಿ ಅನೇಕ ಸಮಿತಿ ಮಾಡಿ, ಸಹಾಯ ಹಸ್ತ ಕಾರ್ಯಕ್ರಮ ಮಾಡಿದೆವು. ಕಾಂಗ್ರೆಸ್ ಪಕ್ಷದಿಂದಲೇ 1225 ಆಂಬ್ಯುಲೆನ್ಸ್ ಸೇವೆ, 3746 ಹೆಚ್ಚು ಆಕ್ಸಿಜನ್ ಕಾನ್ಸಟ್ರೇಟರ್, 26 ಲಕ್ಷ ದಿನಸಿಂಕಿಟ್, 93 ಲಕ್ಷ ಆಹಾರ ಕಿಟ್, 23 ಸಾವಿರ ಜನರಿಗೆ ಆಕ್ಸಿಜನ್, 10 ಸಾವಿರಕ್ಕೂ ಹೆಚ್ಚು ಮೃತರ ಅಂತ್ಯಸಂಸ್ಕಾರಕ್ಕೆ ನೆರವು ನೀಡಿದ್ದೇವೆ. ಇದೆಲ್ಲದಕ್ಕೂ ನಮ್ಮಲ್ಲಿ ದಾಖಲೆ ಇವೆ. ಕೆಲವರು ಪಕ್ಷ, ಅಧಿಕಾರ ಆಸೆ ಇಲ್ಲದೆ ಈ ಸೇವೆ ಮಾಡಿದ್ದೀರಿ. ಬೇರೆಯವರಿಗೆ ನೇರವಾಗಿ ಮಾನವೀಯ ಧರ್ಮ ಉಳಿಸಿದ್ದೀರಿ. ರಾಜ್ಯಾದ್ಯಂತ ನಿಮ್ಮಂತವರಿಗೆ ಗೌರವ ಸಲ್ಲಿಸಬೇಕು ಎಂದು ಅವರು ಶ್ಲಾಘಿಸಿದ್ದಾರೆ.

ಸರ್ಕಾರದಿಂದ ಯಾವುದೇ ನಿರೀಕ್ಷೆ ಮಾಡುವಂತಿಲ್ಲ. ಸತ್ತವರಿಗೆ ಪರಿಹಾರ ಇಲ್ಲ, ಬದುಕಿರುವವರಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡುತ್ತಿಲ್ಲ. ಹೆಚ್ಚಿನ ತೆರಿಗೆ ವಿಧಿಸುತ್ತಿದ್ದಾರೆ. ನಾನು ನಿಮ್ಮನ್ನು ಸೋದರರು ಎಂದಿದ್ದಕ್ಕೆ ನನ್ನನ್ನು ಲೇವಡಿ ಮಾಡುತ್ತಾರೆ. ಹೌದು ಮುಸಲ್ಮಾನರು ನಮ್ಮ ಸಹೋದರರು ಎಂದು ತಮ್ಮ ಈ ಹಿಂದಿನ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಿಗಳು ದೇಶ ವಿಭಜನೆಯಾದ ದಿನ ಆಚರಿಸಬೇಕು ಎಂದು ವಿಚಿತ್ರವಾಗಿ ಹೇಳುತ್ತಾರೆ. ನಂತರ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ದಿನಕ್ಕೆ ಶುಭಕೋರುತ್ತಾರೆ. ವಿಶ್ವದ ಅನೇಕ ನಾಯಕರು ಈ ದೇಶದಲ್ಲಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಪ್ರಶ್ನಿಸಿದ್ದಾರೆ. ಯಾರು ನಾಯಕರನ್ನು ಬೆಳೆಸುತ್ತಾರೋ ಅವರೇ ನಿಜವಾದ ನಾಯಕರು ಎಂದು ನಮಗೆ ರಾಜೀವ್ ಗಾಂಧಿ ಅವರು ಹೇಳಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಯಾವಾಗಲೂ ನಿಮ್ಮ ಜತೆ ಇದ್ದೇ ಇದೆ. ನಾನು ಕೂಡ ನಿಮ್ಮ ಪರವಾಗಿ ಇರುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

Tags: BJPCovid 19ಕರೋನಾಕೋವಿಡ್-19ಡಿಕೆ ಶಿವಕುಮಾರ್‌ಬಿಜೆಪಿ
Previous Post

ಜಮೀರ್ ಸೇರಿದಂತೆ ಸಿದ್ದರಾಮಯ್ಯ ಆಪ್ತರನ್ನು ಸೆಳೆಯಲು ಪ್ರಯತ್ನ ಪಡುತ್ತಿದ್ದಾರ ಡಿಕೆಶಿ?

Next Post

ಮೈಸೂರು-ಬೆಂಗಳೂರು ಎಕ್ಸ್‌‌‌‌ಪ್ರೆಸ್‌‌‌ ಹೈವೇ ಯೋಜನೆ UPA ಸರ್ಕಾರ ಮಾಡಿದ್ದು, ಬಿಜೆಪಿ ಅಲ್ಲ: ಪ್ರತಾಪ್ ಸಿಂಹ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ

Related Posts

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ
ಕರ್ನಾಟಕ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

by ಪ್ರತಿಧ್ವನಿ
April 26, 2026
0

ನವದೆಹಲಿ, ಏ. 26: ಎರಡು ದಿನಗಳ ದೆಹಲಿ ಪ್ರವಾಸದ ವೇಳೆ ಬೆಂಗಳೂರು ನಗರದ ಅಭಿವೃದ್ಧಿ, ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆಗಳು ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳ ಕುರಿತು...

Read moreDetails
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ಮೈಸೂರು-ಬೆಂಗಳೂರು ಎಕ್ಸ್‌‌‌‌ಪ್ರೆಸ್‌‌‌ ಹೈವೇ ಯೋಜನೆ UPA ಸರ್ಕಾರ ಮಾಡಿದ್ದು, ಬಿಜೆಪಿ ಅಲ್ಲ: ಪ್ರತಾಪ್ ಸಿಂಹ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು-ಬೆಂಗಳೂರು ಎಕ್ಸ್‌‌‌‌ಪ್ರೆಸ್‌‌‌ ಹೈವೇ ಯೋಜನೆ UPA ಸರ್ಕಾರ ಮಾಡಿದ್ದು, ಬಿಜೆಪಿ ಅಲ್ಲ: ಪ್ರತಾಪ್ ಸಿಂಹ ವಿರುದ್ಧ ಎಚ್.ವಿಶ್ವನಾಥ್ ವಾಗ್ದಾಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada