• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

‘ಹೆರಾತ್‌ನ ಸಿಂಹ’ ಇಸ್ಮಾಯಿಲ್ ಖಾನ್‌ರನ್ನು ವಶಕ್ಕೆ ಪಡೆದ ತಾಲಿಬಾನ್

ಫಾತಿಮಾ by ಫಾತಿಮಾ
August 14, 2021
in ದೇಶ, ವಿದೇಶ
0
‘ಹೆರಾತ್‌ನ ಸಿಂಹ’ ಇಸ್ಮಾಯಿಲ್ ಖಾನ್‌ರನ್ನು ವಶಕ್ಕೆ ಪಡೆದ ತಾಲಿಬಾನ್

Ismail Khan, a veteran local commander leading militia resistance in Herat, Afghanistan, speaks to a Taliban media arm while in their custody, in this screen grab taken from an undated video from social media uploaded on August 13, 2021. TALIBAN HANDOUT/via REUTERS

Share on WhatsAppShare on FacebookShare on Telegram

‘ಹೆರಾತ್‌ನ ಸಿಂಹ’ ಇಸ್ಮಾಯಿಲ್ ಖಾನ್‌ರನ್ನು ವಶಕ್ಕೆ ಪಡೆದ ತಾಲಿಬಾನ್ತಾಲಿಬಾನ್ ದಂಗೆಕೋರರು ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ನಗರವಾದ ಹೆರಾತ್‌ನ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅಲ್ಲಿನ ಮಿಲಿಟರಿ ಪ್ರತಿರೋಧವನ್ನು ಮುನ್ನಡೆಸುತ್ತಿರುವ ಹಿರಿಯ ಕಮಾಂಡರ್ ಇಸ್ಮಾಯಿಲ್ ಖಾನ್ ಅವರನ್ನು ವಶಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಕಳೆದ ಕೆಲವು ದಿನಗಳಲ್ಲಿ ತಾಲಿಬಾನ್ ವಶಪಡಿಸಿಕೊಂಡ ಪ್ರಮುಖ ಪ್ರಾಂತೀಯ ನಗರಗಳಲ್ಲಿ ಹೆರಾತ್‌ನ್ನು ವಶಪಡಿಸಿಕೊಂಡಿರುವುದು ಅವರಿಗೆ ಸಂದ ಅತ್ಯಂತ ಪ್ರಮುಖ ಗೆಲುವಾಗಿದೆ.

ADVERTISEMENT

ಅಫಘಾನ್ ಸರ್ಕಾರಿ ಪಡೆಗಳು ನಗರದಿಂದ 15 ಕಿಮೀ (ಒಂಬತ್ತು ಮೈಲಿ) ದೂರದಲ್ಲಿರುವ ಹೆರಾತ್ ವಿಮಾನ ನಿಲ್ದಾಣ ಮತ್ತು ತಮ್ಮ ನಿಯಂತ್ರಣದಲ್ಲಿದ್ದ ಕೊನೆಯ ಕೇಂದ್ರಗಳಾದ ಸೇನಾ ದಳದ ಕಮಾಂಡರ್‌ರ ಪ್ರಧಾನ ಕಚೇರಿಯನ್ನು ತಾಲಿಬಾನ್‌ಗೆ ಒಪ್ಪಿಸಲು ಒಪ್ಪಿಕೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇತರ ಕೆಲವು ಮೂಲಗಳು ಅಫಘಾನ್ ಪಡೆಗಳು ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಯವರೆಗೂ ವಿಮಾನ ನಿಲ್ದಾಣದಲ್ಲಿಯೇ ಇದ್ದವು ಎಂದು ಹೇಳಿವೆ.

“ತಮಗೆ ಶರಣಾದ ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಬೆದರಿಕೆ ಅಥವಾ ಹಾನಿ ಮಾಡುವುದಿಲ್ಲ ಎಂದು ತಾಲಿಬಾನ್ ಒಪ್ಪಿಕೊಂಡಿದೆ” ಎಂದು ಪ್ರಾಂತೀಯ‌ ಕೌನ್ಸಿಲ್  ಸದಸ್ಯ ಗುಲಾಂ ಹಬೀಬ್ ಹಾಶಿಮಿ ರಾಯಿಟರ್ಸ್ ಜೊತೆ ಮಾತಾಡುತ್ತಾ ಹೇಳಿದ್ದಾರೆ.

ಶತಮಾನಗಳಿಂದ ಪರ್ಷಿಯನ್ ಸಂಸ್ಕೃತಿಯ ಐತಿಹಾಸಿಕ ಕೇಂದ್ರಗಳಲ್ಲಿ ಒಂದಾಗಿರುವ, ಇರಾನ್‌ನ ಗಡಿಗೆ ಹತ್ತಿರವಿರುವ ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಸುಮಾರು 6,00,000 ಜನರು ವಾಸಿಸುವ  ಹೆರಾತ್‌ನ ಬೀದಿಗಳು ಮೌನವಾಗಿವೆ. ಹೆರಾತ್‌ನ ಸದ್ಯದ ಬೆಳವಣಿಗೆಯನ್ನು ಗಮನಿಸಿ ಆ ನಗರವನ್ನು ‘ಪ್ರೇತಪಟ್ಟಣ’ ಎಂದು ಕರೆದಿರುವ ಹಾಶಿಮಿ “ಹಲವು ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿವೆ ಅಥವಾ ಅಡಗಿಕೊಂಡಿದ್ದಾರೆ” ಎಂದು ಹೇಳಿದ್ದಾರೆ. ಅಮೆರಿಕ‌ ತನ್ನ ಸೈನ್ಯ ಹಿಂದೆಗೆಯುವ ನಿರ್ಧಾರ ಪ್ರಕಟಿಸಿದ ನಂತರ ಈ ನಗರದ ಮೇಲೆ ತಾಲಿಬಾನ್ ಒತ್ತಡ ಹೆಚ್ಚಾಗಿತ್ತು.

ಇಸ್ಮಾಯಿಲ್ ಖಾನ್  ಅವರು ಈ ನಗರದ ಅತ್ಯಂತ ಪ್ರಮುಖ ಮಿಲಿಟಿಯಾ ಕಮಾಂಡರ್ ಆಗಿದ್ದು ತನ್ನ 70 ರ ಹರೆಯದಲ್ಲಿದ್ದಾರೆ ಎಂದು ನಂಬಲಾಗಿದೆ. ಪ್ರಾಂತೀಯ ಗವರ್ನರ್ ಮತ್ತು ಭದ್ರತಾ ಅಧಿಕಾರಿಗಳು ಒಪ್ಪಂದದ ಅಡಿಯಲ್ಲಿ ಅವರನ್ನು ತಾಲಿಬಾನ್‌ಗೆ ಹಸ್ತಾಂತರಿಸಿದರು ಎಂದು ಹಾಶಿಮಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ. 

ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಇಸ್ಮಾಯಿಲ್  ಖಾನ್‌ರನ್ನು  ಸೆರೆಹಿಡಿದಿರುವುದನ್ನು ದೃಢೀಕರಿಸಿದ್ದು, ಇದು ನಗರದಲ್ಲಿ ಪ್ರತಿರೋಧದ ಕುಸಿಯುವಿಕೆಯ ಅತ್ಯಂತ ಪ್ರಬಲವಾದ ಸಂಕೇತವನ್ನು ಒದಗಿಸುತ್ತದೆ. ಬಂಡುಕೋರರ ಒತ್ತೆಯಲ್ಲಿರುವ  ಕಮಾಂಡರ್‌ರನ್ನು ಸ್ಪಷ್ಟವಾಗಿ ತೋರಿಸುವ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದರೂ ಅವುಗಳ  ಪರಿಶೀಲನೆ ನಡೆಸಲಾಗಿಲ್ಲ.

ಖಾನ್‌ರನ್ನು ‘ಹೆರಾತ್‌ನ ಸಿಂಹ’ ಎಂದು ಕರೆಯಲಾಗುತ್ತಿದ್ದು, ಇಸ್ಲಾಮಿಕ್ ತೀವ್ರವಾದಿ ಗುಂಪು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಖಾನ‌ರ ಸೈನ್ಯವು ತಾಲಿಬಾನ್ ವಿರುದ್ಧ ಸರಣಿ ಯಶಸ್ಸನ್ನು ಕಂಡಿತು. ಆದರೆ 1995 ರಲ್ಲಿ ಅವರ ಮಿತ್ರರೇ ದಂಗೆಕೋರರಿಗೆ ಸಹಾಯ ಮಾಡಿದ ನಂತರ ಅವರು ತನ್ನ ಸಾವಿರಾರು ಬೆಂಬಲಿಗರೊಂದಿಗೆ ಇರಾನ್‌ಗೆ ಪಲಾಯನ ಮಾಡಬೇಕಾಯಿತು. 1997 ರಲ್ಲಿ ಅವರು ದಂಗೆಯನ್ನು ಸಂಘಟಿಸಲು ಅಫ್ಘಾನ್‌ಗೆ ಹಿಂದಿರುಗಿದಾಗ ತಾಲಿಬಾನ್‌ನಿಂದ ಸೆರೆಹಿಡಿಯಲ್ಪಟ್ಟರು, ಆದರೆ ಎರಡು ವರ್ಷಗಳ ನಂತರ ಮತ್ತೆ ಜೈಲಿನಿಂದ ತಪ್ಪಿಸಿಕೊಂಡರು.

ಇಸ್ಮಾಯಿಲ್ ಖಾನ್ ಭಾರತದ ಉತ್ತಮ ಸ್ನೇಹಿತರಾಗಿದ್ದರು ಮತ್ತು ಸಲ್ಮಾ ಅಣೆಕಟ್ಟು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೊದಲು ಸಲ್ಮಾ ಅಣೆಕಟ್ಟಿನ ಮೇಲೆ ತಾಲಿಬಾನ್ ದಾಳಿ ಮಾಡಿತ್ತು‌ ಆದರೆ ಅದನ್ನು ಅಫಘಾನ್ ಸೇನೆಯು ವಿಫಲಗೊಳಿಸಿತ್ತು.  ಈ ಅಣೆಕಟ್ಟನ್ನು ಭಾರತ ನಿರ್ಮಿಸಿದ್ದು ಇಸ್ಮಾಯಿಲ್ ಖಾನ್ ಏಪ್ರಿಲ್ ನಲ್ಲಿ ಭಾರತಕ್ಕೆ ಬಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾಗಿದ್ದರು. ಅವರ‌‌ ಬಂಧನದೊಂದಿಗೆ ಭಾರತ ಅಫ್ಘಾನಿಸ್ತಾನ‌ ಸಂಬಂಧಕ್ಕೆ  ಕಂಟಕ ಎದುರಾಗಿದ್ದು ಭಾರತ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಬೇಕಿದೆ.

Tags: 'lion of HeratIsmail khanTalibanತಾಲಿಬಾನ್
Previous Post

ರಾಹುಲ್ ಗಾಂಧಿ ಟ್ವಿಟರ್ ಖಾತೆ ಓಪನ್; ಸತ್ಯಮೇವ ಜಯತೆ ಎಂದ ಕಾಂಗ್ರೆಸ್

Next Post

ರೈತರ ಜೀವನದ ಜೊತೆ ಚೆಲ್ಲಾಟವಾಡಬೇಡಿ – ಮಾಜಿ ಶಾಸಕ ಹೆಚ್‌ ಸಿ ಬಾಲಕೃಷ್ಣ

Related Posts

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
0

"ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್...

Read moreDetails

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

December 23, 2025

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

December 22, 2025
Next Post

ರೈತರ ಜೀವನದ ಜೊತೆ ಚೆಲ್ಲಾಟವಾಡಬೇಡಿ - ಮಾಜಿ ಶಾಸಕ ಹೆಚ್‌ ಸಿ ಬಾಲಕೃಷ್ಣ

Please login to join discussion

Recent News

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ
Top Story

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

by ಪ್ರತಿಧ್ವನಿ
December 24, 2025
Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

December 24, 2025

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada