• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪ್ರಧಾನ ಮಂತ್ರಿಗಳೇ, ನಿಮ್ಮ ಸಮಯ ಈಗ ಶುರು – ಟಿಎಂಸಿ ಸಂಸದ ಡೆರೆಕ್ ಒ’ ಬ್ರಾಯನ್

ಪ್ರತಿಧ್ವನಿ by ಪ್ರತಿಧ್ವನಿ
August 13, 2021
in ದೇಶ
0
ಪ್ರಧಾನ ಮಂತ್ರಿಗಳೇ, ನಿಮ್ಮ ಸಮಯ ಈಗ ಶುರು – ಟಿಎಂಸಿ ಸಂಸದ ಡೆರೆಕ್ ಒ’ ಬ್ರಾಯನ್
Share on WhatsAppShare on FacebookShare on Telegram

ಸಂಸತ್ತಿನಲ್ಲಿ ನಡೆದ ಗಲಾಟೆಯ ಕುರಿತು ಕೇಂದ್ರ ಮಂತ್ರಿಗಳಿಗೆ ಎಂಟು ಪ್ರಶ್ನೆಗಳನ್ನು ಕೇಳಿದ್ದ ತೃಣಮೂಲ ಕಾಂಗ್ರೆಸ್ ಸಂಸದ ಡೆರಿಕ್ ಒ’ಬ್ರಾಯನ್, ಇಂದು ನೇರವಾಗಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಎರಡನೇ ವೀಡಿಯೋ ಬಿಡುಗಡೆ ಮಾಡಿರುವ ಡೆರಿಕ್ ಅವರು, ನೇರವಾಗಿ ಪ್ರಧಾನಿಯವರಿಗೇ ತಮ್ಮ ಪ್ರಶ್ನೆಗಳನ್ನು ಕೇಳಿದ್ದಾರೆ.

ADVERTISEMENT

ರಾಜ್ಯಸಭೆಯಲ್ಲಿ ಒಬಿಸಿ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಮತಕ್ಕೆ ಹಾಕಿದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಗೈರಾಗಿದ್ದರು. ಇದನ್ನು ಪ್ರಶ್ನಿಸಿರುವ ಡೆರಿಕ್, ಇಬ್ಬರು ಮಾಜಿ ಪ್ರಧಾನಿಗಳು ಸಭೆಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ನೀವು ಎಲ್ಲಿದ್ರಿ? ಎಂದು ಪ್ರಶ್ನಿಸಿದ್ದಾರೆ.

ಟ್ವಿಟರ್’ನಲ್ಲಿ ವೀಡಿಯೋ ಬಿಡುಗಡೆ ಮಾಡಿರುವ ಡೆರಿಕ್, ಪಾರ್ಲಿಮೆಂಟ್’ನಲ್ಲಿ ನಡೆದ ಗಲಾಟೆಯ ಕುರಿತು ಕೇಂದ್ರ ಸಚಿವರಿಗೆ ಎಂಟು ಪ್ರಶ್ನೆಗಳನ್ನು ಕೇಳಿದ 24 ಗಂಟೆಗಳ ನಂತರವೂ ನನಗೆ ಯಾವುದೇ ಉತ್ತರ ದೊರಕಿಲ್ಲ. ನನಗೆ ಯಾವುದೇ ಆಶ್ಚರ್ಯವಿಲ್ಲ. ಏಕೆಂದರೆ, ಅವರ ಬಳಿ ಉತ್ತರವಿಲ್ಲ ಎಂಬುದು ನನಗೆ ತಿಳಿದಿದೆ. ಅದರ ‘ಬಾಸ್’ ಬಳಿ ಪ್ರಶ್ನೆ ಕೇಳಲು ಪ್ರಯತ್ನಿಸೋಣ, ಎಂದಿದ್ದಾರೆ.

“ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಹಾಗೂ ದೇವೇ ಗೌಡ ಅವರು ಮಸೂದೆಯನ್ನು ಮತಕ್ಕೆ ಹಾಕುವಾಗ ಸಭೆಯಲ್ಲಿ ಹಾಜರಿದ್ದರು. ಒಬಿಸಿ ಮಸೂದೆಯ ಕುರಿತಾಗಿ ಆರು ಸುತ್ತಿನ ಮತ ಪ್ರಕ್ರಿಯೆ ನಡೆಯಿತು. ಇದು ಅತ್ಯಂತ ಅಮೂಲ್ಯವಾದ ಸಂದರ್ಭವಾಗಿತ್ತು,” ಎಂದು ಡೆರೆಕ್ ಹೇಳಿದ್ದಾರೆ.

NEW. Here’s our 2nd video in 24 hrs. I asked 8 Qs to Ministers about #Parliament

Zero answers.

Mr PM, here's a straight Q for you.

Why were U missing from Parliament? The two former PMs were there & voted on Constitution Amendment 127 #OBCBill, where were you?

VIDEO #2 pic.twitter.com/eNFaD5Z77v

— Derek O'Brien | ডেরেক ও'ব্রায়েন (@derekobrienmp) August 13, 2021

ಮಿಸ್ಟರ್ ಪ್ರೈಮ್ ಮಿನಿಸ್ಟರ್, ನೀವು ಏಕೆ ಸಂಸತ್ತಿಗೆ ಗೈರು ಹಾಜರಾಗಿದ್ರಿ? ನೀವು ಏಕೆ ಸಂಸತ್ತನ್ನು ನಿರ್ಲಕ್ಷಿಸುತ್ತಿದ್ದೀರಿ? ನೀವೆಲ್ಲಿದ್ದೀರಾ ಪ್ರಧಾನಿಯವರೇ? ನೀವು ಸಂಸತ್ತಿಗೆ ಅಪಮಾನ ಮಾಡುತ್ತಿದ್ದೀರಾ, ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

“ನೀವು ಜನರಿಗೆ ಉತ್ತರ ನೀಡಬೇಕಾಗುತ್ತದೆ. ಜನಪ್ರತಿನಿಧಿಗಳಿಗೆ ಉತ್ತರ ನೀಡಬೇಕಾಗುತ್ತದೆ. ನೀವು ಸಂಸತ್ತಿಗೆ ಉತ್ತರ ನೀಡಬೇಕಾಗುತ್ತದೆ. ಉತ್ತರಿಸುವುದು ನಿಮ್ಮ ಕರ್ತವ್ಯ. ಎಂಟು ಸಚಿವರಿಗೆ ಉತ್ತರಿಸಲು ಸಾಧ್ಯವಾಗಿಲ್ಲ. ಪ್ರಧಾನ ಮಂತ್ರಿಗಳೇ, ನಿಮ್ಮ ಸಮಯ ಈಗ ಶುರು,” ಎಂದು ಡೆರಿಕ್ ಹೇಳಿದ್ದಾರೆ.

ಈ ಬಾರಿಯ ಮಾನ್ಸೂನ್ ಅಧಿವೇಶನ ಬಹುತೇಕ ಪ್ರತಿಭಟನೆಗಳಿಂದಲೇ ಮುಗಿದು ಹೋಯಿತು. ಪೆಗಾಸಸ್, ಕೃಷಿ ಕಾಯ್ದೆ ತಿದ್ದುಪಡಿ ಹಾಗೂ ತೈಲ ಬೆಲೆ ಏರಿಕೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ವಿಪಕ್ಷಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡವು. ಇದರಿಂದಾಗಿ, ನಿಗದಿತ ಸಮಯಕ್ಕಿಂತಲೂ ಮುಂಚಿತವಾಗಿಯೇ ಅಧಿವೇಶನವನ್ನು ಮುಗಿಸಲಾಯಿತು.

Tags: BJPಟಿಎಂಸಿಡೆರೆಕ್ ಒ’ ಬ್ರಾಯನ್ನರೇಂದ್ರ ಮೋದಿಬಿಜೆಪಿ
Previous Post

ಕಗ್ಗಂಟಾದ ಖಾತೆ ಕ್ಯಾತೆ: ತೆರೆಯದ ಆನಂದ್ ಸಿಂಗ್ ಕಚೇರಿ!

Next Post

ಶೀಘ್ರದಲ್ಲೇ ಮಂತ್ರಿಯಾಗುವ ವಿಶ್ವಾಸ ಇದೆ: ಶಾಸಕ ರೇಣುಕಾಚಾರ್ಯ

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

April 21, 2026
Next Post
ʼಕುಮಾರಸ್ವಾಮಿ ರಾಜಕೀಯವಾಗಿ ನೆಲೆ ಕಳೆದುಕೊಂಡಿದ್ದಾರೆʼ – ಸಿ ಪಿ ಯೋಗೇಶ್ವರ್

ಶೀಘ್ರದಲ್ಲೇ ಮಂತ್ರಿಯಾಗುವ ವಿಶ್ವಾಸ ಇದೆ: ಶಾಸಕ ರೇಣುಕಾಚಾರ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada