ಟೋಕಿಯೊ ಒಲಿಂಪಿಕ್ಸ್: ನೀರಜ್ ಛೋಪ್ರಾ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 100 ವರ್ಷಗಳ ನಂತರ ಅಥ್ಲೆಟಿಕ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಬಂದಿದ್ದು ಎಲ್ಲೆಡೆ ಸಂಭ್ರಮಾಚರಣೆಗೆ ಕಾರಣವಾಗಿದೆ.
ನೀರಜ್ ಛೋಪ್ರಾ ಅವರು 87.58 ಮೀಟರ್ಗಳ ಜಾವಲಿನ್ ಎಸೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕ ದಕ್ಕಿದ್ದು ಎಲ್ಲೆಡೆ ಸಂಭ್ರಮಾಚರಣೆಗಳು ನಡೆಯುತ್ತಿವೆ. ಚಿನ್ನ ಗೆದ್ದ ನೀರಜ್ ಛೋಪ್ರಾಗೆ ರಾಜಕೀಯ ನಾಯಕರಲ್ಲದೆ, ಅನೇಕ ಗಣ್ಯರು ಟ್ವೀಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.
2008ರ ಬೀಜಿಂಗ್ನ ಶೂಟಿಂಗ್ನಲ್ಲಿ ಅಭಿನವ್ ಭಿಂದ್ರಾ ಬಳಿಕ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ ಚಿನ್ನದ ಪದಕ ಪಡೆದವರು ನೀರಜ್ ಛೋಪ್ರಾ ಅವರಾಗಿದ್ದಾರೆ. ಬೀಜಿಂಗ್ ನಂತರ ಭಾರತಕ್ಕೆ ಇದು 2ನೇ ಏಕೈಕ ಚಿನ್ನದ ಪದಕವಾಗಿದೆ. ವಿಶ್ವ ನಂ .1 ಜಾವಲಿನ್ ಆಟಗಾರ ಜೊಹಾನ್ಸ್ ವೆಟರ್ ಹಿಂದಿಕ್ಕಿ ಚಿನ್ನಪ ಪದಕಕ್ಕೆ ಭಾರತೀಯ ನೀರಜ್ ಮುತ್ತಿಟ್ಟಿದ್ದಾರೆ.






