ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಕ್ಯಾಬಿನೆಟ್‌ನಲ್ಲಿ 29 ಬಿಜೆಪಿ ಶಾಸಕರನ್ನು ಸಚಿವರನ್ನಾಗಿ ನೇಮಿಸಿದ ಒಂದು ದಿನದ ನಂತರ ಆಗಸ್ಟ್ 5 ರಂದು ರಾಜ್ಯ ಸರ್ಕಾರವು ಜಿಲ್ಲಾವಾರು ಪ್ರವಾಹ ಪರಿಹಾರ ಮತ್ತು ಕೋವಿಡ್ -19 ನಿರ್ವಹಣೆಯನ್ನು ನಿರ್ವಹಿಸಲು ತಾತ್ಕಾಲಿಕವಾಗಿ ಮಂತ್ರಿಯನ್ನು ನೇಮಿಸಿದ್ದು ಅದರ ಆಧಿಕೃತ ಪಟ್ಟಿಯನ್ನು ನೀಡಿದೆ.
ಬೆಂಗಳೂರು ನಗರಕ್ಕೆ ಅರ್.ಅಶೋಕ ಅವರನ್ನು ಸಚಿವರನ್ನಾಗಿ ಮಾಡಿದ್ದಾರೆ,ವಿ ಸುನಿಲ್ ಕುಮಾರ್ ಅವರನ್ನು ಉಡುಪಿಗೆ, ಎಸ್ಟಿ ಸೋಮಶೇಖರ್ ಅವರನ್ನು ಮೈಸೂರು ಮತ್ತು ಚಾಮರಾಜನಗರಕ್ಕೆ ಮತ್ತು ಎಸ್ಟಿ ಸೋಮಶೇಖರ್ ಚಿಕ್ಕಬಳ್ಳಾಪುರಕ್ಕೆ ಹಗೂ ಇತರರಿಗೆ ಜಿಲ್ಲಾವಾರು ನೇಮಿಸಲಾಗಿದೆ. ಒಂದು ಅಧಿಸೂಚನೆಯಲ್ಲಿ ಕರ್ನಾಟಕ ಸರ್ಕಾರವು ಪ್ರತಿ ಜಿಲ್ಲೆಗೆ ಮಂತ್ರಿಯನ್ನು ನೇಮಿಸಿದೆ ಹಾಗೂ ಸಚಿವರ ಸಂಪೂರ್ಣ ಪಟ್ಟಿಯನ್ನು ಘೋಷಿಸಿದೆ. ಈ ಮಂತ್ರಿಗಳ ಜವಾಬ್ದಾರಿಯು ತಮ್ಮ ಗೊತ್ತುಪಡಿಸಿದ ಜಿಲ್ಲೆಯಲ್ಲಿ ಕೋವಿಡ್ -19 ನಿರ್ವಹಣೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಪರಿಹಾರ ಕಾರ್ಯಗಳನ್ನು ನಿರ್ವಹಿಸುವುದು.
ರಾಜ್ಯ ಸರ್ಕಾರವು ಕೋವಿಡ್ -19 ಪ್ರಕರಣಗಳನ್ನು ತಡೆಯಲ್ಲು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಾಸ್ತವಾಗಿ ಜುಲೈನಲ್ಲಿ ತೀವ್ರ ಮಳೆಯಿಂದಾಗಿ ಕರಾವಳಿ, ಮಲೆನಾಡು ಮತ್ತು ಉತ್ತರ ಒಳ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಕೋವಿಡ್ -19 ಮತ್ತು ಪ್ರವಾಹದ ಗಂಭಿರದ ಪರಿಸ್ಥಿಯನ್ನು ನೋಡಿಕೂಳಲು.ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ಪ್ರಾದೇಶಿಕ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡುವುದು ಅಗತ್ಯವಾಗಿದೆ.
ಹಾಗೂ “ಕೋವಿಡ್ -19 ನಿರ್ವಹಣೆ ಮತ್ತು ಪ್ರವಾಹ ಪರಿಹಾರ ಕಾರ್ಯಗಳನ್ನು ನಿರ್ವಹಿಸಲು ಮತ್ತು ಪರಿಶೀಲಿಸಲು, ಈ ಕೆಳಗಿನ ಮಂತ್ರಿಗಳನ್ನು ಅವರ ಹೆಸರಿನ ಜೊತೆಗೆ ತಾತ್ಕಾಲಿಕವಾಗಿ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ. ಕೋವಿಡ್ -19 ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಮಂತ್ರಿಗಳು ಸಕಾಲಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಸರ್ಕಾರವು ಹೇಳಿದೆ.
Sl No | Ministers | Districts |
1 | Govind M Karjol | Belagavi |
2 | KS Eshwarappa | Shivamogga |
3 | R Ashoka | Bengaluru Urban |
4 | B Sriramulu | Chitradurga |
5 | V Somanna | Raichur |
6 | Umesh V Katti | Bagalkot |
7 | S Angara | Dakshina Kannada |
8 | JC Madhu Swamy | Tumakuru |
9 | Araga Jnanendra | Chikkamagaluru |
10 | CN Ashwath Narayana | Ramanagara |
11 | CC Patil | Gadag |
12 | Anand Singh | Bellari and Vijayanagara |
13 | Kota Srinivas Poojary | Kodagu |
14 | Prabhu B Chauhan | Bidar |
15 | Murugesh Nirani | Kalaburagi |
16 | Arbail Shivaram Hebbar | Uttara Kannada |
17 | ST Somashekar | Mysuru and Chamarajanagara |
18 | BC Patil | Haveri |
19 | BA Basavaraj | Davanagere |
20 | Dr K Sudhakar | Chikkaballapur |
21 | K Gopalaiah | Hassan |
22 | Shashikala Annasaheb Jolle | Vijayapura |
23 | N Nagaraju (MTB) | Bengaluru Rural |
24 | KC Narayana Gowda | Mandya |
25 | BC Nagesh | Yadgir |
26 | V Sunil Kumar | Udupi |
27 | Achar Halappa Basappa | Koppal |
28 | Shankar Basanagouda Patil Munenakoppa | Dharwad |
29 | Munirtna | Kolar |