ಮಧ್ಯಪ್ರದೇಶದ ಕರೋನ ಎರಡನೇ ಅಲೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಸರ್ಕಾರದ ಅಂಕಿಅಂಶಗಳಿಗಿಂತ ಹೆಚ್ಚು ಎನ್ನಲಾಗಿದೆ. ಈ ವರ್ಷ ಕರೋನ ಹೆಚ್ಚಳದ ವೇಳೆ ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ (ಸಿಆರ್ಎಸ್) ದಾಖಲಾದ ಒಟ್ಟು ಸಾವುಗಳ ಸಂಖ್ಯೆ ಕಳೆದ ಎರಡು ವರ್ಷಗಳಿಗಿನ್ನ ನಾಲ್ಕು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಎನ್ಡಿಟಿವಿಯ ವರದಿಯ ಪ್ರಕಾರ, ಪತ್ರಕರ್ತೆ ರುಕ್ಮಣಿ ಮೊದಲು ಈ ವ್ಯವಸ್ಥೆಯೊಳಗೆ ಪ್ರವೇಶಿಸಿ ಈ ಎಲ್ಲಾ ವ್ಯತ್ಯಾಸದ ಬಗ್ಗೆ ತಿಳಿಸಿದ್ದಾರೆ.
ನಾಗರಿಕ ನೋಂದಣಿ ವ್ಯವಸ್ಥೆಯ ಪ್ರಕಾರ, 2018 ಮತ್ತು 2019ರ ಏಪ್ರಿಲ್-ಮೇ ಎರಡು ತಿಂಗಳ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ಸರಾಸರಿ 59,000 ಸಾವುಗಳು ಸಂಭವಿಸಿವೆ. ಆದರೆ 2021ರ ಕರೋನ ಎರಡನೇ ಅಲೆ ಉತ್ತುಂಗದಲ್ಲಿ 2.3 ಲಕ್ಷ ಸಾವುಗಳು ಸಂಭವಿಸಿವೆ. ಅಂದರೆ ಕಳೆದ ಎರಡು ವರ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸಾವುಗಳು, ಒಟ್ಟು 1.74 ಲಕ್ಷ ಹೆಚ್ಚುವರಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹೆಚ್ಚುವರಿ ಸಾವುಗಳಲ್ಲಿ, 1.3 ಲಕ್ಷ ಸಾವುಗಳು ಮೇ ತಿಂಗಳಲ್ಲಿ ಸಂಭವಿಸಿವೆ ಎನ್ನಲಾಗಿದೆ.
ಆದರೆ ಮಧ್ಯಪ್ರದೇಶದ ಸರ್ಕಾರದ ಮಾಹಿತಿಯ ಪ್ರಕಾರ, ಈ ಎರಡು ತಿಂಗಳಲ್ಲಿ ಕೇವಲ 4100 ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ ಎಂದು ದಾಖಲಿಸಿದ್ದಾರೆ. ಸರ್ಕಾರದ ಅಂಕಿಅಂಶಗಳು ಈ ಅವಧಿಯಲ್ಲಿ ಸಂಭವಿಸಿದ ಹೆಚ್ಚುವರಿ ಸಾವುಗಳಲ್ಲಿ ಬಹಳ ಕಡಿಮೆ ಚಿತ್ರಣವನ್ನು ದಾಖಲಿಸಿದೆ ಎನ್ನಲಾಗಿದೆ.
ದಿ ಎಕನಾಮಿಸ್ಟ್ ಮ್ಯಾಗಜಿನ್ ವರದಿಯನ್ನು ಪ್ರಕಟಿಸಿದೆ ಪ್ರಕಾರ, ಭಾರತದ ಕರೋನಾದ ಸಾವಿನ ಸಂಖ್ಯೆ ಅಧಿಕೃತ ಅಂಕಿಅಂಶಗಳಿಗಿಂತ ಐದರಿಂದ ಏಳು ಪಟ್ಟು ಹೆಚ್ಚಿದೆ ಎಂದು ನಿರೀಕ್ಷಿಸಲಾಗಿದೆ.
ಈ ವರದಿಯನ್ನು ಆಧಾರ ರಹಿತ ಮತ್ತು ದಾರಿತಪ್ಪಿಸುವ ಕೆಲಸ ಎಂದು ಭಾರತ ಸರ್ಕಾರ ತಳ್ಳಿಹಾಕಿದೆ.






