ಭಾರತದ ನೂತನ ಚುನಾವಣಾ ಆಯುಕ್ತರಾಗಿ, 1984ರ ಐಎಎಸ್ ಬ್ಯಾಚ್’ನ ನಿವೃತ್ತ ಅಧಿಕಾರಿಯಾದ ಅನೂಪ್ ಚಂದ್ರ ಪಾಂಡೆ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ಏಪ್ರಿಲ್ 12ರಂದು ಈ ಹಿಂದಿನ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಸುನಿಲ್ ಅರೋರಾ ಅವರು ನಿವೃತ್ತರಾದ ಕಾರಣ ಅವರ ಸ್ಥಾನವನ್ನು ಪಾಂಡೆ ಅವರು ತುಂಬಲಿದ್ದಾರೆ.

ಅನೂಪ್ ಚಂದ್ರ ಪಾಂಡೆ ಅವರ ಆಗಮನದಿಂದ, ಮುಂದಿನ ವರ್ಷ ಬರಲಿರುವ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ ಚುನಾವಣೆಗೆ ಚುನಾವಣಾ ಆಯೋಗವು ಪೂರ್ಣವಾಗಿ ಸಿದ್ದವಾಗಲಿದೆ. ಆಯೋಗದ ಪ್ರಮುಖ ಮೂರು ಸ್ಥಾನಗಳು ಈಗ ಭರ್ತಿಯಾಗಿವೆ.
ಅನೂಪ್ ಚಂದ್ರ ಅವರು 2019ರಲ್ಲಿ ಐಎಎಸ್ ಅಧಿಕಾರಿಯಾಗಿ ನಿವೃತ್ತಿಯಾಗುವ ಮೊದಲು ಉತ್ತರ ಪ್ರದೇಶದ ಯೋಗಿ ಸರ್ಕಾರದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಜತೆಯಲ್ಲಿ, ರಾಜ್ಯದ ಮೂಲಭೂತ ಸೌಕರ್ಯ ಹಾಗೂ ಕೈಗಾರಿಕಾಭಿವೃದ್ದಿ ಆಯುಕ್ತರಾಗಿಯೂ ಸೇವೆ ನಿರ್ವಹಿಸಿದ್ದರು.

ಅನೂಪ್ ಅವರು ಫೆಬ್ರುವರಿ 2024ರಲ್ಲಿ ನಿವೃತ್ತರಾಗಲಿದ್ದು, ಇವರ ಅವಧಿಯಲ್ಲಿ ಲೋಕಸಭೆಯ ಸೆಮಿಫೈನಲ್ ಎಂದು ಕರೆಯಲ್ಪಡುವ ಉತ್ತರ ಪ್ರದೇಶದ ಚುನಾವಣೆ ನಡೆಯಲಿದೆ.











