ಅಲೋಪತಿ ವಿಧಾನ ಮತ್ತು ಅಲೋಪತಿ ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಾಬಾ ರಾಮದೇವ್‌ಗೆ ಮಾನಹಾನಿ ನೋಟಿಸ್ ನೀಡಿದೆ, 15 ದಿನಗಳಲ್ಲಿ ರಾಮ್‌ದೇವ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿರುವ ಐಎಂಎ, ವಿಫಲವಾದರೆ 1,000 ಕೋಟಿ ರೂ. ಮಾನನಷ್ಟ ಪರಿಹಾರ ನೀಡುವಂತೆ ಹೇಳಿದೆ. .
ಐಎಂಎ ಉತ್ತರಾಖಂಡದ ಕಾರ್ಯದರ್ಶಿ ಅಜಯ್ ಖನ್ನಾ ಅವರ ಪರವಾಗಿ ನೀಡಲಾದ ಆರು ಪುಟಗಳ ನೋಟೀಸ್ ನಲ್ಲಿ ರಾಮದೇವ್ ಹೇಳಿಕೆಯಿಂದ ಅಲೋಪತಿಗೆ ಹಾಗೂ ಅಲೋಪತಿ ವೈದ್ಯರ ಪ್ರತಿಷ್ಟೆಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ 499 ರ ಸೆಕ್ಷನ್ ಅಡಿಯಲ್ಲಿ ಯೋಗ ಗುರುವಿನ ಟೀಕೆಗಳನ್ನು “ಕ್ರಿಮಿನಲ್ ಆಕ್ಟ್” ಎಂದು ಹೇಳಿದ್ದು, ನೋಟಿಸ್ ಬಂದ 15 ದಿನಗಳೊಳಗೆ ಅವರಿಂದ ಲಿಖಿತ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ, ನಷ್ಟ ಪರಿಹಾರವಾಗಿ ಐಎಂಎಯ 2000 ಸದಸ್ಯರಿಗೆ 50 ಲಕ್ಷ ರೂ. ಗಳಂತೆ ವಿತರಿಸಲು 1,000 ಕೋಟಿ ರೂ.ಗಳ ಪರಿಹಾರವನ್ನು ಕೊಡಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಅಲ್ಲದೆ, ಅಲೋಪತಿ ವೈದ್ಯಕೀಯ ಪದ್ಧತಿ ಹಾಗೂ ವೈದ್ಯರ ವಿರುದ್ಧ ನೀಡಿರುವ ಮಾನಹಾನಿಕರ ಹೇಳಿಕೆಯನ್ನು ನಿರಾಕರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಬೇಕೂ ಎಂದು ಐಎಂಎ ಕೇಳಿದೆ.
COVID-19 ಗೆ ಪರಿಣಾಮಕಾರಿ ಔ ಷಧಿಯಾಗಿ ತನ್ನ ಸಂಸ್ಥೆಯ ಉತ್ಪನ್ನವಾದ “ಕೊರೊನಿಲ್ ಕಿಟ್” ಅನ್ನು ಅನುಮೋದಿಸುವ “ದಾರಿತಪ್ಪಿಸುವ” ಜಾಹೀರಾತನ್ನು ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಹಿಂತೆಗೆದುಕೊಳ್ಳುವಂತೆ ಬಾಬಾ ರಾಮ್‌ದೇವ್ ಬಳಿ ಆಗ್ರಹಿಸಿದ್ದು, ವಿಫಲವಾದರೆ ಅವರ ವಿರುದ್ಧ ಎಫ್‌ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.