ಅಲೋಪತಿ ವಿರುದ್ಧ ಅಪಪ್ರಚಾರ: ಬಾಬಾ ರಾಮ್‌ದೇವ್‌ಗೆ ₹ 1000 ಕೋಟಿ ಮಾನಹಾನಿ ನೋಟಿಸ್‌ ನೀಡಿದ IMA

ಅಲೋಪತಿ ವಿಧಾನ ಮತ್ತು ಅಲೋಪತಿ ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬಾಬಾ ರಾಮದೇವ್‌ಗೆ ಮಾನಹಾನಿ ನೋಟಿಸ್ ನೀಡಿದೆ, 15 ದಿನಗಳಲ್ಲಿ ರಾಮ್‌ದೇವ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿರುವ ಐಎಂಎ, ವಿಫಲವಾದರೆ 1,000 ಕೋಟಿ ರೂ. ಮಾನನಷ್ಟ ಪರಿಹಾರ ನೀಡುವಂತೆ ಹೇಳಿದೆ. .


ಐಎಂಎ ಉತ್ತರಾಖಂಡದ ಕಾರ್ಯದರ್ಶಿ ಅಜಯ್ ಖನ್ನಾ ಅವರ ಪರವಾಗಿ ನೀಡಲಾದ ಆರು ಪುಟಗಳ ನೋಟೀಸ್ ನಲ್ಲಿ ರಾಮದೇವ್‌ ಹೇಳಿಕೆಯಿಂದ ಅಲೋಪತಿಗೆ ಹಾಗೂ ಅಲೋಪತಿ ವೈದ್ಯರ ಪ್ರತಿಷ್ಟೆಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ 499 ರ ಸೆಕ್ಷನ್ ಅಡಿಯಲ್ಲಿ ಯೋಗ ಗುರುವಿನ ಟೀಕೆಗಳನ್ನು “ಕ್ರಿಮಿನಲ್ ಆಕ್ಟ್” ಎಂದು ಹೇಳಿದ್ದು, ನೋಟಿಸ್ ಬಂದ 15 ದಿನಗಳೊಳಗೆ ಅವರಿಂದ ಲಿಖಿತ ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ, ನಷ್ಟ ಪರಿಹಾರವಾಗಿ ಐಎಂಎಯ 2000 ಸದಸ್ಯರಿಗೆ 50 ಲಕ್ಷ ರೂ. ಗಳಂತೆ ವಿತರಿಸಲು 1,000 ಕೋಟಿ ರೂ.ಗಳ ಪರಿಹಾರವನ್ನು ಕೊಡಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.


ಅಲ್ಲದೆ, ಅಲೋಪತಿ ವೈದ್ಯಕೀಯ ಪದ್ಧತಿ ಹಾಗೂ ವೈದ್ಯರ ವಿರುದ್ಧ ನೀಡಿರುವ ಮಾನಹಾನಿಕರ ಹೇಳಿಕೆಯನ್ನು ನಿರಾಕರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಬೇಕೂ ಎಂದು ಐಎಂಎ ಕೇಳಿದೆ.
COVID-19 ಗೆ ಪರಿಣಾಮಕಾರಿ ಔ ಷಧಿಯಾಗಿ ತನ್ನ ಸಂಸ್ಥೆಯ ಉತ್ಪನ್ನವಾದ “ಕೊರೊನಿಲ್ ಕಿಟ್” ಅನ್ನು ಅನುಮೋದಿಸುವ “ದಾರಿತಪ್ಪಿಸುವ” ಜಾಹೀರಾತನ್ನು ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಹಿಂತೆಗೆದುಕೊಳ್ಳುವಂತೆ ಬಾಬಾ ರಾಮ್‌ದೇವ್‌ ಬಳಿ ಆಗ್ರಹಿಸಿದ್ದು, ವಿಫಲವಾದರೆ ಅವರ ವಿರುದ್ಧ ಎಫ್‌ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...