ಈ ಬಾರಿಯ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆ ದೇಶದ ಗಮನ ಸೆಳೆದಿದ್ದು, ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಮೂರನೇ ಬಾರಿಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅಧಿಕಾರದ ಗದ್ದುಗೆಯೇರಿದ್ದಾರೆ. ಆದರೆ ಮಮತಾ ಬ್ಯಾನರ್ಜಿಯವರು ವಿಧಾನ ಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ನಂದಿಗ್ರಾಮದಲ್ಲಿ ಸೋತ್ತಿದ್ದು, ಇದೀಗ ಸಿಎಂ ಆದ ಕಾರಣ ಆರು ತಿಂಗಳೊಳಗೆ ವಿಧಾನಸಭೆಗೆ ಆರಿಸಿಬರಬೇಕಾಗಿದೆ. ಹಾಗಾಗಿ ತಮ್ಮ ಮೊದಲಿನ ಕ್ಷೇತ್ರ ಭಬಾನಿಪುರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಭಬಾನಿಪುರ ಕ್ಷೇತ್ರದಿಂದ ಗೆದಿದ್ದ ಕೃಷಿ ಸಚಿವ ಹಾಗೂ ಹಿರಿಯ ಟಿಎಂಸಿ ಮುಖಂಡ ಸೋವನ್‌ದೇಬ್ ಚಟ್ಟೋಪಾಧ್ಯಾಯ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗಾ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಆ ಕ್ಷೇತ್ರದಿಂದ ಸ್ಪರ್ಧಿಸಲು ಸುಲಭವಾದಂತಿದೆ.

ಪಕ್ಷದ ನಿರ್ಧಾರಕ್ಕೆ ಸಂತಸದಿಂದ ವಿಧೇಯನಾಗಿರುತ್ತೇನೆ. ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನನ್ನ ನಿರ್ಧಾರವಾಗಿದೆ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸೋವನ್‌ದೇಬ್ ಚಟ್ಟೋಪಾಧ್ಯಾಯ ಹೇಳಿ ತನ್ನ ರಾಜೀನಾಮೆ ಪತ್ರವನ್ನು ವಿಧಾನಸಭಾ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯರಿಗೆ ಸಲ್ಲಿಸಿದ್ದಾರೆ.