• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿಜೆಪಿ ನಾಯಕನಿಗೆ ‘ನಾಡೋಜ’: ವಿವಾದಕ್ಕೀಡಾಯಿತು ಹಂಪಿ ವಿವಿ ನಡೆ!

by
April 7, 2021
in ಕರ್ನಾಟಕ
0
ಬಿಜೆಪಿ ನಾಯಕನಿಗೆ ‘ನಾಡೋಜ’: ವಿವಾದಕ್ಕೀಡಾಯಿತು ಹಂಪಿ ವಿವಿ ನಡೆ!
Share on WhatsAppShare on FacebookShare on Telegram

ಹಂಪಿ ಕನ್ನಡ ವಿಶ್ವವಿದ್ಯಾನಿಲಯ ತನ್ನ ಘಟಿಕೋತ್ಸವದ ಅಂಗವಾಗಿ ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಈ ಬಾರಿ ಸಕ್ಕರೆ ಉದ್ಯಮಿ ಜಗದೀಶ್ ಎಸ್ ಗುಡಗುಂಟಿ ಮತ್ತು ಕಣ್ಣಿನ ಡಾಕ್ಟರ್ ಡಾ ಕೆ ಕೃಷ್ಣಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ.

ADVERTISEMENT

ಕನ್ನಡ ನುಡಿ ಮತ್ತು ನಾಡನ್ನು ಸಾಂಸ್ಕೃತಿಕವಾಗಿ ಕಟ್ಟುವ ಮಹತ್ತರ ಉದ್ದೇಶದಿಂದ ದಶಕಗಳ ಹಿಂದೆ ಆರಂಭವಾದ ಹಂಪಿಯ ಕನ್ನಡ ವಿವಿ, ಆರಂಭದ ಕೆಲವು ವರ್ಷಗಳವರೆಗೆ ಬಹುತೇಕ ಕನ್ನಡ ಸಾಹಿತ್ಯ, ನಾಡಿನ ಚರಿತ್ರೆ, ಜಾನಪದ, ಸಮಾಜ ಮುಂತಾದ ವಿವಿಧ ರಂಗಗಳ ಕುರಿತ ಕಣ್ತೆರೆಸುವ ಅಧ್ಯಯನಗಳ ಮೂಲಕ ನಿಜವಾಗಿಯೂ ಅದರ ಉದ್ದೇಶಕ್ಕೆ ಅನುಗುಣವಾಗಿಯೇ ಸಕ್ರಿಯವಾಗಿತ್ತು. ಎಲ್ಲಾ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ನುಸುಳುವ ಜಡ್ಡುಗಟ್ಟಿದ ಸ್ಥಿತಿ, ಯಾಂತ್ರಿಕ ವರಸೆ ಮತ್ತು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಬಾಲಬಡುಕತನಗಳು ಅಲ್ಲಿಯೂ ಕ್ರಮೇಣ ತಲೆದೋರಿದವು. ಪರಿಣಾಮವಾಗಿ ರಾಜ್ಯದ ಹತ್ತು ಹಲವು ವಿವಿಗಳ ಸಾಲಿಗೆ ಅದೂ ಸೇರಿಹೋಯಿತು.

ಆ ನಡುವೆಯೂ ತೀರಾ ಇತ್ತೀಚಿನವರೆಗೆ ಹಂಪಿ ಕನ್ನಡ ವಿವಿಯ ಕೆಲವಾದರೂ ಮಂದಿ ಅಲ್ಲಿ ಇತರ ವಿವಿಗಳಲ್ಲಿ ನಡೆಯುವ ಮಟ್ಟಿನ ಅಕ್ರಮ, ಅವಿವೇಕಿತನಗಳು ನಡೆಯದಂತೆ ತಡೆಗೋಡೆಗಳಾಗಿದ್ದರು. ಹಾಗೇ ಆ ವಿವಿ ತನ್ನ ಘಟಿಕೋತ್ಸವದ ನಿಮಿತ್ತ ಕೊಡಮಾಡುವ ನಾಡೋಜ ಪುರಸ್ಕಾರಕ್ಕೆ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಕೂಡ ಒಂದು ಘನತೆ ಇತ್ತು. ಒಂದಿಷ್ಟು ನಿಜವಾಗಿಯೂ ಅರ್ಹರನ್ನು ಆ ಪುರಸ್ಕಾರಕ್ಕೆ ಆಯ್ಕೆ ಮಾಡುತ್ತಿದುದೇ ಅಂತಹ ಆ ಘನತೆಗೆ ಕಾರಣವಾಗಿತ್ತು.

ಆದರೆ, ಈ ಬಾರಿಯ ನಾಡೋಜಾ ಪುರಸ್ಕಾರದ ಆಯ್ಕೆಯ ವಿಷಯದಲ್ಲಿ ದೊಡ್ಡ ಮಟ್ಟದ ಅಪಸ್ವರ ಎದ್ದಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ವಿವಿ ತನ್ನ ಪ್ರತಿಷ್ಠಿತ ನಾಡೋಜ ಪುರಸ್ಕಾರದ ಆಯ್ಕೆಯಲ್ಲಿ ನಿರಂತರವಾಗಿ ಎಡವುತ್ತಲೇ ಇದೆ. ಆಕಾಶವಾಣಿ ನಿರ್ದೇಶಕರು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ವೈದ್ಯರು ಮುಂತಾದ ವೃತ್ತಿಪರರು ಮತ್ತು ಸಾಹಿತ್ಯ, ಕಲೆ, ಸಾಮಾಜಿಕ ವಲಯದಲ್ಲಿ ಯಾವುದೇ ಮಹತ್ತರ ಕೊಡುಗೆ ನೀಡದೇ ಇರುವವರನ್ನು ಕುವೆಂಪು, ಕಾರಂತರು, ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಡಾ ರಾಜ್ ಕುಮಾರ್, ಗಾಯಯೋಗಿ ಪುಟ್ಟರಾಜ ಗವಾಯಿ, ಸಿರಿಯಜ್ಜಿ, ಸುಕ್ರಿ ಬೊಮ್ಮನಗೌಡ, ಯು ಆರ್ ಅನಂತಮೂರ್ತಿ, ಎಸ್ ಎಲ್ ಭೈರಪ್ಪ, ಪು ತಿ ನರಸಿಂಹಾಚಾರ್, ಪ್ರೊ ಎಲ್ ಬಸವರಾಜು, ಎಂ ಚಿದಾನಂದಮೂರ್ತಿ ಮುಂತಾದ ಮೇರು ವ್ಯಕ್ತಿತ್ವಗಳ ಸಾಲಿನಲ್ಲಿ ಕೂರಿಸುವ ಯತ್ನಗಳು ವಿವಿ ಕಡೆಯಿಂದ ನಡೆದಿವೆ.

ಅಧಿಕಾರಿಗಳಾಗಿ ಕೋಟ್ಯಂತರ ರೂಪಾಯಿ ಅಕ್ರಮ ಎಸಗಿದವರು, ನೇಮಕಾತಿ ಭ್ರಷ್ಟಾಚಾರ ಎಸಗಿ ತನಿಖೆ ಎದುರಿಸಿದವರು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರಾಗಿ ಸ್ವಜನಪಕ್ಷಪಾತ, ಹಣಕಾಸು ಅವ್ಯವಹಾರ ಮುಂತಾದ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾದವರು ಮತ್ತು ಅಂತಹ ಕಾರಣಗಳಿಗಾಗಿ ಸ್ವತಃ ಅವರವರ ಕ್ಷೇತ್ರದಲ್ಲೇ ಛೀಮಾರಿಗೆ ಒಳಗಾದವರಿಗೆ ನಾಡೋಜದಂತಹ ಕನ್ನಡ ನಾಡಿನ ಅತ್ಯುನ್ನತ ಗೌರವ ನೀಡುವುದು ವಿವಿ ತಲುಪಿರುವ ನಾಚಿಕೆಗೇಡಿನ ಸ್ಥಿತಿಗೆ ಒಂದು ನಿದರ್ಶನ ಎಂಬ ಟೀಕೆಗಳು ಇತ್ತೀಚಿನ ಆಯ್ಕೆಗಳ ವೇಳೆ ಕೇಳಿಬಂದಿದ್ದವು.

ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ವಿವಿ, ಈ ಬಾರಿ ಪಕ್ಕಾ ಬಿಜೆಪಿಯ ನಾಯಕರೂ ಮತ್ತು ಉದ್ಯಮಿಯೂ ಆಗಿರುವ ಜಗದೀಶ್ ಎಸ್ ಗುಡಗುಂಟಿ ಅವರನ್ನು ಆಯ್ಕೆಮಾಡುವ ಮೂಲಕ ಪುರಸ್ಕಾರ ಘೋಷಣೆಯ ಹಿಂದೆ ಆಳುವ ಪಕ್ಷದ ಆಣತಿ ಪಾಲನೆಯ ಅನಿವಾರ್ಯತೆಗೆ ಒಳಗಾಗಿರುವುದನ್ನು ಜಗಜ್ಜಾಹೀರುಮಾಡಿದೆ. ಈ ಆಯ್ಕೆಯ ಮಾನದಂಡದ ಬಗ್ಗೆ ಪ್ರಶ್ನಿಸಿದಾಗ, “ಜಗದೀಶ್ ಅವರು ಅನೇಕ ಸಕ್ಕರೆ ಕಾರ್ಖಾನೆಗಳನ್ನು ಪುನರುತ್ಥಾನ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೃಷ್ಣಪ್ರಸಾದ್ ಅವರು ಬುಡಕಟ್ಟು ಜನವಸತಿ ಪ್ರದೇಶದಲ್ಲಿ ನೇತ್ರ ತಪಾಸಣಾ ಶಿಬಿರ ನಡೆಸಿ ಜನರಿಗೆ ನೆರವಾಗಿದ್ದಾರೆ. ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಯಾರಿಗೆ ಬೇಕಾದರೂ ನಾಡೋಜ ಕೊಡಬಹುದು. ಈ ಹಿಂದೆಯೂ ಸಾಹಿತ್ಯ ಹೊರತುಪಡಿಸಿ ಅನ್ಯ ಕ್ಷೇತ್ರದವರಿಗೆ ಕೊಡಲಾಗಿದೆ” ಎಂದು ವಿವಿ ಕುಲಪತಿ ಪ್ರೊ ಸ ಚಿ ರಮೇಶ್ ಸಮರ್ಥಿಸಿಕೊಂಡಿರುವುದಾಗಿ ವರದಿಯಾಗಿದೆ.

ಪ್ರಶ್ನೆ ಇರುವುದು ಕನ್ನಡ ಸಾಹಿತಿಗಳಲ್ಲದವರಿಗೆ ನಾಡೋಜ ನೀಡಲಾಗಿದೆ ಎಂಬುದಲ್ಲ. ಬದಲಾಗಿ ಆಡಳಿತ ಪಕ್ಷದ ನಾಯಕರೊಬ್ಬರಿಗೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್ ಗೆ ಪ್ರಯತ್ನಿಸಿದವರಿಗೆ ನೀಡಲಾಗಿದೆ. ಸಕ್ಕರೆ ಕಾರ್ಖಾನೆ ಆರಂಭಿಸಿದ್ದರೆ ಅದು ಸಮಾಜಸೇವೆಯಾಗುತ್ತದೆಯೇ ಅಥವಾ ಉದ್ಯಮವಾಗುತ್ತದೆಯೇ? ಉದ್ಯಮವನ್ನು ಸಮಾಜಸೇವೆ ಎನ್ನುವುದಾದರೆ, ರೋಟರಿ, ಲಯನ್ಸ್ ಕ್ಲಬ್ಗಳಿಗೂ, ಒಂದು ವಿವಿಗೂ ಯಾವ ವ್ಯತ್ಯಾಸ ಉಳಿಯುತ್ತದೆ ಎಂಬುದು.

ಜಗದೀಶ್ ಎಸ್ ಗುಡಗುಂಟಿ

ಜಗದೀಶ್ ಎಸ್ ಗುಡಗುಂಟಿ

ಶಿಕ್ಷಣ, ವೈದ್ಯಕೀಯ ರಂಗಗಳಲ್ಲಿ ಕೆಲಸ ಮಾಡಿದವರನ್ನು ಕೂಡ ಸ್ವತಃ ಸಂಸ್ಥೆಗಳ ಮಾಲೀಕರಾಗಿದ್ದರೆ, ಅವರನ್ನು ಸಮಾಜಸೇವಕ ಎನ್ನಲಾಗದು. ಯಾವುದೇ ಚಟುವಟಿಕೆಯನ್ನು ಸೇವೆ ಅಥವಾ ವೃತ್ತಿ ಅಥವಾ ಉದ್ಯಮ ಎಂದು ಪರಿಗಣಿಸುವ ಮೂಲ ಮಾನದಂಡ ಲಾಭಾಂಶದ ಉದ್ದೇಶವಿದೆಯೇ? ಅಥವಾ ಇಲ್ಲವೇ ಎಂಬುದು. ಹಾಗಾಗಿ ಇವತ್ತಿನ ಬಹುತೇಕ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳ ಉದ್ದೇಶವೇ ಲಾಭವಾಗಿರುವುದರಿಂದ, ಅವುಗಳನ್ನು ನಡೆಸುವವರನ್ನು ನಾಡೋಜದಂತಹ ಪುರಸ್ಕಾರಕ್ಕೆ ಪರಿಗಣಿಸುವುದು ತರವಲ್ಲ. ಹಾಗಿರುವಾಗ, ಪಕ್ಖಾ ಉದ್ಯಮಿಗಳು, ಅದರಲ್ಲೂ ಆಡಳಿತ ಪಕ್ಷದೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿರುವವರಿಗೆ ನಾಡೋಜ ನೀಡಿದ್ದಲ್ಲದೆ, ಅದನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಹಂಪಿ ಕನ್ನಡ ವಿವಿ ಇಳಿದಿರುವುದು ನಗೆಪಾಟಲಿನ ಸಂಗತಿ.

ಈಗಾಗಲೇ ರಾಜ್ಯದ ಹಲವು ವಿವಿಗಳು ನೀಡುವ ಗೌರವ ಡಾಕ್ಟರೇಟುಗಳು ಎಷ್ಟು ಬೆಲೆಗೆ ಹರಾಜಾಗುತ್ತಿವೆ ಎಂಬುದು ಜಗಜ್ಜಾಹೀರಾಗಿದೆ. ಇದೀಗ ಹಂಪಿ ವಿವಿಯ ನಾಡೋಜ ಕೂಡ ಆ ಸಾಲಿಗೆ ಸೇರದಿರಲಿ ಎಂಬುದು ಆ ವಿವಿಯ ಮೇಲೆ ಈಗಲೂ ಒಂದಿಷ್ಟು ಭರವಸೆ ಇಟ್ಟುಕೊಂಡವರ ನಿರೀಕ್ಷೆ. ಆ ನಿರೀಕ್ಷೆಗೆ ಕಾರಣವೂ ಇದೆ. ಒಂದು; ಆ ವಿವಿ ಹುಟ್ಟಿದ್ದೇ ಒಂದು ಗುರುತರ ಉದ್ದೇಶದ ಕಾರಣಕ್ಕೆ, ಹಾಗೇ ನಾಡೋಜ ಪುರಸ್ಕಾರವನ್ನು ಆರಂಭಿಸಿದ್ದು ಕೂಡ ಅಂತಹದ್ದೇ ಘನ ಆಶಯದೊಂದಿಗೆ. ಈ ಎರಡೂ ಅರ್ಥವಾದವರು ಆ ಪುರಸ್ಕಾರಕ್ಕೂ, ವಿವಿಗೂ ಕಳಂಕ ತರಲಾರರು.

Previous Post

ಮೊಯೀನ್‌ ಅಲಿ ISIS‌ ಸೇರಬೇಕಿತ್ತು ಎಂದ ತಸ್ಲೀಮಾ ನಸ್ರೀನ್:‌ ಇಂಗ್ಲೆಂಡ್‌ ಕ್ರಿಕೆಟಿಗರಿಂದ ತಪರಾಕಿ

Next Post

ಸದ್ಯದ ಕಡುಕಷ್ಟದ ಪರಿಸ್ಥಿತಿಗೆ ಪಿಎಂ ಮತ್ತು ಸಿಎಂಗಳ ಸಭೆಯಲ್ಲಿ ಸಿಗುವುದೇ ಸೂಕ್ತ ಪರಿಹಾರ?

Related Posts

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ
ಕರ್ನಾಟಕ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ...

Read moreDetails
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಸದ್ಯದ ಕಡುಕಷ್ಟದ ಪರಿಸ್ಥಿತಿಗೆ ಪಿಎಂ ಮತ್ತು ಸಿಎಂಗಳ ಸಭೆಯಲ್ಲಿ ಸಿಗುವುದೇ ಸೂಕ್ತ ಪರಿಹಾರ?

ಸದ್ಯದ ಕಡುಕಷ್ಟದ ಪರಿಸ್ಥಿತಿಗೆ ಪಿಎಂ ಮತ್ತು ಸಿಎಂಗಳ ಸಭೆಯಲ್ಲಿ ಸಿಗುವುದೇ ಸೂಕ್ತ ಪರಿಹಾರ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada