ಹೆಚ್ಚುತ್ತಿರುವ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ. ಪ್ರಧಾನಿ ಮೋದಿಯವರು GDP (Gas, Diesel, Petrol) ನಲ್ಲಿ ತುಂಬಾ ಅಭಿವೃದ್ದಿಯನ್ನು ಮಾಡಿದ್ದಾರೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
“ಜನರು ಬೆಲೆ ಏರಿಕೆಯಿಂದಾಗಿ ಸುಸ್ತಾಗಿರುವಾಗ ಪ್ರಧಾನಿ ಮೋದಿಯವರು, ತೆರಿಗೆ ವಸೂಲಿ ಮಾಡಿ ಮಜಾ ಮಾಡುತ್ತಿದ್ದಾರೆ,” ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಎಲ್ಪಿಜಿ ಬೆಲೆ ಕಳೆದ 6 ತಿಂಗಳಲ್ಲಿ ರೂ. 93.5 ಹೆಚ್ಚಾಗಿದೆ, ಡೀಸೆಲ್ ಪೆಟ್ರೋಲ್ನ ಬೆಲೆಯೊಂದಿಗೆ ರೇಸ್ನಲ್ಲಿ ತೊಡಗಿದೆ. ಪೆಟ್ರೋಲ್ ಪ್ರತೀ ಲೀಟರ್ಗೆ ನೂರು ರೂಪಾಯಿ ಆಗುವತ್ತ ದಾಪುಗಾಲಿಡುತ್ತಿದೆ, ಎಂದಿದ್ದಾರೆ.
ಇದರೊಂದಿಗೆ, ಹಿಂದಿನ ಯುಪಿಎ ಸರ್ಕಾರವಿದ್ದಾಗ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿಯವರು ಪ್ರತಿಭಟನೆ ಮಾಡಿದ್ದ ಚಿತ್ರಗಳನ್ನು ಬಳಸಿ ಅಣಕವಾಡಿದ್ದಾರೆ. ಪತಂಜಲಿ ಸಂಸ್ಥೆಯ ಬಾಬಾ ರಾಮ್ದೇವ್ ಅವರು, ಮೋದಿ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಬೆಲೆ ಲೀಟರ್ಗೆ 35 ರೂ. ಅಗುತ್ತದೆ ಎಂದು ಹೇಳಿರುವ ಚಿತ್ರವನ್ನೂ ಬಳಸಿಕೊಂಡಿದ್ದಾರೆ.