• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅಪಹರಣಕಾರರಿಂದ ತಪ್ಪಿಸಿಕೊಳ್ಳಲು ಮುಖವನ್ನು ವಿರೂಪಗೊಳಿಸುವ ಬುಡಕಟ್ಟು ಸ್ತ್ರೀಯರು

by
April 3, 2021
in ದೇಶ
0
ಅಪಹರಣಕಾರರಿಂದ ತಪ್ಪಿಸಿಕೊಳ್ಳಲು ಮುಖವನ್ನು ವಿರೂಪಗೊಳಿಸುವ ಬುಡಕಟ್ಟು ಸ್ತ್ರೀಯರು
Share on WhatsAppShare on FacebookShare on Telegram

ನೀಲಿ ರೋಲಿಂಗ್ ಬೆಟ್ಟಗಳಿಂದ ಆವೃತವಾಗಿರುವ, ಜನವಾಸದಿಂದ ಬಹುದೂರ ಇರುವ ‘ಝಿರೊ’ ಕಣಿವೆಯು ಮನುಷ್ಯ ಮತ್ತು ಪ್ರಕೃತಿಯ ಸಹಬಾಳ್ವೆಗೆ ಅತ್ಯುತ್ತಮ ಉದಾಹರಣೆಯಾಗಿದ್ದು ಶತಮಾನಗಳಿಂದಲೂ ‘ಅಪತಾನಿ’ ನಾಗರಿಕತೆ ಅಲ್ಲಿ ಬೀಡು ಬಿಟ್ಟಿದೆ. ಪೂರ್ವ ಹಿಮಾಲಯದ ಕೆಳ ಪರ್ವತ ಶ್ರೇಣಿಯಲ್ಲಿ ಅಪತಾನಿ ಬುಡಕಟ್ಟು‌ ಜನಾಂಗ ವಾಸವಿದೆ.

ADVERTISEMENT

ಅಪತಾನಿಗಳು ಅರುಣಾಚಲ ಪ್ರದೇಶದ ಪ್ರಮುಖ ಬುಡಕಟ್ಟು ಜನಾಂಗವಾಗಿದ್ದು ವಿಶಿಷ್ಟ ನಾಗರಿಕತೆಯನ್ನು ಹೊಂದಿದ್ದು ಭೂಮಿಯನ್ನು ವ್ಯವಸ್ಥಿತವಾಗಿ ಬಳಸುತ್ತಾರೆ. ಈ ಜನಾಂಗಕ್ಕೆ ಸಾಂಪ್ರದಾಯಿಕವಾಗಿಯೇ ಪರಿಸರ ವಿಜ್ಞಾನದ ಜ್ಞಾನವಿದ್ದು ನೈಸರ್ಗಿಕ ಸಂಪತ್ತನ್ನು ಪ್ರಕೃತಿಗೆ ಮಾರಕವಾಗದಂತೆ ಹೇಗೆ ಉಪಯೋಗಿಸಿಕೊಳ್ಳಬೇಕು ಎಂದು ತಿಳಿದಿದೆ. ಅಪತಾನಿಗಳು ತಮ್ಮ ವರ್ಣರಂಜಿತ ಸಂಸ್ಕೃತಿ, ಹಬ್ಬಗಳು, ಕರಕುಶಲ ವಸ್ತುಗಳು, ಬಿದಿರಿನ ಕ್ರಾಫ್ಟ್ ಮತ್ತು ‘ಬುಲ್ಯಾನ್’ ಎಂದು ಕರೆಯಲ್ಪಡುವ ಗ್ರಾಮ ಪರಿಷತ್ತುಗಳಿಗೆ ಹೆಸರುವಾಸಿ‌.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ನಿಸರ್ಗವನ್ನು ಪೂಜಿಸುವ ಜಗತ್ತಿನ ಕೆಲವೇ ಕೆಲವು ಬುಡಕಟ್ಟು ಜನಾಂಗಗಳಲ್ಲಿ ‘ಅಪತಾನಿ’ ಜನಾಂಗವೂ ಒಂದು. ಪ್ರಕೃತಿಯೊಂದಿಗೆ ಅವರಿಗಿರುವ ಅವಿನಾಭಾವ ಸಂಬಂಧವೇ ಅವರ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯನ್ನು ನಿಯಂತ್ರಿಸುತ್ತದೆ. ಹಬ್ಬಗಳೆಂದರೆ ಒಂದು ರೀತಿಯಲ್ಲಿ ಪ್ರಕೃತಿಯ ಆಚರಣೆಯೇ ಆಗಿದೆ. ಪರಿಸರ, ಸಂಸ್ಕೃತಿ ಮತ್ತು ಮನುಷ್ಯ ಒಂದಕ್ಕೊಂದು ಪೂರಕವಾಗಿರುವಂತೆ ಮತ್ತು ಬೆಂಬಲವಾಗಿರುವಂತೆ ಅವರ ಇಡೀ ವ್ಯವಸ್ಥೆ ರೂಪುಗೊಂಡಿದೆ.

Photo credit: The SUN

Photo credit: The SUN

ಇತ್ತೀಚೆಗೆ ಅರುಣಾಚಲಕ್ಕೆ ಭೇಟಿ ನೀಡಿ, ಅಪತಾನಿಗಳ ಬಗ್ಗೆ ಸಂಶೋಧನೆ ಕೈಗೊಂಡಿರುವ ಇಂಗ್ಲೆಡಿನ ಟ್ವರ್ಕೆಯ ಪೀಟ್ ಆಕ್ಸ್‌ಫರ್ಡ್ ಅವರ ಬಗೆಗಿನ ಕುತೂಹಲಕಾರಿ ಮಾಹಿತಿಯೊಂದನ್ನು ಹೊರಗೆಡವಿದ್ದಾರೆ. ಅಪತಾನಿ ಮಹಿಳೆಯರ ಮೂಗಿನ ಹೊಳ್ಳೆಯ ಮೇಲ್ಭಾಗದಲ್ಲಿ ದೊಡ್ಡ ಗಾತ್ರದ ಮೂಗು ಬೊಟ್ಟನ್ನು ಧರಿಸುವ ಮತ್ತು ಮುಖದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಸಂಪ್ರದಾಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಮುಖವನ್ನು ವಿರೂಪಗೊಳಿಸಿ ಆ ಮೂಲಕ ಬೇರೆ ಬುಡಕಟ್ಟು ಜನಾಂಗಗಳ ದಾಳಿಯಿಂದ ಮತ್ತು ಅವರಿಂದ ಅಪಹರಣಕ್ಕೊಳಗಾಗುವುದನ್ನು ತಪ್ಪಿಸಲು ಮೂಗು ಬೊಟ್ಟು ಧರಿಸುತ್ತಾರೆ. ನಲ್ವತ್ತು ವರ್ಷ ಮೀರಿದ ಬಹುತೇಕ ಮಹಿಳೆಯರು ಹೀಗೆ ಬೊಟ್ಟು ಧರಿಸಿ ಮುಖದಲ್ಲಿ ಟ್ಯಾಟೂ ಹಚ್ಚಿಸಿಕೊಂಡಿರುವುದು ಕಂಡುಬಂದಿದೆ. ಆದರೆ ಯುವತಿಯರು ಮುಖ ವಿರೂಪಗೊಳಿಸಿಲ್ಲ, ಯಾಕೆಂದರೆ ಭಾರತ ಸರ್ಕಾರ ಈಗ ಅಂತಹ ಬೊಟ್ಟು ಧರಿಸುವುದನ್ನು ನಿಷೇಧಿಸಿದೆ. “ಮೂಗು ಬೊಟ್ಟು ಧರಿಸಿ, ಟ್ಯಾಟೂ ಹಚ್ಚಿಸಿಕೊಂಡು ವಿಕಾರವಾಗಿ ತೋರಲು ಪ್ರಯತ್ನಿಸಿದರೂ ಅವರ ಕಣ್ಣುಗಳಲ್ಲಿನ ಮನುಷ್ಯತ್ವದ ಸೆಳಕು ಅವರನ್ನು ಮತ್ತಷ್ಟು ಸುಂದರವಾಗಿಸಿತ್ತು” ಎನ್ನುತ್ತಾರೆ ಪೀಟ್ ಆಕ್ಸ್‌ಫರ್ಡ್.

“ನಮ್ಮ ಅತಿಥೇಯರ ಮೂಗಲ್ಲೂ ಬೊಟ್ಟಿತ್ತು. ಬೆಂಕಿ ಕಾಯಿಸುತ್ತಾ ಬೆಳಗ್ಗಿನ ತಿಂಡಿಗೆ ಅವರ ಜೊತೆ ಕೂರುವಾಗ ಪ್ರತಿದಿನ ನಾನದನ್ನು ನೋಡುತ್ತಿದೆ. ನಲ್ವತ್ತು ಮೀರಿದ ಮಹಿಳೆಯರೆಲ್ಲರೂ ತಮ್ಮನ್ನು ವಿರೂಪಗೊಳಿಸಿದ್ದಾರೆ” ಎಂದು ಕೇಳಲ್ಪಟ್ಟೆ ಎನ್ನುವ ಅವರು ಬೇರೆ ಬುಡಕಟ್ಟು ಜನಾಂಗದ ಪುರುಷರು ಅಪತಾನಿ ಮಹಿಳೆಯರನ್ನು ಅಪಹರಿಸಲು ಪ್ರಾರಂಭಿಸಿದ ನಂತರ ಈ ಕ್ರಮ ಜಾರಿಗೆ ಬಂತು ಎಂದು ಅಭಿಪ್ರಾಯ ಪಡುತ್ತಾರೆ. ಅಪತಾನಿ ಮಹಿಳೆಯರು ಬುಡಕಟ್ಟು ಜನಾಂಗಗಳ ಮಹಿಳೆಯರಲ್ಲೇ ಅತ್ಯಂತ ಸುಂದರ ಮಹಿಳೆಯರಾಗಿದ್ದು “ದೊಡ್ಡ ಮೂಗು ಬೊಟ್ಟು ಧರಿಸಿದ ಮಹಿಳೆಯರು ಕುರೂಪಿಗಳಾಗಿ ತೋರುವುದರಿಂದ ಅಪಹರಣಕಾರರು ಅವರನ್ನು ಅಪಹರಿಸುವುದಿಲ್ಲ ಹಾಗಾಗಿ ಮಹಿಳೆ ಬೊಟ್ಟು ಧರಿಸಲಿ ಎಂದು ಸಮುದಾಯದ ಪುರುಷರು ನಿರ್ಧರಿಸಿದರು” ಎಂದು ಪೀಟ್ ಹೇಳಿದ್ದಾರೆ.

Photo credit: The SUN
ಅಪತಾನಿಗಳ ಬದುಕು ಅವರ ಸಂಸ್ಕೃತಿ ಮತ್ತು ನಂಬಿಕೆಗಳೊಳಗೆ ಆಳವಾಗಿ ಬೇರುಬಿಟ್ಟಿವೆ. ಮಾಟ, ಮಂತ್ರ ಮತ್ತು ವಾಮಾಚಾರಗಳನ್ನು ಅಬರು ಬಲವಾಗಿ ನಂಬುತ್ತಿದ್ದು ಪ್ರತಿ ಮನೆಯಲ್ಲೂ ಬಲಿಪೀಠಗಳಿವೆ. ಇಷ್ಟಾರ್ಥ ಸಿದ್ಧಿಗಾಗಿ ಮತ್ತು ರೋಗ ರುಜಿನಗಳಿಂದ ಶಮನ ಹೊಂದಲು ಆಗಾಗ ಕೋಳಿ ಮತ್ತು ಮೊಟ್ಟೆಯನ್ನು ಬಲಿ ಕೊಡಲಾಗುತ್ತದೆ.
ತಮ್ಮ ಸಾಂಪ್ರದಾಯಿಕ ಜೀವನಶೈಲಿಗೆ ಒಗ್ಗಿಕೊಂಡಿರುವ ಅಪತಾನಿಗಳು ವಿದೇಶಿಯರನ್ನು ಹತ್ತಿರಕ್ಕೆ ಈಗಲೂ ಸೇರಿಸುವುದಿಲ್ಲ. 2001ರಲ್ಲಿ ಅಪತಾನಿಗಳ ಜನಸಂಖ್ಯೆ 20,000 ದಷ್ಟಿದ್ದು ಯುನೆಸ್ಕೋವು ಅವರು ವಾಸಿಸುವ ಕಣಿವೆಯನ್ನು ಪಾರಂಪರಿಕ ತಾಣವೆಂದು ಗುರತಿಸಿ ಗೌರವಿಸಿತ್ತು.























Previous Post

ಆಕರ್ಷಕ ವರ್ಣದ ಗದಗ್ ಬಳಿ ಕೆಂಪು, ಬಿಳಿ ಬಣ್ಣದ ಗುಲಗಂಜಿ ಲಭ್ಯ

Next Post

ನೂತನ ಕಾಯ್ದೆಗಳ ವಿರುದ್ಧ ಐಕ್ಯ ಹೋರಾಟ ಸಮಿತಿಯಿಂದ ಬೆಂಗಳೂರಿನಲ್ಲಿ‌ ಬೃಹತ್‌ ಪರೇಡ್

Related Posts

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ
Top Story

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು. ಕಾಯಕವೇ ಕೈಲಾಸ ಅಂತ ಬಸವಣ್ಣ ಹೇಳಿದ್ದರು. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಮಾನ ಗೌರವ ನೀಡಬೇಕು....

Read moreDetails
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

May 1, 2026
Next Post
ನೂತನ ಕಾಯ್ದೆಗಳ ವಿರುದ್ಧ ಐಕ್ಯ ಹೋರಾಟ ಸಮಿತಿಯಿಂದ ಬೆಂಗಳೂರಿನಲ್ಲಿ‌ ಬೃಹತ್‌ ಪರೇಡ್

ನೂತನ ಕಾಯ್ದೆಗಳ ವಿರುದ್ಧ ಐಕ್ಯ ಹೋರಾಟ ಸಮಿತಿಯಿಂದ ಬೆಂಗಳೂರಿನಲ್ಲಿ‌ ಬೃಹತ್‌ ಪರೇಡ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada