ದೇಶದಲ್ಲಿ ದಿನೇ ದಿನೇ ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 84.45 ರೂ ಬೆಲೆಯಿದ್ದರೆ. ಮುಂಬೈನಲ್ಲಿ ಜನವರಿ13 ರ ಹೊತ್ತಿಗೆ ಲೀಟರ್ ಪೆಟ್ರೋಲ್‌ಗೆ ದರ 90 ರೂಪಾಯಿಗೆ ತಲುಪಿದೆ.
ಜನವರಿ14 ರಂದು ದೇಶದ ನಗರಗಳಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ
ಕಳೆದ ಒಂದು ತಿಂಗಳಿಂದ ತೈಲ ಬೆಲೆಯಲ್ಲಿ ಏರಿಳಿತ ಕಾಣುತ್ತಿದ್ದು, ಇದೀಗ ತೈಲ ಮಾರಾಟ ಕಂಪನಿಗಳು ಕಳೆದ 5 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಣನೀಯವಾಗಿ ಏರಿಕೆ ಮಾಡಿವೆ.
ಕರೋನಾ ಕಾರಣದಿಂದಾಗಿ ಆರ್ಥಿಕ ನಷ್ಟ ಉಂಟಾದ್ದರಿಂದ ದೇಶದಲ್ಲಿ ಕಚ್ಚಾ ತೈಲಗಳ ಬೆಲೆಯೂ ಅಧಿಕವಾಗಿತ್ತು. ಜೊತೆಗೆ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿತ್ತು. ಇದೀಗ 2021 ರ ಹೊತ್ತಿಗೂ ತೈಲ ಬೆಲೆ ಏರಿಕೆಯಾಗಿರುವುದು ವಾಹನ ಸವಾರರನ್ನು ಚಿಂತೆಗೀಡು ಮಾಡಿದೆ.
ದೇಶದ ರಾಜ್ಯಗಳಲಿ ಪೆಟ್ರೋಲ್ ಡಿಸೇಲ್ ಬೆಲೆ
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ನಗರಗಳಲ್ಲಿಯೂ ತೈಲ ಬೆಲೆ ಏರಿಕೆ ಕಂಡಿದೆ. ಬೆಂಗಳೂರಲ್ಲಿ ಒಂದು ಲೀಟರ್ ಪೆಟ್ರೋಲ್ ದರ 87.56 ರೂ, ಡೀಸೆಲ್‌ಗೆ 79.40 ರೂ, ಮಂಗಳೂರಲ್ಲಿ ಡೀಸೆಲ್‌ಗೆ 78.64 ರೂ, ಪೆಟ್ರೋಲ್‌ಗೆ 86.76 ರೂ, ಮೈಸೂರಲ್ಲಿ ಪೆಟ್ರೋಲ್‌ಗೆ ಲೀಟರ್‌ಗೆ 87.12 ರೂ, ಡಿಸೇಲ್‌ಗೆ 79.01 ರೂಪಾಯಿ ಪ್ರಚಲಿತದಲ್ಲಿರುವ ಬೆಲೆ ದಿನೇ ದಿನೇ ಬೆಲೆ ಏರಿಕೆ ಕಾಣುತ್ತಿದೆಯೇ ಹೊರತು ಇಳಿಕೆಯಾಗುತ್ತಿಲ್ಲ.
ವಿಶ್ವದಲ್ಲಿ ಕರೋನಾ ಹಾವಳಿಯಿಂದ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಮಸ್ಯೆ ಅನುಭವಿಸುತ್ತಿದ್ದು, ಅಡುಗೆ ಅನಿಲ ಸೇರಿದಂತೆ ಇತರೆ ತೈಲಗಳ ಬೆಲೆ ಏರಿಕೆಯಾಗಿರುವುದು ವಾಹನ ಸವಾರರಿಗೆ ಮಾತ್ರ ತಲೆನೋವಾಗದೆ ಬಸ್ ದರ ಹೆಚ್ಚಳವಾಗುವ ಸಾಧ್ಯತೆಯನ್ನೂ ತೆರೆದಿಟ್ಟಿದೆ. ಇನ್ನು ದಿನಸಿ ಸಾಮಾನು ಸೇರಿದಂತೆ ಇತರೆ ದೈನಂದಿನ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ ಎಂಬ ಆತಂಕ ಜನಸಾಮಾನ್ಯರಲ್ಲಿ ಕಾಡತೊಡಗಿದೆ.