• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಒಂಟಿತನ ಅನುಭವಿಸುವವರ ಮೆದುಳಿನಲ್ಲಿ ವ್ಯತ್ಯಾಸಗಳಿವೆ: ಅಧ್ಯಯನ ವರದಿ

by
December 27, 2020
in ಅಭಿಮತ
0
ಒಂಟಿತನ ಅನುಭವಿಸುವವರ ಮೆದುಳಿನಲ್ಲಿ ವ್ಯತ್ಯಾಸಗಳಿವೆ: ಅಧ್ಯಯನ ವರದಿ
Share on WhatsAppShare on FacebookShare on Telegram

ಕರೋನಾ ಬಂದ ಮೇಲೆ ದೈಹಿಕ ಅಂತರ ಅನಿವಾರ್ಯವಾದದ್ದರಿಂದ ನಮಲ್ಲನೇಕರು ಅದರಲ್ಲೂ ಹಿರಿಯ ನಾಗರಿಕರು ಅನುಭವಿಸಿದ ಒಂಟಿತನ ಅಷ್ಟಿಷ್ಟಲ್ಲ. ಸಾಮಾಜಿಕ ಒಟ್ಟುಗೂಡುವಿಕೆಯೇ ಅಸಾಧ್ಯವಾದಾಗ ಸಹಜವಾಗಿಯೇ ಹಿರಿಯ ನಾಗರಿಕರನ್ನು ಒಂಟಿತನ ಕಾಡಿದೆ. ಒಂಟಿಯಾಗಿರುವವರ ಮೆದುಳಿನ ಬಗ್ಗೆ ನಡೆಸಿದ ಹೊಸ ಸಂಶೋಧನೆಯೊಂದು ಇತರರಲ್ಲಿರದ ವಿಶೇಷವೊಂದು ಅವರ ಮೆದುಳಿನಲ್ಲಿ ಇರುವುದನ್ನು ರುಜುವಾತು ಪಡಿಸಿದೆ.

ADVERTISEMENT

ಸಂಶೋಧಕರ ತಂಡವೊಂದು 40,000 ಮಂದಿ ಮಧ್ಯ ವಯಸ್ಕರ MRI ಮಾಹಿತಿ, ವಂಶವಾಹಿ ಮತ್ತು ಮನಶಾಸ್ತ್ರೀಯ ಮೌಲ್ಯ ಮಾಪನಗಳನ್ನು ಪರಿಶೀಲಿಸಿ ಪರೀಕ್ಷಿಸಿದ್ದಾರೆ.ಆನಂತರ ಒಂಟಿಯಾಗಿರುವವರ MRI ಮಾಹಿತಿಯನ್ನು ಇತರರ ಮಾಹಿತಿಗಳೊಂದಿಗೆ ಹೋಲಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಶೋಧನೆಯಲ್ಲಿ ಸಂಶೋಧಕರು ಒಂಟಿತನ ಅನುಭವಿಸುವವರ ಮೆದುಳಿನಲ್ಲಿ ಅನೇಕ ವ್ಯತ್ಯಾಸಗಳಿರುವುದನ್ನು ಕಂಡುಹಿಡಿದಿದ್ದಾರೆ.

ಆಂತರಿಕ ಯೋಚನೆಗಳಾದ ನೆನಪಿಸಿಕೊಳ್ಳುವಿಕೆ, ಭವಿಷ್ಯದ ಯೋಜನೆ, ಇತರರ ಬಗ್ಗೆ ಯೋಚಿಸುವುದನ್ನು ನಿಯಂತ್ರಿಸುವ ಮೆದುಳಿನ ನರಮಂಡಲಗಳಲ್ಲಿ ಮನುಷ್ಯನ ಬಹುಪಾಲು ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಏಕಾಂಗಿಯಾಗಿರುವವರಲ್ಲಿ ನರಮಂಡಲದ ನರಗಳು‌ ಹೆಚ್ಚು ಒತ್ತೊತ್ತಾಗಿದ್ದು ಬೂದು ದ್ರವ್ಯ(grey matter)ದ ಪ್ರಮಾಣವೂ ಹೆಚ್ಚಿದೆ.

ಕಳೆದು‌ಹೋದ ದಿನಗಳನ್ನು ನೆನಪಿಸಿಕೊಳ್ಳಲು, ಭವಿಷ್ಯವನ್ನು ಕಲ್ಪಿಸಿಕೊಳ್ಳಲು ನಾವು ನರಮಂಡಲವನ್ನು ಬಳಸಿಕೊಳ್ಳುತ್ತೇವೆ. ಸಾಮಾಜಿಕ ಪ್ರತ್ಯೇಕಿಕರಣದಿಂದಾಗಿ ಒಂಟಿಯಾಗಿರುವವರು‌ ಹೆಚ್ಚಾಗಿ ಭವಿಷ್ಯದ ಬಗ್ಗೆ ಭರವಸೆ, ಭೂತದ ನೆನಪಿಸಿಕೊಳ್ಳುವಿಕೆ ಮತ್ತು ಕಲ್ಪನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರ ನರಮಂಡಲ ಕ್ರಿಯಾಶೀಲವಾಗಿರುತ್ತದೆ.

“ಸಾಮಾಜಿಕ ಅನುಭವಗಳ ಅನುಪಸ್ಥಿತಿಯಲ್ಲಿ ಒಂಟಿಯಾಗಿರುವವರು ಕೇವಲ ಆಂತರಿಕ ನಿರ್ದೇಶನದೆಡೆಗೆ ಪಕ್ಷಪಾತಿಯಾಗುವ ಸಾಧ್ಯತೆ ಇದೆ” ಎನ್ನುತ್ತಾರೆ ಮೆಕ್ ಗಿಲ್ ಯುನಿವರ್ಸಿಟಿಯ ನಾತನ್ ಸ್ಪ್ರೆಂಗ್.

ಪ್ರಪಂಚದಾದ್ಯಂತ ಒಂಟಿತನವನ್ನು ದಿನೇ ದಿನೇ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯೆಂದು ಗುರುತಿಸಲಾಗಿದೆ. ಹಿಂದಿನ ಕೆಲವು ಅಧ್ಯನಗಳ ಪ್ರಕಾರ ಒಂಟಿತನ ಅನುಭವಿಸುತ್ತಿರುವ ಹಿರಿಯ ನಾಗರಿಕರು ಬುದ್ಧಿಮಾಂದ್ಯತೆ ಮತ್ತು ತಿಳಿವಳಿಕೆಯ ಕೊರತೆಗೆ ಒಳಗಾಗುವ ಸಾಧ್ಯತೆ ಇದೆ. ಒಂಟಿತನವು ಮೆದುಳಿನ‌ ಅಭಿವ್ಯಕ್ತಿಯನ್ನು ಹೇಗೆ ಪ್ರಭಾವಿಸುತ್ತದೆ ಎಂಬುವುದು ಅರ್ಥವಾದರೆ ಹಲವು ನರಸಂಬಂಧಿತ ಕಾಯಿಲೆಗಳನ್ನು ನಿಯಂತ್ರಿಸಬಹುದು, ತಡೆಗಟ್ಟಬಹುದು ಮತ್ತು ಒಳ್ಳೆಯ ಚಿಕಿತ್ಸೆಯನ್ನು ಕೊಡಿಸಬಹುದು ಎಂದು ಸಂಶೋಧನೆಯು ಅಭಿಪ್ರಾಯ ಪಟ್ಟಿದೆ.

“ಮೆದುಳಿನ ಮೇಲೆ ಒಂಟಿತನವು ಹೇಗೆ ಪ್ರಭಾವ ಬೀರುತ್ತದೆ ಎಂಬುವುದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಆರಂಭಿಕ ಹಂತದಲ್ಲಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವುದರಿಂದ ಇವತ್ತಿನ ಸಮಾಜದಲ್ಲಿ ಒಂಟಿತನವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದು ಅಭ್ಯಸಿಸಬಹುದು” ಎನ್ನುತ್ತಾರೆ ಈ ಅಧ್ಯಯನ‌ ತಂಡದ ಹಿರಿಯ ಸಂಶೋಧಕ ಹಾಗೂ ‘The Neuro and The Quebec Artificial Intelligence’ನ ಡ್ಯಾನಿಲೊ.

Previous Post

ಜಯಲಲಿತಾ,ಕರುಣಾನಿಧಿ ನಿಧನದಿಂದ ಉಂಟಾಗಿರುವ ಶೂನ್ಯವನ್ನು ಮೋದಿ ತುಂಬಲಿದ್ದಾರೆ: ಅಣ್ಣಾಮಲೈ

Next Post

ಬೆಳಕಿನ ಮಾಲಿನ್ಯದ ಸೂಚ್ಯಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಬೆಂಗಳೂರು

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
ಬೆಳಕಿನ ಮಾಲಿನ್ಯದ ಸೂಚ್ಯಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಬೆಂಗಳೂರು

ಬೆಳಕಿನ ಮಾಲಿನ್ಯದ ಸೂಚ್ಯಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಬೆಂಗಳೂರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada