• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅತ್ಯಾಚಾರ ಪ್ರಕರಣ: ಜಾರ್ಖಂಡ್ ಸಿಎಂ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗವರ್ನರ್‌ಗೆ ಬಿಜೆಪಿ ದೂರು

by
December 25, 2020
in ದೇಶ
0
ಅತ್ಯಾಚಾರ ಪ್ರಕರಣ: ಜಾರ್ಖಂಡ್ ಸಿಎಂ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗವರ್ನರ್‌ಗೆ ಬಿಜೆಪಿ ದೂರು
Share on WhatsAppShare on FacebookShare on Telegram

ಜಾರ್ಖಂಡ್‌ ಮುಕ್ತಿ ಮೋರ್ಚಾದ ಅಧ್ಯಕ್ಷ ಮತ್ತು ಸಿಎಂ ಹೇಮಂತ್ ಸೋರೆನ್ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಸಿಎಂ ಹೇಮಂತ್‌ ಸೋರೆನ್‌ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಜಾರ್ಖಂಡ್‌ ಭಾರತೀಯ ಜನತಾ ಪಕ್ಷದ ಮಹಿಳಾ ಘಟಕ ಗವರ್ನರ್‌ ದ್ರೌಪದಿ ಮುರ್ಮುಗೆ ಮನವಿ ಮಾಡಿದೆ. ಬಿಜೆಪಿ ಮಹಿಳಾ ಘಟಕ ಮುಖ್ಯಸ್ಥೆ ಆರ್ತಿ ಕುಜೂರ್‌ ನೇತೃತ್ವದಲ್ಲಿ ಗವರ್ನರ್‌ಗೆ ದೂರು ನೀಡಲಾಗಿದೆ.

ADVERTISEMENT

ಗವರ್ನರ್‌ಗೆ ಜಾರ್ಖಂಡ್‌ ಸಿಎಂ ಸೋರೆನ್‌ ವಿರುದ್ಧ ದೂರು ನೀಡಿದ ಬಳಿಕ ಮಾತಾಡಿದ ಆರ್ತಿ ಕುಜೂರ್‌ ಅವರು, ಮುಖ್ಯಮಂತ್ರಿ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿರುವುದು ದುರಂತ. ಸಿಬಿಐ ಕೂಡಲೇ ಈ ಕೇಸ್‌ ಕೈಗೆತ್ತಿಕೊಂಡು ವಿಚಾರಣೆ ನಡೆಸಬೇಕು. ಸಂತ್ರಸ್ತೆ ಯುವತಿಗೆ ರಾಜ್ಯ ಸರ್ಕಾರ ಭದ್ರತೆ ನೀಡಬೇಕು. ಸಿಎಂ ಹೇಮಂತ್‌ ಸೋರೆನ್‌ಗೆ ಮಾನ ಮಾರ್ಯಾದೆ ಇದ್ದರೆ ನೈತಿಕ ಜವಾಬ್ದಾರಿ ಹೊತ್ತು ಈಗಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2013ರಲ್ಲಿ ಮುಂಬೈನ ಹೋಟೆಲ್‌ ಒಂದರಲ್ಲಿ ಹೇಮಂತ್ ಸೋರೆನ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಹೀಗೆ ಆರೋಪಿಸಿ ಸಂತ್ರಸ್ತೆ ಹೇಮಂತ್‌ ಸೋರೆನ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣ ಮುಚ್ಚಿ ಹೋಗಿತ್ತು.

ಹೀಗಿರುವಾಗಲೇ ಕಳೆದ ಸೋಮವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರಿಂದ ಮತ್ತೆ ಈ ಪ್ರಕರಣ ಮುನ್ನಲೆಗೆ ಬಂದಿದೆ. ಈ ಸಂಬಂಧ ದುಬೆ ಮಹಾರಾಷ್ಟ್ರ ಗೃಹ ಸಚಿವರಿಗೆ ಟ್ವೀಟ್ ಮಾಡಿ ಹೇಮಂತ್‌ ಸೋರೆನ್‌ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆ ಮತ್ತವರ ಕುಟುಂಬ ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಿಲ್ಲ, ಬದಲಿಗೆ ಅಪರಾಧಿಗೆ ಶಿಕ್ಷೆಯಾಗಬೇಕು ಎಂಬ ಸುಪ್ರೀಂಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ್ದಾರೆ.

ಇದರ ಮಧ್ಯೆ ದುಬೆ ವಿರುದ್ಧ ಹೇಮಂತ್ ಸೋರೆನ್ ಪರ ವಕೀಲರು ರಾಂಚಿ ಸಿವಿಲ್ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗವೂ ಸಂತ್ರಸ್ತೆ ನೀಡಿದ ದೂರು ಸಂಬಂಧ ಪೊಲೀಸರು ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದೆ.

ಇಂತಹ ಮಹತ್ವದ ಬೆಳವಣಿಗೆಗಳ ನಡುವೆ ಸಂತ್ರಸ್ತೆ ವಿಡಿಯೋವೊಂದು ಹರಿಬಿಟ್ಟಿದ್ದಾರೆ. ನನಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ, ಜೀವ ಬೆದರಿಕೆ ಹಾಕಲಾಗುತ್ತಿದೆ. ಯಾರೋ ಟ್ವೀಟ್‌ ಮಾಡುವ ಮೂಲಕ ನನ್ನ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ನಾನು ನಿಜಕ್ಕೂ ಆತಂಕಗೊಂಡಿದ್ದೇನೆ ಎಂದು ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸದ್ಯ 37 ಸೆಕೆಂಡುಗಳ ಈ ವಿಡಿಯೋ ಭಾರೀ ವೈರಲ್‌ ಆಗಿದೆ. ತನಗೇನಾದರೂ ಅನಾಹುತವಾದರೆ ಅದಕ್ಕೆ ಜಾರ್ಖಂಡ್ ವಿಪಕ್ಷ ನಾಯಕ ಬಾಬುಲಾಲ್ ಮರಾಂಡಿ, ಗೊಡ್ಡಾ ಸಂಸದ ನಿಶಿಕಾಂತ್ ದುಬೆ, ಮರಾಂಡಿಯ ಆಪ್ತ ಸುನಿಲ್ ತಿವಾರಿ ಮತ್ತು ಜಹೂರ್ ಆಲಂ ಹೊಣೆ ಎಂದು ಯುವತಿ ಎಚ್ಚರಿಕೆ ನೀಡಿದ್ದಾಳೆ.

Tags: Hemant SorenJharkhandಜಾರ್ಖಂಡ್
Previous Post

ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗಿಯಾಗಲು 2 ದಿನ 370 ಕಿ.ಮೀ ಸೈಕಲ್ ತುಳಿದ ರೈತ

Next Post

ತುರ್ತು ನಿರ್ವಹಣೆ ಕಾಮಗಾರಿ ಹಿನ್ನಲೆ: ಬೆಂಗಳೂರಿನ ಕೆಲವೆಡೆ ವಿದ್ಯುತ್ ವ್ಯತ್ಯಯ

Related Posts

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?
Top Story

ಕೋಚಿಂಗ್‌ ಸೆಂಟರ್‌ಗಳಿಂದಲೇ ಲೀಕಾಯ್ತಾ ನೀಟ್‌ ಪ್ರಶ್ನೆ ಪತ್ರಿಕೆ..‌? : ಸಚಿವ ಪಾಟೀಲ್ ಸ್ಫೋಟಕ ಆರೋಪಗಳೇನು..?

by ಪ್ರತಿಧ್ವನಿ
May 12, 2026
0

ಬೆಂಗಳೂರು : ನೀಟ್‌ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಲಕ್ಷಾಂತರ ಜೀವನದ ಜೊತೆ ಚೆಲ್ಲಾಟವಾಡಿದೆ...

Read moreDetails
ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

ಭಾರತವು ಯಾವುದೇ ಇಂಧನ ಸಮಸ್ಯೆಗಳನ್ನು ಎದುರಿಸುತ್ತಿಲ್ಲ : ಹರ್ದೀಪ್‌ ಸಿಂಗ್‌ ಪುರಿ ಬಿಗ್‌ ಅಪ್ಡೇಟ್..!

May 12, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಆಗೋ ಮುನ್ಸೂಚನೆ ಸಿಕ್ಕಿತ್ತಾ ..? : ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿತಾ NTA..?

May 12, 2026
ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

ಮೋದಿ ಕರೆ ಬೆನ್ನಲ್ಲೇ ಇಳಿಕೆ ಕಂಡ ಅಡುಗೆ ಎಣ್ಣೆ : ಅಕ್ಕಿ ರೇಟ್‌ ಎಷ್ಟು ಗೊತ್ತಾ..?

May 12, 2026
BREAKING NEWS : ನೀಟ್ ಪ್ರಶ್ನೆ ಪತ್ರಿಕೆ ಲೀಕ್‌ :  ದೇಶಾದ್ಯಂತ ಕೇಂದ್ರ ಸರ್ಕಾರದ ಸಿಡಿದೆದ್ದ ವಿದ್ಯಾರ್ಥಿಗಳು..

BREAKING NEWS : ನೀಟ್ ಪ್ರಶ್ನೆ ಪತ್ರಿಕೆ ಲೀಕ್‌ : ದೇಶಾದ್ಯಂತ ಕೇಂದ್ರ ಸರ್ಕಾರದ ಸಿಡಿದೆದ್ದ ವಿದ್ಯಾರ್ಥಿಗಳು..

May 12, 2026
Next Post
ತುರ್ತು ನಿರ್ವಹಣೆ ಕಾಮಗಾರಿ ಹಿನ್ನಲೆ: ಬೆಂಗಳೂರಿನ ಕೆಲವೆಡೆ ವಿದ್ಯುತ್ ವ್ಯತ್ಯಯ

ತುರ್ತು ನಿರ್ವಹಣೆ ಕಾಮಗಾರಿ ಹಿನ್ನಲೆ: ಬೆಂಗಳೂರಿನ ಕೆಲವೆಡೆ ವಿದ್ಯುತ್ ವ್ಯತ್ಯಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada