ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆ, ಕೊಲೆಯಲ್ಲ ಎಂದು ಸುಶಾಂತ್ ರ ಮರಣೋತ್ತರ ವರದಿಯನ್ನು ಮರುಮೌಲ್ಯಮಾಪನ ಮಾಡಿದ ತಂಡದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸುಶಾಂತ್ ಸಾವಿನ ಕುರಿತಂತೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಸುಶಾಂತ್ ಕುಟುಂಬ ಸೇರಿದಂತೆ ಹಲವಾರು ಮಂದಿ ಒತ್ತಾಯಿಸಿದ್ದರು.
ಜೂನ್ 14 ರಂದು ತನ್ನ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದ ಸುಶಾಂತ್ ಸಾವಿಗೆ ಆತನ ಮಾಜಿ ಗೆಳತಿ ರಿಹಾ ಚಕ್ರವರ್ತಿ ಕಾರಣವೆಂದು ಆತನ ಕುಟುಂಬಸ್ಥರು ಆರೋಪಿಸಿದ್ದರು. ಕಂಗನಾ ಮೊದಲಾದವರು ಬಾಲಿವುಡ್ನಲ್ಲಿರುವ ನೆಪೊಟಿಸಮ್ (ಸ್ವಜನ ಪಕ್ಷಪಾತ) ಕಾರನವೆಂದು ಆರೋಪಿಸಿದ್ದರು.
Also Read: ಸುಶಾಂತ್ ಸಾವು-ದುಬೈ ಡಾನ್ಗಳ ನಂಟು: CBI ತನಿಖೆ ಆಗ್ರಹಕ್ಕೆ ಅಮಿತ್ ಷಾ ಪ್ರತಿಕ್ರಿಯೆ
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕೊಲೆ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ವೈದ್ಯರು ಹೇಳಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ. ಮರಣೋತ್ತರ ವರದಿಯನ್ನು ಮರುಮೌಲ್ಯಮಾಪನ ಮಾಡಿದ ಏಮ್ಸ್ ವೈದ್ಯರು ವರದಿಯನ್ನು ಸೆಪ್ಟೆಂಬರ್ 29 ಕ್ಕೆ ಸಿಬಿಐಗೆ ಸಲ್ಲಿಸಿದ್ದಾರೆಂದು ಹಿಂದುಸ್ತಾನ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.
Also Read: ಸುಶಾಂತ್ ಸಿಂಗ್, ರಿಯಾ ಚಕ್ರವರ್ತಿ ಹಾಗೂ ನ್ಯಾಯಾಧೀಶ ಸಮಾಜ
ಪ್ರಕರಣ ಸಿಬಿಐಗೆ ವರ್ಗಾವಣೆ ಆಗುವ ಮೊದಲೇ ಮುಂಬೈ ಪೊಲೀಸರು ನಟನದ್ದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು.
Also Read: ಬಾಲಿವುಡ್ ʼಮಾಫಿಯಾʼಕ್ಕೆ ಬಲಿಯಾದರೇ ಸುಶಾಂತ್ ಸಿಂಗ್ ರಜಪೂತ್!?