ಕರ್ನಾಟಕದಲ್ಲಿ 5324 ಹಿಸ ಕರೋನಾ ಪ್ರಕರಣಗಳು ಕಂಡು ಬಂದಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 1,01,465 ತಲುಪಿದೆ. 1847 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಇದುವರೆಗೂ ಒಟ್ಟು 37685 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
75 ಮಂದಿ ಕರೋನಾ ಸೋಂಕಿತರು ಕಳೆದ ಒಂದು ದಿನದಲ್ಲಿಯೇ ಮೃತಪಟ್ಟಿದ್ದಾರೆ. ಇದುವರೆಗೂ 1953 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 61,819 ಸಕ್ರಿಯ ಕರೋನಾ ಪ್ರಕರಣಗಳಿವೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ನಗರದಲ್ಲಿ 1470 ಹೊಸ ಕರೋನಾ ಪ್ರಕರಣಗಳು ಕಂಡುಬಂದಿದೆ. ಒಟ್ಟು ಪ್ರಕರಣಗಳ ಸಂಖ್ಯೆ 46923 ತಲುಪಿದೆ. ಪ್ರಸ್ತು, ನಗರದಲ್ಲಿ 33816 ಸಕ್ರಿಯ ಕರೋನಾ ಪ್ರಕರಣಗಳಿದೆ. ಇದುವರೆಗೂ ರಾಜ್ಯ ರಾಜಧಾನಿಯಲ್ಲಿ 917 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ದೇಶಾದ್ಯಂತ 49931 ಹೊಸ ಪ್ರಕರಣಗಳು ದಾಖಲಾಗಿದೆ. ದೇಶದಲ್ಲಿ ಒಟ್ಟು ಪ್ರಕರಣಗಲ ಸಂಖ್ಯೆ 1435453 ತಲುಪಿದೆ. 9,17,568 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೂ ದೇಶದಾದ್ಯಂತ 32771 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.