• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ವಕೀಲರು ಬೇರೆ ವೃತ್ತಿ ಕೈಗೊಳ್ಳುವಂತಿಲ್ಲ; ಸುಪ್ರೀ ಕೋರ್ಟ್ ಸ್ಪಷ್ಟನೆ

by
July 26, 2020
in ದೇಶ
0
ವಕೀಲರು ಬೇರೆ ವೃತ್ತಿ ಕೈಗೊಳ್ಳುವಂತಿಲ್ಲ; ಸುಪ್ರೀ ಕೋರ್ಟ್ ಸ್ಪಷ್ಟನೆ
Share on WhatsAppShare on FacebookShare on Telegram

ಕೋವಿಡ್‌ 19 ಸೋಂಕು ಇಂದು ಇಡೀ ವಿಶ್ವವನ್ನೇ ಭಯದ ಮಡಿಲಿಗೆ ನೂಕಿದೆ. ಬಹುತೇಕ ಎಲ್ಲ ದೇಶಗಳಲ್ಲೂ ಕೋವಿಡ್‌ 19 ಸಾಂಕ್ರಮಿಕ ರೋಗದಿಂದ ಜನರು ಭಯದ ನೆರಳಿನಲ್ಲೇ ಬದುಕುತಿದ್ದಾರೆ. ಎಲ್ಲ ದೇಶಗಳಲ್ಲೂ ವ್ಯಾಪಾರ ವಹಿವಾಟು ಕುಸಿದಿದ್ದು ಅರ್ಥಿಕ ಹಿಂಜರಿತ ಪ್ರಾರಂಭವಾಗಿದೆ. ಲಕ್ಷಾಂತರ ಜನರು ಆರ್ಥಿಕ ಹಿಂಜರಿತದಿಂದಾಗಿ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ನಮ್ಮ ರಾಜ್ಯದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಉತ್ತರ ಭಾರತದ ತವರು ಪ್ರದೇಶಗಳಿಗೆ ತೆರಳಿದ್ದಾರೆ. ಅದರೆ ಈ ರೀತಿ ತೆರಳಿರುವ ಎಲ್ಲ ಕಾರ್ಮಿಕರನ್ನೂ ಸಾಕುವಷ್ಟು ಅನುಕೂಲ ಆ ಪ್ರದೇಶಗಳಿಗೆ ಇಲ್ಲ, ಹಾಗಾಗಿ ಕಾರ್ಮಿಕರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಅನೇಕರು ಮರಳಿ ವಾಪಾಸ್‌ ಬರುತಿದ್ದಾರೆ.

ADVERTISEMENT

ಕೋವಿಡ್‌ 19 ಅತ್ಯಂತ ಹೆಚ್ಚು ಹಾನಿ ಮಾಡಿರುವುದು ದೇಶದ ಮದ್ಯಮವರ್ಗದ ಜನತೆಗೆ. ಈ ವರ್ಗದ ಜನತೆ ಅತ್ತ ಶ್ರೀಮಂತಿಕೆಯ ಜೀವನ ನಡೆಸಲು ಸಾಧ್ಯವೇ ಇಲ್ಲ ಮತ್ತೊಂದೆಡೆ ಕಾರ್ಮಿಕ ವರ್ಗದವರಂತೆ ಬದುಕಲೂ ಸಾದ್ಯವಿಲ್ಲ. ಅಡಕತ್ತರಿಯಲ್ಲಿ ಜೀವನ ನಡೆಸಬೇಕಾಗಿದೆ. ಇವರದು ಏನಿದ್ದರೂ ದ್ವಿಚಕ್ರ ನೂತನ ವಾಹನ ಮತ್ತು ಸೆಕೆಂಡ್‌ ಹ್ಯಾಂಡ್‌ ಕಾರುಗಳನ್ನು ಖರೀದಿಸುವುದರಲ್ಲೆ ಜೀವನ ಮುಗಿದು ಹೋಗುತ್ತದೆ. ಈ ವರ್ಗದ ಬಹಳಷ್ಟು ಜನರು ಮಕ್ಕಳಿಗೆ ಒಂದು ಡಿಗ್ರಿ ಓದಿಸುವುದರಲ್ಲೇ ಹೈರಾಣಾಗಿರುತ್ತಾರೆ. ಉನ್ನತ ಶಿಕ್ಷಣ ಗಗನ ಕುಸುಮವಾಗಿರುತ್ತದೆ. ಆದರೂ ಈ ವರ್ಗದ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆಯಬಹುದು.

ಇನ್ನು ಸಿಇಟಿ ನಲ್ಲಿ ಉತ್ತಮ ಅಂಕ ಗಳಿಸಿದವರು ಮಾತ್ರ ವೈದ್ಯಕೀಯ, ಎಂಜಿನಿಯರಿಂಗ್‌ ಶಿಕ್ಷಣ ಪಡೆದುಕೊಳ್ಳುತ್ತಾರೆ. ಈ ವರ್ಗದಲ್ಲಿ ಸಾಕಷ್ಟು ಜನ ವಿದ್ಯಾರ್ಥಿಗಳು ವಕೀಲಿಕೆ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ. ಬಹುಶಃ ಸಣ್ಣ ಕಾಲೇಜುಗಳಲ್ಲಿ ಡೊನೇಷನ್‌ ಇಲ್ಲದೆ ಸೀಟು ಲಭ್ಯವಾಗುವ ಕಾರಣದಿಂದಲೇ ಈ ನಿರ್ಧಾರ ಇರಬಹುದು. ಇನ್ನು ಈಗಾಗಲೇ ವಕೀಲರಾಗಿ ಹೆಸರು ಹಣ ಆಸ್ತಿ ಪಾಸ್ತಿ ಮಾಡಿರುವ ಹಿರಿಯ ವಕೀಲರ ಮಕ್ಕಳೂ ಕೂಡ ವಕೀಲಿಕೆ ವೃತ್ತಿಯನ್ನು ಆಯ್ದುಕೊಳ್ಳುತ್ತಾರೆ. ಓರ್ವ ಹಿರಿಯ ವಕೀಲರಿಗೆ ಈರ್ವರು ಪುತ್ರರಿದ್ದಲ್ಲಿ ಓರ್ವನನ್ನು ವಕೀಲಿಕೆ ವೃತ್ತಿಗೆ ಹಾಕಲಾಗುತ್ತದೆ. ಇದು ವಕೀಲರ ನಂತರದ ಉತ್ತರಾಧಿಕಾರಿಗಳ ನೇಮಕ ಅಷ್ಟೆ. ಹಿರಿಯ ವಕೀಲರು ಸಂಪಾದಿಸಿರುವ ಕಕ್ಷಿದಾರರ ಬೆಂಬಲ ಇರುವುದರಿಂದ ವಕೀಲರ ಮಕ್ಕಳು ಪ್ರಾಕ್ಟೀಸ್‌ ಗಾಗಿ ಪರದಾಡಬೇಕಿಲ್ಲ. ಆದರೆ ಪೋಷಕರು ವಕೀಲಿಕೆ ವೃತ್ತಿಯಲ್ಲಿ ಇಲ್ಲದೆ ವಕೀಲಿಕೆ ವೃತ್ತಿಯನ್ನು ಆಯ್ದುಕೊಂಡ ಯುವ ವಕೀಲರು ಈಗಲೂ ಸಂಕಷ್ಟದಲ್ಲಿ ಇದ್ದಾರೆ. ಈ ವಕೀಲರು ಹಿರಿಯ ವಕೀಲರ ಬಳಿ ಜೂನಿಯರ್‌ ಗಳಾಗಿ ಸೇರಿಕೊಂಡು ಅಲ್ಪ ಮೊತ್ತದ ತಿಂಗಳ ಸಂಬಳಕ್ಕೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಈ ವಕೀಲರು ಎಲ್ಲ ಕೆಲಸಗಳನ್ನು ಇವರೆ ನಿರ್ವಹಿಸುವುದಾದರೂ ತಿಂಗಳ ಸಂಬಳ ಮಾತ್ರ ಕಡಿಮೆಯೇ ಇರುತ್ತದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದರಲ್ಲೂ ಕೋವಿಡ್‌ 19 ಸಾಂಕ್ರಮಿಕ ಹರಡುವಿಕೆಯ ನಂತರ ಈ ಯುವ ವಕೀಲರ ಸಂಕಷ್ಟ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ. ಲಾಕ್‌ ಡೌನ್‌ ಘೋಷಣೆಯ ನಂತರ ಕೋರ್ಟಿನ ಕಲಾಪಗಳು ನಡೆಯುತ್ತಿಲ್ಲ. ಬಹುತೇಕ ಕೋರ್ಟುಗಳು ತುರ್ತು ಪ್ರಕರಣಗಳನ್ನು ಆನ್‌ಲೈನ್‌ ಮೂಲಕ ವಿಲೇವಾರಿ ಮಾಡುತಿದ್ದರೂ ಕಕ್ಷಿದಾರರು ಮತ್ತು ವಕೀಲರು ಕೋರ್ಟಿಗೆ ಹಾಜರಾಗುವುದು ಸಾದ್ಯವಾಗುತ್ತಿಲ್ಲ. ಕಕ್ಷಿದಾರರನ್ನೇ ನಂಬಿಕೊಂಡಿರುವ ಮದ್ಯಮ ವರ್ಗದ ವಕೀಲರು ಇಂದು ಅತಂತ್ರರಾಗಿ ಮನೆಯಲ್ಲಿ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿಯಲ್ಲಿ ದೇಶದ ಲಕ್ಷಾಂತರ ಯುವ ವಕೀಲರು ಇದ್ದಾರೆ. ಬೇರೆ ಎಲ್ಲ ವೃತ್ತಿಪರರೂ ತಮ್ಮ ಮುಖ್ಯ ವೃತ್ತಿಯ ಜತೆಗೇ ತಮಗೆ ಇಷ್ಟ ಬಂದ ವೃತ್ತಿಯನ್ನು ಕೈಗೊಳ್ಳಲು ಸ್ವತಂತ್ರ ಮತ್ತು ಅವಕಾಶ ಇದೆ. ಆದರೆ ವಕೀಲರು ಈ ರೀತಿ ಮಾಡಲು ಸಾದ್ಯವಾಗುವುದಿಲ್ಲ ಏಕೆಂದರೆ ವಕೀಲರ ಕೋಡ್‌ ಆಫ್‌ ಕಾಂಡಕ್ಟ್‌ ಇದನ್ನು ನಿರ್ಭಂದಿಸಿದೆ. ಉದಾಹರಣೆಗೆ ವಕೀಲರೊಬ್ಬರು ಕೋರ್ಟಿನ ಸಮಯ ಮುಗಿದ ಬಳಿಕ ಒಂದು ಸ್ವಂತ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಲು ಈ ನಿಯಮಾವಳಿ ಆಸ್ಪದ ಕೊಡುವುದಿಲ್ಲ.

ಸ್ವತಃ ಸುಪ್ರೀಂ ಕೋರ್ಟು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ವಕೀಲರು ಬೇರೆ ಯಾವುದೇ ವೃತ್ತಿಯನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ ಮತ್ತು ಬೇರೆ ಯಾವುದೇ ವಿಧಾನದಿಂದ ಜೀವನೋಪಾಯವನ್ನು ಪಡೆಯಲು ಅವರಿಗೆ ಅನುಮತಿ ಇಲ್ಲ ಎಂದು ಸ್ಪಷ್ಟವಾಗಿ ಪುನರುಚ್ಚರಿಸಿದೆ. ವಕೀಲರು ತಮ್ಮ ಆದಾಯವನ್ನು ವೃತ್ತಿಗೆ ಮಾತ್ರ ಸೀಮಿತಗೊಳಿಸುವ ನಿಯಮಗಳಿಗೆ ಬದ್ಧರಾಗಿದ್ದಾರೆ ಎಂಬ ಅಂಶವನ್ನು ನಾವು ಅರಿತಿದ್ದೇವೆ. ಬೇರೆ ಯಾವುದೇ ವಿಧಾನದಿಂದ ಜೀವನೋಪಾಯವನ್ನು ನಡೆಸಲು ಅವರಿಗೆ ಅನುಮತಿ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ. ರಾಮಸುಬ್ರಮಣಿಯನ್ ಪೀಠ ಹೇಳಿದೆ. ಕೋವಿಡ್‌ 19 ಪ್ರೇರಿತ ಲಾಕ್‌ಡೌನ್ ಮಧ್ಯೆ, ಕೆಲಸ ಕಳೆದುಕೊಳ್ಳುತ್ತಿರುವ ವಕೀಲರು ಎದುರಿಸುತ್ತಿರುವ ಹಣಕಾಸಿನ ತೊಂದರೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸು ಮೋಟೋ ವಿಚಾರಣೆಯ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಲಾಗಿದೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ II ನೇ ಅಧ್ಯಾಯದ 47 ರಿಂದ 52 ರ ನಿಯಮಗಳು ವಕೀಲರಿಗೆ ಇತರ ಉದ್ಯೋಗಗಳನ್ನು ತೆಗೆದುಕೊಳ್ಳದಂತೆ ನಿರ್ಬಂಧಗಳನ್ನು ವಿಧಿಸುತ್ತವೆ.

ನಿಯಮ 47 ರಲ್ಲಿ ವಕೀಲರು ಯಾವುದೇ ವ್ಯವಹಾರದಲ್ಲಿ ವೈಯಕ್ತಿಕವಾಗಿ ತೊಡಗಿಸಿಕೊಳ್ಳಬಾರದು ಆದರೆ ಅವರು ಸಂಸ್ಥೆಯಲ್ಲಿ ಸ್ಲೀಪಿಂಗ್‌ ಪಾಲುದಾರರಾಗಬಹುದು. ವಕೀಲರು ಯಾವುದೇ ವ್ಯವಸ್ಥಾಪಕ ನಿರ್ದೇಶಕರಾಗಿರಬಾರದು ಅಥವಾ ಯಾವುದೇ ಕಂಪನಿಯ ಕಾರ್ಯದರ್ಶಿಯಾಗಿರಬಾರದು ಎಂದು ನಿಯಮ 48 ಸೂಚಿಸುತ್ತದೆ. ನಿಯಮ 49 ಪ್ರಕಾರ ವಕೀಲರು ಯಾವುದೇ ವ್ಯಕ್ತಿ, ಸರ್ಕಾರ, ಸಂಸ್ಥೆ, ನಿಗಮ ಅಥವಾ ಕಾಳಜಿಯ ಪೂರ್ಣ ಸಮಯದ ಸಂಬಳ ಪಡೆಯುವ ಉದ್ಯೋಗಿ ಯಾಗಿರುವುದನ್ನು ನಿರ್ಬಂದಿಸಿದೆ. ಹನಿರಾಜ್ ಎಲ್ ಚುಲಾನಿ (ಡಾ) ವಿ. ಬಾರ್ ಕೌನ್ಸಿಲ್ ಆಫ್ ಮಹಾರಾಷ್ಟ್ರ ಮತ್ತು ಗೋವಾ (1996) 3 ಎಸ್ಸಿಸಿ 342 ರಲ್ಲಿ, ವೈದ್ಯಕೀಯ ವೈದ್ಯರೊಬ್ಬರು ವಕೀಲರಾಗಿ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತು:

ಬದುಕುವ ಹಕ್ಕಿನಲ್ಲಿ ಜೀವನೋಪಾಯದ ಹಕ್ಕಿದೆ ಎಂಬುದು ನಿಸ್ಸಂದೇಹ. ಆದರೆ ಮೇಲ್ಮನವಿ ತನ್ನ ಜೀವನೋಪಾಯದ ಹಕ್ಕನ್ನು ನಿರಾಕರಿಸಲಾಗಿಲ್ಲ. ಅವನು ಈಗಾಗಲೇ ವೈದ್ಯಕೀಯ ವೈದ್ಯರ ವೃತ್ತಿಯನ್ನು ನಿರ್ವಹಿಸುವ ವೃತ್ತಿಪರನಾಗಿದ್ದಾನೆ. ಹೆಚ್ಚುವರಿ ಅಥವಾ ಹೆಚ್ಚಿನ ಜೀವನೋಪಾಯವನ್ನು ಗಳಿಸುವ ಉದ್ದೇಶದಿಂದ ಏಕಕಾಲದಲ್ಲಿ ಕಾನೂನು ಅಭ್ಯಾಸ ಮಾಡಲು ಅನುಮತಿ ನೀಡಬೇಕೆಂದು ಅವರು ಬಯಸುತ್ತಾರೆ. ಅವರ ಮೇಲಿನ ಬೇಡಿಕೆಗೆ ಸಂಬಂಧಪಟ್ಟಂತೆ, ಆ ಇತರ ವೃತ್ತಿಯನ್ನು ತ್ಯಜಿಸಿ ಮತ್ತು ಪೂರ್ಣ ಪ್ರಮಾಣದ ಕಾನೂನು ವೃತ್ತಿಗೆ ಸೇರದ ಹೊರತು ಅವರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟು ಸ್ಪಷ್ಟಪಡಿಸಿತ್ತು.

ಆದರೆ ಇದಕ್ಕೆ ತದ್ವಿರುದ್ಧವಾಗಿ, ಗುಜರಾತ್‌ನ ಬಾರ್ ಕೌನ್ಸಿಲ್ ಇತ್ತೀಚೆಗೆ ಲಾಕ್‌ಡೌನ್ ಪರಿಸ್ಥಿತಿಯಿಂದಾಗಿ ಜೀವನ ನಡೆಸಲು ಕಷ್ಟಪಡುತ್ತಿರುವ ನಿರ್ಗತಿಕ ವಕೀಲರಿಗೆ, ಈ ವರ್ಷದ ಅಂತ್ಯದವರೆಗೆ ಪರ್ಯಾಯ ಉದ್ಯೋಗ /ವ್ಯವಹಾರಗಳನ್ನು ಮಾಡಲು ಅನುಮತಿ ನೀಡಲು ನಿರ್ಧರಿಸಿದೆ. ಆದಾಗ್ಯೂ, ಈ ನಿರ್ಣಯವು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅನುಮೋದನೆಗೆ ಬಾಕಿ ಉಳಿದಿದೆ ಮತ್ತು ಇನ್ನೂ ಜಾರಿಗೆ ಬರಬೇಕಿದೆ. ಭಾನುವಾರ ನಡೆಸಿದ ಸಭೆಯಲ್ಲಿ, ಕಳೆದ ಮೂರು ತಿಂಗಳಲ್ಲಿ 75,000 ಕ್ಕೂ ಹೆಚ್ಚು ವಕೀಲರ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ ಮತ್ತು ಅವರಲ್ಲಿ ಹಲವರು ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಹೊರಲು ಸಾಧ್ಯವಾಗುತ್ತಿಲ್ಲ. ವೃತ್ತಿಯ ಘನತೆಯು ಹಣಕಾಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಅವರ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಲು ಬೇರೆ ಯಾವುದೇ ಉದ್ಯೋಗ / ವ್ಯವಹಾರವನ್ನು ತೆಗೆದುಕೊಳ್ಳಬಹುದು. ಅಂತಹ ವಕೀಲರನ್ನು 2020 ರ ಡಿಸೆಂಬರ್ 31 ರವರೆಗೆ ವಕೀಲರ ಕಾಯ್ದೆಯ ಸೆಕ್ಷನ್ 35 ರಿಂದ ವಿನಾಯಿತಿ ನೀಡಲಾಗುವುದು “ಎಂದು ರಾಜ್ಯ ಬಾರ್ ಕೌನ್ಸಿಲ್ ನಿರ್ಧರಿಸಿದೆ .

ಆದರೆ ವಕೀಲರ ಕಾಯ್ದೆಯ ಸೆಕ್ಷನ್ 35 ವಕೀಲರು ಕಾನೂನು ಅಭ್ಯಾಸವನ್ನು ಹೊರತುಪಡಿಸಿ ಬೇರೆ ಯಾವುದೇ ವೃತ್ತಿ, ಕೆಲಸ ಅಥವಾ ವ್ಯವಹಾರದಲ್ಲಿ ತೊಡಗಿಸಿಕೊಂಡರೆ ಅಭ್ಯಾಸ ಮಾಡಲು ಪರವಾನಗಿ ಪಡೆಯುವುದನ್ನು ನಿಷೇಧಿಸುತ್ತದೆ. ಸಾಂಕ್ರಾಮಿಕ ರೋಗವು ನಾಗರಿಕರ ಜೀವನದ ಮೇಲೆ ಮತ್ತು ವಿಶೇಷವಾಗಿ ಕಾನೂನು ವೃತ್ತಿಪರರಿಗೆ ಭಾರಿ ನಷ್ಟವನ್ನುಂಟುಮಾಡಿದೆ ಎಂದು ಗಮನಿಸಿದ ನ್ಯಾಯಾಲಯವು ಅರ್ಹ ಮತ್ತು ಅರ್ಹ ವಕೀಲರಿಗಾಗಿ ಪರಿಹಾರಕ್ಕಾಗಿ ನಿಧಿಯನ್ನು ಏಕೆ ಸ್ಥಾಪಿಸಲಾಗುವುದಿಲ್ಲ ಎಂಬ ಕಾರಣವನ್ನು ತೋರಿಸಲು ಪ್ರತಿವಾದಿಗಳನ್ನು ಕೇಳಿದೆ. ಬಹುಶಃ ಈ ರೀತಿಯ ನಿಧಿ ಸ್ಥಾಪನೆ ಆದಲ್ಲಿ ಬಡ ವಕೀಲರು ಬದುಕಿಕೊಳ್ಳಬಹುದು.

Previous Post

ಸಮುದಾಯದ ಪಾಲ್ಗೊಳ್ಳುವಿಕೆಯೊಂದಿಗೆ ಕೋವಿಡ್ ವಿರುದ್ದ ಹೋರಾಟದಲ್ಲಿ ಯಶಸ್ವಿಯಾದ ಈಶಾನ್ಯ ರಾಜ್ಯಗಳು

Next Post

ಮನೆಯಲ್ಲಿರುವ ವೃದ್ಧರಿಗೆ ಮಾರಕವಾಗುತ್ತಿದೆ ಮುನ್ನೆಚ್ಚರಿಕೆ ವಹಿಸದ ಯುವಜನಾಂಗ

Related Posts

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌
Top Story

ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ: ಡಿಸಿಎಂ ಡಿ.ಕೆ. ಶಿವಕುಮಾರ್‌

by ಪ್ರತಿಧ್ವನಿ
April 21, 2026
0

ಕೃಷ್ಣಗಿರಿ : ತಮಿಳುನಾಡಿಗೆ ಡಿಎಂಕೆ ಮೈತ್ರಿಕೂಟದಿಂದಲೇ ಭವಿಷ್ಯ. ಇದನ್ನು ಅರಿತೇ ಪನ್ನೀರ್‌ ಸೆಲ್ವಂ ಡಿಎಂಕೆ ಸೇರಿದ್ದಾರೆ ಎಂದು ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.‌ https://youtu.be/Qq4ttLUbePI?si=fsnxrvw_HfnTQXm3 ತಮಿಳುನಾಡಿನ...

Read moreDetails
ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

ಕುಮಾರಸ್ವಾಮಿ ದೊಡ್ಡ ವ್ಯಕ್ತಿ ಇರಬಹುದು, ಆದ್ರೆ ನನಗೂ ಸಣ್ಣ ಅನುಭವವಿದೆ : ಹೆಚ್‌ಡಿಕೆಗೆ ಡಿಕೆಶಿ ಡಿಚ್ಚಿ..

April 21, 2026
ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

ದೇವೇಗೌಡರಿಗೆ ಸಿದ್ದರಾಮಯ್ಯ ಭರ್ಜರಿ ಗಿಫ್ಟ್..!‌: ಗುರುವಿಗೆ ಶಿಷ್ಯನ ಕೊಡುಗೆ ಏನು..?

April 21, 2026
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
Next Post
ಮನೆಯಲ್ಲಿರುವ ವೃದ್ಧರಿಗೆ ಮಾರಕವಾಗುತ್ತಿದೆ ಮುನ್ನೆಚ್ಚರಿಕೆ ವಹಿಸದ ಯುವಜನಾಂಗ

ಮನೆಯಲ್ಲಿರುವ ವೃದ್ಧರಿಗೆ ಮಾರಕವಾಗುತ್ತಿದೆ ಮುನ್ನೆಚ್ಚರಿಕೆ ವಹಿಸದ ಯುವಜನಾಂಗ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada