• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪರಿಸರ ಸಂರಕ್ಷಣೆ: ಸುಪ್ರಿಂ ಮೆಟ್ಟಿಲೇರಿದ 23 ಮಕ್ಕಳು

by
June 26, 2020
in ದೇಶ
0
ಪರಿಸರ ಸಂರಕ್ಷಣೆ: ಸುಪ್ರಿಂ ಮೆಟ್ಟಿಲೇರಿದ 23 ಮಕ್ಕಳು
Share on WhatsAppShare on FacebookShare on Telegram

ಪರಿಸರ ನಾಶ ಎಲ್ಲರನ್ನೂ ವಿನಾಶದತ್ತ ಕೊಂಡೊಯ್ಯುತ್ತಿದೆ. ಈ ಮಧ್ಯೆಯು ಅಭಿವೃದ್ದಿಯ ಹೆಸರಿನಲ್ಲಿ ಅಲ್ಪ ಸ್ವಲ್ಪವಾದರೂ ಜೀವಂತವಿರುವ ಸಸ್ಯ ಸಂಕುಲವನ್ನು ಸರ್ಕಾರಗಳು ಯೋಜನೆಗಳ ಹೆಸರಿನಲ್ಲಿ ನಾಶ ಮಾಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಬಹಳಷ್ಟು ಬಾರಿಗೆ ಈ ವಿಚಾರ ಮುನ್ನೆಲೆಗೆ ಬಂದಿದ್ದರೂ, ಲಾಭ ನಷ್ಟದ ಲೆಕ್ಕಾಚಾರದಲ್ಲಿರುವವರ ವ್ಯವಸ್ಥಿತ ಪಿತೂರಿಯಿಂದ ಎಲ್ಲಾ ಹೋರಾಟಗಳು ಸರಿಯಾದ ಫಲ ನೀಡುತ್ತಿಲ್ಲ.

ADVERTISEMENT

ಇನ್ನು ಲಾಕ್‌ಡೌನ್‌ ಅನ್ನೇ ನೆಪವಾಗಿಟ್ಟುಕೊಂಡು ನೂರಾರು ಪರಿಸರ ವಿರೋಧಿ ಸರ್ಕಾರಿ ಯೋಜನೆಗಳಿಗೆ ಅಂಕಿತ ಬಿದ್ದಿದೆ. ಶರಾವತಿ ಭೂಗರ್ಭ ವಿದ್ಯುತ್‌ ಸ್ಥಾವರ ಯೋಜನೆ, ಹುಬ್ಬಳ್ಳಿ ಅಂಕೋಲ ರೈಲು ಮಾರ್ಗ ಯೋಜನೆ, ಗಣಿಗಾರಿಕೆಗಳಿಗೆ ಪರವಾನಗೆ ಹೀಗೆ ಹತ್ತು ಹಲವು ಯೋಜನೆಗಳಿಗೆ ಕಳೆದ ಮೂರು ನಾಲ್ಕು ತಿಂಗಳಲ್ಲಿ ಅನುಮೋದನೆ ದೊರೆತಿದೆ.

Also Read: ಪ್ರಭಾವಿ ಲಾಬಿಯ ಮುಂದೆ ಮಂಡಿಯೂರಿದರೆ ಪರಿಸರ ತಜ್ಞರು?

ಈ ವಿಚಾರದಲ್ಲಿ ಪರಿಸರ ಸಂರಕ್ಷಣಾ ಇಲಾಖೆ, ವನ್ಯ ಜೀವಿ ಮಂಡಳಿ ಹಾಗೂ ಪರಿಸರ ಪರವಾಗಿ ಕೆಲಸ ಮಾಡಬೇಕಿದ್ದ ಸರ್ಕಾರದ ಅನೇಕ ಇಲಾಖೆಗಳು ಒಟ್ಟಿಗೆ ಕೈಜೋಡಿಸಿವೆ. ಈ ಕುರಿತು ಪ್ರತಿಧ್ವನಿ ಈಗಾಗಲೇ ಬಹಳಷ್ಟು ವರದಿಗಳನ್ನು ಪ್ರಕಟಿಸಿದೆ.

Also Read: ಪರಿಸರ ಮಾರಕ ನಿರ್ಧಾರ ಕೈಗೊಳ್ಳುವುದಾದರೆ ವನ್ಯಜೀವಿ ಮಂಡಳಿ ಅಗತ್ಯವೇನು?

ಆದರೆ, ಇತ್ತೀಚಿನ ಒಂದು ಘಟನೆ, ಇನ್ನೂ ಪರಿಸರ ಪರ ಹೋರಾಟಗಳು ಸತ್ತಿಲ್ಲ ಎಂಬುದನ್ನು ನಿರೂಪಿಸುವಂತಿವೆ. ಕೇವಲ 12 ವರ್ಷ ವಯಸ್ಸಿನ ಪುಟ್ಟ ಪೋರಿ ರಿಧಿಮಾ ಪಾಂಡೆ, ಎಂ ಕವಿಯಾ ಮತ್ತು ಇನ್ನೂ ಕೆಲವು ಮಕ್ಕಳ ತಂಡ ಪರಿಸರ ಸಂರಕ್ಷಣೆಗಾಗಿ ಪಣತೊಟ್ಟಿದೆ. ಪರಿಸರ ಪರ ಹೋರಾಟದಲ್ಲಿ ಕೇವಲ ಹಿರಿಯರಷ್ಟೇ ಅಲ್ಲದೇ, ದೇಶದ ಭವಿಷ್ಯವಾಗಿರುವ ಮಕ್ಕಳೂ ಕೂಡಾ ಸಣ್ಣ ವಯಸ್ಸಿನಲ್ಲಿಯೇ ಹೋರಾಟಕ್ಕೆ ಧುಮುಕುತ್ತಿರುವುದು ನಿಜಕ್ಕೂ ಧೈರ್ಯ ತುಂಬುವ ಸಂಗತಿ. ಅಂದಹಾಗೆ, ಅವರ ಹೋರಾಟಕ್ಕೆ ಫಲವೂ ದೊರೆಯುತ್ತಿದೆ.

Also Read: ಎತ್ತಿನಹೊಳೆ ಕಾಮಗಾರಿಗೂ ಮೊದಲು ಪರಿಸರ ಹಾನಿ ವರದಿ ಏಕೆ ಮಾಡಿಲ್ಲ?

23 ಜನ ಮಕ್ಕಳು ಪಶ್ಚಿಮ ಘಟ್ಟಗಳ ಉಳಿವಿಗಾಗಿ ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್‌ ಪುರಸ್ಕರಿಸಿದೆ. ಈ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಪರಿಸರ ವಿಜ್ಞಾನ ತಜ್ಞರ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸುವ ಕುರಿತಾಗಿ ಆರು ರಾಜ್ಯಗಳಿಗೆ ನೋಟಿಸ್‌ ಜಾರಿ ಮಾಡಿದೆ. ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಹಬ್ಬಿರುವ ಪಶ್ಚಿಮ ಘಟ್ಟದ ಉಳಿವಿಗಾಗಿ ಆಯಾ ರಾಜ್ಯಗಳಿಗೆ ನೋಟೀಸ್‌ ಜಾರಿ ಮಾಡಿದೆ.

Also Read: ಪರಿಸರ ಉಳಿಸಿ ಎಂಬ ಘೋಷಣೆ ಸಾಕು..!
ಪ್ರಕೃತಿಯನ್ನು ಉಳಿಸಲೇಬೇಕಾದ ತುರ್ತು ಮುಂದಿದೆ ಎಚ್ಚೆತ್ತುಕೊಳ್ಳಿ..!

ಈ ಅರ್ಜಿ ವಿಚಾರಣೆಯ ವಿಚಾರದಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೇನೆಂದರೆ 23 ಅರ್ಜಿದಾರರಲ್ಲಿ 7 ಜನರು 18ಕ್ಕಿಂತಲೂ ಕಡಿಮೆ ವಯಸ್ಸಿನವರು. ಗೋವಾ ಮತ್ತು ಕೇರಳದ NGOಗಳ ಸದಸ್ಯರೂ ಈ ತಂಡದಲ್ಲಿದ್ದಾರೆ. 23 ಜನರೂ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದ ನೀಲಗಿರಿಯ ಎಂ ಕವಿಯಾ ಎಂಬ ಹುಡುಗಿಯ ಅರ್ಜಿಯನ್ನು ಮುಖ್ಯವಾಗಿ ಪರಿಗಣಿಸಲಾಗಿದೆ.

2011ರಲ್ಲಿ ಪ್ರಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗಿಲ್‌ ಅವರ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟದ ಉಳಿವಿಗಾಗಿ ಗಣಿಗಾರಿಕೆ, ಕ್ವಾರಿ ಮತ್ತು Z-ಕೆಟಗರಿಯ ಕೈಗಾರಿಕೆಗಳನ್ನು ನಿಯಂತ್ರಿಸಬೇಕೆಂದು ವರದಿ ನೀಡಿತ್ತು. ಆದರೆ, ಆ ವರಿದಿಯು ಮೂಲೆಗುಂಪಾಗಿದ್ದು, ಯಾವ ರಾಜ್ಯಗಳೂ ಅದರ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಮತ್ತೆ ಆ ವರದಿಯ ಅನುಷ್ಠಾನಕ್ಕೆ ಒತ್ತು ನೀಡಲಾಗಿದ್ದು ಪರಿಸರ ಉಳಿಸುವ ನಿಟ್ಟಿನಲ್ಲಿ ಗಾಡ್ಗಿಲ್‌ ವರದಿ ಜಾರಿಯಾಗಲೇಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

Also Read: ಕೋಟಿ ಬೆಲೆಬಾಳುವ ಜಮೀನಿನಲ್ಲಿ ಕಾಡು ಬೆಳೆಸಿದ ಪರಿಸರ ಪ್ರೇಮಿ

ಗಾಡ್ಗಿಲ್‌ ವರದಿಯ ಪ್ರಕಾರ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ Eco Sensitive Zone (ESZ)ಗಳನ್ನು ಗುರುತಿಸಬೇಕು ಹಾಗೂ ಜನವಸತಿಯ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು. ESZಗಳಲ್ಲಿ ಯಾವುದೇ ರೀತಿಯ ಕೈಗಾರಿಕಾ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಬೇಕು. ಅದು ಹೈಡ್ರೋ ಯೋಜನೆಗಳಿರಲಿ, ವಿಂಡ್‌ ಮಿಲ್‌, ರಸ್ತೆ ನಿರ್ಮಾಣ ಅಥವಾ ಬೇರಾವುದೇ ರೀತಿಯ ನಿರ್ಮಾಣ ಕಾರ್ಯವನ್ನು ಇಲ್ಲಿ ಕೈಗೊಳ್ಳುವ ಹಾಗಿಲ್ಲ.

ಹೀಗೆ ಮಾಡಿದಲ್ಲಿ ಮಾತ್ರ ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳಬಹುದು ಎಂಬುದು ಗಾಡ್ಗಿಲ್‌ ವರದಿಯ ನಿಲುವಾಗಿತ್ತು. ಆದರೆ, ಇಂತಹ ವರದಿಯನ್ನು ಜಾರಿಗೊಳಿಸಿದಲ್ಲಿ ಎಲ್ಲಿ ಕಾರ್ಪೊರೇಟ್‌ ಹಿತಾಸಕ್ತಿಗಳು ಸರ್ಕಾರಗಳ ವಿರುದ್ದ ನಿಲ್ಲುವಂತಹ ಪರಿಸ್ಥಿತಿ ಎದುರಾಗುತ್ತದೋ ಎನ್ನುವ ಭಯ ಈವರೆಗೆ ವರದಿಯ ಅನುಷ್ಠಾನಕ್ಕೆ ಅಡ್ಡಿಯಾಗಿದೆ. ಬಂಡವಾಳಶಾಹಿಗಳ ಎದುರು ಪರಿಸರ ಬರಡಾಗುತ್ತಿದೆ.

ಇಂತಹ ಸಂದರ್ಭದಲ್ಲಿ 23 ಜನ ಮಕ್ಕಳು ತೋರಿದಂತಹ ಪರಿಸರ ಪ್ರೇಮ ನಿಜಕ್ಕೂ ಶ್ಲಾಘನೀಯ. ಈ ರೀತಿಯಾದರೂ, ಸರ್ಕಾರಗಳು ಕೈಗಾರಿಕೆಗಳ ಪರ ವಕಾಲತ್ತು ವಹಿಸುವುದನ್ನು ಬಿಟ್ಟು ನಿಜವಾಗಿಯೂ ಪರಿಸರ ಪರವಾದ ಕಾಳಜಿಯನ್ನು ತೋರಿದ್ದಲ್ಲಿ ಮಾತ್ರ ಪಶ್ಚಿಮ ಘಟ್ಟಗಳ ಅಪಾರ ಸಸ್ಯ ಸಮೃದ್ದಿಯನ್ನು ಉಳಿಸಿಕೊಳ್ಳಬಹುದು. ಇಲ್ಲವಾದಲ್ಲಿ ಅತಿವೃಷ್ಟಿ, ಅನಾವೃಷ್ಟಿಯ ಹಾವಳಿಗೆ ಸಿಲುಕಿ, ಕೇಂದ್ರದ ಅನುದಾನ, ರಾಜ್ಯದ ಅನುದಾನಗಳ ಗೊಂದಲದ ನಡುವೆ ದೇಶದ ಜನರ ಪರಿಸ್ಥಿತಿ ಚಿಂತಾಜನಕವಾಗುವುದರಲ್ಲಿ ಸಂಶಯವಿಲ್ಲ.

Tags: Madhav Gadgil Reportsupreme courtWestern Ghatsಗಾಡ್ಗಿಲ್‌ ವರದಿಪರಿಸರ ಸಂರಕ್ಷಣೆಪಶ್ಚಿಮ ಘಟ್ಟ
Previous Post

ಬೆಂಗಳೂರು ಶಾಸಕ, ಸಂಸದರೊಂದಿಗೆ ಸಿಎಂ ಸಭೆ- ಸಿಡಿದು ನಿಂತ ಸಿದ್ಧರಾಮಯ್ಯ

Next Post

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಇಲ್ಲ- ಆರ್ ಅಶೋಕ್

Related Posts

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..
Top Story

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) ರಾಷ್ಟ್ರಗಳಿಗೆ ಬೆಳವಣಿಗೆ ಮತ್ತು ಸಸ್ಥಿರತೆಯನ್ನು ಸಮನ್ವಯಗೊಳಿಸುವ ಜಾಗತಿಕ ಚೌಕಟ್ಟನ್ನು ಒದಗಿಸುತ್ತವೆ. ಆದ್ದರಿಂದ ಅಭಿವೃದ್ಧಿ ಮತ್ತು ಸುಸ್ಥಿರತೆ ಹಾಗೂ ಒಳಗೊಳ್ಳುವಿಕೆಯ ಗುರಿಯ...

Read moreDetails
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
Next Post
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಇಲ್ಲ- ಆರ್ ಅಶೋಕ್

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಇಲ್ಲ- ಆರ್ ಅಶೋಕ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada