• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನೂರು ವರ್ಷದ ತಾಯಿಯನ್ನು ಮಂಚದಲ್ಲಿ ತಳ್ಳಿಕೊಂಡು ಬ್ಯಾಂಕಿಗೆ ಸಾಗಿಸಿದ ಮಹಿಳೆ

by
June 15, 2020
in ದೇಶ
0
ನೂರು ವರ್ಷದ ತಾಯಿಯನ್ನು ಮಂಚದಲ್ಲಿ ತಳ್ಳಿಕೊಂಡು ಬ್ಯಾಂಕಿಗೆ ಸಾಗಿಸಿದ ಮಹಿಳೆ
Share on WhatsAppShare on FacebookShare on Telegram

ಬ್ಯಾಂಕ್‌ ಖಾತೆ ಪರಿಶೀಲನೆಗಾಗಿ ಒಡಿಸ್ಸಾದ ನೌಪಾರ ಜಿಲ್ಲೆಯ ಮಹಿಳೆ ತನ್ನ ಶತಾಯುಷಿ ತಾಯಿಯನ್ನು ಮಂಚದೊಂದಿಗೆ ದೂಡಿಕೊಂಡು ಬ್ಯಾಂಕ್‌ಗೆ ಸಾಗಿಸಿದ್ದಾರೆ. ತನ್ನ ತಾಯಿಯ ಪಿಂಚಣಿ ಪಡೆಯಲು ಖಾತೆದಾರರ ಭೌತಿಕ ಪರಿಶೀಲನೆ ಮಾಡಬೇಕೆಂದು ಬ್ಯಾಂಕ್‌ ಮೆನೇಜರ್‌ ಮಹಿಳೆಯ ಬಳಿ ಹೇಳಿದ್ದಾರೆ.

60 ವರ್ಷದ ಪುಂಜಿಮತಿ ದೇಯಿ ತನ್ನ ತಾಯಿಯನ್ನು ಮಂಚದೊಂದಿಗೆ ಬ್ಯಾಂಕಿಗೆ ತಳ್ಳಿಕೊಂಡು ಹೋಗುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಕಳೆದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿಯಲ್ಲಿ ಕೋವಿಡ್-‌19 ಆರ್ಥಿಕ ಸಂಕಷ್ಟಕ್ಕೆ ಬಡಜನರಿಗೆ ನೆರವಾಗಲು ಜನಧನ್‌ ಖಾತೆಗೆ 500 ರುಪಾಯಿ ಹಾಕುವುದಾಗಿ ಯೋಜನೆ ಘೋಷಿಸಿತ್ತು.

ದೇಯಿ ಜೂನ್‌ 9 ರಂದು ಹಾಸಿಗೆ ಹಿಡಿದಿದ್ದ ತನ್ನ ತಾಯಿಯ ಖಾತೆಯಲ್ಲಿದ್ದ 1500 ರುಪಾಯಿಗಳನ್ನು ವಿಥ್ ಡ್ರಾ ಮಾಡಲು ಬ್ಯಾಂಕಿಗೆ ತೆರಳಿದ್ದರು. ಬ್ಯಾಂಕ್‌ ಮೆನೇಜರ್‌ ಅಜಿತ್‌ ಪ್ರಧಾನ್‌ ಹಣ ಬಿಡುಗಡೆ ಮಾಡಲು ಖಾತೆದಾರರನ್ನು ಬ್ಯಾಂಕಿಗೆ ಕರೆತರಲು ಸೂಚಿಸಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮೆನೇಜರ್‌ ತಾಯಿಯನ್ನು ಕರೆದುಕೊಂಡು ಬರಲು ಹೇಳಿದ್ದರಿಂದ ಹಾಸಿಗೆ ಹಿಡಿದಿದ್ದ ತನ್ನ 100 ವರ್ಷ ದಾಟಿರುವ ತಾಯಿಯನ್ನು ಚಾರ್‌ಪಾಯಿಯೊಂದಿಗೆ ಕರೆದುಕೊಂಡು ಹೋಗದೆ ಬೇರೆ ವಿಧಿ ಇರಲಿಲ್ಲ ಇಬ್ಬರೂ ಹೋದ ಬಳಿಕವಷ್ಟೇ ಹಣವನ್ನು ತೆಗೆಯಲು ಸಾಧ್ಯವಾಯಿತು ಎಂದು ದೇಯಿ ಹೇಳಿದ್ದಾರೆ.

ಘಟನೆಯ ಕುರಿತು ಮಾತನಾಡಿದ ನೌಪುರ ಜಿಲ್ಲಾಧಿಕಾರಿ, ಬ್ಯಾಂಕ್‌ನ ಎಲ್ಲಾ ಕೆಲಸವನ್ನೂ ಮೆನೇಜರ್‌ ಒಬ್ಬರೇ ನಿರ್ವಹಿಸಬೇಕು, ಆದ್ದರಿಂದ ಆ ಮಹಿಳೆಯ ಮನೆಗೆ ತೆರಳಿ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ. ಮರುದಿನ ಮಹಿಳೆಯ ಮನೆಗೆ ತೆರಳಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದರೂ, ಮಹಿಳೆ ಅವಸರ ಪಟ್ಟು ತಾಯಿಯನ್ನು ಕರೆದುಕೊಂಡು ಬ್ಯಾಂಕಿಗೆ ತೆರಳಿದ್ದಾರೆ ಎಂದಿದ್ದಾರೆ.

शर्मनाक: ओडिसा में पेंशन के लिए अफसर वेरिफिकेशन पर अड़ गए, मजबूरी में महिला को अपनी 100 साल की बुजुर्ग मां को चारपाई पर घसीट कर बैंक पहुंचाना पड़ा।

इस चारपाई पर बेबस मां नहीं बल्कि सड़ चुका लाचार सिस्टम लेटा है।pic.twitter.com/uTiskHWtIy

— (@UtkarshSingh_) June 15, 2020


ADVERTISEMENT
Tags: ಒಡಿಶಾಪಿಂಚಣಿ ಯೋಜನೆಬ್ಯಾಂಕ್
Previous Post

ಲಾಕ್‌ಡೌನ್‌ನಲ್ಲಿ ಪಾರ್ಲೆ-ಜಿ ದಾಖಲೆ ಮಾರಾಟಕ್ಕೇ ಕಾರಣವೇನು?

Next Post

ಪಾಕ್: ಐಎಸ್‌ಐ ಕಸ್ಟಡಿಯಲ್ಲಿ ಭಾರತದ 2 ಹೈ ಕಮಿಷನ್ ಅಧಿಕಾರಿಗಳು ನಾಪತ್ತೆ

Related Posts

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-
Top Story

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

by ಪ್ರತಿಧ್ವನಿ
April 23, 2026
0

(ಡಾ ಬಾಬು ಜಗಜೀವನ್‌ರಾಮ್‌ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡ ವಿಶೇಷ ಘಟಕ ಮೈಸೂರು ವಿಶ್ವವಿದ್ಯಾನಿಲಯ ಜಂಟಿ ಆಶ್ರಯದಲ್ಲಿ ದಿನಾಂಕ 06-04-2026ರಂದು ನಡೆದ...

Read moreDetails
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
Next Post
ಪಾಕ್: ಐಎಸ್‌ಐ ಕಸ್ಟಡಿಯಲ್ಲಿ ಭಾರತದ 2 ಹೈ ಕಮಿಷನ್ ಅಧಿಕಾರಿಗಳು ನಾಪತ್ತೆ

ಪಾಕ್: ಐಎಸ್‌ಐ ಕಸ್ಟಡಿಯಲ್ಲಿ ಭಾರತದ 2 ಹೈ ಕಮಿಷನ್ ಅಧಿಕಾರಿಗಳು ನಾಪತ್ತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada