ಕರ್ನಾಟಕದಲ್ಲಿ ಎಪ್ರಿಲ್ 29ರ ಸಂಜೆ 5ರಿಂದ 30ರ ಮಧ್ಯಾಹ್ನ 1 ಗಂಟೆಗೆ 22 ಕರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಸಂಜೆ 5ರ ಹೊತ್ತಿಗೆ ಮತ್ತೆ ಹೊಸ 8 ಪ್ರಕರಣಗಳು ಕಂಡು ಬಂದು ಒಂದೇ ದಿನದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 30 ತಲುಪಿದೆ.
Also Read: ಕೋವಿಡ್-19: ರಾಜ್ಯದಲ್ಲಿ ಬರೋಬ್ಬರಿ 22 ಹೊಸ ಪ್ರಕರಣಗಳು!
ಎಪ್ರಿಲ್ 29ರಂದು 11 ಪ್ರಕರಣ ಮಾತ್ರ ದಾಖಲಾಗಿದ್ದ ರಾಜ್ಯದಲ್ಲಿ ನಂತರದ ಒಂದೇ ದಿನದಲ್ಲಿ 30 ಹೊಸ ಪ್ರಕರಣಗಳು ದಾಖಲಾಗಿ ಆತಂಕದ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿ ಒಟ್ಟು 565 ಕರೋನಾ ಪಾಸಿಟಿವ್ ಪ್ರಕರಣ ದಾಕಲಾಗಿದ್ದು 21 ಮಂದಿ ಸೋಂಕಿನಿಂದ ಅಸುನೀಗಿದ್ದಾರೆ. 229 ಮಂದಿ ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ. ಉಳಿದ 314 ಸೋಂಕಿತರಲ್ಲಿ 305 ಮಂದಿ ರೋಗಿಗಳನ್ನು ವಿವಿಧ ಆಸ್ಪತ್ರೆಗಳ ಪ್ರತ್ಯೇಕ ವಾರ್ಡುಗಳಲ್ಲಿರಿಸಿದ್ದು ಆರೋಗ್ಯ ತೀವ್ರ ಹದಗೆಟ್ಟಿರುವ 9 ಮಂದಿಯನ್ನು ತೀವ್ರನಿಗಾ ಘಟಕದಲ್ಲಿರಿಸಲಾಗಿದೆ.
ಬೆಳಗಾವಿ ಜಿಲ್ಲೆಯೊಂದರಲ್ಲೇ 13 ಪ್ರಕರಣಗಳು ದಾಖಲಾಗಿದ್ದು ಬೆಂಗಳೂರು ನಗರದಲ್ಲಿ 10, ವಿಜಯಪುರದಲ್ಲಿ 2 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಕಂಡುಬಂದಿದೆ.
ಕರ್ನಾಟಕ ರಾಜ್ಯದ ಜಿಲ್ಲಾವಾರು ಪಾಸಿಟಿವ್ ಪ್ರಕರಣಗಳ ಅಂಕಿಅಂಶ
ಬೆಂಗಳೂರು ನಗರ 141
ಮೈಸೂರು 88
ಬೆಳಗಾವಿ 67
ಕಲಬುರಗಿ 53
ವಿಜಯಪುರ 43
ಬಾಗಲಕೋಟೆ 29
ದಕ್ಷಿಣ ಕನ್ನಡ 16
ಚಿಕ್ಕಬಳ್ಳಾಪುರ 18
ಮಂಡ್ಯ 18
ಬೀದರ್ 14
ಬಳ್ಳಾರಿ 13
ಉತ್ತರ ಕನ್ನಡ 11
ಬೆಂಗಳೂರು ಗ್ರಾಮೀಣ 06
ಧಾರವಾಡ 09
ಗದಗ 05
ಉಡುಪಿ 03
ದಾವಣಗೆರೆ 04
ತುಮಕೂರು 05
ಚಿತ್ರದುರ್ಗ 01
ಕೊಡಗು 01
ಇತರೆ* 20
*ವಿದೇಶಿ ಮತ್ತು ಹೊರರಾಜ್ಯಗಳ ಸೋಂಕಿತರು