• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಲಾಕ್‌ಡೌನ್‌ ಆದೇಶದ ನಂತರವೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹೆಚ್ಚಿಸಿದ ಕರೋನಾ ಭೀತಿ

by
April 4, 2020
in ಕರ್ನಾಟಕ
0
ಲಾಕ್‌ಡೌನ್‌ ಆದೇಶದ ನಂತರವೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಹೆಚ್ಚಿಸಿದ ಕರೋನಾ ಭೀತಿ
Share on WhatsAppShare on FacebookShare on Telegram

ಕರ್ನಾಟಕ ಸೇರಿದಂತೆ ಇಡೀ ಭಾರತದಲ್ಲಿ ಕರೋನಾ ಅಟ್ಟಹಾಸ ಕೊಂಚವೂ ಕೊಂಕದಂತೆ ಮುನ್ನಡೆದಿದೆ. ದೇಶವನ್ನೇ ಲಾಕ್ ಡೌನ್ ಗೆ ತಳ್ಳಿದರೂ ಕರೋನಾ ಸೋಂಕು ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ದೆಹಲಿಯಲ್ಲಿ ನಡೆದ ಮುಸ್ಲಿಂ ಸಮುದಾಯದ ಆ ಒಂದು ಸಭೆ ದೇಶಾದ್ಯಂತ ಕರೋನಾ ಹರಡುವ ಸಂಪರ್ಕ ಸಾಧನವಾಗುತ್ತಿದೆ. ದೆಹಲಿಯ ಸಭೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದೀರಿ, ಸ್ವಯಂ ಪ್ರೇರಣೆಯಿಂದ ಬಂದು ಪರೀಕ್ಷೆಗೆ ಒಳಗಾಗಬೇಕು ಎಂದು ಕರೆ ನೀಡಿದರೂ ಸ್ವಯಂ ಪ್ರೇರಣೆಯಿಂದ ಕರೋನಾ ಟೆಸ್ಟ್ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ.

ಒಂದು ಸಮುದಾಯದ ಜನರು ಪರೀಕ್ಷೆಗೆ ಒಳಗಾಗದೇ ಮನೆಯಲ್ಲೇ ಉಳಿದುಕೊಂಡರೆ ಕರೋನಾ ಸೋಂಕು ಸಮುದಾಯಕ್ಕೆ ಬರುವುದರಿಂದ 3ನೇ ಹಂತಕ್ಕೆ ಕಾಲಿಡುವಂತಾಗುತ್ತೆ ಎನ್ನುವ ಕಾರಣಕ್ಕೆ ಮುಸ್ಲಿಂ ಸಮುದಾಯದವರು ವಾಸವಾಗಿರುವ ಸ್ಥಳಗಳಿಗೆ ತೆರಳಿ ಮಾಹಿತಿ ಸಂಗ್ರಹ ಮಾಡುವ ಕೆಲಸ ಮಾಡುತ್ತಿದ್ದ ಆಶಾ ಕಾರ್ಯಕರ್ತೆ ಬೆಂಗಳೂರಿನ ಸಾರಾಯ್ ಪಾಳ್ಯದಲ್ಲಿ ಹಲ್ಲೆ ಮಾಡುವ ಯತ್ನ ನಡೆದಿತ್ತು. ಆ ನಂತರ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ದೃಷ್ಟಿಯಿಂದ ಮುಸ್ಲಿಂ ಸಮುದಾಯದ ನಾಯಕರನ್ನು ಸಭೆ ಕರೆದಿದ್ದ ಸಿಎಂ ಯಡಿಯೂರಪ್ಪ, ಕರೋನಾ ತೀವ್ರವಾಗಿ ವ್ಯಾಪಿಸುವ ಸಾಧ್ಯತೆಯಿದೆ. ಆ ಕಾರಣದಿಂದ ದೆಹಲಿ ಸಭೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಎನ್ನುವ ಮಾಹಿತಿಯನ್ನು ಕಲೆ ಹಾಕಿ ಚಿಕಿತ್ಸೆಗೆ ಬರುವ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದರು. ಜೊತೆಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದು ಬೇಡ, ಇದರಿಂದ ಕರೋನಾ ಹರಡಲು ನಾವೇ ಸಹಕಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ಮನವರಿಕೆ ಮಾಡಿದ್ದರು. ಆದರೂ ಮುಸ್ಲಿಂ ಸಮುದಾಯ ಸಿಎಂ ಮನವಿಗೆ ಸೊಪ್ಪು ಹಾಕಲಿಲ್ಲ.

ಲಾಕ್‌ಡೌನ್‌ ಆದೇಶ ಜಾರಿ ಆದ ತಕ್ಷಣ ರಾಜ್ಯ ವಕ್ಫ್‌ ಬೋರ್ಡ್‌ ಹೊರಡಿಸಿದ ಆದೇಶದಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇನ್ನು ರಾಜ್ಯದ ಹಲವು ಮಸೀದಿಗಳಲ್ಲಿ ಫಲಕಗಳನ್ನು ಅಳವಡಿಸುವ ಕೆಲಸವೂ ಆಗಿತ್ತು. ಇಷ್ಟಾಗಿಯೂ ಯಾರ ಮಾತಿಗೂ ಕಿಮ್ಮತ್ತೇ ನೀಡದೇ ಹಲವು ಕಡೆಗಳಲ್ಲಿ ಸಾಮೂಹಿಕವಾಗಿ ನಮಾಜ್‌ ಸಲ್ಲಿಸಿರುವುದು ನಿಜಕ್ಕೂ ಖಂಡನಾರ್ಹ.

ಲಾಕ್‌ಡೌನ್ ಇದೆ, 144 ಸೆಕ್ಷನ್ ಜಾರಿ ಮಾಡಲಾಗಿದೆ ಮಸೀದಿಯಲ್ಲಿ ಗುಂಪು ಸೇರುವುದು ಬೇಡ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದರೂ ಶುಕ್ರವಾರ ಮಧ್ಯಾಹ್ನ ಮುಸ್ಲೀಮರು ಸಾಮೂಹಿಕ ಪ್ರಾರ್ಥನೆ ಮಾಡಲು ಮುಂದಾಗಿದ್ದರು. ಹುಬ್ಬಳ್ಳಿಯ ಮಂಟೂರು ರಸ್ತೆಯ ಅರಳಿಕಟ್ಟಿ ಬಡಾವಣೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಮುಂದಾದರು. ಈ ವೇಳೆ ಸಾಮೂಹಿಕ ಪ್ರಾರ್ಥನೆ ಮಾಡದಂತೆ ಪೊಲೀಸರು ಬುದ್ಧಿವಾದ ಹೇಳಿದರು, ಪೊಲೀಸರೊಂದಿಗೆ ವಾಗ್ವಾದ ಮಾಡಿದರು. ಬಳಿಕ ಹುಬ್ಬಳ್ಳಿ ಶಹರ ಠಾಣೆ ಪೊಲೀಸರ ಮೇಲೆ ಕಲ್ಲು, ಚಪ್ಪಲಿಗಳನ್ನು ತೂರಾಟ ಮಾಡಿದ್ದರು. ಮಹಿಳೆಯರು, ಯುವಕರು ಕಲ್ಲು ತೂರಾಟ ಮಾಡಿದರು. ಘಟನೆಯಲ್ಲಿ ಐವರು ಪೇದೆಗಳು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲ್ಲು ತೂರಾಟ ಮಾಡಿದ ಆರೋಪದ ಮೇಲೆ ಎಂಟು ಜನರನ್ನು ವಶಕ್ಕೆ ಪಡೆಯಲಾಗಿದೆ. ನಾಪತ್ತೆ ಆದವರಿಗಾಗಿ ತೀವ್ರ ಹುಡುಕಾಟ ಮಾಡಲಾಗ್ತಿದೆ. ಹನ್ನೆರಡು ಜನ ಪುರುಷರು ಸೇರಿದಂತೆ ಐವತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಐವರು ಮುಸ್ಲಿಂ ಮಹಿಳೆಯರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 143, 147, 148, 324, 353, 332, 504 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಸವಿನಕಟ್ಟೆ ಗ್ರಾಮದ ಮಸೀದಿಯಲ್ಲಿ ಲಾಕ್ ಡೌನ್ ಆದೇಶದ ನಡುವೆಯೂ ನಮಾಜ್ ಮಾಡುತ್ತಿದ್ದ 72 ಮಂದಿಗೆ ಎಚ್ಚರಿಕೆ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ನಮಾಜ್ ಮಾಡುತ್ತಿದ್ದ 72 ಮಂದಿಗೆ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಪೊಲೀಸರ ಸೂಚನೆ ಕೊಟ್ಟಿದ್ದಾರೆ. ಇವರಲ್ಲಿ 7 ಮಂದಿಗೆ ಜ್ವರದ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. uಳಿದವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಕುಂಸಿ‌ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಇನ್ನು ಪಕ್ಕದ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಹುನಗುಂದ ಮತ್ತು ಹರಗನಹಳ್ಳಿಯ ಮಸೀದಿಯಲ್ಲೂ ಪ್ರತ್ಯೇಕವಾಗಿ ಎರಡು ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ಹದಿನೈದು ಜನ‌ರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಶಿರಸಿ ನಗರದ ಕನವಳ್ಳಿ ಗಲ್ಲಿಯ ಖೂಬಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಯುವಕರು ಯತ್ನಿಸಿದ್ದರು. ಇವರನ್ನು ಡ್ರೋನ್ ಕ್ಯಾಮೇರಾ ಸಹಾಯದಿಂದ ಪತ್ತೆ ಹಚ್ಚಿದ ಶಿರಸಿ ಮಾರುಕಟ್ಟೆ ಪೊಲೀಸರು, ಸ್ಥಳಕ್ಕೆ ತೆರಳಿ ಖಲಂದರ್, ರಿಯಾಜ್, ಇಬ್ರಾಹಿಂ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರು ಪರಾರಿ ಆಗಿದ್ದಾರೆ.

ಹಾಸನದ ಅರಸೀಕೆರೆಯಲ್ಲೂ ಲಾಕ್ ಡೌನ್ ಆದೇಶಕ್ಕೆ ಕ್ಯಾರೇ ಎನ್ನದ ಮುಸ್ಲಿಮರು, ನಿಯಮ ಮೀರಿ ನಮಾಜ್ ಮಾಡಲು ಯತ್ನಿಸಿದ್ದರು. ಹಾಸನ ರಸ್ತೆಯ ಮಸೀದಿಯಲ್ಲಿ ನಮಾಜ್ ಮಾಡಲು ಆಗಮಿಸಿದ್ದ ಯುವಕರ ಗುಂಪನ್ನು ಮಸೀದಿ ಮೌಲ್ವಿಯೇ ತಡೆದರು. ಮಸೀದಿಯಲ್ಲಿ ನಮಾಜ್ ಮಾಡಲು ಮೌಲ್ವಿ ಅವಕಾಶ ನೀಡಿದಿದ್ದರೂ ಮಸೀದಿ ಸಮೀಪವೇ ನಮಾಜ್‌ಗೆ ಮುಂದಾದರು. ತಡೆಯಲು ಮುಂದಾದ ಪೊಲೀಸರ ಜೊತೆ ಯುವಕರು ಮಾತಿನ ಚಕಮಕಿ ನಡೆಸಿದ್ರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಯುವಕರನ್ನು ವಶಕ್ಕೆ ಪಡೆಯಲಾಯ್ತು. 7 ಮಂದಿ ಯುವಕರನ್ನ ವಶಕ್ಕೆ ಪಡೆಯುತ್ತಿದ್ದಂತೆ 6 ಮಂದಿ ಯುವಕರು ಪರಾರಿ ಆದರು. ಇನ್ನು ಅತ್ತ ಗಣಿನಾಡು ಬಳ್ಳಾರಿಯಲ್ಲೂ ಮುಸ್ಲಿಮರ ಉದ್ಧಟತನ ಎಲ್ಲೆ ಮೀರಿತ್ತು. ಹಗರಿಬೊಮ್ಮನಹಳ್ಳಿ ತಾಲೂಕಿನ ಬಲ್ಲಾಹುಣ್ಸಿ ಗ್ರಾಮದ ಮಸೀದಿಯಲ್ಲಿ 30ಕ್ಕೂ ಹೆಚ್ಚು ಜನರು ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು. ಈ ವೇಳೆ ಆಗಮಿಸಿದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದರು. ಹರ ಕಲ್ಯಾಣ ಮಂಟಪದ ಚಿಕಿತ್ಸಾ ಘಟಕದಲ್ಲಿ ಎಲ್ಲರಿಗೂ ಸ್ಕ್ರೀನಿಂಗ್ ಮಾಡಿಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಯ್ತು.

Bengaluru: Messages displayed outside mosques in Shivajinagar requesting people to offer Friday prayers at home, during #CoronavirusLockdown. #Karnataka pic.twitter.com/PcNTHGwslV

— ANI (@ANI) April 3, 2020


ADVERTISEMENT

ಎಲ್ಲಾ ಧರ್ಮಗಳಿಗೂ ಅವರದ್ದೇ ಆದ ನಂಬಿಕೆಗಳು ಇರುತ್ತವೆ. ಅವುಗಳನ್ನು ಪಾಲಿಸಿಕೊಂಡು ಬಂದವರು ತಮ್ಮ ತಮ್ಮ ಆಚರಣೆಗಳನ್ನು ಮುಂದುವರಿಸುತ್ತಾರೆ. ಆದರೆ ಇದೀಗ ದೇಶವೇ ಲಾಕ್ ಡೌನ್ ಆಗಿದೆ. 144 ಸೆಕ್ಷನ್ ನಿಷೇಧಾಜ್ಞೆ ಜಾರಿಯಾಗಿದೆ. ಹಿಂದೂಗಳು, ಕ್ರೈಸ್ತರರು ಸೇರಿದಂತೆ ಯಾರೇ ಆಗಿರಲಿ ತಮ್ಮ ಧಾರ್ಮಿಕ ಕೇಂದ್ರಗಳಳಿಗೆ ತೆರಳಿ ಗುಂಪು ಗುಂಪಾಗಿ ಪ್ರಾರ್ಥನೆ ಮಾಡದಂತೆ ಸೂಚನೆ ಕೊಡಲಾಗಿದೆ. ಹಿಂದೂಗಳ ದೇವಸ್ಥಾನ, ಕ್ರೈಸ್ತರ ಚರ್ಚ್ ಗಳು ಬಾಗಿಲು ಹಾಕಿವೆ. ಆದರೂ ಮುಸ್ಲಿಮರು ಉದ್ಧಟತನ ಮೆರೆಯುತ್ತ ನಾವು ಪ್ರಾರ್ಥನೆ ಮಾಡಿಯೇ ಸಿದ್ಧ ಎನ್ನುವ ಮನಸ್ಥಿತಿಗೆ ಬಂದಂತಿದೆ. ದೆಹಲಿಯಲ್ಲಿ ಸಭೆ ಸೇರಿದ್ದು, ಪ್ರಾರ್ಥನೆ ಮಾಡಿದ್ದು ಅಪರಾಧವಲ್ಲ. ಆದರೆ ಅಲ್ಲಿಂದ ಬಂದವರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ, ಕೆಲವರು ಸಾವನ್ನಪ್ಪಿದ್ದಾರೆ. ಎಲ್ಲರೂ ಸ್ವಯಂ ಪ್ರೇರಣೆಯಿಂದ ಬಂದು ತಪಾಸಣೆಗೆ ಒಳಗಾಗಬೇಕು ಎಂದು ಮನವಿ ಮಾಡಿದ್ದರೂ ಬರುತ್ತಿಲ್ಲ. ಕದ್ದು ಮುಚ್ಚಿ ಓಡಾಡುತ್ತಾ ಇದ್ದಾರೆ ಎಂದರೆ ಏನರ್ಥ? ಇನ್ನೂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜಿದ್ದಿಗೆ ಬಿದ್ದು ಪ್ರಾರ್ಥನೆ ಮಾಡುತ್ತಾರೆ. ಗುಂಪು ಸೇರುವಂತಿಲ್ಲ, ಸೋಷಿಯಲ್ ಡಿಸ್ಟೆನ್ಸ್ ಅಷ್ಟೇ ಕರೋನಾಗೆ ಇರುವ ಮದ್ದು ಎಂದು ಬಾಯಿ ಬಡಿದುಕೊಂಡರೂ ತಮ್ಮ ಹಠ ಏಕೆ ಬಿಡುತ್ತಿಲ್ಲ? ಇವರಿಗೆ ಕರೋನಾ ಮಹಾಮಾರಿ ತಡೆಗಟ್ಟುವ ಉದ್ದೇಶ ವಿಫಲವಾಗಬೇಕೆಂಬ ಉದ್ದೇಶ ಇದೆಯಾ ಎನ್ನುವ ಅನುಮಾನ ದಟ್ಟವಾಗುತ್ತದೆ.

ದೇಶದಲ್ಲಿ ಸಂವಿಧಾನ ಎಲ್ಲರಿಗೂ ಒಂದೇ. ಹಿಂದೂಗಳಲ್ಲಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯಿಂದ ಆದೇಶ ಮಾಡಿ ಬಾಗಿಲು ಬಂದ್ ಮಾಡಿರುವಂತೆ ಅಲ್ಪಸಂಖ್ಯಾತ ಇಲಾಖೆ ಹಾಗೂ ವಕ್ಫ್ ಬೋರ್ಡ್ ಮೂಲಕ ಮಸೀದಿಗಳಲ್ಲಿ ಮೌಲ್ವಿಗಳು ಪ್ರಾರ್ಥನೆಗೆ ಅವಕಾಶ ಕೊಡದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಆದೇಶ ಉಲ್ಲಂಘನೆ ಮಾಡಿದರೆ, ಮೌಲ್ವಿಯೂ ಸೇರಿದಂತೆ ಪಾಲ್ಗೊಂಡ ಎಲ್ಲರ ಮೇಲೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ದೇವಸ್ಥಾನದಲ್ಲೇ ಪೂಜೆ ಸಲ್ಲಿಸುವ ನಂಬಿಕೆ ಇಟ್ಟುಕೊಂಡಿರುವ ಹಿಂದೂಗಲೇ ದೇವಸ್ಥಾನದ ಬಾಗಿಲು ನೋಡದೆ ಇರುವಾಗ ಎಲ್ಲಿ ಬೇಕಾದರೂ ಪ್ರಾರ್ಥನೆ ಸಲ್ಲಿಸಲು ಅವಕಾಶ ಇರುವಾಗ ಕೆಲವು ಮುಸ್ಲಿಮರ ಮೊಂಡುತನ ದೇಶದ ಆರೋಗ್ಯಕ್ಕೆ ಮಾರಕ ಆಗುತ್ತಿದೆಯೇ ಎನ್ನುವ ಆತಂಕವನ್ನು ಉಂಟು ಮಾಡಿದೆ. ಸರ್ಕಾರ ಸೂಕ್ತ ಕ್ರಮ ಜರುಗಿಸಿ ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಅರ್ಥ ಮಾಡಿಸಬೇಕಿದೆ.

Tags: Corona VirusLockdownNamazಕರೋನಾ ಭೀತಿಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಲಾಕ್‌ಡೌನ್‌
Previous Post

ಚಪ್ಪಾಳೆ ತಟ್ಟಿಸುವ, ದೀಪ ಹಚ್ಚಿಸುವ ಪ್ರಧಾನಿ ಮೋದಿ ನಿರ್ಧಾರ ಮೂರ್ಖತನದ್ದೇ? ಜಾಣತನದ್ದೇ?

Next Post

ಗಾಳಿಯಲ್ಲೂ ಹರಡುವುದೇ ಕರೋನಾ? ಹೊಸ ಸಂಶೋಧನೆ ಹೇಳುವುದೇನು?

Related Posts

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
0

ಜೆಡಿಎಸ್ Janata Dal (Secular) ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ “ಒಂಟಿಯಾಗಿ ಸ್ಪರ್ಧಿಸುತ್ತೇವೆ” ಎಂಬ ಘೋಷಣೆ ಮಾಡಿದೆ. ಪಕ್ಷದ ನಾಯಕರು ಇದನ್ನು ಧೈರ್ಯದ ಹೆಜ್ಜೆ, ಸ್ವತಂತ್ರ ರಾಜಕೀಯದ ಸಂಕೇತ...

Read moreDetails
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

January 28, 2026
ಸಂಜಯ್ ಗಾಂಧಿಯಿಂದ ಇಲ್ಲಿಯವರೆಗೆ ಆಕಾಶಯಾನದಿಂದ ಮೃತ್ಯು ಕಂಡ ಭಾರತದ ಗಣ್ಯರು

ಸಂಜಯ್ ಗಾಂಧಿಯಿಂದ ಇಲ್ಲಿಯವರೆಗೆ ಆಕಾಶಯಾನದಿಂದ ಮೃತ್ಯು ಕಂಡ ಭಾರತದ ಗಣ್ಯರು

January 28, 2026
Ajit Pawar: ಅಜಿತ್ ಪವಾರ್ ದುರ್ಮರಣ: ಸಿಎಂ ಸಿದ್ದರಾಮಯ್ಯ ಸಂತಾಪ

Ajit Pawar: ಅಜಿತ್ ಪವಾರ್ ದುರ್ಮರಣ: ಸಿಎಂ ಸಿದ್ದರಾಮಯ್ಯ ಸಂತಾಪ

January 28, 2026
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

January 28, 2026
Next Post
ಗಾಳಿಯಲ್ಲೂ ಹರಡುವುದೇ ಕರೋನಾ? ಹೊಸ ಸಂಶೋಧನೆ ಹೇಳುವುದೇನು?

ಗಾಳಿಯಲ್ಲೂ ಹರಡುವುದೇ ಕರೋನಾ? ಹೊಸ ಸಂಶೋಧನೆ ಹೇಳುವುದೇನು?

Please login to join discussion

Recent News

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?
Top Story

BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

by ಪ್ರತಿಧ್ವನಿ
January 28, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

by ನಾ ದಿವಾಕರ
January 28, 2026
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada