• Home
  • About Us
  • ಕರ್ನಾಟಕ
Tuesday, October 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭಾರತಕ್ಕೆ ಬರುತ್ತಿವೆ ಆಫ್ರಿಕಾ ಚೀತಾಗಳು; ಯಶ ಕಾಣಲಿದೆಯೇ ಈ ಪ್ರಯೋಗ?

by
February 24, 2020
in ದೇಶ
0
ಭಾರತಕ್ಕೆ ಬರುತ್ತಿವೆ ಆಫ್ರಿಕಾ ಚೀತಾಗಳು; ಯಶ ಕಾಣಲಿದೆಯೇ ಈ ಪ್ರಯೋಗ?
Share on WhatsAppShare on FacebookShare on Telegram

ಏಳು ದಶಕಗಳ ಹಿಂದೆ ದೇಶದ ಕಾಡುಗಳಿಂದ ಕಣ್ಮರೆಯಾದ ಏಷ್ಯಾಟಿಕ್ ಚೀತಾಗಳ ದೂರದ ಸಹೋದರ ಸಂಬಂಧಿಗಳಾದ ಆಫ್ರಿಕನ್ ಚೀತಾಗಳನ್ನು ಭಾರತದ ವನ್ಯಸಂಕುಲದ ವ್ಯವಸ್ಥೆಗೆ ಪರಿಚಯಿಸಲು ಸಿದ್ಧತೆಗಳು ನಡೆಯುತ್ತಿವೆ.

ADVERTISEMENT

ಭೂಮಿ ಮೇಲಿನ ಅತ್ಯಂತ ವೇಗವಾಗಿ ಓಡಬಲ್ಲ ಪ್ರಾಣಿಗಳಾದ ಈ ಚೀತಾಗಳು ಇರಲು ಅಗತ್ಯವಿರುವ ವಾತಾವರಣ ಹಾಗೂ ಭೌಗೋಳಿಕ ಪರಿಸ್ಥಿತಿಗಳನ್ನು ಮರು ನಿರ್ಮಿಸಲಾಗಿದ್ದು, ದೇಶದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಕಳೆದು ಹೋದ ವನ್ಯಸಂಕುಲದ ಪರಂಪರೆಗೆ ಮರುಜೀವ ನೀಡಬಹುದಾಗಿದೆ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ (WII) ಹಿರಿಯ ವಿಜ್ಞಾನಿ ವೈ.ವಿ. ಝಲಾ ತಿಳಿಸಿದ್ದಾರೆ.

ವಲಸಿಗ ಪ್ರಬೇಧಗಳು ಹಾಗೂ ವನ್ಯಜೀವಿಗಳ ಸಂರಕ್ಷಣೆ ಸಂಬಂಧ ನಡೆ ಸಭೆಯೊಂದರಲ್ಲಿ ಮಾತನಾಡಿದ ಅವರು, ಆಫ್ರಿಕಾದ ಚೀತಾಗಳನ್ನು ಕರೆತಂದು ಭಾರತದಲ್ಲಿ ಅವಕ್ಕೆ ಸೂಕ್ತವಾಗಿರುವ ಪ್ರದೇಶದಲ್ಲಿ ಬಿಟ್ಟು, ಅವುಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಬಲ್ಲವೇ ಎಂದು ಪರೀಕ್ಷಿಸಲು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಅನುಮತಿ ನೀಡಿದ ವಿಚಾರವಾಗಿ ಮಾತನಾಡುತ್ತಾ ಹೀಗೆ ತಿಳಿಸಿದ್ದಾರೆ.

“ಚೀತಾಗಳು ನಶಿಸಿ ಹೋಗಲು ಪ್ರಮುಖ ಕಾರಣವೆಂದರೆ ವ್ಯಾಪಕವಾದ ಬೇಟೆ ಹಾಗೂ ನಿಯಂತ್ರಣವಿಲ್ಲದ ಜನಸಂಖ್ಯೆಯ ಹೆಚ್ಚಳವಾಗಿರುವ ಜೊತೆ ಚೀತಾಗಳ ವಾಸಸ್ಥಾನಗಳನ್ನು ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಅತಿಕ್ರಮಣ ಮಾಡಿಕೊಂಡಿರುವುದಾಗಿದೆ,” ಎಂದು ಝಾಲಾ ವಿವರಿಸುತ್ತಾರೆ.

“ವಾಸಸ್ಥಗಳ ಪುನರ್‌ ನಿರ್ಮಾಣವು ಜಾಗತಿಕವಾಗಿ ಸಾಮಾನ್ಯವಾದ ವಿಚಾರವಾಗಿಬಿಟ್ಟಿದೆ. ಚೀತಾಗಳು ಇರಲು ಸೂಕ್ತವಾದ ವಾತಾವರಣಗಳನ್ನು ನಾವು ಸೃಷ್ಟಿಸಿದ್ದೇವೆ. ಆರ್ಥಿಕ ಚೈತನ್ಯದ ಜೊತೆಗೆ ರಾಜಕೀಯ ಇಚ್ಛಾಶಕ್ತಿ ಹಾಗೂ ಸರ್ಕಾರದ ಕ್ರಿಯಾಯೋಜನೆಗಳ ಮೂಲಕ ಚೀತಾಗಳನ್ನು ಭಾರತಕ್ಕೆ ಕರೆತರಲು ಬೇಕಾದ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಬಹುದಾಗಿದೆ,” ಎಂದು ಆಶಾಭಾವನೆ ವ್ಯಕ್ತಪಡಿಸುತ್ತಾರೆ ಝಾಲಾ.

ನಮೀಬಿಯಾಗೂ ಮುನ್ನ ಇರಾನ್‌ ಅನ್ನು ಈ ವಿಚಾರವಾಗಿ ಸಂಪರ್ಕಿಸಿದ್ದ ಭಾರತ, ಏಷ್ಯಾಟಿಕ್ ಚೀತಾಗಳನ್ನು ನೀಡಲು ಕೋರಿದ್ದ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಳ್ಳಲು ವಿಫಲವಾಗಿತ್ತು. ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (IUCN) ಕೆಂಪು ಪಟ್ಟಿಗೆ ಸೇರಿಸುವ ಮಟ್ಟಿಗೆ ವಿರಳಾತಿವಿರಳವಾಗಿಬಿಟ್ಟಿರುವ ಏಷ್ಯಾಟಿಕ್ ಚೀತಾಗಳು ಸದ್ಯ ಇರಾನ್‌ನಲ್ಲಿ ಮಾತ್ರವೇ ಕಾಣಸಿಗುತ್ತವೆ.

1990ರ ದಶಕದ ಆರಂಭದಲ್ಲಿ 400ರಷ್ಟಿದ್ದ ಈ ಚೀತಾಗಳ ಸಂಖ್ಯೆಯು ಇಂದಿಗೆ 50-70ಕ್ಕೆ ಕುಸಿದಿದೆ. ವ್ಯಾಪಕವಾದ ಬೇಟೆ, ಕಳ್ಳಸಾಗಾಟ, ಚೀತಾಗಳ ಪ್ರಮುಖ ಆಹಾರ ಮೂಲವಾದ ಗಝೇಲ್‌ಗಳ ಬೇಟೆ ಹಾಗೂ ಅವುಗಳ ವಾಸಸ್ಥಾನದ ಅತಿಕ್ರಮಣಗಳ ಕಾರಣದಿಂದ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಏಷ್ಯಾಟಿಕ್ ಹಾಗೂ ಆಫ್ರಿಕಾ ಚೀತಾಗಳ ನಡುವೆ ಅಷ್ಟೊಂದು ವ್ಯತ್ಯಾಸಗಳೇನೂ ಕಾಣಸಿಗುವುದಿಲ್ಲ ಎನ್ನುತ್ತಾರೆ ಜಾರ್ಖಂಡ್ ಮೂಲದ ಪರಿಸರ ಸಂರಕ್ಷಕ ರಾಜಾ ಕಾಜ್ಮಿ.

ಭಾರತದಲ್ಲಿದ್ದ ಏಷ್ಯಾಟಿಕ್ ಚೀತಾಗಳಿಗೆ ಏನಾಯಿತು?

ಭಾರತದಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಏಷ್ಯಾಟಿಕ್ ಚೀತಾವನ್ನು 1947ರಲ್ಲಿಯೇ ಕೋರಿಯಾದ (ಇಂದಿನ ಛತ್ತೀಸ್‌ಘಡಸಲ್ಲಿದೆ) ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್‌ ದೇವ್‌ ಬೇಟೆಯಾಡಿ ಕೊಂದಿದ್ದರು. ಅದೇ ವರ್ಷದಲ್ಲಿ, ತನ್ನದೇ ಪ್ರಾಂತ್ಯದಲ್ಲಿದ್ದ ಇದೇ ಚೀತಾದ ಸಹೋದರ ಸಂಬಂಧಿಗಳಾದ ಇನ್ನೂ ಮೂರು ಚೀತಾಗಳನ್ನು ಬೇಟೆಯಾಡಿಬಿಟ್ಟಿದ್ದರು. ಇದಾದ ಬಳಿಕವೂ ಸಹ ಇಲ್ಲಿನ ಸುರ್ಗುಜಾ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಗರ್ಭಿಣಿ ಚೀತಾ ಸೇರಿದಂತೆ ಕೆಲವಷ್ಟು ಚೀತಾಗಳು ಇದ್ದಿದ್ದಾಗಿ ಕೇಳಿ ಬರುತ್ತಿದ್ದವು.

ಆಂಧ್ರ ಪ್ರದೇಶ – ಒಡಿಶಾ ಗಡಿ ಹಾಗೂ ಆಂಧ್ರದ ಚಿತ್ತೂರು ಜಿಲ್ಲೆಯಲ್ಲೂ ಸಹ 1951-52ರ ಅವಧಿಯಲ್ಲಿ ಕೆಲವಷ್ಟು ಚಿರತೆಗಳು ಕಣ್ಣಿಗೆ ಕಾಣಿಸಿಕೊಂಡಿದ್ದವು. ಭಾರತದಲ್ಲಿ ಚೀತಾಗಳು ಕಣ್ಣಿಗೆ ಕಾಣಿಸಿಕೊಂಡ ವಿಚಾರವನ್ನು ಇದೇ ಕಡೆಯ ಬಾರಿಗೆ ನಂಬಲರ್ಹವಾಗಿ ಕೇಳಲಾಯಿತು. 1952ರಲ್ಲಿ ಚೀತಾಗಳು ಭಾರತದಲ್ಲಿ ಆವಾಸನಗೊಂಡಿವೆ ಎಂದು ಅಧಿಕೃತವಾಗಿ ಘೋಷಿಸಲಾಯಿತು. .

ದೇಶದಲ್ಲಿ ಸದ್ಯ ಚೀತಾಗಳು ಇಲ್ಲದೇ ಇರುವ ಕಾರಣ, ಆಫ್ರಿಕಾದ ನಮೀಬಿಯಾದಿಂದ ಈ ಚೀತಾಗಳನ್ನುನ ಕರೆತಂದು ದೇಶದಲ್ಲಿ ಪರಿಚಯಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮುಂದಾಗಿದೆ.

UPA-II ಸರ್ಕಾರದ ಅವಧಿಯಲ್ಲಿ, ಚೀತಾಗಳನ್ನು ದೇಶದಲ್ಲಿ ಮತ್ತೊಮ್ಮೆ ಪರಿಚಯಿಸಬೇಕೆಂದು ಸಂರಕ್ಷಣಾ ತಜ್ಞರು ದನಿ ಏರಿಸಿದ್ದರು. ಆ ಸರ್ಕಾರದ ಅವಧಿಯಲ್ಲಿ ಪರಿಸರ ಹಾಗೂ ಅರಣ್ಯ ಸಚಿವಾಲಯವು ಭಾರತೀಯ ವನ್ಯಜೀವಿ ಸಂಸ್ಥೆಯೊಂದಿಗೆ ಸೇರಿಕೊಂಡು, ದೇಶದ ಅಗ್ರ ಚೀತಾ ತಜ್ಞರಾದ ಡಾ. ಎಂ.ಕೆ. ರಣಜಿತ್‌ ಸಿಂಗ್‌ ಗಾಗೈ ದಿವ್ಯಾಭಾನಿಸಿಂಗ್‌ರನ್ನು ಕನ್ಸಲ್ಟ್‌ ಮಾಡಿ, ಈ ಸಂಬಂಧ ವಿವರವಾದ ಯೋಜನೆಯೊಂದನ್ನು ಸಿದ್ಧಪಡಿಸಿತು.

“ಚೀತಾಗಳನ್ನು ದೊಡ್ಡ ಮಟ್ಟದಲ್ಲಿ ಮತ್ತೆ ಪರಿಚಯಿಸಲು ಯೋಜನೆಯೊಂದನ್ನು ಸಿದ್ಧಪಡಿಸಿದ್ದು, ಪರಿಸರ ವ್ಯವಸ್ಥೆಯ ಕಾರ್ಯವನ್ನು ಸರಿಪಡಿಸಲು ದೊಡ್ಡ ಬೇಟೆಗಾರ ಪ್ರಾಣಿಗಳನ್ನು ಮರುಪರಿಚಯಿಸುವ ಅಗತ್ಯವನ್ನು ಮನಗಾಣಲಾಗಿದೆ. ದೇಶದಲ್ಲಿರುವ ದೊಡ್ಡ ಮಾಂಸಹಾರಿ ಪ್ರಬೇಧಗಳಲ್ಲಿ ಅಳಿದುಹೋಗಿರುವ ಏಕೈಕ ಪ್ರಾಣಿ ಚೀತಾ ಆಗಿದೆ. ಐತಿಹಾಸಿಕ ಕಾಲದಿಂದಲೂ ಅತಿಯಾದ ಬೇಟೆಗೆ ಚೀತಾದ ಪ್ರಬೇಧ ನಶಿಸಿಹೋಗಿದೆ. ನೈತಿಕ ಹಾಗೂ ಪರಿಸರ ಸಂರಕ್ಷಣೆಯ ಕಾರಣಗಳಿಗಾಗಿ ತನ್ನ ಪ್ರಾಕೃತಿಕ ಪರಂಪರೆಯನ್ನು ಮರು ಸೃಷ್ಟಿಸಲು ಭಾರತದ ಬಳಿ ಈಗ ಸಾಕಷ್ಟು ಆರ್ಥಿಕ ಚೈತನ್ಯವಿದೆ,” ಎಂದು 2010ರಲ್ಲಿ ಪರಿಸರ ಸಚಿವಾಲಯ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿತ್ತು.

ದಶಕ ಮೀರಿದ ಈ ಯತ್ನಕ್ಕೆ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಬೆಂಬಲ ಸಿಕ್ಕಿರುವುದರಿಂದ ಚೀತಾದ ಸಂರಕ್ಷಣೆಯ ಕಾರ್ಯ ಯಶ ಕಾಣಲಿ ಎಂದು ಆಶಿಸೋಣ. ಆದರೂ ಸಹ, ದಿನೇ ದಿನೇ ಕ್ಷೀಣಿಸುತ್ತಿರುವ ಹಸಿರು ಹೊದಿಕೆ, ಕಣ್ಮರೆಯಾಗುತ್ತಿರುವ ಹುಲ್ಲುಗಾವಲುಗಳು, ಮಾನವ ಚಟುವಟಿಕೆ ಕಾರಣದಿಂದ ಇರೋ ಬರೋ ಅರಣ್ಯ ಪ್ರದೇಶಗಳ ಒಳಗೆಲ್ಲಾ ಬೆಳೆದುಕೊಳ್ಳುತ್ತಿರುವ ನಗರಗಳು, ಛಿದ್ರವಾಗುತ್ತಿರುವ ವಾಸಸ್ಥಾನಗಳ ನಡುವೆ ಇಂಥ ಒಂದು ಕ್ರಿಯಾಯೋಜನೆ ಯಾವ ಮಟ್ಟಿಗೆ ಫಲಪ್ರದವಾಗಲಿದೆ ಎಂಬುದನ್ನು ಕಾಲವೇ ತಿಳಿಸಬೇಕು.

Tags: African CheetahAsiatic Cheetahಆಫ್ರಿಕಾ ಚೀತಾಏಷ್ಯಾಟಿಕ್ ಚೀತಾ
Previous Post

ಮಹದಾಯಿ ಐ-ತೀರ್ಪಿನ ಅಧಿಸೂಚನೆ ವಿಚಾರದಲ್ಲಿ ಮತ್ತೆ ಗೋವಾ ಪರ ವಾಲುವುದೇ ಕೇಂದ್ರ?

Next Post

ದೆಹಲಿಯಲ್ಲಿ ಭುಗಿಲೆದ್ದ ಸಿಎಎ ಪರ-ವಿರೋಧಿ ಸಂಘರ್ಷ; ಹಿಂಸಾಚಾರಕ್ಕೆ ಪೊಲೀಸ್ ಬಲಿ

Related Posts

ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11200 ನಕಲಿ ಮತದಾರರಿದ್ದಾರೆ.ಸಚಿವ ದಿನೇಶ್ ಗುಂಡೂರಾವ್
Top Story

ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11200 ನಕಲಿ ಮತದಾರರಿದ್ದಾರೆ.ಸಚಿವ ದಿನೇಶ್ ಗುಂಡೂರಾವ್

by ಪ್ರತಿಧ್ವನಿ
October 26, 2025
0

ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11200 ನಕಲಿ ಮತದಾರರಿದ್ದಾರೆ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಲ್ಲಿ ಇಂದು ಸನ್ ರೈಸ್ ಸರ್ಕಲ್ ನಲ್ಲಿ ಮತಗಳ್ಳತನ "ವೋಟ್ ಚೋರಿ" ವಿರುದ್ಧ ನಡೆಯುತ್ತಿರುವ...

Read moreDetails
ಹೆಣ್ಣು ಜೀವ – ಎಳೆಯ ಭ್ರೂಣ ಮತ್ತು ಸಾಮಾಜಿಕ ಪ್ರಜ್ಞೆ

ಹೆಣ್ಣು ಜೀವ – ಎಳೆಯ ಭ್ರೂಣ ಮತ್ತು ಸಾಮಾಜಿಕ ಪ್ರಜ್ಞೆ

October 26, 2025
ಶಬರಿಮಲೆ ದೇವಸ್ಥಾನದಲ್ಲಿ ಅರ್ಚಕನಿಂದ ಚಿನ್ನ‌ ಕದ್ದ ಪ್ರಕರಣ..

ಶಬರಿಮಲೆ ದೇವಸ್ಥಾನದಲ್ಲಿ ಅರ್ಚಕನಿಂದ ಚಿನ್ನ‌ ಕದ್ದ ಪ್ರಕರಣ..

October 25, 2025
ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

October 23, 2025
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025
Next Post
ದೆಹಲಿಯಲ್ಲಿ ಭುಗಿಲೆದ್ದ ಸಿಎಎ ಪರ-ವಿರೋಧಿ ಸಂಘರ್ಷ; ಹಿಂಸಾಚಾರಕ್ಕೆ ಪೊಲೀಸ್ ಬಲಿ

ದೆಹಲಿಯಲ್ಲಿ ಭುಗಿಲೆದ್ದ ಸಿಎಎ ಪರ-ವಿರೋಧಿ ಸಂಘರ್ಷ; ಹಿಂಸಾಚಾರಕ್ಕೆ ಪೊಲೀಸ್ ಬಲಿ

Please login to join discussion

Recent News

ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ
Top Story

ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ

by ಪ್ರತಿಧ್ವನಿ
October 28, 2025
ಕೆರೆ ಅಭಿವೃದ್ಧಿ ಮಾಡ್ತೀನಿ ಅಂತ ಹೇಳುತ್ತಾರೆ ಕೆರೆ ಅಭಿವೃದ್ಧಿ ಯಾವಾಗ
Top Story

ಕೆರೆ ಅಭಿವೃದ್ಧಿ ಮಾಡ್ತೀನಿ ಅಂತ ಹೇಳುತ್ತಾರೆ ಕೆರೆ ಅಭಿವೃದ್ಧಿ ಯಾವಾಗ

by ಪ್ರತಿಧ್ವನಿ
October 28, 2025
ಸಚಿವ ಸ್ಥಾನ ನೀಡಲಿ ಅನ್ನೋದು ನಮ್ಮ ಒತ್ತಾಯ ಹಾನಗಲ್ ಶಾಸಕ ಶ್ರೀನಿವಾಸ ಮಾನೆ
Top Story

ಸಚಿವ ಸ್ಥಾನ ನೀಡಲಿ ಅನ್ನೋದು ನಮ್ಮ ಒತ್ತಾಯ ಹಾನಗಲ್ ಶಾಸಕ ಶ್ರೀನಿವಾಸ ಮಾನೆ

by ಪ್ರತಿಧ್ವನಿ
October 28, 2025
ಅಂಡರ್ ಬ್ರಿಡ್ಜ್ ನಲ್ಲಿ ಸಿಲುಕಿಕೊಂಡ ಕಂಟೇನರ್
Top Story

ಅಂಡರ್ ಬ್ರಿಡ್ಜ್ ನಲ್ಲಿ ಸಿಲುಕಿಕೊಂಡ ಕಂಟೇನರ್

by ಪ್ರತಿಧ್ವನಿ
October 28, 2025
ಸಿಎಂ ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತೇವೆ: ಡಿಸಿಎಂ ಡಿ.ಕೆ. ಶಿ
Top Story

ಸಿಎಂ ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತೇವೆ: ಡಿಸಿಎಂ ಡಿ.ಕೆ. ಶಿ

by ಪ್ರತಿಧ್ವನಿ
October 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ: ಸಿ.ಎಂ

ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ: ಸಿ.ಎಂ

October 28, 2025
ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ

ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada