• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪುಲ್ವಾಮಾ ದಾಳಿಗೆ ಒಂದು ವರ್ಷ

by
February 14, 2020
in ದೇಶ
0
ಪುಲ್ವಾಮಾ ದಾಳಿಗೆ ಒಂದು ವರ್ಷ
Share on WhatsAppShare on FacebookShare on Telegram

ಫೆಬ್ರವರಿ 14, 2019, ಸಿಆರ್‌ಪಿಎಫ್ ಯೋಧರ ಮೇಲೆ ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹತ್ಯಾ ಬಾಂಬರ್ ನಡೆಸಿದ ದಾಳಿ ನಿಜಕ್ಕೂ ಇಡೀ ದೇಶವನ್ನೇ ಭೀತಿಗೊಳಿಸಿತ್ತು. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಜೈಷ್ ಎ ಮೊಹಮದ್ಗೆ ಸೇರಿದ ಆದಿಲ್ ಅಹ್ಮದ್ ದಾರ್ ಎಂಬಾತ, ಸ್ಫೋಟಕ ತುಂಬಿದ ವಾಹನವನ್ನು ಸಿಆರ್‌ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸಿ, ಸ್ಫೋಟ ಮಾಡಲಾಗಿತ್ತು. 40 ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದರು. ಕಳೆದ ಒಂದು ವರ್ಷದಿಂದಲೂ ರಾಷ್ಟ್ರೀಯ ತನಿಖಾ ದಳ ಪುಲ್ವಾಮಾ ಬಾಂಬ್ ದಾಳಿ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದೆ. ಆದರೆ ಇಲ್ಲೀವರೆಗೂ ಯಾವುದೇ ಪ್ರಗತಿ ಕಾಣಿಸಿಲ್ಲ. ಕನಿಷ್ಟ ಪಕ್ಷ ಉಗ್ರ ಆದಿಲ್ ಆಹ್ಮದ್ ದಾರ್, ಕಾರ್‌ನಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕವನ್ನು ತುಂಬಿಕೊಂಡು ಬರಲು ಸಾಧ್ಯವಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಇನ್ನು ಕೂಡ ಉತ್ತರ ಸಿಕ್ಕಿಲ್ಲ.

ADVERTISEMENT

ಪುಲ್ವಾಮಾ ಉಗ್ರ ದಾಳಿಗೆ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆದರೆ ಮೋಸದ ದಾಳಿಗೆ ಬಲಿಯಾದ ಯೋಧರ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣದಿರುವುದು ನೊಂದ ಕುಟುಂಬಗಳ ದುಃಖ ಇಮ್ಮಡಿಸುವಂತೆ ಮಾಡಿದೆ. ಪುಲ್ವಾಮಾ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದ ಶಂಕಿತ ಉಗ್ರರು ಯಾರೂ ಬದುಕಿಲ್ಲದ ಕಾರಣಕ್ಕೆ ಯಾರ ಮೇಲೂ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗ್ತಿದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕವನ್ನು ಅಂಗಡಿಯಿಂದ ಖರೀದಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ಹಿರಿಯ ಸೇನಾ ಅಧಿಕಾರಿ. ಜೊತೆಗೆ ಯುದ್ಧದಲ್ಲಿ ಬಳಕೆಯಾಗಿರುವ ಅಮ್ಯುನೇಷನ್ ಅನ್ನು ಮಿಲಿಟರಿ ಸ್ಟೋರ್‌ಗಳಲ್ಲಿ ಶೇಖರಣೆ ಮಾಡಲಾಗಿತ್ತದೆ. ಫಾರೆನ್ಸಿಕ್ ರಿಪೋರ್ಟ್ ಹೊರಬಿದ್ದಿದ್ದು, 25 ಕೆಜಿ ಪ್ಲಾಸ್ಟಿಕ್ ಸ್ಫೋಟಕ ತುಂಬಿದ್ದರು ಎನ್ನುವುದು ಪತ್ತೆಯಾಗಿದೆ.

ಪುಲ್ವಾಮಾ ದಾಳಿಗೂ ಮೊದಲ 10 ದಿನಗಳ ಮುಂಚೆ ಈ ಕಾರ್ ಖರೀದಿ ಮಾಡಿದ್ದರು ಎನ್ನುವು ಅಂಶ ಬಯಲಾಗಿದೆ. ಆದರೆ ಸರ್ಕಾರ, ತನಿಖಾ ಸಂಸ್ಥೆ ನಿಖರ ಸಾಕ್ಷಿ, ಉದ್ದೆಶ ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಆದರೆ 40 ಸೈನಿಕರು ಹುತಾತ್ಮರಾದ ನೆನಪಿಗಾಗಿ ಇಂದು ಸ್ಮಾರಕ ಉದ್ಘಾಟನೆ ಮಾಡಲಾಗುತ್ತಿದೆ. ಲೆತ್ಪೋರಾ ಕ್ಯಾಂಪ್ನಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಈ ಮೂಲಕ ನಾವು ಕಳೆದುಕೊಂಡ ಯೋಧರನ್ನು ಸ್ಮರಿಸಲಾಗುತ್ತಿದೆ ಎಂದು ಸಿಆರ್‌ಪಿಎಫ್ ಅಡಿಷನಲ್ ಡೈರೆಕ್ಟರ್ ಜನರಲ್ ಜುಲ್ಫಿಕರ್ ಹಸನ್ ತಿಳಿಸಿದ್ದಾರೆ. ಈ ಸ್ಮಾರಕದಲ್ಲಿ 40 ಮಂದಿ ಹುತಾತ್ಮರಾದ ಯೋಧರ ಹೆಸರಿನ ಜೊತೆ ಅವರ ಫೋಟೋ ಕೂಡ ಹಾಕಲಾಗಿದೆ. ಹುತಾತ್ಮ ಸ್ಮಾರಕಕ್ಕೆ ಸೆವಾ ಮತ್ತು ನಿಶ್ಟಾ ಎಂದು ನಾಮಕರಣ ಮಾಡಲಾಗಿದೆ. ಈ ಸ್ಥಳ ಘಟನೆ ನಡೆದ ಸ್ಥಳದಿಂದ ಕೇವಲ 2 ಕಿಲೋ ಮೀಟರ್ ದೂರವಿದ್ದು, 185 ಬೆಟಾಲಿಯನ್ ಯೋಧರಿಂದ ಗೌರ ಸಲ್ಲಿಸಲಾಗುತ್ತದೆ.

ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನೆ ಬಾಲಾಕೋಟ್ ಮೇಲೆ ನಡೆಸಿದ ವಾಯುದಾಳಿ ಪಾಕಿಸ್ತಾನದಲ್ಲಿ ಅದೆಷ್ಟು ಜನರನ್ನು ಬಲಿ ಪಡೆಯಿತು ಎನ್ನುವ ಮಾಹಿತಿ ಕೂಡ ಬರಲಿಲ್ಲ. ಆದರೆ ಅದೇ ಪುಲ್ವಾಮಾ ದಾಳಿ 2019ರ ಲೋಕಸಭಾ ಚುನಾವಣೆಯಲ್ಲಿ ಹಾಟ್ ಕೇಕ್ ರೀತಿ ಸೇಲಾಯ್ತು. ಪುಲ್ವಾಮಾ ದಾಳಿ ಬಳಿಕ ಬಾಲಕೋಟ್ ಏರ್ಸ್ಟ್ರೈಕ್ ಜನರನ್ನು ಬಿಜೆಪಿಯತ್ತ ವಾಲುವಂತೆ ಮಾಡಿತ್ತು. ಅದೇ ಬಿಸಿಯಲ್ಲಿ ದೇಶಪ್ರೇಮದ ರಾಜಕಾರಣ ಮಾಡಿದ್ದ ಬಿಜೆಪಿ ನಾಯಕರು ಪುಲ್ವಾಮಾ ದಾಳಿಯ ಲಾಭ ಪಡೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಇನ್ನು ಮುಂದಾದರೂ ನಾವು ಕಳೆದುಕೊಂಡ ಯೋಧರ ಆತ್ಮಕ್ಕೆ ಶಾಂತಿ ಸಿಗುವಂತಾಗಬೇಕಿದೆ. ಕೇವಲ ರಾಜಕೀಯ ಪಡೆದುಕೊಂಡು ಸುಮ್ಮನಾದರೆ ದೇವರು ಕೂಡ ಮೆಚ್ಚುವುದಿಲ್ಲ ಎನಿಸುತ್ತದೆ.

Tags: ಪುಲ್ವಾಮಾಪುಲ್ವಾಮಾ ದಾಳಿ
Previous Post

ದೆಹಲಿ ಚುನಾವಣೆ ಮುಗಿದರೂ ಬಗೆಹರಿಯುತ್ತಿಲ್ಲ ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ಗೊಂದಲ

Next Post

ಎರಡು ನಾಪತ್ತೆ ಪ್ರಕರಣ ಭೇದಿಸಲಾಗದ ಅಮಿತ್ ಶಾ ಉಕ್ಕಿನ ಮನುಷ್ಯ ಪಟೇಲರಿಗೆ ಸಮವೇ? 

Related Posts

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?
Top Story

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

by ಪ್ರತಿಧ್ವನಿ
April 29, 2026
0

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್  ಉತ್ತರ ಪ್ರದೇಶದ ಶಾಸಕಿ ಹಾಗೂ...

Read moreDetails
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
ಎರಡು ನಾಪತ್ತೆ ಪ್ರಕರಣ ಭೇದಿಸಲಾಗದ ಅಮಿತ್ ಶಾ ಉಕ್ಕಿನ ಮನುಷ್ಯ ಪಟೇಲರಿಗೆ ಸಮವೇ? 

ಎರಡು ನಾಪತ್ತೆ ಪ್ರಕರಣ ಭೇದಿಸಲಾಗದ ಅಮಿತ್ ಶಾ ಉಕ್ಕಿನ ಮನುಷ್ಯ ಪಟೇಲರಿಗೆ ಸಮವೇ? 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada