• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಎರಡೆರಡು ಮನೆ ಖರೀದಿಸಬಾರದಂತೆ NRIಗಳು 

by
February 7, 2020
in ದೇಶ
0
ಎರಡೆರಡು ಮನೆ ಖರೀದಿಸಬಾರದಂತೆ NRIಗಳು 
Share on WhatsAppShare on FacebookShare on Telegram

ಕೇಂದ್ರ ಸರ್ಕಾರದಿಂದ ಸರ್ವರಿಗೂ ಸೂರನ್ನೊದಗಿಸುವುದನ್ನು ಖಾತ್ರಿ ಮಾಡುಲು ಕೋರಿದ ಮದ್ರಾಸ್ ಹೈಕೋರ್ಟ್, ದೇಶದಲ್ಲಿ ಅನಿವಾಸಿ ಭಾರತೀಯರು ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಖರೀದಿ ಮಾಡದಂತೆ ನಿಷೇಧ ತರಲು ಸೂಚಿಸಿದೆ.

ADVERTISEMENT

ಅನಿವಾಸಿಗಳಿಗೆ ಮನೆ ಮಾರಾಟವನ್ನು ನಿಷೇಧಿಸಿ, ಎರಡನೇ ಮನೆ ಖರೀದಿ ಮೇಲೆ 100% ತೆರಿಗೆ ವಿಧಿಸಲು ಹೈಕೋರ್ಟ್ ಸೂಚಿಸಿದೆ.

ಕೇಂದ್ರ ಗೃಹ ನಿರ್ಮಾಣ ಹಾಗೂ ವಿತ್ತ ಸಚಿವಾಲಯಗಳನ್ನು ಪಾರ್ಟಿಗಳನ್ನಾಗಿ ಮಾಡಿಕೊಂಡಿರುವ ಮದ್ರಾಸ್ ಹೈಕೋರ್ಟ್‌, ಭಾರತ ಹಾಗೂ ತಮಿಳು ನಾಡಿನಲ್ಲಿ ಅದೆಷ್ಟು ಕುಟುಂಬಗಳಿಗೆ ಮೂಲ ಸೌಕರ್ಯವಾಗಿ ಮನೆಯ ಲಭ್ಯತೆ ಇದೆ ಎಂದು ಉತ್ತರಿಸುವಂತೆ ಕೋರಿ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದೆ. ಕೇಂದ್ರ ಸರ್ಕಾರದ “ಸರ್ವರಿಗೂ ಸೂರು” ಅಭಿಯಾನ ಯಾವಾಗ ಪೂರ್ಣಗೊಳ್ಳಲಿದೆ ಎಂದು ಹೈಕೋರ್ಟ್ ಇದೇ ಸಂದರ್ಭದಲ್ಲಿ ಪ್ರಶ್ನಿಸಿದೆ.

“ದೇಶದಲ್ಲಿರುವ ಸರ್ವರಿಗೂ ಸೂರು ಒದಗಿಸುವ ಉದ್ದೇಶದಿಂದ ಸರ್ಕಾರವೇಕೆ ಒಬ್ಬರಿಗೆ ಒಂದೊಂದೇ ಮನೆ ಎಂಬ ರೀತಿಯ ನಿಯಂತ್ರಣಗಳನ್ನು ಅನುಷ್ಠಾನಕ್ಕೆ ತಂದು ಹಿಂದುಳಿದ ಹಾಗೂ ಆರ್ಥಿವಾಗಿ ದುರ್ಬಲ ವರ್ಗಗಳಾಗಿರುವ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಸಮುದಾಯಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಬಾರದು? ಇಂಥ ಕ್ರಮಗಳ ಮೂಲಕ ದೇಶದಲ್ಲಿ ಗೃಹ ಖರೀದಿಯ ಬೆಲೆಗಳನ್ನೇಕೆ ನಿಯಂತ್ರಣಕ್ಕೆ ತರಬಾರದು,” ಎಂದು ಹೈಕೋರ್ಟ್ ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್‌ ಹಾಗೂ ಅಬ್ದುಲ್‌ ಖುದ್ದೋಸ್ ಇದ್ದ ಪೀಠವು, “ಎರಡನೇ ಮನೆ ಖರೀದಿ ಮಾಡಲು ಬಯಸುವ ಕುಟುಂಬಗಳಿಗೆ ಸರ್ಕಾರವೇಕೆ 100% ತೆರಿಗೆ ವಿಧಿಸಬಾರದು? ಈ ಮೂಲಕ ಒಬ್ಬಬ್ಬರೇ ಹಲವು ಮನೆಗಳನ್ನು ಖರೀದಿ ಮಾಡದಂತೆ ನೋಡಿಕೊಳ್ಳಬಾರದು,” ಎಂದು ಹೇಳಿದೆ.

“ಪ್ಲಾಟ್‌ಫಾರಂಗಳು, ರಸ್ತೆಗಳ ಮೇಲೆಲ್ಲಾ ಲಕ್ಷಾಂತರ ಜೀವಿಸುತ್ತಿದ್ದು, ಸಿಮೆಂಟ್ ಪೈಪ್‌ಲೈನ್‌ಗಳು, ಸ್ಲಂಗಳು ಹಾಗೂ ಮರಗಳ ಬುಡಗಳಲ್ಲೆಲ್ಲಾ ಯಾವುದೇ ಸೂರಿಲ್ಲದೇ, ಸುರಕ್ಷತಾ ಕ್ರಮಗಳಿಲ್ಲದೇ ವಾಸ ಮಾಡುತ್ತಿದ್ದಾರೆ,” ಎಂದು ಪೀಠ ಸರ್ಕಾರದ ಗಮನಕ್ಕೆ ತಂದಿದೆ.

“ಕೇಂದ್ರ ಸರ್ಕಾರ ಎಲ್ಲರಿಗೂ ಸೂರು ಒದಗಿಸುವ ಮಹತ್ವದ ನೀತಿಯನ್ನು ಕೈಗೆತ್ತಿಕೊಂಡಿದೆ ಎಂಬುದು ಸತ್ಯ, ಆದರೆ ಇದನ್ನು ಸಾಧ್ಯವಾದಷ್ಟು ಬೇಗ ಸಾಧಿಸಬೇಕು,” ಎಂದು ಕೋರ್ಟ್ ಆಗ್ರಹಿಸಿದೆ.

ಗೃಹ ನಿರ್ಮಾಣ ಯೋಜನೆಗೆಂದು ಕೊಯಮತ್ತೂರಿನ ತುಡಿಯಲೂರ್‌ ಹಾಗೂ ವೆಲ್ಲಕಿನಾರ್‌ ಪ್ರದೇಶಗಳಲ್ಲಿ 369 ಎಕರೆಗಳಷ್ಟು ಖಾಸಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ನಡೆಯೊಂದನ್ನು ವಿರೋಧಿ ಮೇಲ್ಮನವಿ ಸಲ್ಲಿಸಿರುವ ತಮಿಳುನಾಡು ಗೃಹ ಮಂಡಳಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್‌ ಕೈಗೆತ್ತಿಕೊಂಡಿದೆ.

ತಮ್ಮದೇ ಸ್ವಂತ ಪರಿಶ್ರಮದಿಂದ ಯಾವುದೋ ಪರದೇಶಕ್ಕೆ ಹೋಗಿ ಬೆವರು ಹರಿವಂತೆ ಸಂಪಾದನೆ ಮಾಡಿ, ಅಲ್ಲಿನ ದುಬಾರಿ ಜೀವನ ಶೈಲಿಯಲ್ಲೂ ಸಹ ತ್ರಾಸದಾಯಕವಾಗಿ ಹಣ ಕೂಡಿಟ್ಟುಕೊಂಡು ಬಂದು ಸ್ವದೇಶದಲ್ಲಿ ಹಾಯಾಗಿ ಜೀವನ ನಡೆಸುವ ಮಂದಿಯ ಮೇಲೆ ನಿಯಂತ್ರಣ ತರುವ ಮುನ್ನ ಸಾವಿರಾರು ಎಕರೆಗಳ ಮಟ್ಟಿಗೆ ಭೂಮಿ ಕಬಳಿಸಿಕೊಂಡು, ಬೆಂಗಳೂರಿನಂಥ ಮಹಾನಗರಗಳಲ್ಲಿ ಏರಿಯಾಗಳನ್ನೇ ಆವರಿಸಿಕೊಂಡು, ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಶಾಮೀಲಾಗಿ ಭೂತಾಯಿಯ ಒಡಲನ್ನೇ ಕೊರೆಯುತ್ತಿರುವ ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗಳ ಮೇಲೂ ಇಂಥದ್ದೇ ನಿಯಂತ್ರಣಗಳನ್ನು ತಂದಿದ್ದರೆ? ಎಂಬ ಪ್ರಶ್ನೆ ಹಾಗೇ ಮನದಲ್ಲಿ ಬಂದು ಹೋಗುತ್ತೆ ಅಲ್ಲವೇ?

Tags: NRI
Previous Post

ಕರೋನಾವೈರಸ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ ಚೀನಾ?

Next Post

ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

Related Posts

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ
Top Story

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

by ಪ್ರತಿಧ್ವನಿ
April 20, 2026
0

ಕೃಷ್ಣಗಿರಿ ತಮಿಳುನಾಡು : ನಾವೆಲ್ಲರೂ ಪರಸ್ಪರ ಅಣ್ಣ-ತಮ್ಮಂದಿರು. ಊರುಗಳಾಗಿ ಭಾಗವಾಗಿದ್ದೇವೆ ಅಷ್ಟೇ. ನಾವೆಲ್ಲರೂ ಇಂದು ದಕ್ಷಿಣ ಭಾರತದ ಸ್ವಾಭಿಮಾನ ಉಳಿಸಲು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಕರ್ನಾಟಕದ...

Read moreDetails
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

April 20, 2026
ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

April 20, 2026
BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

April 20, 2026
Next Post
ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada