• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಭಾರತದ ವೀಸಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ: ವೀಸಾ ವಿಭಾಗಗಳು 9ಕ್ಕೆ ಇಳಿಕೆ

Shivakumar by Shivakumar
November 12, 2026
in ಕರ್ನಾಟಕ, ದೇಶ
0
Major overhaul of India's visa system: Visa categories reduced to 9
Share on WhatsAppShare on FacebookShare on Telegram

ನವದೆಹಲಿ:  ಕೇಂದ್ರ ಸರ್ಕಾರವು ಭಾರತದ ವೀಸಾ ವ್ಯವಸ್ಥೆಯನ್ನು (Indian visa system) ಸಂಪೂರ್ಣವಾಗಿ ಬದಲಾಯಿಸಿದ್ದು, ಮುಖ್ಯ ವೀಸಾ ವಿಭಾಗಗಳ (main visa categories) ಸಂಖ್ಯೆಯನ್ನು 13ರಿಂದ 9ಕ್ಕೆ ಇಳಿಕೆ ಮಾಡಿದೆ.

ADVERTISEMENT

ಅಲ್ಲದೆ, ಉಪ-ವಿಭಾಗಗಳನ್ನು (sub-categories) 49ರಿಂದ 23ಕ್ಕೆ ಕಡಿತಗೊಳಿಸಿ ಬುಧವಾರ, ನವೆಂಬರ್ 11ರಂದು ಆದೇಶ ಹೊರಡಿಸಿದೆ. ವಿದೇಶಿ ಪ್ರಜೆಗಳಿಗೆ ಭಾರತದ ಭೇಟಿಯನ್ನು ಮತ್ತಷ್ಟು ಸುಲಭಗೊಳಿಸುವ ಮತ್ತು ವ್ಯವಸ್ಥೆಯನ್ನು ಹೆಚ್ಚು ಸ್ಪಂದನಶೀಲ ಹಾಗೂ ಸರಳವಾಗಿಸುವ (compact, coherent and responsive) ಉದ್ದೇಶದಿಂದ ಗೃಹ ಸಚಿವಾಲಯವು (Ministry of Home Affairs) ಈ ಮಹತ್ವದ ನಿರ್ಧಾರ ಕೈಗೊಂಡಿದೆ.

Priyank Kharge : ಪ್ರಧಾನಿ ಮೋದಿ ಅವರಿಂದ ನಮಗೇನೂ ನಿರೀಕ್ಷೆ ಇಲ್ಲ..! #pmmodi #karnatakavisit

ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಾದರಿ

ವೀಸಾ ವ್ಯವಸ್ಥೆಯನ್ನು ಸರಳೀಕರಿಸುವ ಮುನ್ನ ಸರ್ಕಾರವು ಅಭಿವೃದ್ಧಿ ಹೊಂದಿದ ದೇಶಗಳ ವೀಸಾ ವ್ಯವಸ್ಥೆಗಳು ಮತ್ತು ಜಾಗತಿಕ ಮಾನದಂಡಗಳನ್ನು ಅಧ್ಯಯನ ಮಾಡಿದೆ. ಪ್ರಯಾಣದ ಒಂದೇ ರೀತಿಯ ಉದ್ದೇಶಗಳನ್ನು ಒಗ್ಗೂಡಿಸುವ ಮೂಲಕ ವಿದೇಶಿಗರಿಗೆ ಸೂಕ್ತ ವೀಸಾ ವಿಭಾಗವನ್ನು ಗುರುತಿಸಲು ಸುಲಭವಾಗುವಂತೆ ಮಾಡಲಾಗಿದೆ. ಅಕ್ಟೋಬರ್ 2025ರಲ್ಲಿಯೇ ವೀಸಾ ವಿಭಾಗಗಳನ್ನು 22ರಿಂದ 13ಕ್ಕೆ ಇಳಿಸಲಾಗಿತ್ತು, ಇದೀಗ ಮತ್ತಷ್ಟು ಕಡಿತಗೊಳಿಸಲಾಗಿದೆ. ಸದ್ಯ 172 ದೇಶಗಳ ಪ್ರಜೆಗಳಿಗೆ ಇ-ವೀಸಾ ಸೌಲಭ್ಯ ಲಭ್ಯವಿದೆ. ಅರ್ಜಿ ನಮೂನೆಗಳಲ್ಲೂ ಗಣನೀಯ ಬದಲಾವಣೆ ತರಲಾಗಿದ್ದು, ತುಂಬಬೇಕಾದ ಮಾಹಿತಿಯ ಪ್ರಮಾಣವನ್ನು ಶೇಕಡಾ 65ರಿಂದ 70ರಷ್ಟು ಕಡಿಮೆ ಮಾಡುವುದರೊಂದಿಗೆ ವೀಸಾ ಪ್ರಕ್ರಿಯೆಗೆ ತಗಲುವ ಸಮಯವನ್ನು ಉಳಿಸಲಾಗಿದೆ.

ಪ್ರವಾಸಿ ವೀಸಾ ಇದೀಗ ಸಂದರ್ಶಕ ವೀಸಾ

ಹಳೆಯ ಪ್ರವಾಸಿ ವೀಸಾವನ್ನು ‘ಸಂದರ್ಶಕ ವೀಸಾ’ (Visitor Visa) ಎಂದು ಮರುನಾಮಕರಣ ಮಾಡಲಾಗಿದೆ. ಇದನ್ನು ವಿ-1 ಮತ್ತು ವಿ-2 ಎಂಬ ಎರಡು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ವಿ-1 ವೀಸಾ ಅಡಿ ವ್ಯಾಪಾರ ಸಭೆಗಳು, ವೈದ್ಯಕೀಯ ಸಮಾಲೋಚನೆ, ಭಾಷೆ ಮತ್ತು ಕಲೆಗಳ ಅಲ್ಪಾವಧಿ ಕೋರ್ಸ್ ಮುಂತಾದ ಅಲ್ಪಾವಧಿ ಚಟುವಟಿಕೆಗಳಿಗೆ ಅವಕಾಶವಿದ್ದು, 30 ದಿನಗಳ ಮಾನ್ಯತೆ ಸಿಗಲಿದೆ. ವಿ-2 ವೀಸಾವು ದೀರ್ಘಾವಧಿಯ ಭೇಟಿಗೆ ಉದ್ದೇಶಿಸಿದ್ದು, ಒಂದು, ಐದು ಅಥವಾ ಹತ್ತು ವರ್ಷಗಳ ಮಾನ್ಯತೆ ಹೊಂದಿರುತ್ತದೆ. ಇದರಲ್ಲಿ ಪರ್ವತಾರೋಹಣಕ್ಕೂ ಅವಕಾಶವಿದ್ದು, ಅದಕ್ಕಾಗಿ ಆರು ತಿಂಗಳ ಬಹು-ಪ್ರವೇಶ (Multiple entry) ವೀಸಾ ನೀಡಲಾಗುತ್ತದೆ.

ವೈದ್ಯಕೀಯ ಮತ್ತು ವಿದ್ಯಾರ್ಥಿ ವೀಸಾ ನಿಯಮಗಳು

ವೈದ್ಯಕೀಯ ವೀಸಾದಲ್ಲಿ ಸಾಮಾನ್ಯ ಚಿಕಿತ್ಸೆಗಳಿಗೆ ಎಂ-1 ಮತ್ತು ಆಯುಷ್ ಚಿಕಿತ್ಸೆಗಳಿಗೆ ಎಂ-3 ವೀಸಾವನ್ನು ನೀಡಲಾಗುತ್ತದೆ. ಇವೆರಡೂ ಬಹು-ಪ್ರವೇಶ ಆಯ್ಕೆಯೊಂದಿಗೆ ಒಂದು ವರ್ಷದ ಮಾನ್ಯತೆ ಹೊಂದಿರುತ್ತವೆ. ರೋಗಿಗಳ ಜತೆಗಿರುವವರಿಗೆ ಅನುಕ್ರಮವಾಗಿ ಎಂ-2 ಮತ್ತು ಎಂ-4 ವೀಸಾ ನೀಡಲಾಗುತ್ತದೆ. ಇದು ಭಾರತದಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಇನ್ನು ವಿದ್ಯಾರ್ಥಿ ವೀಸಾಗಳನ್ನು ಎಸ್-1 ಮತ್ತು ಎಸ್-2 ಎಂದು ವಿಂಗಡಿಸಲಾಗಿದೆ. ಶಾಲಾ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕೆ ಎಸ್-1 ವೀಸಾ ಮತ್ತು ಪಿಎಚ್‌ಡಿ, ಸಂಶೋಧನೆ ಮತ್ತು ಇಂಟರ್ನ್‌ಶಿಪ್‌ಗಳಿಗೆ ಎಸ್-2 ವೀಸಾ ಅನ್ವಯವಾಗುತ್ತದೆ. ‘ಸ್ಟಡಿ ಇನ್ ಇಂಡಿಯಾ’ ಪೋರ್ಟಲ್ ಮೂಲಕ ಬರುವವರಿಗೆ ಐದು ವರ್ಷಗಳವರೆಗೆ ಇ-ಎಸ್1 ವೀಸಾ ನೀಡಲಾಗುತ್ತದೆ.

ವಾಣಿಜ್ಯ ಹಾಗೂ ಇತರೆ ವೀಸಾಗಳ ವಿವರ

ವಾಣಿಜ್ಯ (ಬಿಸಿನೆಸ್) ವೀಸಾಗಳನ್ನು ಬಿ-1 ಮತ್ತು ಬಿ-2 ಎಂದು ವಿಂಗಡಿಸಲಾಗಿದೆ. ಕೈಗಾರಿಕೆ ಅಥವಾ ವ್ಯವಹಾರಗಳನ್ನು ಸ್ಥಾಪಿಸಲು ದೀರ್ಘಾವಧಿಯ ಬಿ-1 ವೀಸಾ ನೀಡಲಾಗುತ್ತದೆ. ಅಲ್ಪಾವಧಿಯ ಒಪ್ಪಂದ ಆಧಾರಿತ ವ್ಯವಹಾರ, ಕ್ರೀಡೆ, ಸಿನೆಮಾ ಹಾಗೂ ತಾಂತ್ರಿಕ ಪರಿಣಿತರಿಗೆ ಬಿ-2 ವೀಸಾ ಅನ್ವಯವಾಗುತ್ತದೆ. ಈ ಪರಿಷ್ಕೃತ ವ್ಯವಸ್ಥೆಯು ವಾಣಿಜ್ಯ, ರಾಜತಾಂತ್ರಿಕ, ಕೆಲಸ, ಪತ್ರಕರ್ತ, ವೈದ್ಯಕೀಯ, ಅಧಿಕೃತ, ವಿದ್ಯಾರ್ಥಿ, ಸಂದರ್ಶಕ ಮತ್ತು ಇತರೆ ಎಂಬ ಒಂಬತ್ತು ಮುಖ್ಯ ವಿಭಾಗಗಳನ್ನು ಹೊಂದಿದೆ. ‘ಇತರೆ’ (Miscellaneous) ವೀಸಾ ವಿಭಾಗವು ಭಾರತೀಯ ಮೂಲದ ವ್ಯಕ್ತಿಗಳು, ಅವರ ಕುಟುಂಬ ವರ್ಗ, ಆರೋವಿಲ್ ಫೌಂಡೇಶನ್‌ನಂತಹ ಸಂಸ್ಥೆಗಳಿಗೆ ಸೇರುವವರು ಹಾಗೂ ನೆರೆಹೊರೆಯ ದೇಶಗಳ ನಿರ್ದಿಷ್ಟ ನಾಗರಿಕರಿಗೆ ಅನ್ವಯವಾಗುತ್ತದೆ. ಐಟಿ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಈ ಹೊಸ ವೀಸಾ ವ್ಯವಸ್ಥೆಯು ಇದೇ ವರ್ಷಾಂತ್ಯದ ವೇಳೆಗೆ ಜಾರಿಗೆ ಬರಲಿದೆ.

ಜನಸಾಮಾನ್ಯರಿಗೆ ಬಿಗ್ ಶಾಕ್ :  ಇದೇ ಮೊದಲ ಬಾರಿಗೆ ಕೆ.ಜಿ ಜೋಳದ ಬೆಲೆ 100 ರೂ. ಗಡಿಪಾರು!

Tags: Indian visa systemmain visa categoriesMinistry of Home Affairs
Previous Post

ಜನಸಾಮಾನ್ಯರಿಗೆ ಬಿಗ್ ಶಾಕ್ :  ಇದೇ ಮೊದಲ ಬಾರಿಗೆ ಕೆ.ಜಿ ಜೋಳದ ಬೆಲೆ 100 ರೂ. ಗಡಿಪಾರು!

Next Post

ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ – ನನ್ನ ಭಾಷಣ ಕಟ್ : ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ

Related Posts

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಿದ ವಿದ್ಯಾರ್ಥಿಗಳಿಗೆ ಶಾಕ್! ಮನೆ ಮಾಲಕರು ವಿಧಿಸಿದ ಷರತ್ತುಗಳೇನು?
ಕರ್ನಾಟಕ

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಿದ ವಿದ್ಯಾರ್ಥಿಗಳಿಗೆ ಶಾಕ್! ಮನೆ ಮಾಲಕರು ವಿಧಿಸಿದ ಷರತ್ತುಗಳೇನು?

by Shivakumar
November 12, 2026
0

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ದಿನದಿಂದ ದಿನಕ್ಕೆ ಸವಾಲಿನ ಕೆಲಸವಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿಗಳು ಮತ್ತು ಉದ್ಯೋಗಕ್ಕಾಗಿ ನಗರಕ್ಕೆ ಬರುವವರಿಗೆ ಮನೆ ಬಾಡಿಗೆ, ಮುಂಗಡ ಹಣ...

Read moreDetails
MDR charges for UPI payments above Rs 2,000: Final decision likely by November 15

2,000 ರೂ. ಮೇಲ್ಪಟ್ಟ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ: ನ.15ರೊಳಗೆ ಅಂತಿಮ ನಿರ್ಧಾರ ಸಾಧ್ಯತೆ

November 12, 2026
Priority given to technology-based security measures to enhance the credibility of public examinations: Minister Priyank Kharge

ಸಾರ್ವಜನಿಕ ಪರೀಕ್ಷೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು ತಂತ್ರಜ್ಞಾನ ಆಧಾರಿತ ಸುರಕ್ಷತಾ ಕ್ರಮಗಳಿಗೆ ಆದ್ಯತೆ: ಸಚಿವ ಪ್ರಿಯಾಂಕ್ ಖರ್ಗೆ

November 12, 2026
Dereliction of duty in land forgery case: Athani PSI Girimallappa Uppara suspended

ಜಮೀನು ಫೋರ್ಜರಿ ಪ್ರಕರಣದಲ್ಲಿ ಕರ್ತವ್ಯ ಲೋಪ: ಅಥಣಿ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ ಅಮಾನತು

November 12, 2026
Centre's preparations to implement women's reservation: A special session?

ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರದ ಸಿದ್ಧತೆ: ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಮಸೂದೆಗೆ ವಿಶೇಷ ಅಧಿವೇಶನ?

November 12, 2026
Next Post
The 'reward' received for seeking justice for Karnataka State – my speech was cut short: Krishna Byre Gowda

ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ - ನನ್ನ ಭಾಷಣ ಕಟ್ : ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada