ಬೆಂಗಳೂರು : ಬೆಂಗಳೂರಿನ ವಿಧಾನಸೌಧದ (Vidhan saudha) ಸಚಿವ ಸಂಪುಟ ಸಭಾಮಂದಿರದಲ್ಲಿ 2026ರ ಅಕ್ಟೋಬರ್ 23ರ ಶುಕ್ರವಾರದಂದು ನಿಗದಿಯಾಗಿದ್ದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯನ್ನು (Cabinet Meeting) ಮುಂದೂಡಲಾಗಿದೆ. ಅಂದು ಬೆಳಗ್ಗೆ 10:00 ಗಂಟೆಗೆ ಈ ಸಭೆಯನ್ನು ಕರೆಯಲಾಗಿತ್ತು.
ಮುಂದಿನ ದಿನಾಂಕ ಶೀಘ್ರದಲ್ಲೇ ಪ್ರಕಟ
ಸರ್ಕಾರದ ಅಪರ ಕಾರ್ಯದರ್ಶಿ (ಸಚಿವ ಸಂಪುಟ) ಆರ್. ಚಂದ್ರಶೇಖರ್ ಅವರು ಈ ಕುರಿತು ಅಧಿಕೃತ ಮುಂದೂಡಿಕೆ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ. ಈ ಸಭೆ ನಡೆಯುವ ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಎಲ್ಲ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ರವಾನಿಸಲಾಗಿದೆ.
ರಾಜ್ಯ ಪೊಲೀಸ್ ಸಿಬ್ಬಂದಿಗೆ ಇನ್ಮುಂದೆ ನೂತನ ವಿಸಿಲ್ ಗಾರ್ಡ್: ಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ







