ಬೆಂಗಳೂರು : ಬಿಜೆಪಿಯವರು ಎಸ್ ಐಆರ್ (SIR) ನೆಪದಲ್ಲಿ ಜನರಿಂದ ಮತದಾನದ ಹಕ್ಕನ್ನು ಕಿತ್ತು ಕೊಳ್ಳುತ್ತಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ (CM DK Shivakumar) ಗಂಭೀರ ಆರೋಪ ಮಾಡಿದ್ದಾರೆ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಮ್ಮ ಪ್ರಜಾಪ್ರಭುತ್ವದ ಮೇಲೆ ಇಂತಹ ದೊಡ್ಡ ದಾಳಿ ನಡೆಯುತ್ತಿದೆ. ಮತದಾನವು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ಆದರೆ, ಬಿಜೆಪಿಯವರು ಎಸ್ಐಆರ್ ನೆಪದಲ್ಲಿ ಜನರಿಂದ ಈ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ದೀನ ದಲಿತರು, ಬಡವರು ಹಾಗೂ ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಉದ್ದೇಶದಿಂದ ತಪ್ಪು ಮಾಹಿತಿಯೊಂದಿಗೆ ‘ಫಾರ್ಮ್-7’ ಸಲ್ಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂತಹ ಕೃತ್ಯವೆಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿ ತಪ್ಪು ಮಾಹಿತಿ ನೀಡಿ ನಾಗರಿಕರನ್ನು ಮತದಾರರ ಪಟ್ಟಿಯಿಂದ ದೂರವಿಡುವವರ ಬಗ್ಗೆ ಬಿಎಲ್ಎಗಳು ನನಗೆ ನಿಖರ ಮಾಹಿತಿ ನೀಡಬೇಕು. ಈ ಗಂಭೀರ ವಿಚಾರದ ಕುರಿತು ನಾನು ವಿಸ್ತೃತವಾದ ಮಾಧ್ಯಮಗೋಷ್ಠಿ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ ಆಯೋಜಿಸಿದ್ದ ‘ಎಸ್‌ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಜಾಥಾ’ದ ಅಂಗವಾಗಿ ರೂಪಿಸಲಾದ ‘ಪರಿಶೋಧನಾ ವರದಿ’ಯನ್ನು ಬಹುಭಾಷಾ ನಟರು ಹಾಗೂ ಸಾಮಾಜಿಕ ಹೋರಾಟಗಾರರಾದ ಪ್ರಕಾಶ್ ರಾಜ್ ಅವರ ನೇತೃತ್ವದ ನಿಯೋಗವು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಿತು.
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿರುವ ಗಂಭೀರ ಲೋಪಗಳು, ಅರ್ಹ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತಂದಿರುವ ಅಂಶಗಳನ್ನು ಈ ವರದಿ ಎತ್ತಿಹಿಡಿದಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಷಡ್ಯಂತ್ರವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಮಾಫಿ ಸಾಕ್ಷಿ ಪ್ರದೋಷ್‌ನ ಹೇಳಿಕೆ ದಾಖಲಾತಿ ಮುಂದುವರಿಕೆ; ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ
ಬೆಂಗಳೂರಿನಲ್ಲಿ ಭಾರೀ ಮಳೆಗೆ ಚಿತ್ರಮಂದಿರದ ಮೇಲ್ಛಾವಣಿ ಕುಸಿತ: ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರಿಗೆ ಗಾಯ
The right to vote is the foundation of our democracy, and protecting every genuine vote is our bound duty.
I appeal to all voters, BLAs, BLA 1s, BLA 2s and our leaders to stay alert and check whether Form 7 applications seeking deletion of votes have been submitted in your… pic.twitter.com/kZn32tdwTp
— DK Shivakumar (@DKShivakumar) September 30, 2026
ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ ಆಯೋಜಿಸಿದ್ದ ‘ಎಸ್‌ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಜಾಥಾ’ದ ಅಂಗವಾಗಿ ರೂಪಿಸಲಾದ ‘ಪರಿಶೋಧನಾ ವರದಿ’ಯನ್ನು ಬಹುಭಾಷಾ ನಟರು ಹಾಗೂ ಸಾಮಾಜಿಕ ಹೋರಾಟಗಾರರಾದ ಪ್ರಕಾಶ್ ರಾಜ್ ಅವರ ನೇತೃತ್ವದ ನಿಯೋಗವು ನನಗೆ ಹಸ್ತಾಂತರಿಸಿತು.
ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿರುವ… pic.twitter.com/6JZRQJTEzy
— DK Shivakumar (@DKShivakumar) September 30, 2026






