ಬೆಂಗಳೂರು : ರಾಜ್ಯವನ್ನು ಜಾಗತಿಕ ಮಟ್ಟದ ಜವಳಿ ಮತ್ತು ಉಡುಪು ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಲು “ಕರ್ನಾಟಕ ಜವಳಿ ಮತ್ತು ಉಡುಪು ನೀತಿ (4.0) 2026–31” (Karnataka Textile and Garment Policy) ಜಾರಿಗೆ ತರಲಾಗಿದ್ದು, ಇದರ ಯಶಸ್ವಿ ಅನುಷ್ಠಾನಕ್ಕೆ ₹4,000 ಕೋಟಿ ನೆರವು ಒದಗಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM D.K. Shivakumar) ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಿಎಂ ಡಿ.ಕೆ. ಶಿವಕುಮಾರ್.ಈ ಯೋಜನೆಯ ಮೂಲಕ ₹20,000 ಕೋಟಿ ಹೂಡಿಕೆ ಆಕರ್ಷಿಸಿ, 5 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಅಲ್ಲದೆ, 34 ವಿಶೇಷ ಆದ್ಯತೆಯ ತಾಲೂಕುಗಳಿಗೆ ಹೆಚ್ಚಿನ ಪ್ರೋತ್ಸಾಹ, ಮೊದಲ ಬಾರಿಗೆ ರೇಷ್ಮೆ ರೀಲಿಂಗ್ ಮತ್ತು ಸ್ಪಿನ್ನಿಂಗ್ ಚಟುವಟಿಕೆಗಳ ಸೇರ್ಪಡೆ ಹಾಗೂ ಕಲಬುರಗಿಯ PM-MITRA ಪಾರ್ಕ್‌ಗೆ ವಿಶೇಷ ರಿಯಾಯಿತಿ ನೀಡುವ ಮೂಲಕ ರಾಜ್ಯದ ಕೈಗಾರಿಕಾ ಪ್ರಗತಿಗೆ ಹೊಸ ವೇಗ ನೀಡಲಾಗುತ್ತಿದೆ.
ರಾಜ್ಯ ಸರ್ಕಾರ ಜನರ ಬದುಕಿಗೆ ಮತ್ತುಷ್ಟು ಅವಕಾಶಗಳ ಬಾಗಿಲು ತೆರೆಯುವ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಜವಳಿ ಮತ್ತು ಉಡುಪು ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ರಾಜ್ಯದಲ್ಲಿ ಕೈಗಾರಿಕೆಗಳ ವಿಸ್ತರಣೆ, ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಬಿಯಾಂಡ್ ಬೆಂಗಳೂರು ಮೂಲಕ ಕೈಗಾರಿಕಾ ಬೆಳವಣಿಗೆಗೆ ಅವಕಾಶ ಕಲ್ಪಿಸಿ, ಕರ್ನಾಟಕದ ಯುವಜನತೆಗೆ ಉದ್ಯೋಗ ಮತ್ತು ಜನರಿಗೆ ಆರ್ಥಿಕ ಸದೃಢತೆಯ ದಾರಿ ನಿರ್ಮಿಸಲು ಸರ್ಕಾರ ಸದಾ ಬದ್ದವಾಗಿದೆ.
ನಮ್ಮ ರಾಜ್ಯವನ್ನು ಜಾಗತಿಕ ಮಟ್ಟದ ಜವಳಿ ಮತ್ತು ಉಡುಪು ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಲು "ಕರ್ನಾಟಕ ಜವಳಿ ಮತ್ತು ಉಡುಪು ನೀತಿ (4.0) 2026–31" ಜಾರಿಗೆ ತರಲಾಗಿದ್ದು, ಇದರ ಯಶಸ್ವಿ ಅನುಷ್ಠಾನಕ್ಕೆ ₹4,000 ಕೋಟಿ ನೆರವು ಒದಗಿಸಲಾಗಿದೆ.
ಈ ಯೋಜನೆಯ ಮೂಲಕ ₹20,000 ಕೋಟಿ ಹೂಡಿಕೆ ಆಕರ್ಷಿಸಿ, 5 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು… pic.twitter.com/Ie6ovowIql
— DK Shivakumar (@DKShivakumar) September 30, 2026






