• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಕಾಕ್ರೋಚ್ ಜನತಾ ಪಾರ್ಟಿಯಲ್ಲಿ ಬಿರುಕು: ಹೊಸ ಬಣ ಘೋಷಿಸಿದ ಮನೀಶ್ ಬ್ರಹ್ಮಭಟ್

ಪ್ರತಿಧ್ವನಿ by ಪ್ರತಿಧ್ವನಿ
September 4, 2026
in ರಾಜಕೀಯ
0
ಕಾಕ್ರೋಚ್ ಜನತಾ ಪಾರ್ಟಿಯಲ್ಲಿ ಬಿರುಕು: ಹೊಸ ಬಣ ಘೋಷಿಸಿದ ಮನೀಶ್ ಬ್ರಹ್ಮಭಟ್
Share on WhatsAppShare on FacebookShare on Telegram

ದೇಶದ ಯುವಜನರು, ವಿಶೇಷವಾಗಿ Gen-Z ಹಾಗೂ ವಿದ್ಯಾರ್ಥಿಗಳ ಹೋರಾಟದಿಂದ ಗಮನ ಸೆಳೆದಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಇಬ್ಭಾಗವಾಗಿದೆ. ಪಕ್ಷದ ಪ್ರಮುಖ ಕಾರ್ಯಕರ್ತ ಹಾಗೂ ಮುಖಂಡ ಮನೀಶ್ ಬ್ರಹ್ಮಭಟ್ ಅವರು ಗುರುವಾರ ‘ಕಾಕ್ರೋಚ್ ಜನತಾ ಪಾರ್ಟಿ ಡೆಮಾಕ್ರಟಿಕ್’ (CJP-D) ಎಂಬ ಹೊಸ ಬಣವನ್ನು ಘೋಷಿಸಿದ್ದಾರೆ.ಮೂಲ ಪಕ್ಷದ ನಾಯಕತ್ವದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಬ್ರಹ್ಮಭಟ್, ಪಕ್ಷವು ಆಮ್ ಆದ್ಮಿ ಪಾರ್ಟಿ (AAP) ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಪ್ರಭಾವಕ್ಕೆ ಒಳಗಾಗಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮನೀಶ್ ಬ್ರಹ್ಮಭಟ್ ಆರೋಪಿಸಿದ್ದಾರೆ. ಹೋರಾಟದ ಬಳಿಕ ರಚಿಸಲಾದ 12 ಸದಸ್ಯರ ರಾಷ್ಟ್ರೀಯ ತಂಡದಲ್ಲಿ AAPಗೆ ಸೇರಿದ ಎಂಟು ಮಂದಿ, ಅಭಿಜಿತ್ ದೀಪ್ಕೆ ಅವರ ಕಾಲೇಜು ಸ್ನೇಹಿತರು ಹಾಗೂ ಆಪ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಅವರು ದೂರಿದ್ದಾರೆ.

ದೇಶಾದ್ಯಂತ ಹೋರಾಟದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಸ್ವಯಂಸೇವಕರು ಹಾಗೂ ಪ್ರತಿಭಟನಾಕಾರರನ್ನು ರಾಷ್ಟ್ರೀಯ ಮಟ್ಟದ ಸಂಘಟನೆಯಲ್ಲಿ ಕಡೆಗಣಿಸಲಾಗಿದೆ ಎಂಬುದು ಅವರ ಆರೋಪವಾಗಿದೆ.

HD Kumaraswamy : ರೇವಣ್ಣ ಪ್ರಕರಣ ಎತ್ತಿ.. ಪ್ರಿಯಾಂಕ್‌ ಖರ್ಗೆ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ..! #pratidhvani

ಪ್ರತಿ ರಾಜ್ಯದಿಂದ ಐವರು ಹೋರಾಟಗಾರರನ್ನು ಆಯ್ಕೆ ಮಾಡಿ ರಾಷ್ಟ್ರೀಯ ಸಮಿತಿ ರಚಿಸಬೇಕು ಎಂಬ ಸಲಹೆಯನ್ನು ಮೂಲ ನಾಯಕತ್ವ ತಿರಸ್ಕರಿಸಿದೆ ಎಂದು ಬ್ರಹ್ಮಭಟ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಸ್ವಯಂಸೇವಕರ ಸಭೆಯಲ್ಲಿ ಕಾರ್ಯಕರ್ತರ ಮೊಬೈಲ್‌ಗಳನ್ನು ಪಡೆದುಕೊಂಡು, ಸಂಭಾಷಣೆ ರೆಕಾರ್ಡ್ ಆಗದಂತೆ ತಡೆಯಲಾಗಿತ್ತು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಯೊಂದನ್ನು ವ್ಯಂಗ್ಯವಾಗಿ ಟೀಕಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ಬಳಿಕ NEET ಪರೀಕ್ಷಾ ಅಕ್ರಮಗಳ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಚಳವಳಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿತ್ತು.

ಈ ಚಳವಳಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದ ಬಳಿಕ, ಅದರ ರಾಜಕೀಯ ದಿಕ್ಕು ಮತ್ತು ನಾಯಕತ್ವದ ಕುರಿತು ಸಂಘಟನೆಯೊಳಗೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ಬಂಡಾಯ ಬಣದ ನಾಯಕರು ಹೇಳಿದ್ದಾರೆ.

HD Kumaraswamy : ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಕುಮಾರಸ್ವಾಮಿ ಟಾಂಗ್‌..! #priyankkharge #hdkumaraswamy

ಹೊಸ CJP-D ಬಣದ ಘೋಷಣೆ ವೇಳೆ ಮಾತನಾಡಿದ ಮನೀಶ್ ಬ್ರಹ್ಮಭಟ್, ತಮ್ಮ ಉದ್ದೇಶ ಯಾವುದೇ ಒಂದು ರಾಜಕೀಯ ಪಕ್ಷವನ್ನು ಸೋಲಿಸುವುದಲ್ಲ. ಬದಲಾಗಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವುದು ಎಂದು ಹೇಳಿದ್ದಾರೆ.CJP-D ಸಂಘಟನೆಯಲ್ಲಿ ಪಾರದರ್ಶಕತೆ, ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಹೊಣೆಗಾರಿಕೆಗೆ ಆದ್ಯತೆ ನೀಡಲಾಗುವುದು. ಸಂಘಟನೆಯ ಪ್ರಮುಖ ನಿರ್ಧಾರಗಳನ್ನು ಸದಸ್ಯರ ಅಭಿಪ್ರಾಯ ಪಡೆದೇ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹೊಸ ಬಣಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು ಹಾಗೂ ನಾಗರಿಕರು ಸೇರ್ಪಡೆಯಾಗಲು ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಮತ್ತು ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಪಡೆಯುವ ವ್ಯವಸ್ಥೆ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಬ್ರಹ್ಮಭಟ್ ಹೇಳಿದ್ದಾರೆ.

ಈ ಬೆಳವಣಿಗೆಯೊಂದಿಗೆ ಯುವಜನರ ಹೋರಾಟದ ವೇದಿಕೆಯಾಗಿ ಗಮನ ಸೆಳೆದಿದ್ದ ಕಾಕ್ರೋಚ್ ಜನತಾ ಪಾರ್ಟಿಯೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿದ್ದು, ಸಂಘಟನೆಯ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ.

Tags: AAPAbhijit DeepkeArvind KejriwalCJPCJP SplitCJP-DCockroach Janta PartyGen zindia newsJantar Mantarkarnataka newsManish BrahmbhattNEET ScamPolitical Controversypolitical newsStudent MovementStudent protestYouth MovementYouth Politics
Previous Post

ಉತ್ತರ ಕರ್ನಾಟಕದ ಟೆಕ್ ಬೆಳವಣಿಗೆಗೆ ಸರ್ಕಾರದ ಬೆಂಬಲ: ಪ್ರಿಯಾಂಕ್ ಖರ್ಗೆ

Next Post

ಸೆ.4ರಿಂದ ಬೆಂಗಳೂರಿನ ಫ್ಲೈಓವರ್‌ಗಳಲ್ಲಿ ಹೊಸ ನಿಯಮ; ಎಲ್ಲೆಲ್ಲಿ ಏನು ನಿರ್ಬಂಧ?

Related Posts

Did the Hassan DC compare H.D.K. to a barking dog?
Top Story

ಹೆಚ್ ಡಿಕೆಯನ್ನು ಬೊಗಳುವ ನಾಯಿಗೆ ಹೋಲಿಸಿದರೇ ಹಾಸನ ಡಿಸಿ?

by Shivakumar
November 10, 2026
0

ಹಾಸನ : ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ (K. S. Latha Kumari) ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ನಡುವಿನ ಆರೋಪ-ಪ್ರತ್ಯಾರೋಪಗಳು...

Read moreDetails
There is no rift between Siddaramaiah and me: CM D.K. Shivakumar clarifies

ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

November 9, 2026
Prove the allegation or apologize publicly: Minister Shivalinge Gowda issues a stern warning to HDK!

ಆರೋಪ ಸಾಬೀತುಪಡಿಸಿ, ಇಲ್ಲವೇ ಬಹಿರಂಗವಾಗಿ ಕ್ಷಮೆ ಕೇಳಿ: ಎಚ್‌ಡಿಕೆಗೆ ಸಚಿವ ಶಿವಲಿಂಗೇಗೌಡ ಖಡಕ್ ಎಚ್ಚರಿಕೆ!

November 9, 2026
Minister Shivalinge Gowda launches a scathing attack against H.D. Kumaraswamy.

ಲಂಚದ ಆರೋಪ : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಶಿವಲಿಂಗೇಗೌಡ ವಾಗ್ದಾಳಿ

November 9, 2026
Allegations of excessive ethanol blending in petrol: Massive protest by Congress in Bengaluru

ಪೆಟ್ರೋಲ್‌ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ ಆರೋಪ : ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

November 9, 2026
Next Post
ಸೆ.4ರಿಂದ ಬೆಂಗಳೂರಿನ ಫ್ಲೈಓವರ್‌ಗಳಲ್ಲಿ ಹೊಸ ನಿಯಮ; ಎಲ್ಲೆಲ್ಲಿ ಏನು ನಿರ್ಬಂಧ?

ಸೆ.4ರಿಂದ ಬೆಂಗಳೂರಿನ ಫ್ಲೈಓವರ್‌ಗಳಲ್ಲಿ ಹೊಸ ನಿಯಮ; ಎಲ್ಲೆಲ್ಲಿ ಏನು ನಿರ್ಬಂಧ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada