• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ಯಾರಿಸ್‌ನಲ್ಲಿ ಸುದೀಪ್‌ ನಟನೆಗೆ ಮೆಚ್ಚುಗೆ:ಈಗ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್! ನಿರ್ದೇಶಕ ರಾಜಮೌಳಿಗೆ ಜಾಗತಿಕ ಗೌರವ…

ಫ್ರಾನ್ಸ್ ದೇಶದ ಪ್ರೇಕ್ಷಕರ ಮನ ಮುಟ್ಟಿದ "ಈಗ" ಮೂವಿ..!

ಪ್ರತಿಧ್ವನಿ by ಪ್ರತಿಧ್ವನಿ
June 30, 2026
in Top Story, ಇದೀಗ, ಕರ್ನಾಟಕ, ದೇಶ, ಸಿನಿಮಾ
0
Rajamauli Sdeep Iga Movie

Rajamauli Sdeep Iga Movie

Share on WhatsAppShare on FacebookShare on Telegram

ಬೆಂಗಳೂರು : ನಿರ್ದೇಶಕ ಎಸ್.ಎಸ್. ರಾಜಮೌಳಿ ಸದ್ಯ ಯುರೋಪ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರ ಹಿಟ್ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಅದೊಂದು ರೀತಿ ರಾಜಮೌಳಿ ಚಿತ್ರೋತ್ಸವವಿದ್ದಂತೆ! ಪ್ಯಾರಿಸ್‌ನಲ್ಲಿ ರಾಜಮೌಳಿ ನಿರ್ದೇಶನದ, ಸುದೀಪ್‌ ನಟನೆಯ ‘ಈಗ’ ಚಿತ್ರ ಪ್ರದರ್ಶನಗೊಂಡಿದೆ.

ADVERTISEMENT

ಕ್ಲೈಮ್ಯಾಕ್ಸ್ ದೃಶ್ಯವೊಂದಕ್ಕೆ ಅಲ್ಲಿನ‌ ಫ್ರೆಂಚ್ ಪ್ರೇಕ್ಷಕರು ಹುಚ್ಚೆದ್ದು ಸಂಭ್ರಮಿಸಿದ್ದಾರೆ. ಸದ್ಯ ಥಿಯೇಟರ್‌ನಲ್ಲಿ ಸಂಭ್ರಮಿಸಿರುವ ಆ ವಿಡಿಯೋ ವೈರಲ್ ಆಗಿದೆ. ಇದೇ ವೇಳೆ ‘ಸಿನೆಮಾಥೆಕ್ ಫ್ರಾಂಕೈಸ್’ ಸಂಸ್ಥೆಯಿಂದ ರಾಜಮೌಳಿಗೆ ಜಾಗತಿಕ ಗೌರವ ಲಭಿಸಿದೆ. ನಾನಿ, ಸಮಂತಾ, ಸುದೀಪ್ ನಟಿಸಿದ್ದ ‘ಈಗ’ ಚಿತ್ರದ ವಿಭಿನ್ನ ಕಥೆಗೆ ಮತ್ತು ಸುದೀಪ್ ನಟನೆಗೆ ವಿಶ್ವಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Belagavi Farmer Festival : ಕರುನಾಡ ರೈತರ ಮನೆ ಮನೆಯ ಹಬ್ಬ, ಕರಿ ಹರಿದು ಸಂಭ್ರಮಿಸಿದ ಸಂಬರಗಿಯ ರೈತರು.!#Sambaragi

ಯುರೋಪ್‌ ಪ್ರವಾಸದಲ್ಲಿರುವ ರಾಜಮೌಳಿ ಅವರ ನಿರ್ದೇಶನದ ‘ಆರ್‌ಆರ್‌ಆರ್’, ‘ಬಾಹುಬಲಿ’ ಮತ್ತು ‘ಈಗ’ ಸಿನಿಮಾಗಳನ್ನು ಅಲ್ಲಿನ ಪ್ರೇಕ್ಷಕರಿಗೆ ಪ್ರದರ್ಶಿಸಲಾಗುತ್ತಿದೆ. ಸಮಂತಾ, ನಾನಿ, ಸುದೀಪ್ ಮೊದಲಾದವರು ನಟಿಸಿರೋ ‘ಈಗ’ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಪ್ರಮುಖ ದೃಶ್ಯವೊಂದಕ್ಕೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

ರಾಜಮೌಳಿ ಅವರ ತಂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಿನಿಮಾದ ಕೊನೆಯಲ್ಲಿ ನಾಯಕ ಕಿಚ್ಚ ಸುದೀಪ್ ಅವರಿಗೆ ನೊಣ ಚಾಲೆಂಜ್ ಹಾಕುವ ದೃಶ್ಯವದು. ನೊಣವು ಗೋಡೆಯ ಮೇಲೆ ‘ಐ ವಿಲ್ ಬಿ ಬ್ಯಾಕ್’ (ನಾನು ಮತ್ತೆ ಬರುತ್ತೇನೆ) ಎಂದು ಬರೆಯುತ್ತದೆ. ಈ ದೃಶ್ಯಕ್ಕೆ ಫ್ರಾನ್ಸ್ ದೇಶದ ಪ್ರೇಕ್ಷಕರು ಥಿಯೇಟರ್‌ನಲ್ಲಿ ಸಖತ್ ಕಿರುಚಾಡಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ಬೇರೆ ರಾಜ್ಯದ ಮತದಾರರಿಗೆ ನಾವ್ಯಾಕೆ ಗ್ಯಾರಂಟಿ ನೀಡಬೇಕು? : ಸಿಎಂ ಡಿ.ಕೆ ಶಿವಕುಮಾರ್

ಈಗ’ ಸಿನಿಮಾ 2012ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ನಾನಿ, ಸಮಂತಾ ಮತ್ತು ಕಿಚ್ಚ ಸುದೀಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಖಳನಾಯಕನಿಂದ ಕೊಲೆಯಾಗುವ ನಾಯಕ ನೊಣವಾಗಿ ಮರುಜನ್ಮ ಪಡೆಯುತ್ತಾನೆ. ನಂತರ ತನ್ನ ಸಾವಿಗೆ ಸೇಡು ತೀರಿಸಿಕೊಳ್ಳುವ ವಿಭಿನ್ನ ಕಥೆ ಇದಾಗಿತ್ತು. ಸುದೀಪ್ ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು.

ಪ್ಯಾರಿಸ್ ಪ್ರವಾಸದ ವೇಳೆ ರಾಜಮೌಳಿ ಅವರಿಗೆ ವಿಶ್ವದ ಪ್ರತಿಷ್ಠಿತ ‘ಸಿನೆಮಾಥೆಕ್ ಫ್ರಾಂಕೈಸ್’ ಸಂಸ್ಥೆಯಿಂದ ಗೌರವ ಲಭಿಸಿದೆ. ಈ ಸಂಸ್ಥೆಯ ಹಾಲ್‌ನಲ್ಲಿ ರಾಜಮೌಳಿ ಅವರಿಗೆ ಖಾಯಂ ಸ್ಥಾನ ನೀಡಲಾಗಿದೆ. ಈ ಬಗ್ಗೆ ರಾಜಮೌಳಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. ‘ಪ್ಯಾರಿಸ್‌ನಲ್ಲಿ ನನ್ನ ಚಿತ್ರಗಳ ಪ್ರದರ್ಶನ ಆಗುತ್ತಿರುವುದೇ ನನಗೆ ದೊಡ್ಡ ಗೌರವ. ಆದರೆ ಈ ವಿಶೇಷ ಸರ್ಪ್ರೈಸ್ ಅನ್ನು ನಾನು ನಿರೀಕ್ಷಿಸಿರಲಿಲ್ಲ. ಇದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ. ಫ್ರೆಂಚ್ ಸಂಸ್ಥೆಗೆ ಅವರು ಧನ್ಯವಾದ ತಿಳಿಸಿದ್ದಾರೆ.

Tags: Actor NaaniActress SamanthaCinema newsCinemathec FrankiesEEga MovieEntertainment NewsFrance AudiencesKannada Actor SudeepKannada cinema actorkiccha sudeepPratidhvaniS S Rajamauli
Previous Post

ಬೇರೆ ರಾಜ್ಯದ ಮತದಾರರಿಗೆ ನಾವ್ಯಾಕೆ ಗ್ಯಾರಂಟಿ ನೀಡಬೇಕು?: ಸಿಎಂ ಡಿ.ಕೆ ಶಿವಕುಮಾರ್

Next Post

ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

Related Posts

ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ
Top Story

ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ

by ಪ್ರತಿಧ್ವನಿ
June 30, 2026
0

ಬೆಂಗಳೂರು: ಬಂಡಿಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಫಾರಿ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನಾರಂಭಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್...

Read moreDetails
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?

June 30, 2026
ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ: ಸಿದ್ದರಾಮಯ್ಯ ಮುಂದೆ ಪ್ರದೀಪ್‌ ಈಶ್ವರ್‌ ಕಣ್ಣೀರು

ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ: ಸಿದ್ದರಾಮಯ್ಯ ಮುಂದೆ ಪ್ರದೀಪ್‌ ಈಶ್ವರ್‌ ಕಣ್ಣೀರು

June 30, 2026
Toxic: ಜುಲೈ1ಕ್ಕೆ ಟಾಕ್ಸಿಕ್ ಲೇಡಿಸ್ ದರ್ಶನ! ಯಶ್‌ ಕೊಟ್ಟ ಸುಳಿವು ಏನ್‌ ಗೊತ್ತಾ?

Toxic: ಜುಲೈ1ಕ್ಕೆ ಟಾಕ್ಸಿಕ್ ಲೇಡಿಸ್ ದರ್ಶನ! ಯಶ್‌ ಕೊಟ್ಟ ಸುಳಿವು ಏನ್‌ ಗೊತ್ತಾ?

June 30, 2026
ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

June 30, 2026
Next Post
ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada