• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, July 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ : ಸಿಎಂ ಡಿಕೆ ಶಿವಕುಮಾರ್‌ ಘೋಷಣೆ..

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ : ಸಿಎಂ ಡಿಕೆ ಶಿವಕುಮಾರ್..

ಪ್ರತಿಧ್ವನಿ by ಪ್ರತಿಧ್ವನಿ
June 30, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ : ಸಿಎಂ ಡಿಕೆ ಶಿವಕುಮಾರ್‌ ಘೋಷಣೆ..

DK Shivakumar meeting

Share on WhatsAppShare on FacebookShare on Telegram

ಬೆಂಗಳೂರು : ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟು ಅವರಿಗೆ ತೊಂದರೆ ನೀಡದೆ, ನಿಯಮಾನುಸಾರ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಬೇಕೆಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಖಡಕ್‌ ಸೂಚನೆ ನೀಡಿದ್ದಾರೆ.

ADVERTISEMENT

ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆ, ಮೂಲಭೂತ ಸೌಲಭ್ಯಗಳಿಗೆ ಆದ್ಯತೆಯ ಕುರಿತು ವಿಧಾನಸೌಧದಲ್ಲಿಂದು ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಇಲಾಖೆಯ ಪ್ರಸ್ತುತ ಕಾರ್ಯವೈಖರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ನಮ್ಮ ಅಮೂಲ್ಯವಾದ ಅರಣ್ಯ ಪ್ರಾಣಿ ಸಂಪತ್ತಿನ ಸಂರಕ್ಷಣೆ ಪರಿಣಾಮಕಾರಿಯಾಗಿ ಆಗಬೇಕು. ಮಾನವ – ವನ್ಯಜೀವಿ ಸಂಘರ್ಷ ತಪ್ಪಿಸಲು ಅಧಿಕಾರಿಗಳು ಹೊಸ ಮಾರ್ಗೋಪಾಯಗಳ ಬಗ್ಗೆ ನಿರಂತರ ಅಧ್ಯಯನ ನಡೆಸಬೇಕು. ಗಣಿಗಾರಿಕೆ ಹಾಗೂ ಕೈಗಾರಿಕಾ ಯೋಜನೆಗಳಿಗೆ ಸರ್ಕಾರಿ ಜಾಗ ಪಡೆದು ವರ್ಷಗಳ ಕಾಲ ಚಟುವಟಿಕೆ ಆರಂಭಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಸಿಎಂ ಎಚ್ಚರಿಸಿದ್ದಾರೆ.

ಇಂತಹ ವಿಳಂಬದಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುವುದಲ್ಲದೆ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ, ಇದನ್ನು ಸಹಿಸುವುದಿಲ್ಲ. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. ‌

ಸಭೆಯ ಪ್ರಮುಖ ನಿರ್ಣಯಗಳೇನು..?

  • ಬಾಕಿ ಇರುವ ಎಲ್ಲಾ ಹಳೆಯ ಅರಣ್ಯ ಅನುಮತಿ ಪ್ರಕರಣಗಳನ್ನು ಜುಲೈ 15ರೊಳಗೆ ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು.
  •  ಶರಾವತಿ ಪಂಪ್ ಸ್ಟೋರೇಜ್‌, ಗೋವಾ ತಮ್ನೇರ್‌, ಕಳಸಾ ಬಂಡೂರಿ ಮತ್ತು ಬಿಡಿಎ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗಳ ಅರಣ್ಯ ಅನುಮತಿ ಪ್ರಕ್ರಿಯೆಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡುವುದು.
  • ವನ್ಯಜೀವಿಗಳ ಮೇಲೆ ನಿಗಾ ಇಡಲು ‘ಥರ್ಮಲ್ ಡ್ರೋನ್’ ವ್ಯವಸ್ಥೆ ಅಳವಡಿಕೆ ಹಾಗೂ ನೆಡುತೋಪು ನಿರ್ಮಾಣ, ಸಸಿ ವಿತರಣೆ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ದೇಶಿಸಲಾಗಿದೆ.

ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ ಸಲಹೆಗಾರರಾದ ಎಲ್. ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ರಿತೇಶ್ ಕುಮಾರ್ ಸಿಂಗ್, ಅಂಜುಮ್ ಪರ್ವೇಜ್, ಕರ್ನಾಟಕ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags: CM DK Shivakumarcongress karnatakaForest DepartmentForest LandForest RecruitementForest ResidentialsKarnataka Government
Previous Post

ಸಂಕ್ರಾಂತಿಗೆ ಬಿಲ್ಲ ರಂಗ ಬಾಷ ರಿಲೀಸ್? ನಿರ್ಮಾಪಕಿ ರೀಟ್ವೀಟ್‌ಗೆ ಕಿಚ್ಚನ ಫ್ಯಾನ್ಸ್‌ ಫುಲ್‌ ಖುಷ್…‌

Next Post

ವಿವಾಹಿತೆಯನ್ನು ಓಡಿಸಿಕೊಂಡು ಹೋದ ಯುವಕನ ಮನೆ ಧ್ವಂಸ..! : ಮಗ ಮಾಡಿದ ತಪ್ಪಿಗೆ ಕಣ್ಣೀರಿನಲ್ಲಿ ಬಡ ಕುಟುಂಬ..

Related Posts

ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ
Top Story

ಬಂಡಿಪುರ, ನಾಗರಹೊಳೆ ಸಫಾರಿಗೆ ಗ್ರೀನ್ ಸಿಗ್ನಲ್: ಸುರಕ್ಷತೆಗೆ ಮೊದಲ ಆದ್ಯತೆ

by ಪ್ರತಿಧ್ವನಿ
June 30, 2026
0

ಬೆಂಗಳೂರು: ಬಂಡಿಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಫಾರಿ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನಾರಂಭಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್...

Read moreDetails
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊಟ್ಟೆಗೆ ಬ್ರೇಕ್? ಮಕ್ಕಳ ಆರೋಗ್ಯಕ್ಕಿಂತ ರಾಜಕೀಯವೇ ಮುಖ್ಯವೇ..?

June 30, 2026
ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ: ಸಿದ್ದರಾಮಯ್ಯ ಮುಂದೆ ಪ್ರದೀಪ್‌ ಈಶ್ವರ್‌ ಕಣ್ಣೀರು

ಕೆಂಪೇಗೌಡ ಜಯಂತಿಯಲ್ಲಿ ಚಪ್ಪಲಿ ಎಸೆತ: ಸಿದ್ದರಾಮಯ್ಯ ಮುಂದೆ ಪ್ರದೀಪ್‌ ಈಶ್ವರ್‌ ಕಣ್ಣೀರು

June 30, 2026
Toxic: ಜುಲೈ1ಕ್ಕೆ ಟಾಕ್ಸಿಕ್ ಲೇಡಿಸ್ ದರ್ಶನ! ಯಶ್‌ ಕೊಟ್ಟ ಸುಳಿವು ಏನ್‌ ಗೊತ್ತಾ?

Toxic: ಜುಲೈ1ಕ್ಕೆ ಟಾಕ್ಸಿಕ್ ಲೇಡಿಸ್ ದರ್ಶನ! ಯಶ್‌ ಕೊಟ್ಟ ಸುಳಿವು ಏನ್‌ ಗೊತ್ತಾ?

June 30, 2026
ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

ಪ್ರಶ್ನೆ ಕೇಳಿದ್ರೆ ಸಿಡಿದ ಸದಾನಂದ ಗೌಡ: ಮೋದಿ ನೋಡಿ ಹೊಸ ಚಾಳಿ ಬೆಳೆಸಿಕೊಂಡ್ರಾ ಬಿಜೆಪಿ ನಾಯಕರು..?

June 30, 2026
Next Post
belagavi Crime news love

ವಿವಾಹಿತೆಯನ್ನು ಓಡಿಸಿಕೊಂಡು ಹೋದ ಯುವಕನ ಮನೆ ಧ್ವಂಸ..! : ಮಗ ಮಾಡಿದ ತಪ್ಪಿಗೆ ಕಣ್ಣೀರಿನಲ್ಲಿ ಬಡ ಕುಟುಂಬ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada