ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿಕೆ ಶಿವಕುಮಾರ್ ಸಂಪುಟದ ಕುರಿತು ಸಾಕಷ್ಟು ಕುತೂಹಲ ಮೂಡಿದೆ. ಸಿದ್ದರಾಮಯ್ಯ ಬಳಿಕ ಮುಂದಿನ ಸಂಪುಟ ಹೇಗಿರಲಿದೆ, ಯಾರೆಲ್ಲ ಅದರ ಭಾಗವಾಗಿರುತ್ತಾರೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ಆದರೆ ಇದೀಗ ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದ್ದು, ನೂತನ ಸರ್ಕಾರದ ಸಂಪುಟ ಸೇರಲಿರುವ ಶಾಸಕರ ಅಂತಿಮ ಪಟ್ಟಿ ಪ್ರಕಟವಾಗಿದೆ. ಅದರಲ್ಲಿ 13 ಶಾಸಕರಿಗೆ ಮಂತ್ರಿ ಭಾಗ್ಯ ಒಲಿದು ಬಂದಿದೆ. ಅದರಲ್ಲಿ
ಕೊರಟಗೆರೆ ವಿಧಾನಸಭಾ ಕ್ಷೇತ್ರದ ದಲಿತ ಸಮುದಾಯದ ಶಾಸಕರಾಗಿರುವ ಡಾ. ಜಿ. ಪರಮೇಶ್ವರ್, ಮಂಗಳೂರು ಕ್ಷೇತ್ರದ ಮುಸ್ಲಿಂ ಸಮುದಾಯದ ಶಾಸಕರಾಗಿರುವ ಯು.ಟಿ. ಖಾದರ್, ಬಿಟಿಎಂ ಲೇಔಟ್ ಕ್ಷೇತ್ರದ ರೆಡ್ಡಿ ಸಮುದಾಯದ ಹಿರಿಯ ಶಾಸಕರಾಗಿರುವ ರಾಮಲಿಂಗಾರೆಡ್ಡಿ, ಸರ್ವಜ್ಞ ನಗರ ಕ್ಷೇತ್ರದ ಕ್ರಿಶ್ಚಿಯನ್ ಸಮುದಾಯದ ಶಾಸಕರಾಗಿರುವ ಕೆ.ಜೆ.ಜಾರ್ಜ್, ಚಿತ್ತಾಪುರ ಕ್ಷೇತ್ರದ ದಲಿತ ಸಮುದಾಯದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ಲಭಿಸಿದೆ.
ಇದನ್ನೂ ಓದಿ : ಗಾಂಧಿ ಕುಟುಂಬದ ಆಪ್ತನಾಗಿ ಬೆಳೆದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ “ಟ್ರಬಲ್‌ಶೂಟರ್” ರಾಜಕೀಯ ಪಯಣ ಇಲ್ಲಿದೆ
ಇನ್ನೂ ಯಮಕನಮರಡಿಯ ದಲಿತ ಸಮುದಾಯದ ಕ್ಷೇತ್ರದ ಸತೀಶ್ ಜಾರಕಿಹೊಳಿ, ಬಬಲೇಶ್ವರ ಕ್ಷೇತ್ರದ ಲಿಂಗಾಯತ ಸಮುದಾಯದ ಶಾಸಕ ಎಂ.ಬಿ. ಪಾಟೀಲ್, ಬ್ಯಾಟರಾಯನಪುರ ಕ್ಷೇತ್ರದ ಒಕ್ಕಲಿಗ ಸಮುದಾಯದ ಶಾಸಕ ಕೃಷ್ಣಭೈರೇಗೌಡ, ಕುರುಬ ಸಮಾಜದ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಹೆಬ್ಬಾಳ ಕ್ಷೇತ್ರದ ಕುರುಬ ಸಮುದಾಯದ ಶಾಸಕ ಬೈರತಿ ಸುರೇಶ್, ದೇವನಹಳ್ಳಿ ಕ್ಷೇತ್ರದ ದಲಿತ ಸಮಾಜದ ಕೆ.ಎಚ್. ಮುನಿಯಪ್ಪ, ಇನ್ನುಳಿದಂತೆ ಭಾಲ್ಕಿ ಕ್ಷೇತ್ರದ ಲಿಂಗಾಯತ ಸಮಾಜದ ಶಾಸಕ ಈಶ್ವರ್ ಖಂಡ್ರೆ ಹಾಗೂ ಸೇಡಂ ವಿಧಾನಸಭಾ ಕ್ಷೇತ್ರದ ಶಾಸಕ ಶರಣಪ್ರಕಾಶ್ ಪಾಟೀಲ್ ಅವರಿಗೆ ಡಿಕೆ ಶಿವಕುಮಾರ್ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.
ನೂತನ ಸಚಿವ ಸಂಪುಟದ ಅಧಿಕೃತ ಖಾತಗೆಳ ಹಂಚಿಕೆ ಪಟ್ಟಿ ಹೀಗಿದೆ..
ಏಕೈಕ ಡಿಸಿಎಂ: ಜಿ.ಪರಮೇಶ್ವರ್ (ಕಂದಾಯ)
ಸ್ಪೀಕರ್: ಎಚ್. ಕೆ. ಪಾಟೀಲ್
ಬೆಂಗಳೂರು ಅಭಿವೃದ್ಧಿ: ಕೃಷ್ಣ ಬೈರೇಗೌಡ
ಇಂಧನ ಖಾತೆ: ಕೆ.ಜೆ. ಜಾರ್ಜ್
ನಗರಾಭಿವೃದ್ಧಿ: ಯತಿಂದ್ರ ಸಿದ್ಧಾರಾಮಯ್ಯ
ಆಹಾರ ಇಲಾಖೆ: ಕೆ. ಹೆಚ್. ಮುನಿಯಪ್ಪ
ಆರೋಗ್ಯ ಸಚಿವ: ಯು. ಟಿ. ಖಾದರ್
ಸಾರಿಗೆ ಸಚಿವ: ಭೈರತಿ ಸುರೇಶ್
ಬೃಹತ್ ನೀರಾವರಿ: ರಾಮಲಿಂಗಾ ರೆಡ್ಡಿ
ಗೃಹ ಇಲಾಖೆ: ಪ್ರಿಯಾಂಕ್ ಖರ್ಗೆ
ಲೋಕೋಪಯೋಗಿ: ಸತೀಶ್ ಜಾರಕಿಹೊಳಿ
ಗ್ರಾಮೀಣಾಭಿವೃದ್ಧಿ: ಈಶ್ವರ ಖಂಡ್ರೆ
ಬೃಹತ್ ಕೈಗಾರಿಕೆ: ಎಂ.ಬಿ.ಪಾಟೀಲ್
ವೈದ್ಯಕೀಯ ಶಿಕ್ಷಣ: ಶರಣ್ ಪ್ರಕಾಶ್ ಪಾಟೀಲ್
ಕೆಪಿಸಿಸಿ : ಇನ್ನೂ ತೀರ್ಮಾನವಾಗಿಲ್ಲ






