ಬೆಂಗಳೂರು : ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಪಶ್ಷಿಮ ಬಂಗಾಳದ ವಿಧಾನಸಭೆಯ ಎರಡನೇ ಹಂತದ ಮತದಾನ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಈಗಾಗಲೇ ಹಲವಾರು ಗ್ಯಾರಂಟಿಗಳನ್ನು ಘೋಷಿಸಿವೆ. ಈ ನಡುವೆ ಪೂರ್ವ ರಾಜ್ಯದ ಚುನಾವಣೆಯು ಬಿಜೆಪಿಗೆ ಮಾಡು ಇಲ್ಲವೇ ಮಡಿ ಎಂಬ ಸನ್ನಿವೇಶಕ್ಕೆ ದೂಡಿದ್ದು, ಅದರಂತೆ ಆಡಳಿತಾರೂಢ ಟಿಎಂಸಿಗೂ ಅಷ್ಟೇ ಸವಾಲಗಳನ್ನೂ ಒಡ್ಡಿದೆ. ಈ ಎಲ್ಲದರ ಮಧ್ಯೆ ಇಂದಿನ ಚುನಾವಣೆಯು ಸಾಕಷ್ಟು ಕಟ್ಟೆಚ್ಚರ ಹಾಗೂ ತೀವ್ರ ಭದ್ರತೆಯ ನಡುವೆ ಮುಂದುವರೆದಿದೆ.

ರಾಜ್ಯದ 142 ಸ್ಥಾನಗಳಿಗೆ ನಡೆಯುತ್ತಿರುವ ಇಂದಿನ ಚುನಾವಣೆಯು ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಕಳೆದ ಏಪ್ರಿಲ್ 23 ರಂದು ಪಶ್ಚಿಮ ಬಂಗಾಳದ 152 ಸ್ಥಾನಗಳಿಗೆ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ದಕ್ಷಿಣ ಬಂಗಾಳದ ಎಂಟು ಜಿಲ್ಲೆಗಳಲ್ಲಿ 41,001 ಮತಗಟ್ಟೆಗಳಲ್ಲಿ ಈ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ವಿಶೇಷ ಮತದಾರರ ಪಟ್ಟಿ ವೀಕ್ಷಕ ಸುಬ್ರತಾ ಗುಪ್ತಾ ಮಾಹಿತಿ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳಲು ಹಾಗೂ ಮತದಾರರ ಸುರಕ್ಷತೆಯ ದೃಷ್ಟಿಯಿಂದ ಸಿಎಪಿಎಫ್ನ ಸುಮಾರು 2,400 ತುಕಡಿಗಳನ್ನು ನಿಯೋಜಿಸಲಾಗಿದೆ. ಬಂಗಾಳದಲ್ಲಿ ಶಾಂತಿ ಕಾಪಾಡಲು ನಾವು ಯಾವುದೇ ಹಂತಕ್ಕೂ ತಲುಪಲು ಸಿದ್ಧರಿದ್ದೇವೆ. ಎರಡನೇ ಹಂತದ ಚುನಾವಣೆಯು ಅತ್ಯಂತ ಸರಳವಾಗಿ ನಡೆಯುತ್ತದೆ ಎಂದು ಭಾವಿಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಹಂತದಲ್ಲಿ ಈಗಾಗಲೇ ಶೇ. 93 ಕ್ಕಿಂತ ಹೆಚ್ಚಿನ ಮತದಾನದ ಪ್ರಮಾಣವನ್ನು ಇನ್ನಷ್ಟು ಅಧಿಕವಾಗಿಸಲು ನಾವು ಎಲ್ಲಾ ಮತದಾರರಿಗೆ ಕರೆ ನೀಡಿದ್ದೇವೆ. ಎರಡನೇ ಹಂತದ ಎಲ್ಲಾ ಮತದಾರರು ಬಂದು ಶಾಂತಿಯುತವಾಗಿ ಮತ್ತು ಯಾವುದೇ ಭಯವಿಲ್ಲದೆ ಮತ ಚಲಾಯಿಸಬೇಕು. ಮತದಾರರ ಪಟ್ಟಿಯಲ್ಲಿ ಎಸ್ಐಆರ್ (Special Intensive Revisiion) ಪ್ರಕ್ರಿಯೆಯು ನಡೆದಿದ್ದು,, ಕೆಲವು ತುಕಡಿಗಳಿಗೆ ಬಾಡಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು, ಆದರೆ ಎಲ್ಲಾ ಸ್ಟ್ರಾಂಗ್ ರೂಮ್ಗಳ ಕಾವಲಿಗಾಗಿ ಕೇಂದ್ರದ ಭದ್ರತಾಪಡೆಗಳು ಇರಲಿವೆ. ಸ್ಟ್ರಾಂಗ್ ರೂಮ್ಗಳ ಪ್ರವೇಶ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೆ ದೃಶ್ಯಾವಳಿಗಳು ಲಭ್ಯವಿರುತ್ತವೆ” ಎಂದು ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ : ರವಿಬೆಳಗೆರೆ ವಿಚಾರದಲ್ಲಿ ಪ್ರತಾಪ್ ಸಿಂಹ ಕಿಡಿ: ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ






