• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಐಪಿಎಲ್‌ಗೆ ಮುನ್ನ ಸಿಎಸ್‌ಕೆಗೆ ಶಾಕ್: ಎಂ.ಎಸ್. ಧೋನಿ ಪಂದ್ಯಗಳಿಂದ ದೂರವಾಗುವ ಸಾಧ್ಯತೆ?

ಪ್ರತಿಧ್ವನಿ by ಪ್ರತಿಧ್ವನಿ
March 30, 2026
in ಕ್ರೀಡೆ
0
ಐಪಿಎಲ್‌ಗೆ ಮುನ್ನ ಸಿಎಸ್‌ಕೆಗೆ ಶಾಕ್: ಎಂ.ಎಸ್. ಧೋನಿ ಪಂದ್ಯಗಳಿಂದ ದೂರವಾಗುವ ಸಾಧ್ಯತೆ?
Share on WhatsAppShare on FacebookShare on Telegram

ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಬೇಸರದ ಸುದ್ದಿ ಹೊರಬಿದ್ದಿದ್ದು, ಮಾಜಿ ನಾಯಕ ಎಂ.ಎಸ್. ಧೋನಿ ಗಾಯದ ಕಾರಣದಿಂದ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ.

ADVERTISEMENT
Mysore ಮೈಸೂರಿನ ಕವಾಯತು ಮೈದಾನದಲ್ಲಿ ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ

ಅಭ್ಯಾಸದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿರುವ 44 ವರ್ಷದ ಧೋನಿಗೆ ಕನಿಷ್ಠ ಮೂರು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ತಂಡದ ಮೂಲಗಳು ತಿಳಿಸಿವೆ. ಕಳೆದ ಒಂದು ತಿಂಗಳಿನಿಂದ ಚೆನ್ನೈನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದ ಧೋನಿ, ಇದೀಗ ಗಾಯದ ಹಿನ್ನೆಲೆಯಲ್ಲಿ ತಂಡದ ಜೊತೆ ಗುವಾಹಟಿಗೆ ಪ್ರಯಾಣಿಸದೆ ಚೆನ್ನೈನಲ್ಲೇ ಉಳಿದಿದ್ದಾರೆ. ಏಪ್ರಿಲ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಮರಳುವ ನಿರೀಕ್ಷೆಯಿದ್ದರೂ, ಇದು ಇನ್ನೂ ಖಚಿತವಾಗಿಲ್ಲ.

Mysore ಮೈಸೂರಿನ ಕವಾಯತು ಮೈದಾನದಲ್ಲಿ ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ

ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಈ ಹಿಂದೆ ಸುಳಿವು ನೀಡಿದ್ದರು. ನಾಯಕ ರುತುರಾಜ್ ಗಾಯಕ್ವಾಡ್ ಜೊತೆಗೂಡಿ ಸಂಜು ತಂಡದ ಪ್ರಮುಖ ನಿರ್ಧಾರಗಳಲ್ಲಿ ಭಾಗಿಯಾಗಲಿದ್ದಾರೆ.

ಪುದುಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ  ವೈಯಿತಿಲಿಂಗಂ ರವರ ಪರವಾಗಿ ಮತಯಾಚನೆ ನಡೆಸಿದ ದಿನೇಶ್ ಗುಂಡೂರಾವ್..

ಗಾಯದಿಂದ ಚೇತರಿಸಿಕೊಂಡು ಮರಳಿದರೂ, ಧೋನಿ ಎಲ್ಲಾ ಪಂದ್ಯಗಳಲ್ಲಿ ಆಡಲಾರರು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ‘ಇಂಪ್ಯಾಕ್ಟ್ ಸಬ್’ ಆಟಗಾರನಾಗಿ ಬಳಸಿಕೊಳ್ಳುವ ಯೋಚನೆ ಮ್ಯಾನೇಜ್‌ಮೆಂಟ್‌ನಲ್ಲಿ ಇದೆ. ಕಳೆದ ಎರಡು ಸೀಸನ್‌ಗಳಲ್ಲಿಯೂ ಧೋನಿ ಕೊನೆಯ ಓವರ್‌ಗಳಲ್ಲಿ ಮಾತ್ರ ಬ್ಯಾಟಿಂಗ್‌ಗೆ ಇಳಿಯುವ ತಂತ್ರ ಅನುಸರಿಸಿದ್ದರು.

ಇದೇ ವೇಳೆ, ಧೋನಿ ಅನುಪಸ್ಥಿತಿಯಿಂದ ಮಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ವಿಶೇಷವಾಗಿ 14.2 ಕೋಟಿ ರೂಪಾಯಿಗೆ ತಂಡ ಸೇರಿಕೊಂಡಿರುವ ಕಾರ್ತಿಕ್ ಶರ್ಮಾ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.

Samarth Shamanur Davanagere By election| ಡಬಲ್‌ ಡಿಗ್ರಿ ಮಾಡಿದವರಿಗೇನೆ ಈಗ ಕೆಲಸ ಸಿಗ್ತಾಯಿಲ್ಲ #pratidhvani

ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕವೂ ಐಪಿಎಲ್‌ನಲ್ಲಿ ಸಿಎಸ್‌ಕೆ ಪರವಾಗಿ ಆಡುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಚಾಂಪಿಯನ್ ಪಟ್ಟವನ್ನು ಗೆದ್ದಿದ್ದು, 2023ರಲ್ಲಿ ಕೊನೆಯ ಬಾರಿ ಟ್ರೋಫಿ ಗೆದ್ದಿತ್ತು. 2026ರ ಐಪಿಎಲ್ ಧೋನಿ ಪಾಲಿಗೆ ಕೊನೆಯ ಸೀಸನ್ ಆಗುವ ಸಾಧ್ಯತೆಗಳೂ ವ್ಯಕ್ತವಾಗಿವೆ.

Tags: Chennai Super KingsCricket NewsCSK NewsDhoni InjuryIndian Premier LeagueIPL 2026IPL Updatesms dhonipratidavaniRuturaj GaikwadSanju Samson
Previous Post

ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು

Next Post

ಡಾಲರ್ ಎದುರು ರೂಪಾಯಿ ಭಾರೀ ಕುಸಿತ: ಆರ್‌ಬಿಐ ತುರ್ತು ಕ್ರಮ

Related Posts

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
ಕ್ರೀಡೆ

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

by ಪ್ರತಿಧ್ವನಿ
May 21, 2026
0

ಐಪಿಎಲ್‌ನ 66ನೇ ಲೀಗ್ ಪಂದ್ಯದಲ್ಲಿ ಇಂದು ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಪ್ಲೇಆಫ್ ಲೆಕ್ಕಾಚಾರಗಳ ದೃಷ್ಟಿಯಿಂದ...

Read moreDetails
ವಿಜಯ್ ಬೆಂಬಲದ ವಿಚಾರಕ್ಕೆ ಎಐಎಡಿಎಂಕೆಯಲ್ಲಿ ಬಿರುಕು..? ಎಡಪ್ಪಾಡಿ ವಿರುದ್ಧವೇ ಎದ್ದ ಬಂಡಾಯ!

‘ಗೆಲುವಿನ ಸಂಭ್ರಮದಲ್ಲೇ ಆರ್‌ಸಿಬಿಗೆ ಬಿಗ್ ಶಾಕ್..! ಕೋಚ್‌ಗೆ ದಂಡ, ಮುಂಬೈ ಪ್ಲೇಆಫ್‌ನಿಂದ ಔಟ್’

May 11, 2026
“ಯಾವ ಪುರುಷಾರ್ಥಕ್ಕೆ ಅಭಿಮಾನೋತ್ಸವ?”: ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ!

“ದಾದಾ ರಾಜಕೀಯಕ್ಕೆ ಬಂದಿದ್ದರೆ ಇಂದು ಸಿಎಂ ಆಗುತ್ತಿದ್ರಾ?”: ಸೌರವ್ ಗಂಗೂಲಿ ಕುರಿತು ಮತ್ತೆ ಚರ್ಚೆ!

May 9, 2026
ಐಪಿಎಲ್‌ನಲ್ಲಿ ‘ಹನಿಟ್ರ್ಯಾಪ್’ ಭೀತಿ? ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ; ಹೊಸ ಭದ್ರತಾ ನಿಯಮ ಜಾರಿ

ಐಪಿಎಲ್‌ನಲ್ಲಿ ‘ಹನಿಟ್ರ್ಯಾಪ್’ ಭೀತಿ? ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ; ಹೊಸ ಭದ್ರತಾ ನಿಯಮ ಜಾರಿ

May 8, 2026
“ಫ್ರೀ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರಿಗೆ ಶಾಕ್?” ಚಿನ್ನಸ್ವಾಮಿಯಿಂದ ಐಪಿಎಲ್ ಫೈನಲ್ ಶಿಫ್ಟ್‌ ಹಿಂದಿನ ಕಾರಣ  ಇದು!

“ಫ್ರೀ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರಿಗೆ ಶಾಕ್?” ಚಿನ್ನಸ್ವಾಮಿಯಿಂದ ಐಪಿಎಲ್ ಫೈನಲ್ ಶಿಫ್ಟ್‌ ಹಿಂದಿನ ಕಾರಣ  ಇದು!

May 7, 2026
Next Post
ಡಾಲರ್ ಎದುರು ರೂಪಾಯಿ ಭಾರೀ ಕುಸಿತ: ಆರ್‌ಬಿಐ ತುರ್ತು ಕ್ರಮ

ಡಾಲರ್ ಎದುರು ರೂಪಾಯಿ ಭಾರೀ ಕುಸಿತ: ಆರ್‌ಬಿಐ ತುರ್ತು ಕ್ರಮ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada