ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ – ಇಸ್ರೇಲ್ ಯುದ್ಧದಲ್ಲಿ ಅಮೆರಿಕ ಪ್ರವೇಶಿಸಿರುವುದಕ್ಕೆ ಈಗಾಗಲೇ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ನಮಗೆ ಈ ಯುದ್ಧದ ಅವಶ್ಯಕತೆ ಇರಲಿಲ್ಲ ಇಸ್ರೇಲ್ ಅಮೆರಿಕದ ದಿಕ್ಕನ್ನು ತಪ್ಪಿಸಿದೆ ಎಂಬುವುದು ಅಮೆರಿಕನ್ನರ ಮಾತಾಗಿದೆ. ಹೀಗಾಗಿ ಅಮೆರಿಕದಲ್ಲಿ ಯುದ್ಧದ ವಿರುದ್ಧದ ಅಭಿಪ್ರಾಯಗಳು ಹೆಚ್ಚಾಗಿವೆ. ಈ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆಯು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.

ತಡರಾತ್ರಿ ಸುದ್ದಿಗೋಷ್ಠಿ ನಡೆಸಿ ಯುದ್ಧದ ಸ್ಥಿತಿಗತಿಯ ಕುರಿತು ನೆತನ್ಯಾಹು ಮಾಹಿತಿ ನೀಡಿದ್ದಾರೆ. ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ದಾಳಿಗಳು 21ನೇ ದಿನಕ್ಕೆ ಕಾಲಿಟ್ಟಿದೆ. ಇದಾದ ಬೆನ್ನಲ್ಲೇ, ನೆತನ್ಯಾಹು, (Netanyahu) ನಾವು ಯುದ್ಧ ಗೆಲ್ಲುತ್ತಿದ್ದೇವೆ, ಇರಾನ್ ಸರ್ವನಾಶವಾಗುತ್ತಿದೆ ಎನ್ನುವ ಮೂಲಕ ಯುದ್ಧದ ಪ್ರಗತಿಯ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಇರಾನ್ ಈ ಯುದ್ಧದಲ್ಲಿ ಸೋಲುತ್ತಿದೆ ಎಂದು ಇರಾನ್ ಯುದ್ಧ ಸಾಮಗ್ರಿಗಳನ್ನು ಟೀಕಿಸಿದ್ದಾರೆ.
ಇದನೂ ಓದಿ : ಡಾಗ್ ಸತೀಶ್ ವಿರುದ್ಧ ಕೇಸ್ ದಾಖಲು: ಪ್ರಕರಣವೇನು ?
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಸರಣಿ ವಾಯುದಾಳಿಗಳಿಂದಾಗಿ ಇರಾನ್ ಈಗ ಯುರೇನಿಯಂ ಸಮೃದ್ಧಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಇರಾನ್ ಈಗ ಬರಿದಾಗುತ್ತಿದೆ, ನಮ್ಮ ಜಂಟಿ ಕಾರ್ಯಾಚರಣೆಯು (Joint Operation ಇರಾನ್ನ ಜನರನ್ನು ಅಲ್ಲಿನ ಆಡಳಿತದ ವಿರುದ್ಧ ದಂಗೆ ಏಳುವಂತೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಆದರೆ ಅದು ಅಲ್ಲಿನ ಜನರಿಗೆ ಬಿಟ್ಟಿರುವ ವಿಚಾರವೆಂದು ನೆತನ್ಯಾಹು ಹೇಳಿದ್ದಾರೆ.
ನಾನು ಜೀವಂತವಾಗಿದ್ದೇನೆ, ಹಾರ್ಮುಜ್ ಜಲಸಂಧಿಯನ್ನು (Strait Of Hormuz) ಮುಚ್ಚುವ ಇರಾನ್ ಬೆದರಿಕೆಗಳು ನಮ್ಮ ಮುಂದೆ ನಡೆಯುವುದಿಲ್ಲ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅಮೆರಿಕ ಪ್ರಯತ್ನಿಸುತ್ತಿದೆ. ಇರಾನ್ ತೈಲ ಸಂಸ್ಕರಣಾ ಘಟಕದ ಮೇಲೆ ನಾವೇ ದಾಳಿಗಳನ್ನು ನಡೆಸಿದ್ದೇವೆ, ಆದರೆ ಈಗ ಟ್ರಂಪ್ ನಮಗೆ ತಾಕೀತು ಮಾಡಿದ್ದಾರೆ, ಯಾವುದೇ ಕಾರಣಕ್ಕೂ ತೈಲ ಘಟಕಗಳನ್ನು ಗುರಿಯಾಗಿಸಿಬೇಡಿ ಅಂತ ಹೇಳಿದ್ದಾರೆ. ಹೀಗಾಗಿ ನಾವು ಅವರ ಮಾತನ್ನು ಕೇಳುತ್ತೇವೆ. ಈ ಯುದ್ಧವು ನಿರೀಕ್ಷೆಗಿಂತ ಬೇಗ ಕೊನೆಗೊಳ್ಳಬಹುದು ಎಂದು ನೆತನ್ಯಾಹು ತಿಳಿಸಿದ್ದಾರೆ.






