ವೇಣುಸ್ವಾಮಿ ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದ ಹೇಳಿಕೆ ನೀಡುತ್ತಲೇ ಇರುತ್ತಾರೆ.ತೆಲುಗಿನ ಜ್ಯೋತಿಷಿ ವೇಣುಸ್ವಾಮಿ ಅವರು ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಯಶ್ ಅವರ ಮಾನಸಿಕ ಸ್ಥಿತಿ ಮತ್ತು ವೃತ್ತಿಜೀವನದ ಬಗ್ಗೆ ವೇಣುಸ್ವಾಮಿ ಮಾತನಾಡಿದ್ದಾರೆ.ಇದೀಗ ವೇಣುಸ್ವಾಮಿ ಯಶ್ ಅವರ ಕುರಿತು ನೀಡಿದ ಹೇಳಿಕೆಗೆ ವೈರಲ್ ಆಗುತ್ತಿದ್ದಾರೆ.

ಯಶ್ ಅವರನ್ನು ಏಕವಚನದಲ್ಲಿ ಕರೆದಿದ್ದು ಅಲ್ಲದೆ, ಅವರು ಖಿನ್ನೆತಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.ಯಶ್ ಅಂತ ಒಬ್ಬರು ಹೀರೋ ಇದಾನೆ. ಆತನ ಪರಿಸ್ಥಿತಿ ತುಂಬಾ ಕಷ್ಟದಲ್ಲಿದೆ. ಕನ್ನಡದ ಹೀರೋ ಅಂತ ಹೆಸರು ತೆಗೆದುಕೊಂಡು ಮಾತನಾಡುತ್ತಿದ್ದೇನೆ. ತೆಲುಗು ಹೀರೋ ಆಗಿದ್ರೆ ಮಾತನಾಡುತ್ತಾ ಇರಲಿಲ್ಲ. ಯಶ್ ಡಿಪ್ರೆಷನ್ ಅಲ್ಲಿದ್ದಾನೆ. ಆತ ಮಾಡಿದ ಎರಡು ಸಿನಿಮಾ ಎಲ್ಲಿಯೋ ಇವೆ. ಕೆಜಿಎಫ್ನ ಪದೇ ಪದೇ ತೆಗೆಯೋಕಾಗಲ್ಲ. ಕೆಜಿಎಫ್ ರೀತಿಯ ಸಿನಿಮಾ ತೆಗೆಯಲು ಸಾಧ್ಯವಾಗದೆ, ಹೊಸ ಸಿನಿಮಾ ಆಯ್ಕೆ ಮಾಡಲಾಗದೆ ಡಿಪ್ರೆಷನ್ಗೆ ಹೋಗಿದ್ದಾನೆ. ಸ್ಟಾರ್ ಸ್ಟೇಟಸ್ ಉಳಿಸಿಕೊಳ್ಳೋಕೆ ಆಗ್ತಿಲ್ಲ. ಅದೇ ಟೆನ್ಷನ್ ಅಲ್ಲಿ ಯಶ್ ಇದ್ದಾನೆ’ ಎಂದಿದ್ದಾರೆ ವೇಣು ಸ್ವಾಮಿ.

ಯಶ್ ಈಗಾಗಲೇ ಮಾಡಿರುವ ಕೆಜಿಎಫ್ ಸಿನಿಮಾಗಳು ಎಲ್ಲೋ ಇವೆ. ಆದರೆ ಅದನ್ನೇ 10 ಭಾಗಗಳಲ್ಲಿ ಮಾಡಲು ಸಾಧ್ಯವಿಲ್ಲ. ಈಗ ಜನರಿಗೆ ಅದೇ ಮಟ್ಟದ ಸಿನಿಮಾ ಕೊಡುವುದು ಹೇಗೆ ಎಂಬ ಚಿಂತೆಯಲ್ಲಿ ಯಶ್ಗೆ ಹುಚ್ಚು ಹಿಡಿದಂತಾಗಿದೆ” ಎಂದು ವೇಣುಸ್ವಾಮಿ ಹೇಳಿದ್ದಾರೆ.ಇದು ಎರಡು ತಿಂಗಳ ಹಿಂದೆ ನೀಡಿದ ಸಂದರ್ಶನ ಆಗಿದ್ದು, ಈಗ ವೈರಲ್ ಆಗಿದೆ.
ಈ ಸುದ್ದಿ ಓದಿ
ಟೆನಿಸ್ ಆಟಗಾರ್ತಿ ಶಿಲ್ಪಾರಂತೆ ಮಂಡ್ಯ ನೆಲದಿಂದ ಇನ್ನಷ್ಟು ಪ್ರತಿಭೆಗಳು ಹೊರಬರಲಿ : ಮನ್ಸುಖ್ ಮಾಂಡವೀಯ ಕರೆ..
https://www.instagram.com/reel/DVxpPg_iLRw/?igsh=Ync2dWtyYnVwZzln






