ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಜನತೆಯ ತಲೆಗೆ ಹುಳ ಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.ಅದು ಎಚ್ಚರಿಕೆಯ ಪೋಸ್ಟ್ ಹಾಕಿದ್ದಾರೆ. ಎಲ್ಲರೂ ಶೇರ್ ಮಾಡಿ ಎಂದು ಹೇಳುವ ಕಾಲದಲ್ಲಿ ಉಪ್ಪಿ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡುವುದಾಗಿ ತಿಳಿಸಿದ್ದು, ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ.

ನಾಳೆ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಪೋಸ್ಟ್ ಮಾಡ್ತೀನಿ. ಇದನ್ನ ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಅಂತ ನನಗೆ ಸೂಚನೆ ಇದೆ, ಹಾಗಾಗಿ ಪೋಸ್ಟ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಡಿಲೀಟ್ ಮಾಡಿದ್ರೂ ಮಾಡಬಹುದು.” “ನೀವು ಇದನ್ನ ನೋಡಿದ್ರೆ ಬೇರೆ ಯಾರ ಹತ್ತಿರವೂ ಹೇಳ್ಬೇಡಿ. ಸದ್ಯಕ್ಕೆ ಇದು ನಮ್ಮ ನಡುವೆ ಮಾತ್ರ ಇರಲಿ. ಲಿಂಕ್ ನೋಡಿ ಸುಮ್ಮನಿದ್ದುಬಿಡಿ. ಎಚ್ಚರಿಕೆ ಎಂದು ಉಪ್ಪಿ ಪೋಸ್ಟ್ ಮಾಡಿದ್ದಾರೆ.

ಯಾವ ಲಿಂಕ್ ಬಗ್ಗೆ ಉಪ್ಪಿ ಹೇಳುತ್ತಿದ್ದಾರೆ. ಎಂದು ಜನ ಯೋಚಿಸುತ್ತಿದ್ದಾರೆ. ಉಪ್ಪಿ ಯಾವ ಹೊಸ ಸಿನಿಮಾ ಬಗ್ಗೆ ಹೇಳುತ್ತಿದ್ದಾರೆ ಎಂದು ಜನ ತಲೆಕೆಡಿಸೊಕೊಂಡೊದ್ದಾರೆ. ಲಿಂಕ್ ಡಿಲೀಟ್ ಮಾಡಿದರೂ ಮಾಡಬಹುದು ಅಂತಲೂ ಹೇಳೊದ್ದಾರೆ ಹಾಗಾಗಿ ನಾಳೆ ಜನ 10 ಗಂಟೆಗೆ ಉಪ್ಪಿ ಹಾಕುವ ಲಿಂಕ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.







