• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Fact check : ಜನರಲ್‌ ಕೋಚ್‌ ಜಗಳ, ಮಹಿಳೆ ಕೈಯಲ್ಲಿ ಚಪ್ಪಲಿ : ವೈರಲ್‌ ವಿಡಿಯೋದ ಅಸಲಿಯತ್ತೇನು..?

ರೈಲಿನಲ್ಲಿದ್ದವರು ಸ್ವಲ್ಪ ಜವಾಬ್ದಾರಿ ಮರೆದು ಜಗಳ ಬಿಡಿಸಿದ್ದರೆ ಈ ಅವಾಂತರ ಆಗುತ್ತಿರಲಿಲ್ಲ..

ಪ್ರತಿಧ್ವನಿ by ಪ್ರತಿಧ್ವನಿ
March 13, 2026
in Top Story, ಇದೀಗ, ದೇಶ
0
Fact check : ಜನರಲ್‌ ಕೋಚ್‌ ಜಗಳ, ಮಹಿಳೆ ಕೈಯಲ್ಲಿ ಚಪ್ಪಲಿ : ವೈರಲ್‌ ವಿಡಿಯೋದ ಅಸಲಿಯತ್ತೇನು..?
Share on WhatsAppShare on FacebookShare on Telegram

Fact Check 

ADVERTISEMENT

ಬೆಂಗಳೂರು : ಜನರಲ್ ಕೋಚ್ ರೈಲು ಹೆಚ್ಚು ಜನನಿಬಿಡ ಆಗಿರುತ್ತದೆ. ರಿಜರ್ವೇಶನ್ ಇಲ್ಲದಿರುವ ಟ್ರೈನ್‌ ಕಾಯ್ದಿರಿಸದ ಸೀಟ್‌ಗಳಿರುತ್ತವೆ. ಈ ಕೋಚ್‌ನಲ್ಲಿ ಪ್ರಯಾಣಿಸಲು ಒಂದೇ ಅವಶ್ಯಕತೆಯೆಂದರೆ ನೀವು ಟಿಕೆಟ್ ಹೊಂದಿರಬೇಕು ಮತ್ತು ಸ್ಥಳದಲ್ಲೇ ಆಸನವನ್ನು ಪಡೆದುಕೊಂಡಿರಬೇಕು.

Karnataka Legislative Council : ಗ್ಯಾಸ್ ಸಿಲಿಂಡ್ರೇ ಇಲ್ಲವಾದಾಗ ನಮಗೆ ಆಕ್ರೋಶ ಬಂದೇ ಬರುತ್ತದೆ..! #pmmodi

ಏಕೆಂದರೆ, ದೀರ್ಘ ಪ್ರಯಾಣದ ರೈಲುಗಳಲ್ಲಿ ಸೀಟ್‌ಗಳಿಗಾಗಿಯೇ ಬಹುತೇಕ ಗಲಾಟೆಗಳು ಈ ಆಸನಗಳಿಗಾಗಿಯೇ ಇರುತ್ತದೆ. ಅದೇ ರೀತಿ ಸೋಷಿಯಲ್‌ ಮೀಡಿಯಾದಲ್ಲಿ ಪ್ರಸ್ತುತ ವೈರಲ್‌ ಆಗುತ್ತಿರುವ ವೀಡಿಯೋವೊಂದು ಪರ – ವಿರೋಧದ ಚರ್ಚೆಯನ್ನು ಹುಟ್ಟು ಹಾಕಿದೆ.

ಚಲಿಸುತ್ತಿರುವ ಜನರಲ್‌ ಟ್ರೈನ್‌ ಒಂದರಲ್ಲಿ ಯುವಕ ಹಾಗೂ ಮಹಿಳೆಯ ನಡುವೆ ಆಸನಕ್ಕಾಗಿ ಜಗಳವಾಗಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲವಾದರೂ ಬಿಹಾರದ ಮೂಲದ ವೀಡಿಯೋ ಇದಾಗಿದೆ ಎಂದು ವರದಿಯಾಗಿದೆ.

What Nonsense Is This?' Angry Netizens React After Woman Hurls Casteist Slur, Waves Slipper At Man During Train Seat Fight; Appreciate His 'Tight Reply' | Watch

ಯುವಕ ಹಾಗೂ ಮಹಿಳೆಯ ಮಧ್ಯೆ ಗಲಾಟೆ ನಡೆಯುತ್ತಿರುವ ವೀಡಿಯೋದಲ್ಲಿ ಮಹಿಳೆಯನ್ನು ತನ್ನ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಆ ಯುವಕನ ಮೇಲೆ ಹಲ್ಲೆ ಮಾಡುತ್ತಾಳೆ. ತನ್ನ ಹೆಂಡತಿಯ ಮುಂದೆ ಈ ಅವಮಾನವನ್ನು ಸಹಿಸಿಕೊಂಡಾಗಲೂ ಆ ವ್ಯಕ್ತಿ ಶಾಂತನಾಗಿದ್ದನು. ಆದರೂ ಇಬ್ಬರನ್ನೂ ನೋಡಿ ಕೋಪಗೊಂಡ ಆ ಮಹಿಳೆ, ಯುವಕನ ಹೆಂಡತಿಯನ್ನು ನಿಂದಿಸಿ, ಅವಮಾನಿಸಲು ಪ್ರಾರಂಭಿಸುತ್ತಾಳೆ. ಆಗ ಅವನು ಕೋಪಗೊಂಡು ಅವಳ ಮೇಲೆ ಕೈ ಎತ್ತಿದನು. ಈ ನಡೆಯು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಬಳಕೆದಾರರು ಇದಕ್ಕೆ ತಮ್ಮದೇ ಆದ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ : ಗ್ಯಾರಂಟಿ ಯೋಜನೆ ಹಿಂಪಡೆಯುವಂತೆ ಬಿಜೆಪಿಯಿಂದ ಅಧಿಕೃತ ನಿರ್ಣಯ ಮಂಡಿಸಿ : ಡಿ.ಕೆ. ಶಿವಕುಮಾರ್ ಸವಾಲು..!

ರೈಲಿನ ಜನರಲ್ ಕೋಚ್‌ನಲ್ಲಿ ನಡೆದ ಘಟನೆಯಲ್ಲಿ, ಒಬ್ಬರನ್ನು ತಪ್ಪಿತಸ್ಥರೆಂದು ಮತ್ತು ಇನ್ನೊಬ್ಬರದ್ದು ಅವರ ಹಕ್ಕು ಎಂದು ಹೇಳಲಾಗುವುದಿಲ್ಲ. ಆದರೆ ರೈಲಿನಲ್ಲಿ ಎಲ್ಲರ ಮುಂದೆ ವಿವಾಹಿತ ದಂಪತಿಗಳ ಮೇಲೆ ಮಹಿಳೆ ಪದೇ ಪದೇ ದೌರ್ಜನ್ಯ ಎಸಗಿದ್ದು ಮತ್ತು ಆಕೆಯ ಕುಟುಂಬ ಸದಸ್ಯರೊಂದಿಗೆ ನಿರಂತರವಾಗಿ ಹೋಲಿಸಿದ್ದನ್ನು ನೋಡಿದಾಗ ಆ ಮಹಿಳೆಯು ತನ್ನ ಮಿತಿಗಳನ್ನು ಮೀರಿದ್ದಳು.

चप्पल दिखाकर धमका रही थीं आंटी, युवक ने खो दिया आपा और… ट्रेन में मच गया बवाल - WATCH | Indian Train General Coach Fight Aunty Chappal Threat Man Slaps Viral Video |

ಆದರೆ ಆ ಮಹಿಳೆಯು ಯುವಕನ ಸೌಂದರ್ಯ ಮತ್ತು ಅವನ ಹೆಂಡತಿಯ ಸೌಂದರ್ಯ, ಬಣ್ಣ ಜಾತಿ ಸೇರಿದಂತೆ ಇತರ ವಿಷಯಗಳ ಬಗ್ಗೆ ಕಾಮೆಂಟ್ ಮಾಡಿದ್ದಾಳೆ. ಇಷ್ಟೆಲ್ಲಾ ನಡೆದರೂ ಶಾಂತವಾಗಿದ್ದ ಆ ಯುವಕ ನಂತರ ಮಹಿಳೆಗೆ ಹಲವು ಕಪಾಳಮೋಕ್ಷ ಮಾಡಿದ್ದಾನೆ.

ಆದರೆ ಕಾನೂನಿನಲ್ಲಿ ದೈಹಿಕ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆ ಯುವಕ ವಿಚಾರದಲ್ಲಿ ಆ ಮಹಿಳೆಯೆ ತಕರಾರು ಇದ್ದರೆ ರೈಲಿನ ಅಧಿಕಾರಿಗಳಿಗೆ ದೂರು ನೀಡಬಹುದಿತ್ತು, ಅಥವಾ ರೈಲ್ವೆ ಇಲಾಖೆಯ ಆನ್‌ಲೈನ್‌ನಲ್ಲಿ ಕಂಪ್ಲೇಂಟ್‌ ನೀಡಬಹುದಿತ್ತು.

ಆದರೆ ಒಬ್ಬ ಮಹಿಳೆಯಾಗಿ ಅವರು ಮಾತನಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ನೆಟ್ಟಿಗರದ್ದಾಗಿದೆ. “ನೀನು ಏನು? ನನ್ನ ಮಗ ನಿನಗಿಂತ ಸುಂದರವಾಗಿದ್ದಾನೆ, ಅವನು ಎಂಜಿನಿಯರ್. ನನ್ನ ಗಂಡ ಒಬ್ಬ ಸೂಪರ್‌ವೈಸರ್‌. ನನ್ನ ಮಗಳು ನಿನ್ನ ಹೆಂಡತಿಗಿಂತ ಸುಂದರಿಯಾಗಿದ್ದಾಳೆ ಅದು ಹೊಳೆಯುವ ಚಂದ್ರನಂತೆ ಎಂದು ಟೀಕಿಸಿದ್ದಾಳೆ. ಆ ಮಹಿಳೆ ನಿರಂತರವಾಗಿ ಕೈಯಲ್ಲಿ ಚಪ್ಪಲಿ ಹಿಡಿದು ಆ ವ್ಯಕ್ತಿಗೆ ಬೆದರಿಕೆಯನ್ನು ಹಾಕಿದ್ದಾಳೆ. ಅಲ್ಲದೆ ಆ ಯುವಕನನ್ನು ಅಸಭ್ಯವಾಗಿ ನಿಂದಿಸಿದ್ದಾಳೆ. 

ಇದನ್ನು ಕೇಳಿದ ಆ ಯುವಕ ಕೋಪಗೊಂಡು ಹಲ್ಲೆ ಮಾಡಿದ್ದಾನೆ. ಈ ವಿಚಾರವು ಸಮರ್ಥನೆ ಮಾಡಿಕೊಳ್ಳುವಂಥದ್ದಲ್ಲ. ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತಿನ ವರ್ತನೆಗಾಗಿ ರೈಲ್ವೆ ಇಲಾಖೆಯು ಇಬ್ಬರೂ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸ್ಥಳದಲ್ಲಿದ್ದ ಇತರ ಪ್ರಯಾಣಿಕರು ಸ್ವಲ್ಪ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರೆ ಈ ರೀತಿಯ ಸನ್ನಿವೇಶ ನಿರ್ಮಾಣವೇ ಆಗುತ್ತಿರಲಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯವಾಗಿದೆ. ಈ ಬಗ್ಗೆ ರೈಲೈ ಪೊಲೀಸರು ಪ್ರಕರಣ ದಾಖಲಿಸಿದ್ದಾರಾ ಇಲ್ಲವಾ ಎಂಬ ಮಾಹಿತಿ ಲಭ್ಯವಾಗಿಲ್ಲ.

Tags: Bihar NewsFact checkFoot WareGeneral Train PassengerGents PassengerIndian railwaysIRCTCLady PassengerLashes On PassengerMan HandlingPartidhvaniPublic JourneyREserved SeatSeat FightTrain fightViral NewsViral VideoWomen Beat men
Previous Post

ಗ್ಯಾರಂಟಿ ಯೋಜನೆ ಹಿಂಪಡೆಯುವಂತೆ ಬಿಜೆಪಿಯಿಂದ ಅಧಿಕೃತ ನಿರ್ಣಯ ಮಂಡಿಸಿ : ಡಿ.ಕೆ. ಶಿವಕುಮಾರ್ ಸವಾಲು..!

Next Post

ಅಡುಗೆ ಅನಿಲ ಬುಕ್ಕಿಂಗ್ ದಿನಗಳ ಗಡುವು ಹೆಚ್ಚಳ! ಯಾರಿಗೆ ಈ ನಿಮಯ ಅನ್ವಯ?

Related Posts

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..
Top Story

ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ..

by ಪ್ರತಿಧ್ವನಿ
May 2, 2026
0

ಬೆಂಗಳೂರು : ಕೃಷಿಯನ್ನು ಲಾಭದಾಯಕವಾಗಿಸಲು ವೈಜ್ಞಾನಿಕ ನೆರವನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇಂದು ನಗರದ ಓಕಳೀಪುರಂನಲ್ಲಿ ರೇಷ್ಮೆ ಮತ್ತು ಖನಿಜ ಭವನ...

Read moreDetails
ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

May 2, 2026
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

May 2, 2026
ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

May 2, 2026
Next Post
LPG ಸಿಲಿಂಡರ್ ಸರಬರಾಜು ಸ್ಥಗಿತ: ಹೋಟೆಲ್, ಪಿ.ಜಿ, ಹಾಸ್ಟೇಲ್ ಗಳಿಗೆ ಬಿಸಿ ತಟ್ಟಿದ್ದು ಹೀಗೆ!

ಅಡುಗೆ ಅನಿಲ ಬುಕ್ಕಿಂಗ್ ದಿನಗಳ ಗಡುವು ಹೆಚ್ಚಳ! ಯಾರಿಗೆ ಈ ನಿಮಯ ಅನ್ವಯ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada