• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿದ್ದರಾಮಯ್ಯನವ್ರಿಗೆ ವಿಶ್ವಾಸ ದ್ರೋಹ ಬಗೆದ್ರಾ..?

ಸಂಪಾದಕರು, ಪತ್ರಕರ್ತರು ಮುಖ್ಯಮಂತ್ರಿಗಳ ಸೌಜನ್ಯದ ಆಹ್ವಾನವನ್ನು ಈ ರೀತಿ ದುರುಪಯೋಗ ಮಾಡಿದ್ದು ಎಳ್ಳಷ್ಟೂ ಸರಿಯಲ್ಲ : ಚಂದರಗಿ ಕಿಡಿ ಕಾರಿದ್ದಾರೆ..

ಪ್ರತಿಧ್ವನಿ by ಪ್ರತಿಧ್ವನಿ
March 8, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಸಿದ್ದರಾಮಯ್ಯನವ್ರಿಗೆ ವಿಶ್ವಾಸ ದ್ರೋಹ ಬಗೆದ್ರಾ..?
Share on WhatsAppShare on FacebookShare on Telegram

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಮದ್ಯದ ಬಾಟಲ್‌, ಗ್ಲಾಸ್‌ ತುಂಬಿದ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  ಈ ಬಗ್ಗೆ ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರರು ಹಾಗೂ ಮಾಜಿ ಹಿರಿಯ ಪತ್ರಕರ್ತರಾದ ಅಶೋಕ್‌ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT
UPSC Topper Kiran Kamate Interview | UPSC Topper Kiran Kamate Shares Success Tips Tips to Face UPSC

ಇಂಥ ಹಲವಾರು ಗುಂಡು ಪಾರ್ಟಿಗಳು ಬೆಂಗಳೂರಿನಲ್ಲಿ ನಿತ್ಯವೂ ನಡೆಯುತ್ತಲೇ ಇರುತ್ತವೆ. ಮಾಧ್ಯಮದವರು, ಮಂತ್ರಿಗಳು, ಶಾಸಕರು ಸಹ ಇದಕ್ಕೆ ಹೊರತಲ್ಲ. ಆದರೆ ಮುಖ್ಯಮಂತ್ರಿಗಳು ಮತ್ತು ಖ್ಯಾತ ಪತ್ರಕರ್ತರು ಕೂಡಿಕೊಂಡು, ತಮ್ಮೆದುರು ಮದ್ಯದ ಬಾಟಲಿ, ಗ್ಲಾಸುಗಳನ್ನು ಇಟ್ಟುಕೊಂಡ ಫೋಟೋ ಕಾಣಿಸಿಕೊಂಡಿರುವದು ಅವರುಗಳ ಸ್ಥಾನ ಹಾಗೂ ಮಾನಕ್ಕೆ ತಕ್ಕುದಲ್ಲ. ರಾಜಕೀಯ ಜಟಾಪಟಿಯ ಮಧ್ಯೆ ನಡೆದಿರುಬಹುದಾದ ಇಂಥ ಪಾರ್ಟಿಯ ಫೋಟೋವನ್ನು ಉದ್ದೇಶಪೂರ್ವಕವಾಗಿ, ಮುಖ್ಯಮಂತ್ರಿಗಳ ಹೆಸರನ್ನು ಕೆಡಿಸುವ ದ್ರಷ್ಟಿಯಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡಲಾಗಿದೆಯೇ /ಎಂಬ ಸಂದೇಹ ಮಾಧ್ಯಮ ಲೋಕದಲ್ಲಿ ಉಂಟಾಗಿದೆ ಎಂದು ಎಂದಿದ್ದಾರೆ.

ಮುಖ್ಯಮಂತ್ರಿಗಳು ಮದ್ಯ, ಬೀರಿನ ವಾಸನೆ ಮತ್ತು ರುಚಿಯ ಬಗ್ಗೆ ವಿಧಾನ ಸಭೆಯಲ್ಲಿಯೇ ಅನೇಕ ಬಾರಿ ಹೇಳಿದ ಪ್ರಸಂಗಗಳಿವೆ. ಆದರೆ ಸಂಪಾದಕರು, ಪತ್ರಕರ್ತರು ಮುಖ್ಯಮಂತ್ರಿಗಳ ಸೌಜನ್ಯದ ಆಹ್ವಾನವನ್ನು ಈ ರೀತಿ ದುರುಪಯೋಗ ಮಾಡಿದ್ದು ಎಳ್ಳಷ್ಟೂ ಸರಿಯಲ್ಲ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ : ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ

ಮುಖ್ಯಮಂತ್ರಿಗಳ ಸುತ್ತ ಸುತ್ತುವ ಮಾಧ್ಯಮ ನಿರ್ವಾಹಕರು ಈ ಬಗ್ಗೆ ಎಚ್ಚರ ವಹಿಸಬೇಕಿತ್ತು. ಇನ್ನು ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯರಾಧನೆ ಇಲ್ಲದ ಪಾರ್ಟಿ ಏರ್ಪಡಿಸುವದು ಒಳ್ಳೆಯದು. ಇಲ್ಲವಾದರೆ ಖಾಸಗಿ ಪಾರ್ಟಿಗಳಲ್ಲಿ ನಡೆಯುವ ಯಾವದಾವದೋ ” ಚಟುವಟಿಕೆಗಳು “ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳಬಹುದು!! ಈ ಫೋಟೋ ಕಾಣಿಸಿಕೊಂಡ ನಂತರ ನಮ್ಮ ಸಿ ಎಮ್ ಸಾಹೇಬರು ಪತ್ರಕರ್ತರನ್ನು ಯಾಕಾದರೂ ಆಹ್ವಾನಿಸಿದೆನೋ ಎಂದು ತಮ್ನ ಆಪ್ತರ ಎದುರು ಹೇಳಿದರಂತೆ! ಎಂದು ಚಂದರಗಿ ಪತ್ರಕರ್ತರ ವಿಶ್ವಾಸಾಹರ್ತೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಂದರಗಿ ಬೇಸರ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಪೂರ್ವಭಾವಿಯಾಗಿ ಸ್ನೇಹ ಭೋಜನ ಕೂಟ ಆಯೋಜಿಸಿದ್ದರು. ಅದರಲ್ಲಿ ಖ್ಯಾತ ಪತ್ರಕರ್ತರೆನಿಸಿಕೊಂಡವರು ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಈ ಫೋಟೋ ತೆಗೆದು ಹರಿಬಿಡಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

Tags: Ashok ChandaragiBelagavi newsCM SiddaramaiahCongress GovernmentCredibiltyDinner PartyJournalsitkarnataka newsPratidhvaniPre Budget PartyViral NewsViral PhotosWhiskey BottlesWine Bottles
Previous Post

“ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಏರದ ಎತ್ತರವಿಲ್ಲ, ಸಾಧಿಸದ ಸಾಧನೆಯಿಲ್ಲ”

Next Post

“ಮಹಿಳೆ ಕೇವಲ ಒಂದು ಕುಟುಂಬದ ಭಾಗವಲ್ಲ, ಸಮಾಜದ ಶಕ್ತಿ, ಸಂಸ್ಕೃತಿಯ ಸಾರಥಿ”

Related Posts

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು
Top Story

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

by ಪ್ರತಿಧ್ವನಿ
May 21, 2026
0

ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದ ₹17 ಲಕ್ಷ ಮೌಲ್ಯದ...

Read moreDetails
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
Next Post
“ಮಹಿಳೆ ಕೇವಲ ಒಂದು ಕುಟುಂಬದ ಭಾಗವಲ್ಲ, ಸಮಾಜದ ಶಕ್ತಿ, ಸಂಸ್ಕೃತಿಯ ಸಾರಥಿ”

"ಮಹಿಳೆ ಕೇವಲ ಒಂದು ಕುಟುಂಬದ ಭಾಗವಲ್ಲ, ಸಮಾಜದ ಶಕ್ತಿ, ಸಂಸ್ಕೃತಿಯ ಸಾರಥಿ"

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada