ಬೆಂಗಳೂರು : ಭಾರತದಲ್ಲಿ ವಿಶ್ವಕಪ್ ಪಂದ್ಯ ಆಡಲು ಹೆದರಿದ್ದ ಪಾಕಿಸ್ತಾನ ಇದೀಗ ಮತ್ತೊಂದು ಪಂದ್ಯವನ್ನು ನಿರಾಕರಿಸುವ ಸಾಧ್ಯತೆಗಳಿವೆ. ಮಂಗಳವಾರವಷ್ಟೇ ನಡೆದಿರುವ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೋಲು ಕಂಡ ನಂತರ, 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೆಮಿಫೈನಲ್ ಪಂದ್ಯದ ಅನುಮಾನ ಮೂಡುತ್ತಿದೆ.

ಇಂಗ್ಲೆಂಡ್ ತಂಡದ ಅದ್ಭುತ ಬ್ಯಾಟಿಂಗ್‌ನಿಂದ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡುವ ಮೂಲಕ ಹೀನಾಯ ಸೋಲಿಗೆ ಶರಣಾಗಿದೆ. ಇಂಗ್ಲೆಂಡ್ ಪರವಾಗಿ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದರು. ಹ್ಯಾರಿ ಬ್ರೂಕ್ಉತ್ತಮ ಶತಕವು ಇಂಗ್ಲೆಂಡ್ ತಂಡದ ಪಾಲಿಗೆ ಶಕ್ತಿ ನೀಡಿದಂತಾಗಿತ್ತು.
ಮುಖ್ಯವಾಗಿ ಇದು ಸೂಪರ್ 8ರ ಪಂದ್ಯದ ಎರಡನೇ ಗೆಲುವು ಸಾಧಿಸುವುದರ ಜೊತೆಗೆ ಸೆಮಿಸ್‌ಗೆ ಅರ್ಹತೆ ಪಡೆಯಲು ನೆರವಾಗಿದೆ. ಇನ್ನೂ ಇಂಗ್ಲೆಂಡ್ ವಿರುದ್ಧ ಸೋತು ಸುಣ್ಣವಾಗಿರುವ ಪಾಕಿಸ್ತಾನಕ್ಕೆ ಸೆಮಿಫೈನಲ್‌ಗೆ ಯೋಗ್ಯತೆಯು ಇಲ್ಲದ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಗುಂಪು ವಿಚಾರದಲ್ಲಿ ಕೇವಲ ಒಂದು ಬಾರಿ ಪಾಕಿಸ್ತಾನ ಮತ್ತು ಭಾರತ ಸೆಣಸಾಡಿದ್ದವು. ಆದರೆ ಇದೀಗ ಟಿ20 ವಿಶ್ವಕಪ್ ಫೈನಲ್ ಪಂದ್ಯ ಬಿಟ್ಟರೇ ಪಾಕ್ ಭಾರತದ ವಿರುದ್ಧ ಕಣಕ್ಕಿಳಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಇದನ್ನೂ ಓದಿ : ತಳವಾರ ಸಮಾಜಕ್ಕೆ ಎಸ್.ಟಿ ಪತ್ರ ನೀಡುವಲ್ಲಿ ವಿಳಂಬ: ಸರ್ಕಾರಕ್ಕೆ ಖಡಕ್ ಎಚ್ಚರಿಕೆ
ಗುಂಪು 1ರಲ್ಲಿ ಗೆದ್ದವರು 2ನೇ ಗುಂಪಿನ ರನ್ನರ್-ಅಪ್ ತಂಡ ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಇನ್ನೂ ಗುಂಪು 2ರ ವಿಜೇತ ತಂಡವು 1ರ ರನ್ನರ್-ಅಪ್ ಟೀಂ ಜೊತೆ ಇನ್ನೊಂದು ಸೆಮಿಫೈನಲ್ ಎದುರಿಸಲಿದೆ. ಅಲ್ಲದೆ ಇಂಗ್ಲೆಂಡ್ ತಂಡವು ಗುಂಪು 2 ರಲ್ಲಿ ಮುಂಚೂಣಿ ಸ್ಥಾನ ಪಡೆದು ಸೆಮಿಫೈನಲ್‌ಗೆ ಅರ್ಹವಾಗಿದೆ.
ಪಾಕ್ ಬಳಿ ಇರುವ ಪಾಯಿಂಟ್‌ಗಳೆಷ್ಟು..?
ಮಳೆಯ ಕಾರಣದಿಂದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡದ ನಡುವಿನ ಪಂದ್ಯವು ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಸದಾ ಸೋಲುತ್ತಿರುವ ಪಾಕಿಸ್ತಾನ ಕೇವಲ ಒಂದು ಪಾಯಿಂಟ್‌ಗೆ ಸೀಮಿತವಾಗಿದೆ. ಈ ಹಂತದಲ್ಲಿ ಕೇವಲ ಪಾಕ್ ಬಳಿ ಇರುವುದು ಒಂದು ಪಂದ್ಯ ಮಾತ್ರ. ಇದರಲ್ಲಿ ಗೆದ್ದರೇ ಮೂರು ಪಾಯಿಂಟ್ ಪಡೆಯುವ ಸಾಧ್ಯತೆಯಿದೆ. ಇನ್ನುಳಿದ ಪಂದ್ಯಗಳನ್ನಾಧರಿಸಿ ಇತರ ಸ್ಥಾನಗಳನ್ನೂ ಪಡೆಯಬಹುದಾಗಿದೆ.
ಸದ್ಯ ಭಾರತ ತಂಡವು 1ನೇ ಗುಂಪಿನ ಮೂರನೇ ಸ್ಥಾನದಲ್ಲಿದೆ. ಅಂದರೆ ಸೂಪರ್ 8 ಪಂದ್ಯದಲ್ಲಿನ ಇದುವರೆಗೆ ತಲಾ ಒಂದೊಂದು ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಆರಂಭದ ಎರಡು ಸ್ಥಾನಗಳಲ್ಲಿವೆ.
ಪ್ರಮುಖವಾಗಿ ಸೆಮಿಫೈನಲ್ ಎಂಟ್ರಿಯ ಅವಕಾಶಕ್ಕಾಗಿ ಭಾರತ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಜಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡಗಳಿಗೆ ಸೋಲಿನ ರುಚಿತೋರಿಸಬೇಕಾಗುತ್ತದೆ .






