ಇಂದು ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್, ನಟ ದರ್ಶನ್ ತೂಗುದೀಪ(Darshan Thoogudeepa) ಹುಟ್ಟುಹಬ್ಬ. ಪ್ರತಿ ಬಾರಿಯೂ ಹಬ್ಬದಂತೆ ಅದ್ದೂರಿಯಾಗಿರುತ್ತಿದ್ದ ಈ ದಿನ ಕಳೆದೆರಡು ವರ್ಷಗಳಂದ ಬರೀ ಮೌನ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿತರಾಗಿದ್ದು, ಈ ಬಾರಿ ಜನ್ಮದಿನವನ್ನು ಜೈಲಿನಲ್ಲಿಯೇ ಕಳೆಯಬೇಕಾಗಿದೆ. ಅತ್ತ ಜೈಲಿನಲ್ಲಿ ದರ್ಶನ್ ತುಂಬಾನೇ ಕಷ್ಟಪಡುತ್ತಿದ್ದರೆ, ಇತ್ತ ಅಭಿಮಾನಿಗಳು ತಮ್ಮ ಮೆಚ್ಚಿನ ದಿನದಂದು ದಾಸನನ್ನು ಕಾಣಲಾಗದೇ ಸಂಕಟ ಪಡುತ್ತಿದ್ದಾರೆ.
ದರ್ಶನ್ ಅವರನ್ನು ಭೇಟಿಯಾಗಿ ಶುಭಾಶಯ ತಿಳಿಸಲು ಸಾಧ್ಯವಾಗದ ಕೊರಗು ಒಂದೆಡೆಯಾದರೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ಗೆ ಅಭಿಮಾನಿಗಳು ಹಾಗೂ ಅವರನ್ನು ಇಷ್ಟಪಡುವ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪ್ರೀತಿಯಿಂದ ಪತಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ವಿಜಯಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ನಟಿ ನಟಿ ರಕ್ಷಿತಾ ಪ್ರೇಮ್ ದರ್ಶನ್ ಹುಟ್ಟುಹಬ್ಬಕ್ಕೆ ಭಾವುಕರಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ತೆಗೆದ ಫೋಟೋ. ನನ್ನ ಪ್ರೀತಿ ಪಾತ್ರನಿಗೆ ಜನ್ಮದಿನದ ಶುಭಾಶಯ. ನಾನು ನಿನ್ನನ್ನು ದಿನವೂ ಮಿಸ್ ಮಾಡಿಕೊಳ್ಳುತ್ತೇನೆ. ನೀನು ಮತ್ತೆ ಖುಷಿಯಾಗಿ ಇರೋದನ್ನು ನೋಡುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಇನ್ನು ನಟ ಶರಣ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಸರ್. ಆದಷ್ಟು ಬೇಗ ಎಲ್ಲವೂ ಸರಿ ಹೋಗಿ ನಿಮ್ಮನ್ನು ಬೆಳ್ಳಿತೆರೆಯ ಮೇಲೆ ನೋಡಬಯಸುವ ನಿಮ್ಮ ಎಲ್ಲಾ ಅಭಿಮಾನಿಗಳ್ಳಲ್ಲಿ ನಾನೂ ಒಬ್ಬ. ಆ ಭಗವಂತನ ಅನುಗ್ರಹ ಸಂಪೂರ್ಣವಾಗಿ ನಿಮ್ಮ ಮೇಲಿರಲಿ ಸರ್ ಎಂದು ಬರೆದುಕೊಂಡಿದ್ದಾರೆ. ಹಾಗೂ ನಟ ನಿನಾಸಂ ಸತೀಶ್ ಹುಟ್ಟುಹಬ್ಬದ ಶುಭಾಶಯಗಳು ಸರ್ ಎಂದು ಶುಭಾಶಯ ಕೋರಿದ್ದಾರೆ.

ಇನ್ನು ದರ್ಶನ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನಟ ಧನ್ವೀರ್ ಗೌಡ ತಮ್ಮ ಮೆಚ್ಚಿನ ಅಣ್ಣನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ (ಬಾಸ್) ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ ಎಂದು ಹಳೆಯ ವಿಡಿಯೋ ಶೇರ್ ಮಾಡಿ ವಿಶ್ ಮಾಡಿದ್ದಾರೆ.






