ಬೆಂಗಳೂರು: ನಟ ದರ್ಶನ್ (Darshan) ಅವರ ಹುಟ್ಟುಹಬ್ಬದ ಅಂಗವಾಗಿ ನಟ ಧನ್ವೀರ್ (Dhanveer Gowda) ಅಭಿನಯದ ‘ಹಯಗ್ರೀವ’ ಚಿತ್ರದ ಆಕ್ಷನ್ ಟೀಸರ್ ಬಿಡುಗಡೆಯಾಗಿದೆ.

ಟೀಸರ್‌ನಲ್ಲಿ ಮೊದಲು ಸದ್ಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಸಂಕಷ್ಟದಲ್ಲಿರುವ ದರ್ಶನ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ನುಡಿ ನಮನ ಸಲ್ಲಿಸಲಾಗಿದೆ. ಜೊತೆಗೆ ಸಣ್ಣ ಆಕ್ಷನ್ ಝಲಕ್ ತೋರಿಸಲಾಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ ೧೨ ವಿನ್ನರ್ ಗಿಲ್ಲಿ ನಟ ಅವರ ಮಸ್ತ್ ಡೈಲಾಗ್ ಟೀಸರ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತದೆ.
ಕಿಡಿಗೇಡಿ ಧನ್ವೀರ್‌ಗೆ ಎಚ್ಚರಿಕೆ ನೀಡುವ ದೃಶ್ಯದಿಂದ ಟೀಸರ್ ಆರಂಭವಾಗುತ್ತದೆ. ಬಳಿಕ ಮಾಸ್ ಡೈಲಾಗ್‌ಗಳೊಂದಿಗೆ ಧನ್ವೀರ್ ಎಂಟ್ರಿ ತೋರಿಸಲಾಗಿದ್ದು, ಶರ್ಟ್ ಲೆಸ್ ಆಗಿ ಸಿಕ್ಸ್‌ಪ್ಯಾಕ್ ಪ್ರದರ್ಶಿಸಿ ಧನ್ವೀರ್ ಆಕ್ಷನ್ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ನನಗೆ ತಾಳ್ಮೆ ಸ್ವಲ್ಪ ಕಮ್ಮಿ.. ಯಾಕಂದ್ರೆ ಚಾಮುಂಡೇಶ್ವರಿ ತಾಯಿ ನಮ್ಮ ಮಮ್ಮಿ ಎನ್ನೋ ಡೈಲಾಗ್ ಈಗಾಗಲೇ ಸಿನಿ ಪ್ರಿಯರ ಮನಸ್ಸು ಗೆದ್ದಿದೆ.

ರಘು ಕುಮಾರ್ ಆಕ್ಷನ್ ಕಟ್ ಹೇಳಿರುವ ಹಯಗ್ರೀವ ಚಿತ್ರವನ್ನು ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಇನ್ನು ಧನ್ವೀರ್‌ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದು, ಸಾಧು ಕೋಕಿಲ, ಶರತ್ ಲೋಹಿತಾಶ್ವ, ರಮೇಶ್ ಭಟ್ ಸೇರಿದಂತೆ ಹಲವರ ತಾರಾಗಣವಿದೆ. ಸಂಗೀತವನ್ನು ಜುಡಾ ಸ್ಯಾಂಡಿ ನೀಡಿದ್ದು, ಗಿರೀಶ್ ಆರ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ರವಿವರ್ಮಾ ಸೇರಿದಂತೆ ಮೂವರು ಸ್ಟಂಟ್ಸ್ ಸಂಯೋಜಿಸಿದ್ದಾರೆ. ಒಟ್ಟಾರೆ ಹಯಗ್ರೀವ ಈ ಟೀಸರ್ ಮೂಲಕ ತೆರೆ ಮೇಲೆ ಆಕ್ಷನ್‌ನಿಂದ ಅಬ್ಬರಿಸುವ ಸೂಚನೆ ಕೊಟ್ಟಿದೆ.







