ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್(CJ Roy) ಶುಕ್ರವಾರ ಬೆಂಗಳೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ಆದಾಯ ತೆರಿಗೆ ದಾಳಿಯ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಐಟಿ ದಾಳಿಯೇ ಆತ್ಮಹತ್ಯೆಗೆ ಕಾರಣ ಎಂದು ಸಹೋದರ ಅನುಮಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಅವರ ಉದ್ಯಮಗಳು, ಆಸ್ತಿಗಳು ಮತ್ತು ಜೀವನಶೈಲಿಯ ಪ್ರಮಾಣವನ್ನು ಆಧರಿಸಿ, ಅವರನ್ನು ಮಾಧ್ಯಮ ವರದಿಗಳಲ್ಲಿ ಬಿಲಿಯನೇರ್ ಉದ್ಯಮಿ ಎಂದು ವಿವರಿಸಲಾಗಿದೆ.

ಸಾವಿಗೂ ಮುನ್ನದ ಅವರ ಕೊನೆಯ ಇನ್ಸ್ಟಾಗ್ರಾಮ್ ಪೋಸ್ಟ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅವರ ಕೊನೆಯ ಪೋಸ್ಟ್‌ನಲ್ಲಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು. “ಆತ್ಮೀಯ ಸ್ನೇಹಿತರೇ, ಶುಭವಾಗಲಿ, ನಿಮ್ಮೆಲ್ಲರಿಗೂ 77 ನೇ ಭಾರತೀಯ ರಾಷ್ಟ್ರೀಯ ಗಣರಾಜ್ಯೋತ್ಸವದ ಶುಭಾಶಯಗಳು” ಎಂದಿದ್ದರು. ಅಲ್ಲದೇ ಇದು ನಮ್ಮೆಲ್ಲರ ಜೀವನದಲ್ಲಿ ಒಂದು ಅದ್ಭುತ ದಿನ. ಆದ್ದರಿಂದ ನೀವು ಮತ್ತು ನಿಮ್ಮ ಕುಟುಂಬಕ್ಕೆ ಮತ್ತೊಮ್ಮೆ ತುಂಬಾ ಸಂತೋಷದ ಗಣರಾಜ್ಯೋತ್ಸವದ ಶುಭಾಶಯಗಳು, ಜಾಗರೂಕರಾಗಿರಿ” ಎಂದು ಹೇಳಿದ್ದರು. ಅಲ್ಲದೇ ಅವರ ಈ ಪೋಸ್ಟ್‌ನ ಕಾಮೆಂಟ್‌ಗಳನ್ನು ಕೂಡ ಆಫ್ ಮಾಡಲಾಗಿತು. ಜಾಗರೂಕರಾಗಿರಿ ಎನ್ನುವ ಸಿ.ಜೆ ರಾಯ್ ಅವರ ಸಂದೇಶ ಸದ್ಯ ಎಲ್ಲರ ಗಮನ ಸೆಳೆದಿದೆ.












