• Home
  • About Us
  • ಕರ್ನಾಟಕ
Sunday, February 1, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

Union Budget 2026: ಟ್ರಂಪ್‌ಗೆ ಗುನ್ನ: ಕೇಂದ್ರ ಬಜೆಟ್‌ನಲ್ಲಿ ಯಾರಿಗೆ ಸಿಹಿ? ಯಾರಿಗೆ ಕಹಿ..?

ಪ್ರತಿಧ್ವನಿ by ಪ್ರತಿಧ್ವನಿ
January 30, 2026
in ಇದೀಗ, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಾಣಿಜ್ಯ
0
Union Budget 2026: ಟ್ರಂಪ್‌ಗೆ ಗುನ್ನ: ಕೇಂದ್ರ ಬಜೆಟ್‌ನಲ್ಲಿ ಯಾರಿಗೆ ಸಿಹಿ? ಯಾರಿಗೆ ಕಹಿ..?
Share on WhatsAppShare on FacebookShare on Telegram

ಬೆಂಗಳೂರು : ಅಮೆರಿಕದ ತೆರಿಗೆ ಬೆದರಿಕೆಗಳ ನಡುವೆಯೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman)
ಅವರು ಫೆಬ್ರವರಿ 1ರಂದು ಭಾರತದ ಬಜೆಟ್‌ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಈ ಬಾರಿಯ ಬಜೆಟ್‌ ಮೇಲೆ ಸಾರ್ವಜನಿಕರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಜೆಟ್‌ನಲ್ಲಿ ಏನೆಲ್ಲ ನೀಡಬಹುದು ಎಂಬುವುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ADVERTISEMENT
Special Assembly: ಶಾಸಕ ಶಿವಲಿಂಗೇಗೌಡ ಖಡಕ್ ಪ್ರಶ್ನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕ್ #pratidhvani

ಈ ವರ್ಷದ ಆರಂಭದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವು ಶೇ.8ಕ್ಕಿಂತ ಅಧಿಕವಾಗಿತ್ತು, ಹೀಗಾಗಿ ಹಣಕಾಸು ವ್ಯವಸ್ಥೆಯು ಬಲಿಷ್ಠವಾಗಿ ಉಳಿದಿದೆ ಮತ್ತು ಬಳಕೆ, ಉತ್ಪಾದನೆ ಮತ್ತು ರಫ್ತುಗಳ ವಿಚಾರದಲ್ಲಿ ಕೆಲವು ಏರಿಕೆಗಳನ್ನು ಕಾಣಬಹುದಾಗಿದೆ. ಜಿಡಿಪಿಯು ಸುಮಾರು ಶೇ.7.4ರಷ್ಟು ಬೆಳೆಯುವ ನಿರೀಕ್ಷೆಯಿದೆ.

ಕಳೆದ ಕೆಲವು ವರ್ಷಗಳಿಂದ ಸರ್ಕಾರವು 5 ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತಿರುವ ತನ್ನ ಧಾವಂತದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಮುಂಬರುವ 2047 ರ ವೇಳೆಗೆ ‘ವಿಕಸಿತ ಭಾರತದ’ ಗುರಿಯನ್ನು ಹೊಂದಿದೆ. ಕಳೆದ 2019 ರಲ್ಲಿ ಕಾರ್ಪೊರೇಟ್ ತೆರಿಗೆ ಕಡಿತ, ಉತ್ಪಾದನಾ ವಲಯಗಳಲ್ಲಿ ಹೂಡಿಕೆಯನ್ನು ಆಕರ್ಷಿಸಲು ಉತ್ಪಾದನೆಗೆ ಬೆಂಬಲ ನೀಡಿದ್ದು, ಕೋವಿಡ್ ಸಮಯದಲ್ಲಿ ಗಮನಾರ್ಹ ಸುಧಾರಣೆಗಳು ಮತ್ತು ಮುಂಬರುವ ವರ್ಷಗಳಲ್ಲಿ ಮೂಲಸೌಕರ್ಯದ ಮೇಲೆ ಬೃಹತ್ ಬಂಡವಾಳ ವೆಚ್ಚ ಹೂಡುವ ಲೆಕ್ಕಾಚಾರವಿದೆ. ಗ್ರಾಹಕರ ವೆಚ್ಚದ ಉದ್ದೇಶದಿಂದ ಕಳೆದ ವರ್ಷ ಆದಾಯ ತೆರಿಗೆ ಕಡಿತ, ಮತ್ತು ಜಿಎಸ್‌ಟಿ ಕಡ್ಡಾಯಗೊಳಿಸುವಲ್ಲಿಯೂ ಕೂಡ ಕೇಂದ್ರ ಗಮನಹರಿಸಿದೆ.

ಇದನ್ನೂ ಓದಿ : Darshan: ಜೈಲಿನೊಳಗೆ ದರ್ಶನ್ ನೋಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಪೊಲೀಸ್ ಸಿಬ್ಬಂದಿ: ಆಗಿದ್ದೇನು..?

ದೇಶದ ಜಿಡಿಪಿಯಲ್ಲಿ ಕಾರ್ಪೊರೇಟ್ ಲಾಭದ ಪಾಲು ಹೆಚ್ಚಾಗಿದೆ, ಆದರೆ ವೇತನ ಆಧಾರಿತವಾಗಿ ಜನ ಜೀವನದಲ್ಲಿ ಬದಲಾವಣೆ ಸಾಧ್ಯವಾಗಿಲ್ಲ, ಜಿಡಿಪಿಯ ಸುಮಾರು ಶೇಕಡಾ 60 ರಷ್ಟಿರುವ ಖಾಸಗಿ ಬಳಕೆ, ಉತ್ಪಾದನೆಯಲ್ಲಿ ಹಿಂದೆ ಉಳಿದಿದೆ, ಇದು ಕುಟುಂಬಗಳ ವಿಚಾರದಲ್ಲಿ ಕಡಿಮೆ ಆದಾಯದ ಹರಿವನ್ನು ಪ್ರತಿಬಿಂಬಿಸುತ್ತಿದ್ದು, ಕಾರ್ಮಿಕರು ಹೆಚ್ಚಿರುವ ರಾಜ್ಯಗಳ ಮೇಲೆ ಅಧಿಕ ಪರಿಣಾಮ ಬೀರುತ್ತಿದೆ. ಕಡಿಮೆ ಉತ್ಪಾದಕತೆಯನ್ನು ಹೊಂದಿರುವ ದೊಡ್ಡ ವರ್ಗದಲ್ಲಿ ಬೇಡಿಕೆಯು ವ್ಯಾಪಕವಾಗಿರುತ್ತದೆ. ಈ ವೇಳೆಗೆ ಆರ್ಥಿಕತೆಯು ವಿಕಸನಗೊಳ್ಳಬೇಕಾದರೆ ಹಲವಾರು ಜನಸ್ನೇಹಿ ಸುಧಾರಣೆಗಳು ಆಗಬೇಕಿವೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕವಾಗಿರುವ ಕೆಲವು ವರ್ಗಗಳನ್ನು ಹೊರತುಪಡಿಸಿ, ಇನ್ನುಳಿದ ವರ್ಗಗಳ ಸ್ಥಿತಿಯು ಸುಧಾರಣೆಯಾಗಬೇಕಿದೆ ಎಂದು ಹೇಳಿದ್ದಾರೆ.

Police : 4 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ  #pratidhvani

ಇತ್ತೀಚಿನ ದಿನಗಳಲ್ಲಿಬ ಪ್ರಧಾನಿ ಮೋದಿ ಸರ್ಕಾರದ ನಿಯಂತ್ರಣ ಹೊಂದಿರದೆ ಇರುವ ಎರಡು ಘಟನೆಗಳು ಸರ್ಕಾರದ ಪ್ರಯತ್ನಗಳಿಗೆ ಬೆದರಿಕೆಯೊಡ್ಡುತ್ತಿವೆ. ಮೊದಲನೆಯದಾಗಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಪಂಚದ ಮೇಲೆ ಸಾರಿದ ದ್ವೇಷಕಾರಿ ಸುಂಕ ಯುದ್ಧವು ಹಲವು ದೇಶಗಳು ಚಿಂತಿಸುವಂತೆ ಮಾಡಿದೆ. ಭಾರತಕ್ಕೂ ಇದರ ಬಿಸಿ ತಟ್ಟುವ ಲಕ್ಷಣಗಳು ದಟ್ಟವಾಗಿವೆ. ಅಮೆರಿಕದ ಮೊದಲ ಗುರಿಯೇ ಚೀನಾ ಎಂದು ಹಲವರು ಭಾವಿಸಿದ್ದರೂ ಕೂಡ ಅದರಲ್ಲೂ ಮಹತ್ವದ ಬೆಳವಣಿಗೆಗಳು ನಡೆದಿವೆ, ಆದರೆ ಭಾರತವು ವ್ಯಾಪಾರ ಒಪ್ಪಂದದ ವಿಚಾರದಲ್ಲಿ ತನ್ನದೇ ಆದ ಪ್ರತ್ಯೇಕ ನಿಲುವನ್ನು ಹೊಂದಿದ್ದು, ಯುರೋಪಿಯನ್‌ ಒಕ್ಕೂಟದೊಂದಿಗೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಟ್ರಂಪ್‌ಗೆ ಸೆಡ್ಡು ಹೊಡೆದಿದೆ.

ಭಾರತದ ಮೇಲೆ ಟ್ರಂಪ್‌ ಕೆಂಗಣ್ಣು..?

ಶೇಕಡಾ 50 ಕ್ಕಿಂತ ಅಧಿಕ ಸುಂಕ ನೀತಿಯು ಭಾರತದ ಸರಕುಗಳು ಅಮೆರಿಕ ಪ್ರವೇಶಕ್ಕೆ ಅಡಚಣೆಯಾಗಿದೆ. ಅಲ್ಲದೆ ರಷ್ಯಾದಿಂದ ಆಮದು ಮಾಡಿಕೊಳ್ಳುವವರ ಮೇಲೆ ಅಮೆರಿಕದ ಶೇಕಡಾ 500 ರಷ್ಟು ಸುಂಕದ ಬೆದರಿಕೆಯು ‘ರಷ್ಯಾ ಮಂಜೂರಾತಿ ಮಸೂದೆ’ ಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ. ಟ್ರಂಪ್ ಭಾರತದ ಚಿನ್ನದ ಮೇಲೆ ಕಣ್ಣು ಹಾಕೋಕೆ ಶುರುಮಾಡುವ ಆತಂಕವೂ ಕಾಡುತ್ತಿದೆ. ಹೀಗಾಗಿ ಅಗತ್ಯ ಸೇವೆಗಳು, ಔಷಧಗಳು ಮತ್ತು ಎಲೆಕ್ಟ್ರಾನಿಕ್ಸ್ – ಇವುಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

Ananth Subba Rao No More: ಅನಂತ್ ಸುಬ್ಬರಾವ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಭಾರತದ ನಡುವಿನ ಅಮೆರಿಕದ ವ್ಯಾಪಾರ ಒಪ್ಪಂದವು ಕಾರ್ಯರೂಪಕ್ಕೆ ಬರುವ ಭರವಸೆ ಇದೆ, ಆದರೆ ಇದು ವಿಳಂಬವಾದಷ್ಟೂ ಭಾರತ ರಫ್ತುದಾರರ ನಿರೀಕ್ಷೆಗಳು ಹುಸಿಯಾಗುವ ಆತಂಕವೂ ಇದೆ. ಒಮ್ಮೆ ಕೈ ತಪ್ಪಿಹೋದ ವ್ಯವಹಾರವನ್ನು ಇನ್ನೊಬ್ಬರು ಬದಲಾಯಿಸಿದರೆ, ಅದನ್ನು ಮರಳಿ ಪಡೆಯುವುದು ಕಷ್ಟ. ಎಲ್ಲಾ ಪ್ರೋತ್ಸಾಹ ಮತ್ತು ರಿಯಾಯಿತಿಗಳ ಹೊರತಾಗಿಯೂ, ದೇಶದಲ್ಲಿ ಉತ್ಪಾದಿಸುವ ಸರಕುಗಳಿಗೆ ವಿಶ್ವದ ಅತಿದೊಡ್ಡ ಗ್ರಾಹಕ ಮಾರುಕಟ್ಟೆ ಅಮೆರಿಕವಾಗಿದೆ. ಇಲ್ಲಿ ಪ್ರತಿಕೂಲ ದರದಲ್ಲಿ ತೆರಿಗೆ ವಿಧಿಸಿದರೆ, ಜಾಗತಿಕವಾಗಿರುವ ದೊಡ್ಡ ಕಂಪನಿಗಳಿಗೆಲ್ಲ ಉತ್ಪಾದನಾ ಸ್ಥಳವಾಗಬೇಕೆಂದಿರುವ ಭಾರತದ ನಿರೀಕ್ಷೆಗಳು ವಿಫಲವಾಗುತ್ತವೆ ಎಂಬುವ ಕಳವಳಗಳು ಅಧಿಕವಾಗಿವೆ. ಇದರಿಂದ ದೇಶದ ಆರ್ಥಿಕತೆಗೆ ದೊಡ್ಡ ಹಾಗೂ ದೀರ್ಘಕಾಲೀನ ಹೊಡೆತ ಬೀಳುವ ಸಾಧ್ಯತೆಗಳಿವೆ ಎನ್ನುವುದು ಆರ್ಥಿಕ ಶಾಸ್ತ್ರಜ್ಞರ ಎಚ್ಚರಿಕೆಯಾಗಿದೆ.

ಬಜೆಟ್‌ನಲ್ಲಿ ಏನೆಲ್ಲ ನಿರೀಕ್ಷೆ ಮಾಡಬಹುದು..?

ಅಮೆರಿಕದ ತೆರಿಗೆ ಬೆದರಿಕೆಯ ನಡುವೆಯೂ ತಮ್ಮ ಮುಂಗಡ ಪತ್ರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಯಾವೆಲ್ಲ ವಿಚಾರಗಳ ಬಗ್ಗೆ ಗಮನಹರಿಸಬಹುದು ಎನ್ನುವುದನ್ನು ನೋಡಿದಾಗ, ಸಣ್ಣ ವ್ಯವಹಾರಗಳಿಗೆ ಉತ್ತಮ ಮತ್ತು ಸುಲಭ ಸಾಲ, ಭಾರತೀಯ (Ministry of Micro, Small and Medium Enterprises) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಣ್ಣ ಸರ್ಕಾರಿ ಟೆಂಡರ್‌ಗಳನ್ನು ಕಾಯ್ದಿರಿಸುವುದು ಹಾಗೂ ಮತ್ತಷ್ಟು (Tax Deducted at Source) ಮೂಲ ತೆರಿಗೆ ಕಡಿತ ಮತ್ತು ಜಿಎಸ್‌ಟಿ ಕಡ್ಡಾಯಗೊಳಿಸುವಿಕೆಗೆ ಹೆಚ್ಚಿನ ಒತ್ತು ನೀಡಬಹುದು. ಜಾಗತಿಕ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿಯೂ ಎಚ್ಚರಿಕೆಯ ನಡೆಯ ಭಾಗವಾಗಿ ಇದು ಮೊದಲ ಹೆಜ್ಜೆಯಾಗಿರುತ್ತದೆ ಎಂಬುವುದು ಕೇಂದ್ರ ಸರ್ಕಾರದ ಚಿಂತನೆ ಇದೆ ಎನ್ನಲಾಗಿದೆ.

ಇದನ್ನೂ ಓದಿ : BREAKING: ಸ್ಯಾಂಡಲ್‌ವುಡ್ ನಟನಿಂದ ಕುಡಿದು ಸರಣಿ ಅಪಘಾತ

Muniratna : ನಾನು ರೋಡಲ್ಲಿ ಹೋಗ್ತಿದ್ರೆ ಬಟ್ಟೆ ಹರಿತ್ತಾರೆ #pratidhvani #muniratna #rrnagara #rrnagara

ಟ್ರಂಪ್ ಹುಚ್ಚಾಟಕ್ಕೆ ನಿರ್ಮಲಾ ಬಜೆಟ್ ಯಾವ ಹಾದಿ ಹಿಡಿಯಬಹುದು..?

ಇನ್ನೂ ಇದಕ್ಕೂ ಮುನ್ನ ಅಂದರೆ ಕಳೆದ ಬಜೆಟ್‌ನಲ್ಲಿ ಹೊಸ ಬದಲಾವಣೆಯ ಜೊತೆಗೆ ಕೇಂದ್ರ ಸರ್ಕಾರ ದೇಶದ ಜನರಿಗೆ ಬಜೆಟ್‌ ನೀಡಿತ್ತು. ಆಗ ಟ್ರಂಪ್‌ ಅವರಂತಹ ದ್ವೇಷಿಗಳ ಕಿರಿ ಕಿರಿ ಇರಲಿಲ್ಲ. ಆದರೆ ಈ ಬಾರಿ ಬೆದರಿಕೆಯ ನಡುವೆಯೇ ಸೀತಾರಾಮನ್ ಆರ್ಥಿಕ ಸುಧಾರಣಾ ಹಾದಿಯಲ್ಲಿ ಎಷ್ಟು ಮುಂದೆ ಹೋಗಲು ಧೈರ್ಯ ಮಾಡುತ್ತಾರೆ ಎಂಬುದನ್ನು ಆಸಕ್ತಿಯಿಂದ ಕಾದು ನೋಡಲು ಎಲ್ಲರೂ ಸಿದ್ಧರಾಗಿದ್ದಾರೆ. ಈಗಾಗಲೇ ಯುರೋಪಿಯನ್‌ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದವಾಗಿದ್ದು, ಮತ್ತು ಟ್ರಂಪ್‌ ಸರ್ಕಾರದ ಜೊತೆ ವ್ಯಾಪಾರ ಒಪ್ಪಂದವೂ ಶೀಘ್ರದಲ್ಲಿಯೇ ನಡೆಯಲಿದೆ ಎಂಬ ಚರ್ಚೆಗಳ ನಡುವೆಯೇ ರಫ್ತುದಾರರಿಗೆ ಮತ್ತೊಂದು ಪರಿಹಾರ ಪ್ಯಾಕೇಜ್ ನೀಡುವುದು ಕೇಂದ್ರ ಸರ್ಕಾರದ ಚಿಂತನೆಯಾಗಿರಬಹುದು ಎನ್ನುವುದು ಹೂಡಿಕೆ ತಜ್ಞರ ಮಾತಾಗಿದೆ.

KJ George  ನಾನು ರಾಜೀನಾಮೆ ಕೊಡ್ತಿರೋ  ಆರ್ಡರ್ copy ಇದೆಯಾ..? #pratidhvani #kjgeorge #energyminister

ಸರ್ಕಾರವು ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಭಾರಿ ಹೂಡಿಕೆಯನ್ನು ಮುಂದುವರಿಸಲಿದೆ, ಆದರೆ ಸೀತಾರಾಮನ್ ದೇಶದ ಉದ್ಯೋಗ ಬೆಳವಣಿಗೆಯಲ್ಲಿ ಹೇಗೆ ಪ್ರಗತಿ ಸಾಧಿಸುತ್ತಾರೆ ಎಂಬುದು ಕೂಡ ಗಮನಾರ್ಹವಾಗಿದೆ. ಭಾರತವನ್ನು ನಾವೀನ್ಯತೆಯ ಕೇಂದ್ರವನ್ನಾಗಿ ಮಾಡಲು ಎಐ ಮತ್ತು ಇತರ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಹೂಡಿಕೆ ಮಾಡುವ ಸಾಧ್ಯತೆಗಳೂ ಇವೆ. ಭಾರತದ ಜನಸಂಖ್ಯೆಯ ವಿಚಾರವೂ ಶೀಘ್ರದಲ್ಲೇ ಹೊರೆಯಾಗಿ ಪರಿಣಮಿಸಲಿದೆ, ಮೂರು ವರ್ಷಗಳಿಗೆ ಹೋಲಿಕೆ ಮಾಡಿದಾಗ ಈಗ ಜನಸಂಖ್ಯಾ ಬೆಳವಣಿಗೆಯು ಕುಸಿದಿದೆ. ಇದರರ್ಥ ನಿರುದ್ಯೋಗದ ಸಮಸ್ಯೆ ಇದ್ದು, ಹೀಗಾಗಿ ಉದ್ಯೋಗಗಳನ್ನು ಸೃಷ್ಟಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಈ ಬಾರಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ ಭಾರತದ ಆರ್ಥಿಕತೆ ಹಾಗೂ ಜನಸಾಮಾನ್ಯರ ಜೀವನ ಮಟ್ಟದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂಬುವುದು ಆರ್ಥಿಕ ವಲಯದಲ್ಲಿನ ಅಭಿಪ್ರಾಯವಾಗಿದೆ.

Tags: BJPbudgetcentral budgetCentral Budget 2026Central GovernmentcongressIndiaNirmala SitharamanPoliticsUnion BudgetUnion Budget 2026
Previous Post

Daily Horoscope January 30: ಇಂದು ಮಾತು-ನಡೆ ನುಡಿಯಲ್ಲಿ ಎಚ್ಚರವಹಿಸಬೇಕಾದ ರಾಶಿಗಳಿವು..!

Next Post

BMTC ಬಸ್‌ಗಳ ಕೊರತೆ: ಮೋಹನ್ ದಾಸ್ ಪೈ ಟೀಕೆಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು

Related Posts

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ
Top Story

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

by ಪ್ರತಿಧ್ವನಿ
February 1, 2026
0

ನವದೆಹಲಿ: ಇಂದು ಕೇಂದ್ರ ಸರ್ಕಾರ 2026ರ ಬಜೆಟ್‌ ಮಂಡನೆ ಮಾಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ತಮ್ಮ ದಾಖಲೆಯ 9ನೇ ಬಜೆಟ್‌ನಲ್ಲಿ ಹಲವು ಮಹತ್ವದ...

Read moreDetails
Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

February 1, 2026
Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

February 1, 2026
Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ

Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ

February 1, 2026
Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

February 1, 2026
Next Post
BMTC ಬಸ್‌ಗಳ ಕೊರತೆ: ಮೋಹನ್ ದಾಸ್ ಪೈ ಟೀಕೆಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು

BMTC ಬಸ್‌ಗಳ ಕೊರತೆ: ಮೋಹನ್ ದಾಸ್ ಪೈ ಟೀಕೆಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು

Recent News

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ
Top Story

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

by ಪ್ರತಿಧ್ವನಿ
February 1, 2026
Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್
Top Story

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

by ಪ್ರತಿಧ್ವನಿ
February 1, 2026
Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ
Top Story

Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

by ಪ್ರತಿಧ್ವನಿ
February 1, 2026
Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ
Top Story

Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ

by ಪ್ರತಿಧ್ವನಿ
February 1, 2026
Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ
Top Story

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

February 1, 2026
Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

February 1, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!