ಬಿಗ್ ಬಾಸ್ ಕನ್ನಡ ಸೀಸನ್ 12(Boss Kannada season 12 )ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಸ್ಪರ್ಧಿಗಳ ಆಟ, ಅಭಿಮಾನಿಗಳ ಅಭಿಪ್ರಾಯ, ಸೋಶಿಯಲ್ ಮೀಡಿಯಾದ ಟ್ರೆಂಡ್ಸ್ ಎಲ್ಲವೂ ಫೈನಲ್ ಹಂತಕ್ಕೆ ಬರುವಾಗ ವಿನ್ನರ್ ವಿಚಾರದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಬಾರಿಯ ಬಿಗ್ ಬಾಸ್ ಒನ್ ಮ್ಯಾನ್ ಶೋ ಆಗಿದ್ದು, ಗಿಲ್ಲಿ ನಟ(Gilli Nata) ಸಂಪೂರ್ಣ ಶೋ ಆವರಿಸಿಕೊಂಡಿದ್ದರು.

ಬಿಗ್ ಬಾಸ್ ಮನೆಯೊಳಗೆ ಗಿಲ್ಲಿ ಹವಾ ಸೋಶಿಯಲ್ ಮೀಡಿಯಾದದಲ್ಲಿ ಅವರ ಜನಪ್ರಿಯತೆ ಕಂಡು ಈ ಬಾರಿ ಗಿಲ್ಲಿಯೇ ವಿನ್ನರ್ ಎಂದು ಬಹುತೇಕರು ಅಂದುಕೊಂಡಿದ್ದರು. ಆದರೆ ಇದೀಗ ಆಟ ಫಿನಾಲೆ ಹಂತಕ್ಕೆ ತಲುಪುತ್ತಿದ್ದಂತೆ ಹೊಸ ಟ್ವಿಸ್ಟ್ ಎನ್ನುವಂತೆ ಗಿಲ್ಲಿ ವಿನ್ನರ್ ಬದಲು ರನ್ನರ್ ಅಪ್ ಆಗುತ್ತಾರಾ..? ಎನ್ನುವ ಅನುಮಾನ ವೀಕ್ಷರಲ್ಲಿ ಮೂಡಿದೆ. ಅಲ್ಲದೇ ಗಿಲ್ಲಿ ಇನ್ನೊಂದು ಅರುಣ್ ಸಾಗರ್ ಆಗುತ್ತಾರಾ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.

ಬಿಗ್ ಬಾಸ್ ಕನ್ನಡ ಸೀಸನ್ ಆರಂಭವಾದ ದಿನದಿಂದಲೂ ಒಂದು ಹೆಸರು ನಿರಂತರವಾಗಿ ಕೇಳಿ ಬರುತ್ತಿದೆ—ಅದೇ ಗಿಲ್ಲಿ ನಟ . ತಮ್ಮ ಸಹಜ ಹಾಸ್ಯ, ಸರಳ ವ್ಯಕ್ತಿತ್ವ ಮತ್ತು ಎಲ್ಲರೊಂದಿಗೆ ಬೆರೆತು ಹೋಗುವ ಗುಣದಿಂದ ಗಿಲ್ಲಿ ಮನೆ ಮನೆಯಮಾತಾಗಿದ್ದಾರೆ. ಗಂಭೀರ ಆಟಕ್ಕಿಂತ ಮನರಂಜನೆಯ ಮೂಲಕವೇ ಪ್ರೇಕ್ಷಕರ ಮನ ಗೆಲ್ಲುತ್ತಿರುವ ಗಿಲ್ಲಿ, ಬಿಗ್ ಬಾಸ್ ಮನೆಯೊಳಗೆ ನಗು, ನಲಿವು ತರಿಸುವ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

ಹಾಸ್ಯ ನಟನಾಗಿ ಹಲವು ವರ್ಷಗಳಿಂದ ಕನ್ನಡ ಪ್ರೇಕ್ಷಕರನ್ನು ರಂಜಿಸಿರುವಗಿಲ್ಲಿ, ಈಗ ಬಿಗ್ ಬಾಸ್ ಮನೆಗೂ ಅದೇ ಮನರಂಜನೆ ತಂದುಕೊಟ್ಟಿದ್ದಾರೆ. ಟಾಸ್ಕ್‌ಗಳ ವೇಳೆ ಆಗಲಿ, ಸಾಮಾನ್ಯ ಮಾತುಕತೆಯಲ್ಲಾಗಲಿ, ಗಿಲ್ಲಿಯ ಕಾಮಿಡಿ ಟೈಮಿಂಗ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ನಿರ್ಮಾಣವಾಗಿದೆ.

ಸೋಷಿಯಲ್ ಮೀಡಿಯಾದಲ್ಲೂ ಗಿಲ್ಲಿ ಪರ ಬೆಂಬಲ ಜೋರಾಗಿದೆ. ‘ಗಿಲ್ಲಿಯೇ ವಿನ್ನರ್’, ‘ಈ ಬಾರಿ ಗಿಲ್ಲಿಗೆ ಕಪ್ ಬೇಕು’ ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಅನೇಕ ವೀಕ್ಷಕರು, ಇಡೀ ಸೀಸನ್‌ನಲ್ಲಿ ನಿರಂತರವಾಗಿ ಮನರಂಜನೆ ನೀಡಿರುವ ಸ್ಪರ್ಧಿ ಗಿಲ್ಲಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಗಿಲ್ಲಿ ವಿಚಾರದಲ್ಲಿ ಹಳೆಯ ಇತಿಹಾಸವೊಂದು ಮತ್ತೆ ಚರ್ಚೆಗೆ ಬಂದಿದೆ. ಅದು 2013. ಬಿಗ್ ಬಾಸ್ ಕನ್ನಡದ ಮೊದಲ ಸೀಸನ್. ಕಿಚ್ಚ ಸುದೀಪ್ ಅವರ ಹೋಸ್ಟ್‌ನೊಂದಿಗೆ ಈಟಿವಿ ಕನ್ನಡದಲ್ಲಿ ಪ್ರಸಾರವಾಗಿದ್ದ ಈ ಮೊದಲ ಸೀಸನ್‌ನಲ್ಲಿ, ವಿಜಯ್ ರಾಘವೇಂದ್ರ ವಿನ್ನರ್ ಆಗಿ ಹೊರಹೊಮ್ಮಿದರು. ಅರುಣ್ ಸಾಗರ್ ರನ್ನರ್ ಅಪ್ ಆದರು. ಆದರೆ ವೀಕ್ಷಕರ ಬಹುಮತದ ಅಭಿಪ್ರಾಯವೇ ಬೇರೆ ಆಗಿತ್ತು. ಮೊಟ್ಟಮೊದಲ ಸೀಸನ್‌ನಲ್ಲಿಯೇ ಸಂಪೂರ್ಣ ಶೋ ಮನೋರಂಜನೆ ನೀಡಿದ್ದ ಅರುಣ್ ಸಾಗರ್ ನಿಜವಾದ ವಿನ್ನರ್ ಎಂಬುದು ವೀಕ್ಷಕರ ಅಭಿಪ್ರಾಯವಾಗಿತ್ತು. ಇಂದು ಅದೇ ಕಥೆ ಗಿಲ್ಲಿ ವಿಚಾರದಲ್ಲೂ ಮರುಕಳಿಸುತ್ತಿದೆಯೇ? ಅರುಣ್ ಸಾಗರ್ ಅವರಂತೆ, ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದರೂ, ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಕಿರೀಟ ಗಿಲ್ಲಿ ಕೈತಪ್ಪುತ್ತದೆಯೇ, ಗಿಲ್ಲಿ ಇನ್ನೊಂದು ಅರುಣ್ ಸಾಗರ್ ಆಗುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಈ ಅನುಮಾನ ಹುಟ್ಟಿಸಿದ ಮಹತ್ವದ ಬೆಳವಣಿಗೆ ಎಂದರೆ, ಕಳೆದ ವಾರಾಂತ್ಯದ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ‘ಸೀಸನ್ ಚಪ್ಪಾಳೆ’ಯನ್ನು ಧ್ರುವಂತ್ ಅವರಿಗೆ ನೀಡಿದ್ದು. ಇದು ಗಿಲ್ಲಿ ಅಭಿಮಾನಿಗಳಿಗೆ ಸ್ವಲ್ಪ ನಿರಾಶೆ ತಂದಿದೆ. ಏಕೆಂದರೆ ಇಡೀ ಸೀಸನ್ ಉದ್ದಕ್ಕೂ ಮನರಂಜನೆಯ ಹೊಣೆ ಹೊತ್ತಿದ್ದವರು ಗಿಲ್ಲಿ ಎನ್ನುವುದು ಅವರ ವಾದ. ಹೀಗಾಗಿ ವಾಹಿನಿ ಹಾಗೂ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ವಿರುದ್ಧ ನೇರವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ಕಿಚ್ಚನ ಚಪ್ಪಾಳೆ ಅಂದ್ರೆ ಕೇವಲ ಒಂದು ವಾರದ ಪ್ರದರ್ಶನಕ್ಕೆ ಸೀಮಿತವಾಗಿರುತ್ತಿತ್ತು. ಆದರೆ ಈ ಬಾರಿ ಇಡೀ ಸೀಸನ್‌ಗೆ ಒಟ್ಟಾಗಿ ಪ್ರಶಂಸೆ ನೀಡಲಾಗಿದೆ. ಇದೇ ವಿಚಾರ ಗಿಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ #JusticeForGilli, #GilliDeservesCup ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಈ ಮೂಲಕ ಗಿಲ್ಲಿಯ ಜನಪ್ರಿಯತೆಯನ್ನು ಕಡಿಮೆ ಮಾಡಿ ತಮ್ಮಿಷ್ಟದ ಸ್ಪರ್ಧಿಯನ್ನು ಗೆಲ್ಲಿಸುವ ಹುನ್ನಾರವನ್ನು ವಾಹಿನಿ ಮಾಡುತ್ತಿದೆ ಎನ್ನುವ ಆರೋಪ ಜೋರಾಗಿದೆ.

ವಾಸ್ತವವೆಂದರೆ ಗಿಲ್ಲಿಗೆ ರಿಯಾಲಿಟಿ ಶೋಗಳಲ್ಲೊಂದು ವಿಚಿತ್ರ ಇತಿಹಾಸವಿದೆ. ಅವರು ಭಾಗವಹಿಸಿದ ಹಲವಾರು ಶೋಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಅಂತಿಮ ಗೆಲುವು ಮಾತ್ರ ಸಿಗದೆ, ರನ್ನರ್ ಅಪ್ ಸ್ಥಾನಕ್ಕೆ ಸೀಮಿತವಾಗಿದ್ದಾರೆ. ಆದರೆ ಈ ಬಾರಿ ಬಿಗ್ ಬಾಸ್‌ನಲ್ಲಿ ಅವರು ವಿನ್ ಆಗಲೇ ಬೇಕು. ಯಾವುದೇ ಕಾರಣಕ್ಕೂ ಯಾವ ಇತಿಹಾಸ ಮರುಕಳಿಸಬಾರದು ಎಂದು ಅಭಿಮಾನಿಗಳು ಬಿಗ್ ಬಾಸ್ ತಂಡಕ್ಕೆ ಮನವಿ ಮಾಡುತ್ತಿದ್ದಾರೆ.












